ಸದಸ್ಯರ ಚರ್ಚೆಪುಟ:VICTORIA JACOB/sandbox1
ಫೋನೋಗ್ರಾಫ್
[ಬದಲಾಯಿಸಿ]'ಶಬ್ದ ಕಂಪನವನ್ನುಂಟುಮಾಡುತ್ತದೆ, ಆದಕಾರಣ ಕಂಪನ ಶಬ್ದವನ್ನು ಉಂಟುಮಾಡಬೇಕು' - ಇಸ್ಟೇ ಫೋನೋಗ್ರಾಫ್ ಮೂಲ ತತ್ವ. ಥಾಮಸ್ ಆಲ್ವಾ ಎಡಿಸನ್, ದೂರವಾಣಿಯ ತೆರೆದ ಕಹಳೆ ಬಾಯಿಂತಹ ಮೌತ್ ಪೀಸ್' ಒಳಕ್ಕೆ ಹಾಡುತ್ತಿದ್ದ. ಆತನ ಸ್ವರದ ಕಂಪನಗಳು ಒಂದು ಸೂಕ್ಮ ಸೂಜಿಮನೆಯನ್ನು ಅಲುಗುವಂತೆ ಮಾಡಿ, ಸೂಜಿಮನೆ ಎಡಿಸನ್ನನ ಬೆರಳೊಳಗೆ ಚುಚ್ಚಿಬಿಟ್ಟಿತು. ಆಗ ಈ ವಿಜ್ಞಾನಿಗೆ ಬೆರಳು ನೋಯುವ ಜೊತೆಗೆ ತಲೆಯಲ್ಲಿ ಒಂದು ಯೋಚನೆ ಹೊಳೆಯಿತು. ತನ್ನ ಸ್ವರಕ್ಕೆ ಪ್ರತಿಕ್ರಯಿಸಿದ ಈ ಸೂಜಿಮನೆಯ ಜಿಗಿದಾಟವನ್ನು ಒಂದು ದಪ್ಪ ಕಾಗದದ ಮೇಲೆ 'ರೆಕಾಡ್' ಮಾಡಿ, ಇದೇ ಸೂಜಿಮನೆಯನ್ನು ಆ ಕಾಗದದ ಮೇಲೆ ಹರಿದುಬಿಟ್ಟರೆ ಆ ಯಂತ್ರ ಮಾತಾಡಬಲ್ಲದಲ್ಲವೇ ಅನಿಸಿತು. 'ಮಾನವನ ಸ್ವರವನ್ನು ಸ್ವಯಂಚಾಲಿತವಾಗಿ ದಾಖಲಿಸಿ, ಮುಂದೆ ಬೇಕೆಂದಾಗ ಪುನರ್ ಸೃಷ್ಹಿಸುವ ಕಲ್ಪನೆಯೇ ಆ ಕಾಲಕ್ಕೆ ಅತ್ಯದ್ಭುತವಾಗಿತ್ತು. ಶಬ್ದದ ಭೌತಿಕ ಪ್ರಭಾವಕ್ಕೂ, ಪರಿಣಾಮಕ್ಕೂ, ಶಬ್ದವನ್ನು ಪುನರ್ ಸೃಷ್ಹಿಸುವ ಬಗೆಗೂ ಸಂಬಂಧವನ್ನು ಎಡಿಸನ್ ಹುಡುಕಿದ್ದ. ನಿಜಕ್ಕೂ ಎಡಿಸನ್ನನ ಫೋನೋಗ್ರಾಫ್ ಸರಳ ಸಲಕರಣೆಯಾಗಿತ್ತು. ಎಚ್.ಎಮ್,ವಿ,ಯ ಫೋನೋಗ್ರಾಫಿನ ಮುಂದೆ ಕುಳಿತ ನಾಯಿಯ ಚಿತ್ರ ನೆನಪಿದೆಯಲ್ಲವೇ. ಅಂಥ ಕಹಳೆಯಂತಹ ಸಲಕರಣೆಯ ಕಿರಿದಾದ್ ತುದಿಯಲ್ಲಿ ತೆಳು ಪಟಲವನ್ನು ಜೋಡಿಸಿದ್ದು, ಈ ಕಂಪನಪಟಲಕ್ಕೆ ಒಂದು