ಸದಸ್ಯ:ಕೆಜಗದೀಶ್೧೫/sandbox೧

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                                                                             ಔಷಧಗಳು
          ಆರೋಗ್ಯ ಕೆಟ್ಟಾಗ ಪೇಟೆಯಿಂದ ಔಷಧ ತಂದು ತಿನ್ನುತ್ತೇವೆ.ಎಷ್ಟೋ ಔಷಧಗಳಿಂದ ಒಳ್ಳೈಯ ಪ್ರಯೋಜನವಿದೆ.ಆದರೆ ಕೆಲವು ಔಷಧಗಳಿಂದ ತೀರಾ ಕೆಡಕು ಉಂಟಾಗುತ್ತದೆ.ಜನರು ಈ ಔಷಧಗಳನ್ನು ಸೇವಿಸುವುದರಿಂದ

ಕೆಲವು ಔಷಧ ತಯಾರಿಸುವ ಕಂಪನಿಗಳಿಗೆ ಮಾತ್ರ ಪ್ರಯೋಜನ.ರೋಗಿಗೆ ಯಾವುದೇ ಪ್ರಯೋಜನವಿಲ್ಲ.ವೈದ್ಯರು ಈ ವಿಷಯ ಗೊತ್ತಿದ್ದರೂ ಜನರಿಗೆ ಹೆಚ್ಚು ಔಷಧಗಳನ್ನು ಬರೆದುಕೊಡುತ್ತಾರೆ.ಒಂದು ರೋಗ ತೋರಿಸಲು ಹೋದರೆ ನಾಲ್ಕಾರು ಬೇರೆ ಬೇರೆ ಔಷಧಗಳನ್ನು ಬರೆಯುತ್ತಾರೆ.ಅವುಗಳಲ್ಲಿ ಹೆಚ್ಚಿನವು ಆರೋಗಿಗೆ ಬೇಕಾಗಿರುವುದೇ ಇಲ್ಲ .

      ನೆನಪಿಡಬೇಕಾದ ಅಂಶಗಳು;
 -ಯಾವ ತೊಂದರೆಯನ್ನೂ ಮಾಡದ ಔಷಧವೇ ಇಲ್ಲ.

-ಕೆಲವು ಔಷಧಗಳು ಅನವಶ್ಯಕ,ದುಬಾರಿ. -ಕೆಲವು ಔಷಧಗಳು ಅಪಾಯಕಾರಿ.ಸಾವನ್ನೂ ತರಬಹುದು.

    ಕಾರಣ;

-ಔಷಧಗಳ ಆತಿ ಬಳಕೆ ಹಾನಿಕರ. -ಅವಶ್ಯವಿದ್ದಾಗ ಮಾತ್ರ ಅವಶ್ಯ ಇರುವ ಔಷಧವನ್ನಷ್ಟೇ ಬಳಸಿ.

                                         ಅನವಶ್ಯಕ ಔಷಧಗಳು
       ನಮ್ಮ ದೇಹದಲ್ಲಿ ಇರುವ ಎಲ್ಲಾ ರೋಗಗಳನ್ನು ಗುಣಪಡಿಸಲು ಕೇವಲ ೧೧೬ ಔಷಧಗಳು ಸಾಕು ಎಂದು ತಜ್ಞರು ಹೇಳುತ್ತಾರೆ.ಆದರೆ ಇಂದು ನಮ್ಮ ದೇಶದಲ್ಲಿ ೭೦.೦೦೦ ಕ್ಕೂ ಹೆಚ್ಚು ಔಷಧಗಳಿವೆ..ಈ ಎಪ್ಪತ್ತು ಸಾವಿರ ಔಷಧ

ಗಳಲ್ಲಿ ಹೆಚ್ಚಿನ ಪಾಲು ಟಾನಿಕ್ಕುಗಳು,ಮಲ್ಟಿವಿಟಮಿನ್ ಗಳು,ಕೆಮ್ಮಿನ ರಸ ಇವೇ ತುಂಬಿವೆ.ಇವೆಲ್ಲಾ ಅನವಶ್ಯಕ ಔಷಧಗಳು.ಆದರೆ ಅವಶ್ಯಕ ಔಷಧಗಳು ಎಮದು ಜನರನ್ನು ನಂಬಿಸಲಾಗುತ್ತದೆ.ಜನರೂ ಕೂಡ ಟಾನಿಕ್ಕಿನಿಂದ ಶಕ್ತಿ ಬರುತ್ತದೆ ಎಂದು ನಂಬುತ್ತಾರೆ.

  ಟಾನಿಕ್ ಗಳು;

ಟಾನಿಕ್ ಶಕ್ತಿ ಕೊಡುವುದಿಲ್ಲ,ಟಾನಿಕ್ ರಕ್ತ ಮಾಡುವುದಿಲ್ಲ,ಟಾನಿಕ್ ಗೆಂದು ಹಣ ಹಾಕಿದರೆ ವ್ಯರ್ಥವಾಗಿ ನೀರಲ್ಲಿ ಹಣ ಹಾಕಿದಂತೇ ಎಂದು ತಿಳಿಯುರಿ..ಉದಾಹರಣೆಗೆ ರಕ್ತ ಆಗಲು ನಮಗೆ ಬೇಕಾಗಿದ್ದು ಕಬ್ಬಿಣಾಂಶದ ಮಾತ್ರೆಗಳು ಅಥವಾ ಆಹಾರದಲ್ಲಿ ಕಬ್ಬಿಣಾಂಶ ಇರಬೇಕು.ಕಬ್ಬಿಣದ ಮಾತ್ರೆಗಳನ್ನು ಮೂರು ತಿಂಗಳ ಪೂರ್ತಿ ತೆಗೆದುಕೊಂಡರೆ ಮಾತ್ರ ರಕ್ತ ಹೀನತೆ ಗುಣವಾಗುತ್ತದೆ.

