ವಿಷಯಕ್ಕೆ ಹೋಗು

ಸದಸ್ಯ:ಆನಂದಕುಮಾರ್/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಡಲು ಬೇಕಾಗುವ ವಸ್ತುಗಳು

[ಬದಲಾಯಿಸಿ]
  • ೨ ಕೋಲುಗಳು

ಅಂಕಣದ ಕೊನೆಗಳಲ್ಲಿ ಹಾಕಲು ೨ ಕೋಲುಗಳು ಅಗತ್ಯ.

ಆಟದವ ವಿವರಣೆ

[ಬದಲಾಯಿಸಿ]

ಖೋಖೋ ಆಟ ಮೊದಲು ಜಮೈಕಯಲ್ಲಿನ ಬರೋಡ ಎಂಬಲ್ಲಿ 1924ರಲ್ಲಿ ಉಗಮವಾಯಿತು. ಈ ಆಟದ ಒಂದು ಚಾಂಪಿಯನ್ಶಿಪ್ 1960 ರಲ್ಲಿ ನಡೆಯಿತು. ಭಾರತದಲ್ಲಿ ಈ ಆಟವನ್ನು ಮೊದಲು ಪರಿಚಯಿಸಿದ್ದು ಮಹಾರಾಷ್ಟ್ರದ ಅಖಿಲ ಮಹಾರಾಷ್ಟ್ರ ಶಾರೀರಿಕ್ ಶಿಕ್ಷಣ ಮಂಡಲ್. ಈಗ ಈ ಆಟವು ಶಾಲೆಗಳಲ್ಲಿ ಕಡ್ಡಾಯ ಕ್ರೀಡೆಯಾಗಿದೆ.

ಆಡುವ ವಿಧಾನ

[ಬದಲಾಯಿಸಿ]

ಈ ಆಟದಲ್ಲಿ ಒಟ್ಟಾರೆಯಾಗಿ ೨೪ ಜನ ಇರುತ್ತಾರೆ. ಅದರಲ್ಲಿ ೨ ಪಂದ್ಯದಲ್ಲಿ ತಲಾ ೧೨ ಜನರಿರುತ್ತಾರೆ. ಮೊದಲ ಗುಂಪಿನ ೧೨ ಜನರಲ್ಲಿ ೩ ಜನ ಹೆಚ್ಚಿನ ಆಟಗಾರರು, ೯ ಜನ ಆಟಗಾರರು ಅಂಕಣದಲ್ಲಿ ಇರುತ್ತಾರೆ. ೮ ಜನ ಆಟಗಾರರು ಅಂಕಣದಲ್ಲಿ ಸಾಲಾಗಿ ಅಕ್ಕ ಪಕ್ಕದ ಆಟಗಾರರು ವಿರುಧ್ದ ದಿಕ್ಕಿಗಳಿಗೆ ಮುಖಮಾಡಿ ಮಂಡಿಯೂರಿ ಕುಳಿತುಕೊಳ್ಳುತ್ತಾರೆ. ಒಬ್ಬ ಆಟಗಾರ ಎದುರಾಳಿಯನ್ನು ಮುಟ್ಟಿಸಲು ಯತ್ನಿಸುತ್ತಾನೆ. ವಿರುದ್ಧ ಗುಂಪಿನ ಮೂರು ಜನ ಆಟಗಾರರು ಅಂಕಣಕ್ಕೆ ಇಳಿಯುತ್ತಾರೆ. ಎದುರಾಳಿ ಇನ್ನೋಬ್ಬನಿಗೆ ಸಿಗುವಂತಿದ್ದರೆ ಆತನ ಹಿಂದೆ ಹೋಗಿ ಬೆನ್ನು ಮುಟ್ಟಿ ಖೋ ಎಂದು ಖೋ ಕೋಡುತ್ತಾ ಆಟ ಸಾಗುತ್ತದೆ. ಹೀಗೆ ಆಟಗಾರರು ಈ ಮೂರು ಜನರನ್ನು ಅಟ್ಟಿಸಿಕೊಂಡು ಹೋಗಿ ಮುಟ್ಟಲು ಯತ್ನಿಸುತ್ತಾರೆ. ಗುಂಪಿಗೆ 2 ಸರದಿಗಳಿರುತ್ತದೆ.ಅನುಕೂಲಕ್ಕೆ ತಕ್ಕಂತೆ ಸಮಯವನ್ನು ನಿಗದಿಪಡಿಸುತ್ತಾರೆ. ವಿರುದ್ಧ ಗುಂಪಿನ ಜನರು ಸಾಲಾಗಿ ಕುಳಿತಿರುವವರ ಮಧ್ಯದಲ್ಲಿ ಓಡಬಹುದು. ಓಡಿಸುವ ಆಟಗಾರ ಸಾಲಿನ ಸುತ್ತಲೂ ಸುತ್ತುತ್ತಾ ಮುಟ್ಟಲು ಯತ್ನಿಸುತ್ತಾರೆ ಹಾಗೂ ಕುಳಿತವರ ಬೆನ್ನಿಗೆ ಖೋ ಎಂದು ಹೇಳಿ ಮುಟ್ಟಬಹುದು. ಹಾಗೆ ಮುಟ್ಟಿದಲ್ಲಿ ಮುಟ್ಟಿಸಿಕೊಂಡಾತ ಓಡಿಸುತ್ತಾನೆ ಹಾಗೂ ಮುಟ್ಟಿದಾತ ಆತನ ಜಾಗದಲ್ಲಿ ಕುಳಿತುಕೊಳ್ಳುತ್ತಾನೆ. ಹೀಗೆ ಆಟ ಮುಂದುವೆಯುತ್ತದೆ. ಎರಡು ಸರದಿಯ ನಂತರ ಆಟಗಾರರ ಪಾತ್ರ ಬದಲಾಗುತ್ತದೆ.