ಸದಸ್ಯರ ಚರ್ಚೆಪುಟ:Sahana n manjunath/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಾಶರ, ಭಾರತದ ಪ್ರಾಚೀನಕಾಲದ ಖುಷಿ. ಈತ ಬರೆದ 'ವೃಕ್ಷಾಯುರ್ವೇದ'. ಎಂಬ ಗ್ರಂಥದಲ್ಲಿ. ಸಸ್ಯಗಳಿಗೆ ಸಂಬಂಧಿಸಿದಂತೆ, ವಿವರವಾದ ಮಾಹಿತಿ ಇದೆ. ಈತ ಸಸ್ಯಗಳನ್ನು ವಿವಿಧ ಗಣಗಳನ್ನಾಗಿ ಹೂವಿನ ಗುಣಲಕ್ಷಣಗಳ ಆಧಾರದ ಮೇಲೆ ವರ್ಗೀಕರಿಸಿದ್ದಾನೆ. ಇದು, ಆಧುನಿಕ ವರ್ಗೀಕರಣವನ್ನು ನಿಕಟವಾಗಿ ಹೋಲುತ್ತದೆ. ಈತ 'ಕೃಷಿ ಪರಾಶರ', ಎಂಬ ಗ್ರಂಥವನ್ನು ರೈತರ ಅನುಕೂಲಕ್ಕಾಗಿ, ಬರೆದಿದ್ದಾನೆ. ಇದರ ಸಹಾಯದಿಂದ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಬಹುದು. ಪರಾಶರನ ಪ್ರಕಾರ, ಉತ್ತರ ಅಥವಾ ಪಶ್ಚಿಮ ದಿಕ್ಕಿನಿಂದ ಬೀಸುವ ಗಾಳಿಯು, ಮಳೆಯನ್ನು ತರುತ್ತದೆ. ಆದರೆ, ಪೂರ್ವ ಅಥವಾ ದಕ್ಷಿಣದಿಂದ ಬೀಸುವ ಗಾಳಿಯು ಮಳೆಯನ್ನು ತರುವುದಿಲ್ಲ.