ವಿಷಯಕ್ಕೆ ಹೋಗು

ಸದಸ್ಯ:ಕೆಜಗದೀಶ್೧೫/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಾಲೆಗಳಲ್ಲಿ ವಿಜ್ಞಾನ ಸಂಘ ಸ್ಥಾಪನ

[ಬದಲಾಯಿಸಿ]

ಪ್ರತಿಯೊಂದು ಶಾಲೆಯಲ್ಲಿ ವಿಜ್ಞಾನ ಸಂಘವನ್ನು ಸ್ಥಾಪಿಸುವುದು ಅವಶ್ಯಕ.ಏಕೆಂದರೆ ಮಕ್ಕಳಲ್ಲಿ ಮತ್ತು ಶಿಕ್ಷಕರಲ್ಲಿ ವೈಜ್ಞಾನಿಕ ಮನೋಭಾವನೆ ಮತ್ತು ಪ್ರಯೋಗಗಳ ಬಗ್ಗೆ ಕುತೂಹಲ ಹಾಗೂ ಆಸಕ್ತಿಯನ್ನುಂಟು ಮಾಡುತ್ತದೆ. ಅದಕ್ಕಾಗಿ ಶಾಲೆಯ ಪ್ರಧಾನ ಗುರುಗಳು ಒಂದು ಸಮಿತಿಯನ್ನು ರಚಿಸಬೇಕಾಗುತ್ತದೆ.ಈ ಸಮಿತಿಗೆ ಪ್ರಧಾನ ಗುರುಗಳೇ ಅಧ್ಯಕ್ಷರಾಗಿರುತ್ತಾರೆ.ವಿಜ್ಞಾನ ಶಿಕ್ಷಕರೇ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.ಖಚಾಂಜಿಯಾಗಿ ಹಾಗೂ ಸಹ ಕಾರ್ಯದರ್ಶಿಯಾಗಿ ತಲಾ ಒಬ್ಬ ಶಿಕ್ಷಕರನ್ನು ನೇಮಿಸಬೇಕಾಗುತ್ತದೆ.೭ ಮಂದಿ ವಿಧಾರ್ಥಿಗಳನ್ನು ಸದಸ್ಯರುಗಳನ್ನಾಗಿ ಆಯ್ಕ ಮಾಡಬೇಕು.

ಶಾಲೆಯ ಪ್ರಾರಂಭದ ದಿನಗಳಲ್ಲಿ ವಾರ್ಷಿಕ ಕ್ರಿಯಾ ಯೋಜನೆ ತಯಾರಿಸುವ ಸಂದರ್ಭದಲ್ಲಿ ಸಭೆ ಸೇರಿ ವಿಜ್ಞಾನಕ್ಕೆ ಸಂಬಂಧಿಸಿದ ಚಟುವಟಿಕೆಗಳ ಪಟ್ಟಿಯನ್ನು ಕಾರ್ಯದರ್ಶಿಗಳು ಸಭೆಗೆ ಮಂಡಿಸಿ ಅನುಮೋದನೆ ಪಡೆದುಕೊಳ‌‍ಬೇಕು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಘಟಕಕ್ಕೆ ನೋಂದಣಿ ಮಾಡಿಸಿ ಒಬ್ಬ ಹೆಸರುವಾಸಿಯಾದ ವಿಜ್ಞಾನಿಯ ಹೆಸರನ್ನು ವಿಜ್ಞಾನಸಂಘ ಕ್ಕೆ ಇಟ್ಟು ನಾಮಕರಣ ಮಾಡಬಹುದು.ಹೀಗೆ ಮಾಡಿದಲ್ಲಿ ಹಾಗೂ ಶಾಲೆಯಲ್ಲಿ ನಡೆಸಿದ ಚಟುವಟಿಕೆಗಳ ವರದಿಯನ್ನು ವಿಜ್ಞಾನ ಪರಿಷತ್ ಗೆ ಕಳುಹಿಸಿದಲ್ಲಿ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ.

ವಿಜ್ಞಾನ ಸಂಘದ ಉದ್ದೇಶಗಳು

[ಬದಲಾಯಿಸಿ]
  1. ಲಬ್ಯವಿರುವ ಹಾಗೂ ಸಾಧ್ಯವಿರುವ ಎಲ್ಲಾ ಮಾಧ್ಯಮಗಳನ್ನು ಬಳಸಿಕೊಂಡು ವಿಧ್ಯಾರ್ಥಿಗಳಿಗೆ ಆಕರ್ಷಕ,ವೈಜ್ಞಾನಿಕ,ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ವೈಜ್ಞಾನಿಕ ಸಾಕ್ಷರತೆಯನ್ನು,ವೈಜ್ಞಾನಿಕ ಮನೋಭಾವನೆಯನ್ನು ರೂ ಪಿಸುವುದು.
  2. ದೈನಂದಿನ ಜೀವನದಲ್ಲಿ ಜನಸಾಮಾನ್ಯರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆಗುತ್ತಿರುವ ಆವಿಷ್ಕಾರಗಳ ಅರಿವನ್ನು ಮೂಡಿಸುವುದು.
  3. ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ಅತಿಥಿ ಉಪನ್ಯಾಸಗಳನ್ನು ಏರ್ಪಡಿಸುವುದು.
  4. ಸರಳ ಪ್ರಯೋಗಗಳನ್ನು ನಡೆಸಿ ವಿಜ್ಞಾನದ ಕುತೂಹಲವನ್ನು ತಿಳಿದುಕೊಳ್ಳುವುದು.
  5. ಅನುಪಯುಕ್ತ ವಸ್ತುಗಳಿಂದ ತಯಾರಿಸಿದ ಅತಿ ಕಡಿಮೆ ವೆಚ್ಚದ ವಿಜ್ಞಾನದ ಉಪಕರಣಗಳನ್ನು ತಯಾರಿಸುವುದು.
  6. ಪ್ರತೀ ತಿಂಗಳು ವಿಜ್ಞಾನಕ್ಕೆ ಸಂಬಂಧಿಸಿದ ದಿನಾಚರಣೆಗಳನ್ನು ಆಚರಿಸುವುದು.ಇನ್ನು ಮುಂತಾದವುಗಳು.