ಸದಸ್ಯ:ಅನ್ಸಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'

ಇಸ್ಲಾಮೀ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡ ಯುವ ಲೇಖಕ. 2010ರಲ್ಲಿ ತನ್ನ ವಿದ್ಯಾರ್ಥಿ ಜೀವನ್ ಹಂತದಲ್ಲೇ ಬರಹ ರಂಗಕ್ಕೆ ಪ್ರವೇಶಿಸಿದರು. ಸಣ್ಣದರಲ್ಲೇ ಓದುವಿನಲ್ಲಿ ಆಸಕ್ತಿಯನ್ನು ಹೊಂದಿದ ಇವರು ಬಾಲ್ಯದಲ್ಲಿ ಅನುಭವಿಸಿದ ಯಾತನೆ, ಹಾಗೂ ಸಮಾಜದಲ್ಲಿ ಅನುಭವಿಸಿದ ಕೆಲವು ದೌರ್ಬಲ್ಯತೆಯ ಚಿತ್ರಣಗಳನ್ನು ಅಕ್ಷರ ರೂಪಕ್ಕೆ ಇಳಿಸಿ ಮೊದಲು ಇವರು ಕಥೆಗಾರರಾಗಿ ಗುರುತಿಸಿಕೊಂಡರು. ಉರುಮಾಲ್, ಮದರಂಗಿ, ಮಂಗಳ, ಸುದ್ದಿ ಬಿಡುಗಡೆ, ತುಷಾರ ಮುಂತಾದ ಮಾಸಿಕ, ಪಾಕ್ಷಿಗಳಲ್ಲಿ ಇವರ ಕಥೆಗಳು ಪ್ರಕಟವಾಗಿದೆ. ಉರುಮಾಲ್‌ನಲ್ಲಿ ಕಥಾ ಲೋಕವೆಂಬ ಕಥಾ ಅಂಕಣವನ್ನು ನಿರಂತರ ಮೂರುವರೆ ವರ್ಷಗಳ ಕಾಲ ಬರೆದರು. ಈಗ ಮೊಯಿಲಾಂಜಿ, ಇಶಾರ, ಅಲ್ ಅನ್ಸಾರ್ ಹಾಗೂ ವಿಶ್ವವಾಣಿ, ಕನ್ನಡ ಪ್ರಭ, ವಾರ್ತಭಾರತಿಯಲ್ಲಿ ಸಮಕಾಲೀನ ಬರಹಗಳನ್ನು ಬರೆಯುತ್ತಿದ್ದಾರೆ. ಖಬರ್, ಬದರ್ ಯುದ್ದ, ಖಾದಿಸಿಯಾ ಯುದ್ದ, ಮಹ್‌ಶರಾ, ಮಾನವನ ರಕ್ತ ಹರಿದಾಗ, ಸಮೇತ ಹದಿನೈದಕ್ಕೂ ಅಧಿಕ ಪುಸ್ತಕಗಳನ್ನು ಕೇವಲ ವಿದ್ಯಾರ್ಥಿ ಜೀವನದಲ್ಲೇ ಬರೆದಿದ್ದಾರೆ. ನೂರುಲ್ ಉಲಮಾ ಎಂ.ಎ ಉಸ್ತಾದರ ಇಸ್ಲಾಂ ಸವಾಲುಗಳ ಸುಳಿಯಲ್ಲಿ ಎಂಬ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ನೈಪುಣ್ಯತೆಯನ್ನು ಹೊಂದಿದ ಇವರು ಅರಬಿ ಪದವೀದರರೂ ಆಗಿದ್ದಾರೆ.. ಸದ್ಯಕ್ಕೆ ಕನ್ನಡದ ಪತ್ರಿಕೆಗಳಲ್ಲಿ ಬರೆಯುತ್ತಿದ್ದಾರೆ