ಸದಸ್ಯ:ದಿನಕರ ಜೋಶಿ
ಗೋಚರ
ನಮಸ್ಕಾರ..
ನನ್ನ ಕುರಿತು
[ಬದಲಾಯಿಸಿ]ನನ್ನ ಹೆಸರು ದಿನಕರ ಜೋಶಿ ವಿಜಯಪುರ ಜಿಲ್ಲೆಯ ತಾಳಿಕೋಟಿಯಲ್ಲಿ ವಾಸ. ನನ್ನ ತಂದೆ ಚಿದಂಬರ ಜೋಶಿ, ವೃತ್ತಿ ರಂಗಭೂಮಿಯ ಕಲಾವಿದರು ಹಾಗೂ ಕರ್ನಾಟಕ ಕಲಾ ಸಂಘ ಎಂಬ ವೃತ್ತಿ ರಂಗಭೂಮಿಯ ನಾಟಕ ಸಂಸ್ಥೆಯನ್ನು ಸ್ಥಾಪಿಸಿ ಎರಡು ದಶಕಗಳಿಗೂ ಹೆಚ್ಚು ಕಾಲ ಮುನ್ನಡೆಸಿದ್ದರು..
ನಾನು ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್, ಎಂ.ಎ.(ಸಮಾಜಶಾಸ್ತ್ರ) ಅಧ್ಯಯನ ಮಾಡಿದ್ದು ಹಲವು ವರ್ಷಗಳ ಕಾಲ ಕಂಪ್ಯೂಟರ್ ವಿಜ್ಞಾನ ವಿಷಯವನ್ನು ಪದವಿ ಕಾಲೇಜಿನಲ್ಲಿ ಬೋಧಿಸಿದ್ದೇನೆ. ಸಾಹಿತ್ಯ, ಸಂಗೀತ, ಕಲೆ ನನ್ನ ಹವ್ಯಾಸಗಳು. ಸಾಮಾಜಿಕ ಕಾರ್ಯದಲ್ಲಿಯೂ ಸಕ್ರಿಯ. ಹಣಕಾಸು, ಷೇರುಮಾರುಕಟ್ಟೆ, ಶಿಕ್ಷಣ, ಮಕ್ಕಳ ಸಾಹಿತ್ಯ, ಪರಿಸರ ಹಲವಾರು ವಿಷಯಗಳಲ್ಲಿ ಆಸಕ್ತಿ.