ಸದಸ್ಯ:ಪವಮಾನ ಆರ್.ಡಿ/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಶ್ವವಿದ್ಯಾನಿಲಯ ಸಂಜೆ ಕಾಲೇಜು, ಮೈಸೂರು. ವಿಶ್ವವಿದ್ಯಾನಿಲಯ ಸಂಜೆ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯದ ಅಂಗ ಸಂಸ್ಥ್ರೆಯಾಗಿದ್ದು ೧೯೬೫ರಲ್ಲಿ ಸ್ಥಾಪಿಸಲ್ಪಟ್ಟಿತು. ಪ್ರಸ್ತುತ ತನ್ನ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವ ಈ ಕಾಲೇಜು ಮೈಸೂರು ವಿ.ವಿ.ಯ ಹೆಮ್ಮೆಗಳಲ್ಲಿ ಒಂದು. ಬಿ.ಎ., ಬಿ.ಕಾಮ್ ಮತ್ತು ಬಿ.ಬಿ.ಎಮ್. ಪದವಿಗಳಿಗೆ ಪ್ರವೇಶ ನೀಡುತ್ತಿದೆ. ೨೦೧೩-೧೪ನೇ ಶೈಕ್ಷಣಿಕ ಸಾಲಿನಿಂದ ಸಂಜೆ ಕಾಲೇಜಿನಲ್ಲಿ ಇತಿಹಾಸ ಸ್ನಾತಕೋತ್ತರ ವಿಭಾಗವೂ ಆರಂಭವಾಗಿ ಕಾಲೇಜಿನ ಹೆಮ್ಮೆಗೆ ಸುವರ್ಣ ಗರಿಯನ್ನು ಮೂಡಿಸಿದೆ. ಬಹುಷ; ಸಂಜೆ ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗವಿರುವುದು ಇಲ್ಲಿ ಮಾತ್ರವೇ.ಪಠ್ಯ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಹ ಕಾಲೇಜು ಮುಂದಿದೆ. ಕಾಲೇಜಿನಲ್ಲಿ ಎನ್.ಎಸ್.ಎಸ್. ಅಮ್ತ್ತು ಎನ್.ಸಿ.ಸಿ. ಘಟಕಗಳು ಕ್ರಿಯಾಶೀಲವಾಗಿದ್ದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸಿವೆ. ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ಉತ್ತೇಜಿಸಲು ಪಠ್ಯೇತರ ಚಟುವಟಿಕೆಗಳ ಸಮಿತಿ ಇದ್ದು ವಿದ್ಯಾರ್ಥಿಳನ್ನು ಸಾಂಸ್ಕ್ರುತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ನಿರಂತರ ವೇದಿಕೆಯನ್ನು ಒದಗಿಸುತ್ತಿದೆ. ವಿದ್ಯಾರ್ಥಿಗಳ ಪ್ರತಿಭೆಗೆ ಮತ್ತೊಂದು ವೇದಿಕೆಯಾಗಿ 'ಸಂಜೆಮಲ್ಲಿಗೆ' ಎಂಬ ವಾರ್ಷಿಕ ಸಂಚಿಕೆ ಇದ್ದು, ವಿದ್ಯಾರ್ಥಿಗಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನ ಬೆಳಕಿಗೆ ತರುವಲ್ಲಿ ಸಫಲವಾಗಿದೆ.