ಸೂಜಿಯನ್ನು ಜೋಡಿಸಲಾಗಿದ್ದು, ಈ ಕಂಪನಪಟಲಕ್ಕೆ ಒಂದು ಸೂಜಿಯನ್ನು ಜೋಡಿಸಲಾಗಿತ್ತು. ಅಗಲ ಬಾಯಿಯ ತುದಿಯಲ್ಲಿ ಕೂಗಿದಾಗ ಕಹಳೆಯಲ್ಲಿ ಶಬ್ದ ಸಾಂದ್ರೀಕ್ಟತವಾಗುತ್ತ್ದದೆ. ಕಹಳೆಯ ಕಿರಿ ಅಗಲದ ತುದಿಗೆ ಕಂಪನಪಟಲವನ್ನು ಜೋಡಿಸಿದ ಕಾರಣ,ಸಾಂದ್ರೀಕೃತ ಶಬ್ದದ ಹೊಡೆತಕ್ಕೆ ಅದು ಕಂಪಿಸುತ್ತದೆ. ಈ ರೀತಿ ಕಹಳೆಯೊಳಕ್ಕೆ ಕೂಗಿದಾಗ, ಶಬ್ದ ತರಂಗಗಳು ಕಂಪನಪಟಲವನ್ನು ಕಂಪಿಸುವಂತೆ ಮಾವಿ, ಅದಕ್ಕೆ ಅಂಟಿದ ಸೂಜಿ ಅಲುಗಾಡಿ, ಎದುರಿಗಿದ್ದ ತವರದ ತೆಳು ಹಾಳೆಯ ಮೇಲೆ ಸಣ್ಣ ರೇಖೆಗಳನ್ನು ಮೂಡಿಸುತ್ತಿತ್ತು. ತವರದ ಹಾಳೆಯನ್ನು ಸಿಲಿಂಡರಿಗೆ ತುತ್ತಲಾಗಿದ್ದು. ಸಿಲಿಂಡರನ್ನು ತಿರುಗುವಂತೆ ಮಾಡಲಾಗಿತ್ತು. ಸೂಜಿ ಮೊನೆ ತವರದ ಹಾಲೆಯ ಮೇಲೆ ಸುರುಳಿ ಸುರುಳಿ ಗೆರೆಗಳಾಗಿ ಗುರುತು ಮಾಡಿ ಹಾಯುವುದು. ಇದೇ ಕ್ರಿಯೆಯನ್ನು ಹಿಮ್ಮೊಗವಾಗಿಸಿ ಸೂಜಿ ಮೊನೆಯ್ನ್ನು ತವರದ ಹಾಳೆಯ ರೇಖೆಗಳ ಮೇಲೆ ಚಲಿಸಲು ಬಿಟ್ಟಾಗ, ಸೂಜಿ ಕುಣಿದು,ಅದಕ್ಕಂಟಿದ ಕಂಪನಪಟಲವೂ ಕಂಪಿಸಿ ಸ್ವರ ಕೇಳಿಬರುತ್ತಿತ್ತು. ಈ ಬಗೆಯಲ್ಲಿ ತವರದ ರೇಖೆಗಳಲ್ಲಿ ಹಿಡಿದಿಟ್ಟ ಸ್ವರ, ಪುನಃ ಜನಿಸಿ, ಕಹಳೆಯಿಂದ ಹಿಗ್ಗಿ ದೊಡ್ಡದಾಗಿ ಕೇಳಿಬರುತ್ತಿತ್ತು. ಇದು ನಡೆದದ್ದು ೧೮೭೭ ರಲ್ಲಿ. ಎಮಿಲ್ ಬರ್ಲಿನರ್ ಎಂಬ ವಿಜ್ಞಾನಿ ಎಡಿಸನ್ ನ ವಿಚಾರವನ್ನು ಬಳಸಿ ಸಿಲಿಂಡರಿಗೆ ಬದಲು ತಟ್ಟೆಯಾಕಾರದ ಪೋನೋಗ್ರಾಫ್ ರಚಿಸಿದ. ೧೮೮೯ರ ಹೊತ್ತಿಗೆ ಮೊತ್ತಮೊದಲ ವಾಣಿಜ್ಯ ರೂಪದ ರೆಕಾರ್ಡ್ ಮಾಡುವ ಯಂತ್ರಗಳು