ಸದಸ್ಯರ ಚರ್ಚೆಪುಟ:VINAYASHREE/sandbox
ಹಳೆಕೋಟಿ ಶ್ರೀ ಮಾರಿಯಮ್ಮ ದೇವಸ್ಥಾನ , ಬೋಳಾರ :
ಲಿಖಿತ ದಾಖಲೆಗಳಿಲ್ಲದಿದರೂ ಶ್ರೀ ಮಾರಿಯಮ್ಮ ದೇವಸ್ಥಾನವು ಸುಮಾರು ೫೦೦ ವರುಷ ಪ್ರಾಚೀನವೆಂದು ನಂಬಲಾಗಿದೆ .
ಮಂಗಳೂರು ರೈಲು ನಿಲ್ದಾಣದಿಂದ ಸುಮಾರು ಒಂದೂವರೆ ಕಿ.ಮೀ ದೂರದಲ್ಲಿರುವ ಈ ದೇವಸ್ಥಾನವನ್ನು ನೆಹರು ಮೈದಾನ ಪಾಂಡೇಶ್ವರ- ಬೋಳಾರ ಮೂಲಕ ತಲುಪಬಹುದು . ಸಂಪ್ರದಾಯಿಕವಾಗಿ ಘಟ್ಟದ ಮೇಲಿನಿಂದ ಓಡಿಸಿದ ಮಾರಿ ಪ್ರತೀಕವಾದ ಮೂರ್ತಿಯನ್ನು ಗುಂಡುರಾಯರ ಹಿರಿಯರೊಬ್ಬರು ಕಟ್ಟೆಯೊಂದರ ಮೇಲಿಟ್ಟು ಪೂಜಿಸಲು ಪ್ರಾರಂಭಿಸಿದ ಕ್ರಮೇಣ ಮೈಲಿಗೆ ರೋಗದಿಂದ ನರಳುತ್ತಿರುವ ಅವರ ಕುಟುಂಬದವರ ಕಾಯಿಲೆ ಗುಣವಗಲು ಹೇಳಿಕೊಂಡ ಹರಕೆ ಫಲಿಸಿದ ಕಾರಣಕ್ಕಾಗಿ ಮಾರಿಗುಡಿ ಸ್ಥಾಪನೆಯಾಯಿತೆಂದು ನಂಬಲಾಗಿದೆ .
ಹಿಂದೆ ಕುರಿ, ಕೋಳಿ, ಹಂದಿ, ಕೋಣಗಳ ಬಲಿಯನ್ನು ಅರ್ಪಿಸಿ ದೇವತೆಯನ್ನು ತೃಪ್ತಿಗೊಳಿಸುವ ಪದ್ಧತಿ ಮುಂದುವರಿದುಕೊಂಡು ಬಂದಿದ್ದರೂ ಈಗ ಸಾತ್ಜಿಕ ಪೂಜಾಪದ್ಧತಿ ಆಚರಣೆಯಲ್ಲಿದೆ . ಪ್ರತಿ ವರುಷ ನವರಾತ್ರಿಯ ವೇಳೆ ೯-೧೦ ದಿವಸಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ . ಅಯುಧಪೂಜೆಯ ದಿನ ರಥೋತ್ಸವ ನಡೆಯುತ್ತದೆ . ಈ ಕ್ಷೇತ್ರದ ಇತ್ತೀಚೆಗೆ ಹರಿಕಥೆ ಯಕ್ಷಗಾನ ಮೊದಲಾದ ಚಟುವಟಿಕೆಗಳೊಂದಿಗೆ ಸಂಸ್ಕೃತಿಕ ಕೇಂದ್ರವಾಗಿ ಬೆಳೆದಿದೆ . ಐದು ಮಂದಿಯ ಆಡಳಿತ ಮಂಡಳಿ ಈ ದೇವಾಲಯದ ವ್ಯವಸ್ಥೆಯನ್ನು ನೋಡಿಕೊಳ್ಳುವ ಕ್ರಮ ರೂಢಿಯಲ್ಲಿದೆ .
Start a discussion about ಸದಸ್ಯ:VINAYASHREE/sandbox
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಸದಸ್ಯ:VINAYASHREE/sandbox.