ವಿಷಯಕ್ಕೆ ಹೋಗು

ಸದಸ್ಯ:ದೇವರಾಜ್ ಗೌಡ ಡಿ ಆರ್/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ

[ಬದಲಾಯಿಸಿ]

ಪರಿಚಯ:

[ಬದಲಾಯಿಸಿ]

:ನನ್ನಹೆಸರು :ದೇವರಾಜ್ ಗೌಡ ಡಿ ಆರ್ ನಾನು ಹುಟ್ಟಿದ್ದು ದೊಡ್ಡಸೋಮನಹಳ್ಳಿ, ತಿಪ್ಪಸಂದ್ರ (ಹೋ), ಮಾಗಡಿ (ತಾ),ನಗರ ರಾಮನಗರ ಜಿಲ್ಲೆ ,ರಂಗಸ್ವಾಮಯ್ಯ ಮತ್ತು ಜಯಲಕ್ಷ್ಮಮ್ಮಮ್ಮ ಅವರ ಪುತ್ರ ನಾಗಿ ದಿನಾಂಕ: ೧೨-೦೪-೨೦೦೨ರಂದು ಜನಿಸಿದೆ.

ವಿದ್ಯಾಭ್ಯಾಸ: ನಾನು ೧ ರಿಂದ್ ೭ ನೇ ತರಗತಿವರಗೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ದೊಡ್ಡಸೋಮನಹಳ್ಳಿ, ಯಲ್ಲಿ ಓದಿದೆ ಮತ್ತು ಅಲ್ಲಿ ನನ್ನ ಬಾಲ್ಯದ ಸವಿನೆನಪುಗಳು ತುಂಬಾ ಇದೆ. ಆ ಸಮಯದಲ್ಲಿ ನಾನು ತುಂಬಾ ತುಂಟನಾಗಿದ್ದೆ ಆದರು ವಿದ್ಯಾಭ್ಯಾಸದಲ್ಲಿ ಮುಂದಿದ್ದೆ . ನನ್ನ ಗುರುಗಳಾದ ಗಂಗಾಧರ್ ಮತ್ತು ಭಾರತಿ ಎಂಬ ಇಬ್ಬರು ಶಿಕ್ಷಕರು ನನ್ನ ಮೆಚ್ಛಿನ ಶಿಕ್ಷಕರಾಗಿದ್ದರು. ನನಗೆ ಕ್ರೀಡೆಯಲ್ಲಿ ತುಂಬಾ ಆಸಕ್ತಿ ಇತ್ತು ಆದ್ದರಿಂದ ನಾನು ಕಬ್ಬಡ್ಡಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದೆ ನನ್ನ ನಿರಂತರ ಶ್ರಮಕ್ಕೆ ಪ್ರತಿಫಲ ಸಿಕ್ಕಿತ್ತು. ನನ್ನ ತಂದೆ ತಾಯಿ ಮತ್ತು ಗುರುಗಳು ನನ್ನನ್ನು ಪ್ರೋತ್ಸಾಹಿಸುತಿದ್ದರು. ಮುಂದೆ ನಾನು ಪ್ರೌಢ ಶಿಕ್ಷಣ ವನ್ನು ಆರ್.ಎಚ್.ಎಸ್ ಹೊಸಪಾಳ್ಯ ದಲ್ಲಿ ಓದ್ದಿದೆ... ಮತ್ತು ಪ್ರೌಢ ಶಾಲೆಯಲ್ಲಿ ಕ್ರೀಡೆ ವಿಭಾಗದಲ್ಲಿ ಮುಂದುವರಿಸಿದೆ.

ಸಾಧನೆ:

[ಬದಲಾಯಿಸಿ]

ಐದು ಸಾವಿರ ಕಿಲೋ ಮೀಟರ್ ನಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದೆ.ಆಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾದೆ. ನನ್ನ ಗುರಿ ರಾಜ್ಯಮಟ್ಟದಲ್ಲಿ ಗೆಲ್ಲುವುದೆ ನನ್ನ ಗುರಿಯಾಗಿತ್ತು ಆದರೆ ನನಗೆ ಅನಾರೋಗ್ಯದಿಂದ ಸಾಧ್ಯವಾಗಲಿಲ್ಲ ಅದಕ್ಕೆ ನನಗೆ ತುಂಬಾ ಬೇಸರವಾಗಿತ್ತು ಮುಂದೆ ವಿದ್ಯಾಭ್ಯಾಸ ಮುಂದುವರಿಸಿದೆ ಅದರಂತೆ ೧೦ನೇ ತರಗತಿಯಲ್ಲಿ ಉತ್ತಮವಾದ ಫಲಿತಾಂಶದಿಂದ ಶೇಕದ ೮೩.೬೮ ಗಳಿಸಿದೆ ಇದಕ್ಕೆ ಕಾರಣ ನನ್ನ ನೆಚ್ಚಿನ ಗುರುಗಳು ಹಾಗು ತಂದೆ ತಾಯಿ ಕಾರಣವಾದರು ನಂತರ ಬೇಸಿಗೆ ರಜಾದಿನಗಳಲ್ಲಿ ನನ್ನ ಗೆಳತಿಯರೊಂದಿಗೆ ಕಾಲವನ್ನು ಕಳೆದೆ ಮತ್ತು ರಜಾದಿನಗಳಲ್ಲಿ ಗ್ರಾಮಿಣ ಆಟಗಳಾದ ಗೋಲಿ, ಲಗೋರಿ ಬುಗರಿ,, ಮೇರಿ, ಗಿಲ್ಲಿದಾಂಡು ಮುಂತಾದ ಆಟಗಳನ್ನು ನನ್ನ ಆತ್ಮೀಯ ಗೆಳೆಯರ ಜೊತೆ ಆಡುತಿದ್ದೆ.