ಜರ್ಮನಿಯಲ್ಲಿ ಅನಂತರ ೧೮೯೩ರಲ್ಲಿ ಅಮೇರಿಕೆಯಲ್ಲಿ ತಯಾರಾಗ ತೊಡಗಿದವು. ೧೮೯೪ರಲ್ಲಿ ಚಾರ್ಲ್ಸ್ ಪಾತ್ ಮತ್ತು ಎಮಿಲ್ ಒಂದು ಫೋನೋಗ್ರಾಫ್ ಕಾರ್ಖಾನೆಯನ್ನು ತೆರೆದರು. ಈ ತಟ್ಟೆಯಲ್ಲಿ ಶಬ್ದದ ರೇಖೆ, ಸಿಂಬಿ ಸುತ್ತಿದ್ ಆಕಾರದಲ್ಲಿ ಮೂಡಿಬರುತ್ತಿತ್ತು. ಸಿಲಿಂಡರಿಗೆ ಬದಲು ಬಂದ ತಟ್ಟೆಯಾಕಾರದ ಈ ರೆಕಾರ್ಡ್ ಗಳಲ್ಲಿ, ತಟ್ಟೆಯ ಎರಡೂ ಪಕ್ಕಗಳಲ್ಲಿ ಧ್ವನಿಯ ಹೆಜ್ಜೆಯನ್ನು ದಾಖಲಿಸಬಹುದಾಗಿದ್ದು, 'ಧ್ವನಿತಟ್ಟೆ' ಗಳ ಸಂಗ್ರಹ ಸುಲಭವಾಗಿತ್ತು. ಮೊದಮೊದಲು ಶಬ್ದವನ್ನು ರೆಕಾರ್ಡ್ ಮಾಡುವುದು, ಮತ್ತೆ ಹಿಂತಿರುಗಿ ಹಾಡಿಸುವುದು ಪೂರ್ಣ ಯಾಂತ್ರಿಕವಾಗಿ ಜರಗುತ್ತಿತ್ತು. ಹಾಗಾಗಿ ಪುನರ್ರಚಿಸಿದ ಶಬ್ದದ ಗುಣಮಟ್ಟ ಸಾಧಾರಣವಿತ್ತು. ೧೯೦೬ರಲ್ಲಿ 'ಟ್ರೈಯೋಡ್' ಎಂಬ ನಿರ್ವಾತದ ಕೊಳವೆಯ ಆವಿಷ್ಕಾರ, ವಿದ್ಯುತ್ ಚಾಲಿತ ರೆಕಾರ್ಡಿನ ಸಾಧ್ಯತೆಯನ್ನು ಹೊತ್ತು ತಂದಿತ್ತು. ೧೯೨೫ರಲ್ಲಿ ಮೊತ್ತಮೊದಲ ವಿದ್ಯುತ್ ಚಾಲಿತ ರೆಕಾರ್ಡ್ ಮಾಡುವ ವಿಧಾನ ಅಮೆರಿಕದಲ್ಲಿ ಆರಂಭವಾಯಿತು. ವಿದ್ಯುತ್ ರೆಕಾರ್ಡ್ ಮಾಡುವ ವಿಧಾನದಲ್ಲಿ, ಸೂಕ್ಸ್ಮ ಧ್ವನಿವರ್ಧಕಗಳನ್ನು (ಮೈಕ್ರೋ ಪೋನ್). ಮತ್ತು ವಿದ್ಯುದ್ವರ್ಧಕಗಳನ್ನು (ಆಂಪ್ಲಿಫೈಯರ್) ಬಳಸಲಾಗುತ್ತಿತ್ತು. ೧೯೩೦ರ ಹೊತ್ತಿಗೆ ಎಲೆಕ್ಟ್ರಾನಿಕ್ ತಾಂತ್ರಿಕತೆಯ ಮೂಲಕ ಉತ್ತಮ ಗುಣಮಟ್ಟದ ಸಂಗೀತವನ್ನು ಪುನರ್ರಚಿಸುವುದು ಸಾಧ್ಯವಾಯಿತು. ಶಬ್ದದಿಂದ ಬದಲಾಗುವ ಒತ್ತಡದಲೆಗಳನ್ನು ಸ್ಟೀಲಿನ ತಂತಿಯ ಮೇಲೆ ಆಯಸ್ಕಾಂತೀಯ ರಚನೆಗಳಾಗಿ ಪರಿವರ್ತಿಸುವ ಪ್ರಯತ್ನ ೧೯೨೦ರ ದಶಕದಲ್ಲಿಯೇ ನಡೆದಿತ್ತು. ಬಿ.