ಸದಸ್ಯ:ಅನುಷ.ಆನಂದ/sandbox2
ಆಮ್ಲ ಮಳೆ ಇಂಗ್ಲೆಂಡಿನ ರಸಾಯನಿಕ ತಜ್ಞ ರಾಬರ್ಟ್.ಎ.ಸ್ಮಿತ್ ಅವರು ೧೮೫೨ರಲ್ಲಿ ಆಮ್ಲ ಮಳೆಯ ಬಗ್ಗೆ ತಿಳಿಸಿಕೊಟ್ಟರು. ಆಮ್ಲ ಮಳೆ ಎಂಬುದು ಇದೆ ಎಂಬ ಅಸ್ತಿತ್ವವನ್ನು ತೋರಿಸಿಕೊಟ್ಟಿದ್ದಾರೆ. ಇದುಬ ಹೇಗೆ ಉಂಟಾಗುತ್ತದೆ? ಮತ್ತು ಇದಕ್ಕೆ ಕಾರಣವೇನು? ನೈಟ್ರೋಜನ್ ಮತ್ತು ಗಂಧಕದ ಆಕ್ಸೈಡ್ ಗಳು ಗಾಳಿಯಲ್ಲಿರುವ ನೀರಾವಿಯೊಂದಿಗೆ ಸೇರಿ ನೈಟ್ರಿಕ್ ಆಮ್ಲ ಮತ್ತು ಸಲ್ಫ್ಯೂರಿಕ್ ಆಮ್ಲಗಳಾಗುತ್ತವೆ. ನೈಟ್ರೋಜನ್ ಮತ್ತು ಗಂಧಕದ ಆಕ್ಸೈಡ್ ಗಳು ಪಳಯುಳಿಕೆಗಳ ಇಂಧನಗಳಾದ ಕಲ್ಲಿದ್ಧಲು ಮತ್ತು ಪೆಟ್ರೋಲಿಯಮ್ ಗಳ ದಹನಕ್ರಿಯೆಯಿಂದ ಉತ್ಪತ್ತಿಯಾಗುತ್ತದೆ. ಗಂಧಕವು ಕಲ್ಲಿದ್ದಲು ಪೆಟ್ರೋಲಿಯಮ್ ದಹನಕ್ರಿಯೆಯಿಂದ ಉತ್ಪತ್ತಿಯಾದರೆ, ನೈಟ್ರೋಜನ್ ಆಕ್ಸೈಡ್ ವಾತವರಣದಲ್ಲಿರುವ ನೈಟ್ರೋಜನ್ ಜೊತೆಗೆ ಇಂಧನಗಳು ದಹಿಸಿದಾಗ ಉತ್ಪತ್ತಿಯಾಗುತ್ತದೆ.ಮುಖ್ಯವಾಗಿ ವಿದ್ಯುತ್ ಉತ್ಪಾದನೆಯಲ್ಲಿ ಮತ್ತು ಗ್ಯಾಸೊಲಿನ್ ಇಂಧನದ ವಾಹನಗಳಿಂದ ಉತ್ಪತ್ತಿಯಾಗುತ್ತದೆ.ಆಮ್ಲವು ಬಹಳ ಬೇಗ ಹರಡಲು ಕಾರಣ ಈ ಆಕ್ಸೈಡ್ ಗಳು ಅನಿಲರೂಪದಲ್ಲಿರುವುದರಿಂದ ಸಾವಿರಾರು ಕೀ.ಮೀ ದೂರದವರೆಗೂ ಇವು ಹರಡಿಕೊಳ್ಳುತ್ತವೆ. ನೈಟ್ರೋಜನ್ ಮತ್ತು ಗಂಧಕದ ಆಕ್ಸೈಡ್ ಗಳು ವಾತಾವರಣದ ಗಾಳಿಯಲ್ಲಿ ಸೇರಿ ಸಣ್ಣ ಸಣ್ಣ ನೀರಿನ ಹನಿಗಳಾಗುತ್ತವೆ.ಹೀಗೆ ಅನೇಕ ನೀರಿನ ಹನಿಗಳು ಸೇರಿ ಘನೀಕರಣಗೊಂಡು ಮೋಡಗಳು ರೂಪಗೊಳ್ಳುತ್ತವೆ. ಮೋಡಗಳಿಂದ ಮಳೆಯಾಗುತ್ತದೆ. ಹೀಗೆ ಬಿದ್ದ ಮಳೆಯಲ್ಲಿ ರಸಾಯನಿಕ ಸಂಯುಕ್ತಗಳಾದ ನೈಟ್ರೋಜನ್ ಮತ್ತು ಗಂಧಕದ ಆಕ್ಸೈಡ್ ಗಳು ಇರುವುದರಿಂದ ಮಣ್ಣು ಆಮ್ಲೀಯವಾಗುತ್ತದೆ. ಈ ಕೆಳಗಿನ ದೇಶಗಳಲ್ಲಿ ಆಮ್ಲ ಮಳೆಯ ಪರಿಣಾಮ ಉಂಟಾಗಿದೆ ನೈರುತ್ಯ ಅಮೇರಿಕ ಮತ್ತು ವಾಯುವ್ಯ ಕೆನಡಾ,ಹೊಸ ಇಂಗ್ಲೆಂಡ್ ಮತ್ತು ಅಟ್ಲಾಂಟಿಕ ಪ್ರದೇಶಗಳಲ್ಲಿ ಬಹಳ ಹಾನಿಯನ್ನುಂಟು ಮಾಡಿದೆ.