ಸದಸ್ಯರ ಚರ್ಚೆಪುಟ:Sanjana740

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಸಂಜನ, ನಾನು ೧ ಬಿ.ಸಿ.ಬಿ ಯ ತರಗತಿಯಲ್ಲಿ ಓದುತ್ತಿದ್ದೇನೆ. ನನ್ನ ತಂದೆಯ ಹೆಸರು ಸಂಜಯ್ ಬಾಬು, ತಾಯಿಯ ಹೆಸರು ಸುಜನ. ನನ್ನ ತಂದೆ ಚಿಕ್ಕಬಳ್ಳಾಪುರದಲ್ಲಿ ಆಭರಣದ ಅಂಗಡಿಯನ್ನು ನಡೆಸುತ್ತಿದಾರೆ, ನನ್ನ ತಾಯಿ ಗೃಹಿಣಿ. ನನ್ನ ವಿಧ್ಯಾಭ್ಯಾಸವನ್ನು ಪ್ರಾಂರಂಭಿಸಿದ್ದು ಚಿಕ್ಕಬಳ್ಳಾಪುರದಲ್ಲಿ, ಈ ಊರು ಜಿಲ್ಲೆಯಾಗಿದ್ದು, ನಂದಿ ಬೆಟ್ಟದ ಹತ್ತಿರವಿರುವುದರಿಂದ ಇಲ್ಲಿಗೆ ಬರುವ ಜನರು ಹೆಚ್ಚಾಗಿದೆ. ನಂದಿ ಬೆಟ್ಟದಲ್ಲಿ ಟಿಪ್ಪು ಡ್ರಾಪ್ ಪ್ರಸಿದ್ಧವಾಗಿದೆ. ಇದನ್ನು ನೋಡಲು ಜನರು ಭಾರತದ ರಾಜ್ಯಗಲಲ್ಲದೆ ಹೊರ ದೇಶಗಳಿಂದಲು ಬರುವುದು ಒಂದು ವಿಶೇಷತೆ. ಈ ಸ್ಥಳದಲ್ಲಿ ಶಿವ ಪಾರ್ವತಿ ದೇವಸ್ಥಾನ ಹಾಗೂ ಬಸವನ ದೇಗುಲ ಬಹು ಪ್ರಾಚೀನವಾಗಿದೆ. ನನ್ನ ಊರಿಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾನ ಹತ್ತಿರದಲ್ಲಿರುವದರಿಂದ ಈ ಊರಿನ ಬೆಳವಣಿಗೆಗೆ ಸಹಾಯಕಾರಿವಾಗಿದೆ.

         ನನ್ನ ಹವ್ಯಾಸಗಳ ಬಗ್ಗೆ ಹೆಳುವುದಾದರೆ ಚಿತ್ರಕಲೆ, ಪುಸ್ತಕ ಒದುವುದು, ಹಾಡುವುದು, ಹೊಸ ಕಲೆಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಹೆಚ್ಚಾಗಿದೆ. ಬಾಲ್ಯದಿಂದಲು ಪರೀಕ್ಷೆಗಳಲಿ ಉತ್ತಮ ಅಂಕಗಳನ್ನು ಗಳಿಸಿದ್ದೇನೆ, ಇದನ್ನು ಹೀಗೆ ಮುಂದುವರಿಸಲು ಪ್ರಯತ್ನಿಸುತ್ತಿದೇನೆ. ವಿದ್ಯಾಭ್ಯಾಸದ ಜೊತೆಗೆ ವಿವಿಧ ಸಾಂಸ್ಕೃತಿಕ ಹಾಗೂ ಕಲಾ ಸ್ಪರ್ಧೆಗಳಲ್ಲಿ ಸಾಕಷ್ಟು ಬಹುಮಾನಗಳನ್ನು ಪಡೆದಿದ್ದೇನೆ. 
         ಇತರ ಚಟುವಟಿಕೆಗಳಲ್ಲಿ ಭಾಗವಹಿಸಲು ನನ್ನ ತಂದೆ-ತಾಯಿ ಸಾಕಷ್ಟು ಪ್ರೋತ್ಸಾಹ ನೀಡಿ ನನಗೆ ಒಳ್ಳೆಯ ಶಿಕ್ಷಣ ನೀಡಿ ಜೀವನದಲ್ಲಿ ನನ್ನ ಗುರಿಯನ್ನು ತಲುಪಲು ಎಲ್ಲ ರೀಯತಿಯಲ್ಲು ಸಹಕರಿಸುತ್ತಿದಾರೆ. 
