ಸದಸ್ಯರ ಚರ್ಚೆಪುಟ:Sujaykiran/sandbox
ವಿಲಿಯಂ ಷೇಕ್ಸಪೀಯರನ ಜೀವನ
[ಬದಲಾಯಿಸಿ]ವಿಲಿಯಂ ಷೇಕ್ಸಪೀಯರ್ ಸುಪ್ರಸಿದ್ದ ನಾಟಕಕಾರರು. ಅವರು ಇಂಗ್ಲಂಡಿನಲ್ಲಿ ಬದುಕಿ ಬಾಳಿದರು. ಅವರ ಹೆಸರು ಜಗತ್ತಿನ ಮೂಲೆ ಮೂಲೆಗಳಲ್ಲಿಯೂ ಕೇಳಿಬಂದಿದೆ.ಷೇಕ್ಸಪೀಯರರಲ್ಲಿ ಅಪೂರ್ವವಾದ ಪ್ರತಿಭೆಯಿದ್ದಿತು. ಅದು ಸತತವಾಗಿ ಪುಟಿಯುತ್ತಿರುವ ಉತ್ಸಾಹದ ನೆಲೆಯಾಗಿತ್ತು ಅದೇ ನೀರನ್ನು ಕುಡಿದು, ಬಹಳ ಲೇಖಕರು ತಮ್ಮ ಬಾಳಿನಲ್ಲಿ ಬೆಳಕನ್ನು ಕಂಡಿದ್ದಾರೆ, ಶ್ರೇಷ್ಠ ವ್ಯಕ್ತಿಗಳಾಗಿದ್ದಾರೆ.
ವಿಲಿಯಂ ಷೇಕ್ಸಪೀಯರ್ ಇಂಗ್ಲೆಂಡ್ ದೇಶದ ಸ್ಟ್ರಾಟಫೋರ್ಡದಲ್ಲಿ ಕ್ರಿ.ಶ. ೧೫೬೪ ರ ಎಪ್ರಿಲ್ ತಿಂಗಳಿನಲ್ಲಿ ಜನಿಸಿದರು. ಜಾನ್ ಷೇಕ್ಸಪೀಯರ್ ಮತ್ತು ಮೇರಿ ಆರ್ಡನ್ ಅವನ ತಂದೆ ತಾಯಿಗಳು.ಸ್ಟ್ರಾಟಫೋರ್ಡದಲ್ಲಿ ಜಾನ್ ಷೇಕ್ಸಪೀಯರನಿಗೆ ಒಳ್ಳೇ ಮರ್ಯಾದೆ ಇತ್ತು. ಇವನ ಮಕ್ಕಳಲ್ಲಿ ವಿಲಿಯಂ ಮೂರನೆಯವನು. ವಿಲಿಯಂ ಜನಿಸಿದ್ದು ಇಳಿದಾದ ಚಪ್ಪರವುಳ್ಳ ಒಂದು ಚಿಕ್ಕ ಮನೆಯಲ್ಲಿ. ಆ ಮನೆ ಈಗ ಯಾತ್ರಿಕರ ಆಕರ್ಷಕ ಸ್ಥಳವಾಗಿದೆ.
