ಸದಸ್ಯ:ಚಿನ್ಮಯಿ ವಿ. ಭಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಚಿನ್ಮಯಿ ವಿ. ಭಟ್. ಶಕ್ತಿ ನಗರದಲ್ಲಿ ವಾಸವಾಗಿರುವ ರಮಾದೇವಿ ಭಟ್ ಹಾಗೂ ವಿಶ್ವನಾಥ ಭಟ್ ಇವರ ದ್ವಿತೀಯ ಪುತ್ರಿ. ಪರಿಚಯ ಎಂದು ಹೇಳಿಕೊಳ್ಳುವಷ್ಟು ವಿಷಯಗಳಿಲ್ಲದಿದ್ದರೂ ಅನಿಸಿಕೆಗಳೇ ಹೆಚ್ಚು. ಪ್ರಾಥಮಿಕ ಹಾಗೂ ಪ್ರೌಧಶಾಲಾ ಶಿಕ್ಷಣ ವನ್ನು ಶ್ರೀ ರಾಮಕೃಷ್ಣ ಆಂಗ್ಲಮಾಧ್ಯಮ ಶಾಲೆಯಲ್ಲಿ ಪಡೆದು, ಪದವಿ ಪೂರ್ವ ಶಿಕ್ಷಣವನ್ನು ನಿಟ್ಟೆ ಡಾ| ಎನ್.ಎಸ್. ಎ. ಎಮ್. ಪದವಿಪೂರ್ವ ಕಾಲೇಜಿನಲ್ಲಿ ಪಡೆದಿರುತ್ತೇನೆ. ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜ್ ನಲ್ಲಿ ಪದವಿಯನ್ನು ಅಭ್ಯಸಿಸುತ್ತಿರುವೆನು.

               ಸಂಗೀತವೆಂದರೆ ಕೇವಲ ಕಲೆಯಲ್ಲ; ಬದುಕಿನ, ಬದುಕುವ ಒಂದು ರೀತಿ ಎಂಬುದು ನನ್ನ ಅಭಿಪ್ರಾಯ. ಭಾವಗೀತೆಗಳ ಬಗ್ಗೆ ವಿಶೇಷ ಒಲವು. ಕರ್ಣಾಟಕ ಶಾಸ್ತ್ರೀಯ ಸಂಗೀತವನ್ನು ವಿದುಷಿ ವೀಣಾ. ಎಸ್. ಭಟ್ ಸುರತ್ಕಲ್ ಇವರಲ್ಲಿಯೂ ಸುಗಮ ಸಂಗೀತವನ್ನು ಸಂಧ್ಯಾ ಎಸ್ ಎನ್ ಭಟ್ ಇವರಲ್ಲಿಯೂ ಅಭ್ಯಸಿಸುತ್ತಿದ್ದು 'ನಂದಗೊಕುಲ'  ಎಂಬ ಗಾನ ನೃತ್ಯ ವೈಭವದ ಕಲಾತಂಡದಲ್ಲಿ ಗಾಯಕಿಯಾಗಿ ಗುರುತಿಸಿಕೊಂದಿದ್ದು ರಾಜ್ಯದಾದ್ಯಂತ ಸುಮಾರು ೨೫೦ ಕ್ಕು ಹೆಚ್ಚು ಕಾರ್ಯಕ್ರಮಗಳನ್ನು ನೀಡಿರುತ್ತೆನೆ. 'ಕಲೆಯೊಂದೇ ಕುಲ' ಎಂಬ ಉಪಶೀಷ್ರಿಕೆ ಹೊಂದಿರುವ ನಂದಗೊಕುಲ, ಕಲಾವಿದರ ಹಾಗೂ ಪೋಷಕರ ಮನಗಳಲ್ಲಿ ಕಲಾತಂಡಕ್ಕಿಂತ ಹೆಚ್ಚಾಗಿ  ಬೃಹತ್ಕುಟುಂಬವಾಗಿ ಬೆಳೆದು ಆನಂದಗೋಕುಲವಾಗಿ  ಅಚ್ಚೊತ್ತಿದೆ.
          ಇನ್ನು ಸಂಗೀತವಲ್ಲದೆ ಕನ್ನಡದ ಬಗ್ಗೆಯೂ ವಿಶೇಷ ಒಲವು . ಆಂಗ್ಲಮಾಧ್ಯಮದಲ್ಲಿ ಕಲಿತಿದ್ದರೂ, ಮನೆಯ ವಾತಾವರಣವು ನನ್ನನ್ನು ಕನ್ನಡ ಪರವಾಗಿಸಿತು. ಪ್ರಬಂಧ, ಕಥೆ, ಕವನ,  ಲೇಖನ ಹೀಗೆ ಓದು ಹಾಗೂ ಬರವಣಿಗೆಯಲ್ಲಿ  ಆಸಕ್ತಿ ಇದೆ. ಇದರ ಜೊತೆಗೆ ಕ್ರೀಡೆಯಲ್ಲೂ ಆಸಕ್ತಿ ಇದೆ.
             ಪ್ರಶಸ್ತಿ ಗಳು ಹೇಳಿಕೊಳ್ಳುವಷ್ಟು ದೊಡ್ಡ ವ್ಯಕ್ತಿ ನಾನಲ್ಲದಿದ್ದರೂ, ವಿದ್ಯಾರ್ಥಿ ಜೀವನದಲ್ಲಿ ಅವಿಸ್ಮರಣೀಯ ಕ್ಷಣವೆಂದರೆ ದ್ವಿತೀಯ ಪಿ.ಯು.ಸಿ‌.ಯಲ್ಲಿ‌ ಸಿಕ್ಕ 'ಸ್ಟೂಡೆಂಟ್ ಆಫ್ ದ ಇಯರ್' ಪುರಸ್ಕಾರ. ನಮ್ಮ  ಟಿ.ವಿ 'ನಮ್ಮ ಸೂಪರ್ ಸಿಂಗರ್ ' ಎಂಬ ರಿಯಾಲಿಟಿ ಶೋ ನಲ್ಲಿ ಅಗ್ರ ೧೫ ರಲ್ಲಿ ಸ್ಥಾನ ಪಡೆದಿರುವುದು ಇನ್ನೊಂದು ಖುಷಿಯ ವಿಚಾರ. ಸಂಗೀತದ ಶಕ್ತಿ, ಕಲಿಕೆಗೂ ಸ್ಪೂರ್ತಿ ನೀಡುತ್ತದೆ ಎಂಬುದನ್ನು ಬಲವಾಗಿ ನಂಬಿದ್ದಕ್ಕೆ ಸಾರ್ಥಕ್ಯ ಎಂಬುದು ದೊರೆತದ್ದು ಹತ್ತನೇ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ೯೬ % ಅಂಕಗಳೊಂದಿಗೆ ಕಾಲೇಜಿಗೇ ಪ್ರಥಮ ಸ್ಥಾನಿಯಾಗಿದ್ದು. ನನ್ನ ಎಲ್ಲಾ ಸಾಧನೆಗೂ ಬೆನ್ನೆಲುಬಾಗಿ ನಿಂತಿರುವ ಸಂತ ಅಲೋಶಿಯಸ್ ಕಾಲೆಜಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ನನ್ನ ಅಕ್ಕ ಪಲ್ಲವಿ. ವಿ.ಭಟ್ ಇವಳ ಬಗ್ಗೆ ಹೇಳಲು ನಾನು ಮರೆಯುವಂತಿಲ್ಲ, ಮರೆತದ್ದೂ ಇಲ್ಲ.