ನನ್ನ ಗುರಿ ಸರ್ಕಾರಿ ಕೆಲಸವಾದ ಗ್ರಾಮೀಣ ಲೆಕ್ಕಾಧಿಕಾರಿಯಾಗ ಬೇಕೆಂಬುದೇ ನನ್ನ ಗುರಿಯಾಗಿತ್ತು ಆದ್ದರಿಂದ ಪಿ.ಯು.ಸಿ ಯನ್ನು ವಾಣಿಜ್ಯ ವಿಭಾಗದಲ್ಲಿ ಮುಂದುವರಿಸಲು ಇಚ್ಚಿಸಿದೆ .ಅದಕ್ಕಾಗಿ ಉತ್ತಮ ಶಿಕ್ಷಣವುಳ್ಳ ಹಾಗೂ ರಾಜ್ಯ ಮಟ್ಟದಲ್ಲಿ ದ್ವಿತಿಯ ಸ್ಥಾನ ಪಡೆದ ಶ್ರೀಶ್ರೀಶ್ರೀ ಪರಮ ಪೂಜ್ಯ ಡಾ.ಬಾಲಗಂಗಾಧರನಾಥ ಸ್ವಾಮಿಜಿ ಶಿಕ್ಷಣ ಸಂಸ್ಥೆ(ಬಿ.ಜಿ.ಎಸ್) ಪದವಿ ಪೂರ್ವ ಕಾಲೇಜು ಮಾಗಡಿ.ರಾಮನಗರ ಜಿಲ್ಲೆ ಯಲ್ಲಿ ಪ್ರಥಮ ಪಿಯುಸಿಯನ್ನು ಆಂಗ್ಲ ಮಾಧ್ಯಮ ದಲ್ಲಿ ಮುಂದುವರಿಸಿದೆ ಅಲ್ಲಿನ ಶಿಕ್ಷಣ ತುಂಬಾ ಕಷ್ಟವಾಗಿತ್ತು ಏಕೆಂದರೆ ನಾನು ಮೊದಲ ವಿದ್ಯಾಭ್ಯಾಸವನ್ನು ಕನ್ನಡ ಮಾದ್ಯಮದಲ್ಲಿ ಮಾಡಿದ್ದರಿಂದ. ಹೇಗೋ ತುಂಬಾ ಕಷ್ಟ ಪಟ್ಟು ವಿದ್ಯಾಭ್ಯಾಸವನ್ನು ಮುಂದುವರುಸಿದೆ.ನನ್ನ ಫಲಿತಾಂಶ ೯೭.೩೩ಪಡೆದು ರಾಮನಗರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದೆ. ನನಗೆ ಲೆಕ್ಕಶಾಸ್ತ್ರ ದಲ್ಲಿ ತುಂಬಾ ಆಸಕ್ತಿ ಇತ್ತು. ಹೀಗೇ ನನ್ನ ವಿದ್ಯಾಭ್ಯಾಸವನ್ನು ಮುಂದುವರುಸಿದೆ.

ಹವ್ಯಾಸ:

[ಬದಲಾಯಿಸಿ]

ದಿನಪತ್ರಿಕೆಯನ್ನು ಓದುವುದರಲ್ಲಿ ತುಂಬಾ ಆಸಕ್ತಿ ಇತ್ತು ಅದರಲ್ಲೂ ರಾಜಕೀಯ, ಕ್ರೀಡೆ, ವಾಣಿಜ್ಯದ ವಿಷಯದಲ್ಲಿ ತುಂಬಾ ಆಸಕ್ತಿ ಇತ್ತು. ಮತ್ತು ನನಗೆ ಗಣಕಯಂತ್ರ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇತ್ತು. ಅಲ್ಲಿ ಉಪನ್ಯಾಸಕರು ಉತ್ತಮವಾದ ಭೋಧನೆ ನೀಡುತ್ತಿದ್ದರು.