ಸ್ಟ್ರಾಟಫೋರ್ಡದಲ್ಲಿಯ ಗ್ರಾಮ ಸ್ಕೂಲದಲ್ಲಿ ವಿಲಿಯಂನ ಶಿಕ್ಷಣ ಆರಂಭವಾಯಿತು. ವಿಲಿಯಂನ ತಂದೆ ತಾಯಿಗಳಿಗೆ ಓದು-ಬರಹ ಏನೂ ಬರುತ್ತಿರಲಿಲ್ಲ. ಈ ಶಾಲೆಯಲ್ಲಿ ಇಂಗ್ಲೀಷ ಅಲ್ಲದೆ, ಕೆಲವು ಮಟ್ಟಗೆ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಯನ್ನು ವಿಲಿಯಂನು ಕಲಿತನು. ಬಾಲಕನಾದ ವಿಲಿಯಂ ತಂದೆಯ ಸಂಗಡ ನಾಟಕಗಳನ್ನು ನೋಡಲು ಹೋಗುತ್ತಿರಬಹುದು.ಇದರ ಪರಿಣಾಮ ವಿಲಿಯಂನ ಮೇಲೆ ಬಹಳವಾಗಿದೆ. ಇದರಿಂದಲೇ ಅವನು ನಾಟಕಗಳ ಬಗ್ಗೆ ವಿಚಾರಿಸಹತ್ತಿದನು. ನಾಟಕಗಳನ್ನು ಬರೆಯುವುದರ ಕಡಗೂ ಅವನ ಲಕ್ಷ್ಯ ಹೋಯಿತು. ಕ್ರಿ.ಶ. ೧೫೭೮ ರಿಂದ ಮುಂದೆ ತಂದೆಯ ಆರ್ಥಿಕ ಸ್ಥಿತಿ ಕೆಟ್ಟು ಮನೆಯಲ್ಲಿ ಬಹಳ ಅಡಚಣಿ ಬಂದಿತು. ಆದ್ದರಿಂದ ವಿಲಿಯಂನಿಗೆ ಶಾಲೆಯನ್ನು ಬಿಡುವ ಪ್ರಸಂಗವೂ ಬಂದಿತು.
ವಿಲಿಯಂ ೧೯ ವರ್ಷದವನಾಗಿದ್ದಾಗ ಕ್ರಿ.ಶ. ೧೫೮೨ ಡಿಸೆಂಬರಸಲ್ಲಿ ಅವನ ಮದುವೆಯಾಯಿತು. ವಿಲಿಯಂ ಷೇಕ್ಸಪೀಯರನಿಗೆ ಮೂರು ಮಕ್ಕಳು. ಎರಡು ಹೆಣ್ಣು, ಒಂದು ಗಂಡು. ಅವನ ಮಗನಾದ ಹ್ಯಾಮ್ಲೆಟನು ಕ್ರಿ.ಶ. ೧೫೯೨ರಲ್ಲಿ ತೀರಿಕೊಂಡನು. ಅವನು ಇಬ್ಬರು ಹೆಣ್ಣುಮಕ್ಕಳ ಮದುವೆಯಾಯಿತು.
ಕ್ರಿ.ಶ.೧೬೧೬ ಎಪ್ರಿಲ್ ೨೩ನೇಯ ದಿನಾಂಕದಂದು ವಿಲಿಯಂ ಷೇಕ್ಸಪೀಯರ್ ಮರಣ ಹೊಂದಿಸರು. ಮರಣದ ಸಮಯದಲ್ಲಿ ಅವನಿಗೆ ೫೨ ವರುಷಗಳಾಗಿದ್ದವು. ಅವನನ್ನು ಸ್ಟ್ರಾಟಫೋರ್ಡ ಚರ್ಚದ ಆವಾರಣದಲ್ಲಿ ಹುಗಿಯಲಾಯಿತು. ಕೆಲವು ದಿನಗಳ ನಂತರ ಅವನ ಸ್ಮಾರಕ್ ಸಲುವಾಗಿ ಪ್ರತಿಮೆಯನ್ನು ಅಲ್ಲಿ ನಿಲ್ಲಿಸಿದರು. ಆ ಪ್ರತಿಮಯ ತೇಜಸ್ಸು ಅಪೂರ್ವವಾದದ್ದು. ಅದರ ಬೆಳಕಿನ ಕಿರಣಗಳು ಜಗತ್ತಿನ ಎಲ್ಲ ಭಾಗಗಳಲ್ಲಿಯೂ ಹರಡಿದೆ. ಷೇಕ್ಸಪೀಯರನ ನಾಟಕಗಳಲ್ಲಿ ಹಾಸ್ಯವಿದೆ,ಗಾಂಭೀರ್ಯವಿದೆ,ತತ್ವಜ್ಞಾನವಿದೆ,ರಸಿಕತೆವಿದೆ ಎಲ್ಲವೂ ಇದೆ. ಅವನ ನಾಟಕಗಳು ರಸಪಾಕಗಳು, ಅವುಗಳನ್ನು ಕುಡಿದರೆ ಅಮ್ರತ ಕುಡಿದಷ್ಟು ಅನಂದವಾಗುವುದು.