ಸದಸ್ಯ:ಆಯಿಶಾ ಶಾರಿಯ/sandbox
ಗೋಚರ
-------ಜನನಿ---------
ನನಗೆ ಜನ್ಮವಿತ್ತಳು ಜನನಿ,
ನನ್ನ ಹರಸಿ ಬೆಳೆಸಿದಳು ಜನನಿ,
ಕಣ್ಣ ರೆಪ್ಪೆಯ ಮುಚ್ಚದೆ ನನಗಾಗಿ ಕಾದಳು ಜನನಿ,
ಆದರೆ, ನಾವೆಲ್ಲರು ಅವಳಿಗೆ ನೀಡಿರುವ ಪಟ್ಟವೇ ಗೃಹಿಣಿ.
ಮುಂಜಾನೆಯಿಂದ ಮುಸ್ಸಂಜೆವರೆಗೆ ದುಡಿದರೂ,
ಆರೇಳು ದಿನ ಉಪವಾಸ ಬಿದ್ದರೂ,
ಬದುಕೆಂಬ ಕಡಲಲ್ಲಿ ಕಣ್ಣೀರಾಗಿ ಮಿಂದರೂ,
ಪತಿ-ಮಕ್ಕಳನ್ನು ಮುಗುಳ್ನಗುವಿನಿಂದ ಹರಸುವಳು.
ನೆಲದಲ್ಲಿ ಬಿಟ್ಟರೆ ಇರುವೆ ಚುಚ್ಚಬಹುದೆಂದೋ,
ತಲೆ ಮೇಲಿಟ್ಟರೆ ಹೇನು ಕಚ್ಚಬಹುದೆಂದೋ,
ಲಾಲಿಸಿದಳು ನನ್ನ ಮಡಿಯ ಮೇಲಿಟ್ಟು,
ಆದರೆ ನಿಂದಿಸಿದೆ ನಾನವಳ ಮುಟ್ಟು!!!
ಬೆಳಿಗ್ಗೆಯಿಂದ ದುಡಿವ ಅಪ್ಪನಿಗೆ ಸಂಜೆ ರಜೆ,
ಕಲಿತರೂ ಕಲಿಯದಿದ್ದರೂ ಅಣ್ಣನಿಗೆ ಭಾನುವಾರ ರಜೆ,
ಅಮೇರಿಕಾದ ಮಾವನಿಗೆ ವರ್ಷದಲ್ಲೊಂದು ದಿನವಾದರೂ ರಜೆ,
ಹಬ್ಬ-ಹರಿದಿನಗಳಂದೂ ಮೈ ಬೆವರಾಗಿಸುವ ಜನನಿಗೆ ಬೇಡವೇ ರಜೆ!!!
ಹೆತ್ತು ಬೆಳೆಸುವ ಜನನಿ ಹೃದಯಕ್ಕೂ,
ಹೊತ್ತು ಹರಸುವ ಜನನಿ ಜನ್ಮಭೂಮಿಗೂ,
ಇದೋ ಕೋಟಿಗೂ ಮಿಗಿಲಾದ ನಮನ,
ನನ್ನ ಜನ್ಮ ಇವರಿಂದ ಪಾವನ...
ರಚನೆ: ಆಯಿಶಾ ಶಾರಿಯ ದ್ವಿತೀಯ ಬಿಎಸ್ಸಿ ೧೫೨೩೦೧