ಸದಸ್ಯ:ಪ್ರಣವ್.ಆನಂದ್/sandbox
ಗೋಚರ
ರಫ಼್ಲೇಷಿಯ ಅರ್ನಾಲ್ಡಿ (ಆನೆ ಹೂ/ ಪದ್ಮರಾಕ್ಷಸ)
-
ರಫ಼್ಲೇಷಿಯ ಹೂವು ಮತ್ತು ಮೊಗ್ಗು
ಈ ಜಗತ್ತಿನ ಅತಿದೊಡ್ಡ ಹೂ ರಫ಼್ಲೇಷಿಯ ಅರ್ನಾಲ್ಡಿ. [ಇದಕ್ಕಿಂತ ದೊಡ್ಡದಾದ ಹೂವಿನಂತೆ ತೋರುವ ಹೂಗೊಂಚಲು ಟೈಟನ್ ಆರಮ್ ಮತ್ತು ತಾಳೆಮರದಲ್ಲಿವೆ.]
ರಫ಼್ಲೇಷಿಯ ಅರ್ನಾಲ್ಡಿ ಇದರ ವೈಜ್ಞಾನಿಕ ನಾಮ. ಇಂಡೋನೇಷಿಯದಲ್ಲಿ ಇದನ್ನು ಪದ್ಮರಾಕ್ಷಸ ಎನ್ನುವರು. ನಮ್ಮಲ್ಲಿ ಆನೆ ಹೂ ಎಂಬ ಹೆಸರು ಬಳಕೆಯಲ್ಲಿದೆ.
ಇದರ ಮೊಗ್ಗು ಸುಮಾರು ಫ಼ುಟ್‍ಬಾಲ್ ಗಾತ್ರದ್ದು. ಸುಮಾರು ೧ ಮೀಟರ್ ವ್ಯಾಸದಷ್ಟು ಬೆಳೆವ ಈ ಹೂವು ೧೧ ಕಿಲೋಗ್ರಾಮ್‍ನಷ್ಟು ತೂಗಬಲ್ಲದು.
ಇದರ ವಾಸನೆ ಕೊಳೆತ ಮಾಂಸದಂತೆ. ಹಾಗಾಗಿ ಇದಕ್ಕೆ ಹೆಣದ ಹೂವು ಎನ್ನುತ್ತಾರೆ. ಈ ಸಸ್ಯವು ಬೋರ್ನಿಯೋ ಮತ್ತು ಸುಮಾತ್ರದ (ಇಂಡೋನೇಷಿಯ ದೇಶಕ್ಕೆ ಸೇರಿವೆ.) ಮಳೆಕಾಡುಗಳಲ್ಲಿ ಮಾತ್ರ ಬೆಳೆಯುತ್ತದೆ.