  ಔಷಧಗಳಾಗಿ ವಿಟಮಿನ್;
  ವಿಟಮಿನ್ ಅಥವಾ ಜೀವಸತ್ವ ನಮ್ಮ ದೇಹಕ್ಕೆ ಅತಿ ಉಪಯುಕ್ತ.ಆದರೆ ಅತಿ ಕಡಿಮೆ ಪ್ರಮಾಣದಲ್ಲಿ ಸಾಕು ಅವುಗಳಲ್ಲಿ ಯಾವುದೂ ಶಕ್ತಿ ಕೊಡುವುದಿಲ್ಲ.ಯಾವುದೂಬ ಜೀರ್ಣಕಾರಿ ಅಲ್ಲ.ವ್ಯರ್ಥವಾಗಿ ಉಪಯೋಗಿಸಲ್ಪಡುವ ಇನ್ನೊಂದು ಜೀವಸತ್ವ 'ಸಿ'.ಜಿವಸತ್ವ.ಇದು ಹುಳಿ ಪದಾರ್ಥಗಳಲ್ಲೆಲ್ಲಾ ಸಾಕಷ್ಟು ತುಂಬಿದ್ದು,ಎಂಥಾ ಬಡವರಿಗೂ ಇದರ ಕೊರತೆ ಆಗುವುದಿಲ್ಲಾ.ಆದರೂ ಇಂಜಕ್ಷನ್ ಗಳಲ್ಲಿ ಕ್ಷಯ ರೋಗದ ಔಷಧಗಳಲ್ಲಿ 'ಸಿ' ಜೀವಸತ್ವವನ್ನು ತುಂಬಿರುತ್ತಾರೆ.

' ಎ' ಜೀವಸತ್ವ ನಮಗೆ ಅತ್ಯಂತ ಉಪಯುಕ್ತ.ಕಣ್ಣಿನ ದೃಷ್ಟಿ ಚೆನ್ನಾಗಿರಲು ಇದು ಬೇಕೇ ಬೇಕು.'ಎ' ಜೀವಸತ್ವ ಕಡಿಮೆ ಆಯಿತೆಂದರೆ ಮೊದಲು ಇರುಳು ಗಣ್ಣು ಶುರುವಾಗುತ್ತದೆ.ಕೂಡಲೇ ಔಷಧ ರೂಪದಲ್ಲಿ ಅದನ್ನು ಕೊಡಿಸದಿದ್ದರೆ ಕ್ರಮೇಣ ಕಣ್ಣು ಕುರುಡಾಗುತ್ತದೆ.

                                ಅನಾವಶ್ಯಕ ಔಷಧಗಳ ಪಟ್ಟಿ
  ೧.ಯಾವುದೇ ಟಾನಿಕ್ ಬಾಟ್ಲಿ
  ೨.ವಿಟಮಿನ್ ಕ್ಯಾಪ್ಸೂಲ್ ಗಳು,ಗುಳಿಗೆಗಳು.
  ೩.ಕೆಮ್ಮಿನ ರಸ
  ೪.ಟಾನಿಕ್ ಇಂಜಕ್ಷನ್ ಗಳು
   ೫.ವಿಕ್ಸ ಮಾತ್ರೆ,ವಿಕ್ಸ
  ೬.ನೆಗಡಿ ನಿವಾರಕಗಳು.
ಸಾಮಾನ್ಯವಾಗಿ ಇಂಜಕ್ಷನ್ ಗಳ ಅವಶ್ಯಕತೆ ಬಲು ಕಡಿಮೆ.

ಆದರೆ ಕೆಲವೊಮ್ಮೆ -ರೋಗ ಅತೀ ಜಾಸ್ತಿ ಆಗಿರುವಾಗ, -ಆ ಔಷಧ ಮಾತ್ರೆಯ ರೂಪದಲ್ಲಿ ಇಲ್ಲವಾದಾಗ -ರೋಗಿಯು ಬಹಳ ವಾಂತಿ ಮಾಡುತ್ತಿದ್ದು ಅಥವಾ ಜ್ಞಾನ ತಪ್ಪಿರುವಾಗ ಇಂಜಕ್ಷನ್ ಮಾಡಿಸಬೇಕಾಗುತ್ತದೆ. ಉದಾಹರಣೆಗೆ; -ಜನರ ಶಕ್ತಿ ಕೊಡುವ ಇಂಜಕ್ಷನ್ ಮತ್ತು 'ಬಿ'ಜೀವಸತ್ವದ ಇಂಜಕ್ಷನ್ ಅಪಾಯಕಾರಿ ಇರಬಹುದು. -