ಸಾಧಕರು:

[ಬದಲಾಯಿಸಿ]

ನನಗೆ ಕ್ರೀಡಾ ಸ್ಪೂರ್ತಿಯಲ್ಲಿ ಪಿ.ವಿ ಸಿಂಧೂ , ಎಮ್.ಎಸ್ ಧೋನಿ ಇವರು ನನಗೆ ಸ್ಪೂರ್ತಿಗಳಾಗಿದ್ದರು . ನನಗೆ ಕುವೆಂಪು ಮತ್ತು ದ.ರಾ ಬೇಂದ್ರೆ ಯಾದಂತಹ ಮಹಾ ಸಾಧಕರಾದವರು ನನಗೆ ಜೀವನದಲ್ಲಿ ದಾರಿದೀಪವಾಗಿದ್ದಾರೆ. ಅವರ ಕೃತಿಗಳಾದ ನಾಕುತಂತಿ, ಮಲೆಗಳಲ್ಲಿ ಮದುಮಗಳು ನೆನಪಿನ ದೋಣಿಯಲ್ಲಿ, ಕಾನೂನು ಹೆಗ್ಗಡತಿ ಮುಂತಾದವು ನನ್ನ ನೆಚ್ಚಿನ ಕೃತಿಗಳು. ನನಗೆ ಅಬ್ದುಲ್ ಕಲಾಂ ಅವರು ಅದರ್ಶ ವ್ಯಕ್ತಿಯಾಗಿದ್ದರು . ನನಗೆ ರಾಷ್ಟ್ರಕೂಟ ಮನೆತನದವರು ತುಂಬಾ ಇಷ್ಟ ಅದರಲ್ಲಿ ಅಮೋಘವರ್ಷ ನೃಪತುಂಗ ಎಂಬವನ ಸಾಹಸಗಳು ತುಂಬಾ ಮೆಚ್ಚುಗೆಯಾದವು. ನನ್ನ ದ್ವಿತಿಯ ಪಿಯುಸಿ ವಿದ್ಯಾಭ್ಯಾಸದ ಎಲ್ಲಾ ಸಿದ್ದತಾ ಪರಿಕ್ಷೆಯಲ್ಲಿ ತುಂಬಾ ಉತ್ತಮವಾಗಿ ಅಂಕಗಳನ್ನು ಗಳಿಸಿದೆ, ಅಂತಿಮ ಪರೀಕ್ಷೆಯಲ್ಲಿ ಶೇಕಡಾ ೯೭.೩೩ಅಂಕಗಳನ್ನು ಗಳಿಸಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದೆ. ಇದಕ್ಕೆ ಕಾರಣರಾದ ನನ್ನ ಗುರುಗಳು ತಂದೆ ತಾಯಿಗೆ ಧನ್ಯವಾದಗಳು ಹೇಳಲು ಇಚ್ಚಿಸುತ್ತೆನೆ . ಮುಂದೆ ಉನ್ನತ ವ್ಯಾಸಂಗ ದಲ್ಲಿ ಪ್ರಥಮ ಸ್ಥಾನ ಹೊಂದಿರುವ ಕ್ರೈಸ್ಟ್ ವಿಶ್ವವಿದ್ಯಾಲಯಕ್ಕೆ ಸೆರಿದೆ ಏಕೆಂದರೆ ಅಲ್ಲಿನ ಉನ್ನತ ಗುಣಮಟ್ಟದ ಶಿಕ್ಷಣ ,ಕ್ರೀಡೆಗೆ ಹೆಚ್ಚು ಒಲವು ನಿಡುತ್ತದೆ ಆದ್ದರಿಂದ ಕ್ರೈಸ್ಟ್ ವಿಶ್ವವಿದ್ಯಾಲಯಕ್ಕೆ ಸೇರಲು ಇಚ್ಚಿಸಲು ಆಸೆ ಪಟ್ಟೆ. ಅದಕ್ಕಾಗಿ ನಾನು ಬೆಂಗಳೂರಿಗೆ ಬಂದೆ ಇಲ್ಲಿ ಕೆಂಪೇಗೌಡ ವಿದ್ಯಾರ್ಥಿ ನಿಲಯದಲ್ಲಿ ಉಳಿದುಕೊಂಡಿದ್ದೆನೆ. ಈ ಕಾಲೇಜಿನಲ್ಲಿ ನನ್ನ ವಿದ್ಯಾಭ್ಯಾಸ ನಡೆಸುತ್ತಿದೇನೆ. ಮತ್ತು ನಾನು ಉತ್ತಮ ವಿದ್ಯಾಭ್ಯಾಸ ಮಾಡಿ ಕಾಲೇಜಿಗೆ ಮತ್ತು ನನಗೂ ಉತ್ತಮವಾದ ಹೆಸರನ್ನು ತರಲು ಬಯಸುತ್ತೆನೆ.