ಇದಕ್ಕೆ ಕಾರಣ ಈ ಪ್ರದೇಶಗಳಲ್ಲಿ ಅಟೋಮೊಬೈಲ್ ಕಾರ್ಖಾನೆಗಳು ಹೆಚ್ಛು ಸ್ಟಾಪನೆಯಾಗಿರುವುದುದರಿಂದ ಮತ್ತು ವಾಹನಗಳ ದಟ್ಟಣೆಯಿಂದ ಹೆಚ್ಚು ಹೆಚ್ಚು ಹೊಗೆ ಪರಿಸರಕ್ಕೆ ಸೇರುತ್ತದೆ.ಈ ಹೊಗೆಯಲ್ಲಿ ಗಂಧಕ ಮತ್ತು ನೈಟ್ರೋಜನ್ ಆಕ್ಸೈಡ್ ಗಳು ಹೆಚ್ಚು ಪ್ರಮಾಣದಲ್ಲಿರುತ್ತದೆ. ಚೈನಾದಲ್ಲಿ ಅತ್ಯಂತ ಹೆಚ್ಚು ಕಲ್ಲಿದ್ದಲನ್ನು ಬಳಸುವುದರಿಂದ ಆಮ್ಲ ಮಳೆಯ ಪರಿಣಾಮ ಹೆಚ್ಛಾಗಿದೆ. ಆಮ್ಲ ಮಳೆಯ ದುಷ್ಪರಿಣಾಮಗಳು: ಸುಣ್ಣದ ಕಲ್ಲು ಮತ್ತು ಅಮೃತ ಶಿಲೆಯಿಂದ ಕಟ್ಟಲ್ಪಟ್ಟ ಕಟ್ಟಡಗಳು ಮತ್ತು ಮೂರ್ತಿಗಳು ಬಹಳ ಹಾನಿಗೊಳ್ಳಗಾಗುತ್ತವೆ.ಇವು ತಮ್ಮ ಮೂಲ ಹೊಳಪನ್ನು ಮತ್ತು ಬಣ್ಣ ಕಳೆದುಕೊಳ್ಳುತ್ತದೆ.ಉದಾ:ತಾಜ್ ಮಹಲ್ ಎಕಾಲಜಿ ಪರಿಣಾಮಗಳು: ಮಣ್ಣು ಮತ್ತು ಶಿಲೆಗಳು ಆಮ್ಲೀಯ ತಟಸ್ಥೀಕರಣ ಶಕ್ತಿಯನ್ನು ಕಳೆದುಕೊಳ್ಳುತ್ತಿವೆ.ಉದಾ:ಅಡೈರೋನ್ ಪರ್ವತ,ಹಸಿರು ಪರ್ವತ ಶ್ರೇಣಿಗಳು. ಆಮ್ಲ ಮಳೆಯಿಂದ ಫಲವತ್ತಾದ ಮಣ್ಣು ಆಮ್ಲೀಯದಾಗಿ ಯಾವ ಸಸ್ಯವು ಬೆಳೆಯುವುದಿಲ್ಲ ಬೆಳೆದರು ಆ ಸಸ್ಯವು ದೃಡವಾಗಿರುವುದಿಲ್ಲ ಮತ್ತು ಯಾವುದೇ ಫಕವನ್ನು ನೀಡದೆ ನಶಿಸಿ ಹೋಗುವ ಪರಿಸ್ಥಿತಿ ಬರುತ್ತದೆ. ಕೆಲವು ಅರಣ್ಯ ಪ್ರದೇಶಗಳಿಗೆ ಆಮ್ಲ ಮಳೆಯಿಂದ ಹಾನಿಯುಂಟಾಗಿದೆ. ಉದಾ: ಮಧ್ಯ ಯುರೋಪದ ಅರಣ್ಯಗಳಲ್ಲಿರುವ ಅನೇಕ ಮರಗಳು ಸಾಯುತ್ತಿವೆ.ಇದರಿಂದ ಆ ಭಾಗದ ಓಜೋನ್ ಪದರಕ್ಕೆ ಬಹಳಷ್ಟು ಹಾನಿಯಾಗಿದೆ.