        ರಜಾದಿನಗಳಲ್ಲಿ ಸುಮನ್ನೆ ಸಮಯ ವ್ಯರ್ಥ ಮಾಡದೆ ಗೆಳೆತಿಯರ ಜೊತೆ ನನ್ನ ಊರಿನ ಹತ್ತಿರ ವಿರುವ ಸರ್.ಎಂ.ವಿಶ್ವೇಶ್ವರಯ್ಯ ರವರ ಜನ್ಮ ಸ್ಥಳವಾದ ಮುದ್ದೇನಹಳ್ಳಿಗೆ ಪ್ರವಾಸ ಹೋಗಿದ್ದು, ಸರ್.ಎಂ.ವಿ ಯವರ ವಸ್ತು ಸಂಗ್ರಾಲಯವನ್ನು ನೋಡಿ ಸುಮಾರು ವಿಷಯಗಳ ಬಗ್ಗೆ ಅರಿವು ಮೂದಿತು, ಅವರ ಕ್ರಮಬದ್ಧವಾದ ಜೀವನ ಶೈಲಿಯನ್ನು ನಮ್ಮ ಜೀವದಲ್ಲು ಅಲವಡಿಸಲು ಪ್ರಯತ್ನಿಸುತ್ತಿದ್ದೇನೆ. 
         ಅವರ ಕಂಚಿನ ವಿಗ್ರಹವನ್ನು ಹಾಗೂ ಅವರ ಸಮಾಧಿಯನ್ನು ವಿಕ್ಷೀಸಲು ಸಾಕಷ್ಟು ವಿಧ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಸರ್.ಎಮ್.ವಿ ರವರು ಒಂದು ಸಣ್ಣ ಹಳ್ಳಿಯವರಾದರು, ತಮ್ಮ ಜ್ನಾನ ಹಾಗು ಶ್ರಮದಿಂದ ತಾವು ಮಾಡಿದ ಉನ್ನತ ಕೆಲಸಗಳಿಗೆ, ಸರ್ಕಾರವು ಗುರುತಿಸಿ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಯಾದ ಭಾರತ ರತ್ನವು ಅವರಿಗೆ ಲಬಿಸಿರುವುದು ನಮ್ಮಂತ ಯುವಕರಿಗೆ ಒಂದು ಮಾದರಿಯಾಗಿದೆ.
         ನಮ್ಮ ಜಿಲ್ಲೆಯಲ್ಲಿನ ಜೀವನ ಶೈಲಿ ಮತ್ತು ಬೆಂಗಳೂರಿನ ಜೀವನ ಶೈಲಿಗು ಸುಮಾರು ವ್ಯತ್ಯಸವಿದ್ದರು, ನನ್ನ ಸ್ನೇಹಿತರು ಹಾಗೂ ಪೋಶಕರ ಮಾರ್ಗದರ್ಶನದಿಂದ ನನಗೆ ಇಲ್ಲಿನ ವಿಧ್ಯಾಭ್ಯಾಸದಲ್ಲಿ ಯಾವುದೆ ತೊಂದರೆಯಾಗುತ್ತಿಲ್ಲ. 
         ನಮ್ಮ ನಾಡಿನ ಕವಿಗಳಾದ ದ.ರಾ.ಬೇಂದ್ರೆ, ಕುವೆಂಪು, ಮಾಸ್ತಿ, ಅಕ್ಕಮಹಾದೇವಿ, ಬಸವಣ್ಣ, ಇವರುಗಳ ಲೇಖನಗಳ ಬಗ್ಗೆ ತಿಳಿದಿಕೊಳ್ಳಲು ತುಂಬ ಆಸಕ್ತಿ ಇದೆ. ಕುವೆಂಪು ರವರ "ಶ್ರೀ ರಾಮಾಯಣ ದರ್ಶನಂ" ಹಾಗೂ "ನೆನಪಿನ ದೇೂಣಿಯಲಿ" ಈ ಮಹಾಕೃತಿಗಳನ್ನು ಓದಲು ಆಸಕ್ತಿ ಇದೆ, ಹಾಗೂ ಕರ್ನಾಟಕದ ಪುರಾತನ ಜಾನಪದ ನೃತ್ಯಗಲಾದ ಡೊಳ್ಳು ಕುನಿತ, ವೀರಗಾಸೆ ,ಕಂಸಾಳೆ, ಪೂಜಾ ಕುಣಿತ, ಹುಲಿವೇಷ ಇವುಗಳ ಬಗ್ಗೆ ಮತ್ತಷ್ಟು ತಿಲಿದುಕೊಳ್ಳಲು ಕಾತುರವಾಗಿದ್ದೇನೆ.