ಬಿ.ಸಿ, ಒಂದೇ ಕಾರ್ಯಕ್ರಮವನ್ನು ಜಗತ್ತಿನ ಬೇರೆ ಭಾಗಗಳಿಗೆ ಬೇರೆ ಬೇರೆ ಸಮಯಗಳಲ್ಲಿ ಪ್ರಸಾರಿಸಲು ಇಚ್ಚಿಸಿ, ೧೩೯೧ರಲ್ಲಿ ಸುಧಾರಿತ ಯಂತ್ರವನ್ನು ಸ್ಥಾಪಿಸಿತು. ಇದರಲ್ಲಿ ಆರು ಮಿಲಿಮೀಟರ್ ಅಗಲದ ಸ್ಟೀಲಿನ ಟೇಪ್ ಸೆಕಂಡಿಗೆ ೧.೫ ಮೀಟರಿನ ವೇಗದಲ್ಲಿ ಓಡಿ ರೆಕಾರ್ಡ್ ಆಗುತ್ತಿತ್ತು. ಅದೇ ವೇಗದಲ್ಲಿ ಪುನರ್ ನುಡಿದು ತೋರಿಸುತ್ತಿತ್ತು. ೧೯೨೯ರಲ್ಲಿ ಫ್ರಿಟ್ಸ್ ಫ್ಲೌಮರ್ ಆಯಸ್ಕಾಂತೀಯ ಲೇಪವಿದ್ದು ಬಳುಕುವಷ್ಟು ತೆಳುವಾದ ರೆಕಾರ್ಡ್ ಮಾಡುವ ಟೇಪುಗಳನ್ನು ಪೇಟೆಂಟ್ ಮಾಡಿದ. ೧೯೩೫ರಲ್ಲಿ ಈ ಆವಿಷ್ಕಾರಕ್ಕೆ ರೂಪ ಕೊಟ್ಟು ಬರ್ಲಿನ್ ನಲ್ಲಿ 'ಮ್ಯಾಗ್ನೆಟೋಪೋನ್' ಪ್ರದರ್ಶಿತವಾಯಿತು. ಇದು ಇಂದಿನ ಆಧುನಿಕ ಟೇಪ್ ರೆಕಾರ್ಡರಿನ ಮೊತ್ತಮೊದಲ ಮಾದರಿ. ಎರಡನೇ ಮಹಾಯುದ್ದದ ಸಮಯಕ್ಕೆ ಕಾಲು ಇಂಚಿನ ಪ್ಲಾಸ್ಟಿಕ್ ಅಡಿಪಾಯವಿರುವ, ಕಬ್ಬಿಣದ ಆಕ್ಸೈಡ್ ಲೇಪದ ಟೇಪುಗಳು ಬಳಕೆಗೆ ಬಂದವು. ಆದರೆ ರೀಲಿನಿಂದ ರೀಲಿಗೆ ರೆಕಾರ್ಡ್ ಮಾಡಿ ಹಾಡಿಸುವ ಟೇಪ್ ರೆಕಾರ್ಡರ್, ತೀರಾ ನಾಜೂಕಿದ್ದು ಸುತ್ತುವಾಗ ಹರಿಯುವ ಸಾಧ್ಯತೆ ಬಹಳವಿತ್ತು. ಇದನ್ನು ತಡೆಗಟ್ಟಲು,ಟೇಪ್ ನಳಿಕೆಗಳ, ಕ್ಯಾಸೆಟ್ ರೆಕಾರ್ಡರಿನಲ್ಲಿ ಸಣ್ಣದಾದ ಎರಡು ಗಾಲಿಗಳಿದ್ದು, ಗುಂಡಿ ಒತ್ತಿದರೆ ತಾನೇ ಸುತ್ತಿಕೊಂಡು ಹಾಡಲು ಅನುಕೂಲವಾಯಿತು. ಕ್ಯಾಸೆಟ್ ಅಂದರೆ ಪ್ಲಾಸ್ಟಿಕಿನ ಡಬ್ಬಿ. ಈ ಡಬ್ಬಿಯಲ್ಲಿ ೪೫,೬೦,೯೦,೧೨೦ ನಿಮಿಷಗಳವರೆಗೂ ಹಾಡಬಲ್ಲ ಟೇಪು ಸುತ್ತಿರುತ್ತದೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಟೇಪು ರೆಕಾರ್ಡ್ ಮಾಡುವ ಸುಧಾರಿತ ವಿಧಾನ ಜನಪ್ರಿಯವಾಯಿತು. ೧೯೬೩ರಲ್ಲಿ ಪುಟ್ಟದಾದ ಕ್ಯಾಸೆಟ್ ನ್ ಆವಿಷ್ಕಾರವಾದದ್ದು, ಮನೆ ಮನೆಗಳಲ್ಲಿ ಬಳಸುವ ಟೇಪ್ ರೆಕಾರ್ಡರುಗಳಲ್ಲಿ ಕ್ರಾಂತಿ ತಂದಿತು. ಇಂದು ಮನೆಯಲ್ಲಿ ಒಂದು ಗುಂಡಿ ಅದುಮಿ ನಮ್ಮ ದನಿಯನ್ನು ಹಿಡಿದಿಡಬಹುದು, ಮತ್ತೊಂದು ಗುಂಡಿ ಅದುಮಿ ಅದೇ ಸ್ವರವನ್ನು ಕೇಳಬಹುದು. ಇಂದು ಶಬ್ದವನ್ನು ದಾಖಲಿಸುವ ತಂತ್ರಜ್ಞಾನದ ಬಹು ದೊಡ್ಡ ಮುನ್ನಡೆ ಎಂದರೆ 'ಕಾಂಪ್ಯಾಕ್ಟ್ ಡಿಸ್ಕ್'ಗಳು. ಬೆಳ್ಳಿಯಂತೆ ಹೊಳೆವ ಈ ಸಣ್ಣ ತೆಳು ತಟ್ಟೆಗಳ ಮೇಲೆ ನೀವು ಮನೆಯಲ್ಲಿ 'ರೆಕಾರ್ಡ್' ಮಾಡಲು ಸಾಧ್ಯವಿಲ್ಲ. ಇವುಗಳನ್ನು ತಯಾರಿಸುವಾಗಲೇ ಇವುಗಳಲ್ಲಿ ಶಬ್ದವನ್ನೂ ಸೇರಿಸಲಾಗಿರುತ್ತದೆ. ಬೆಳ್ಳಿ ಬಣ್ಣದ ಈ ಚಿಕ್ಕ ತಟ್ಟೆಯ ಮೇಲ್ಮೈಯಲ್ಲಿ ಶಬ್ದವನ್ನು ಸಣ್ಣ ರಂಧ್ರಗಳ ವಿನ್ಯಾಸದಲ್ಲಿ ರೆಕಾರ್ಡ್ ಮಾಡಲಾಗಿರುತ್ತದೆ. ಈ ಡಿಸ್ಕನ್ನು ಡಿಸ್ಕ್ ಪ್ಲೇಯರ್ನಲ್ಲಿ ಓಡಿಸಿದಾಗ, ಒಂದು ಲೇಸರ್ ಕಿರಣ ಈ ಡಿಸ್ಕ್ ಮೇಲಿನ ರಂಧ್ರಗಳ ವಿನ್ಯಾಸವನ್ನು ಓದಿ ಗುರುತಿಸಿ, ಮೂಲ ಶಬ್ದ ಮತ್ತು ವೀಡಿಯೋ ಚಿತ್ರವನ್ನು ಪುನರ್ರಚಿಸುತ್ತದೆ. ಇಂದು ವಿಶ್ವಕೋಶಗಳಲ್ಲಡಕವಾಗಿರುವಂತಹ ಅಪಾರ ಮಾಹಿತಿಯನ್ನು ಇಂತಹ ಸಣ್ಣ 'ಕಾಂಪ್ಯಾಕ್ಟ್ ಡಿಸ್ಕ್'ನಲ್ಲಿ ಸಂಗ್ರಹಿಸಿಡುವುದು ಸಾಮಾನ್ಯವಾಗಿದೆ.