ಸದಸ್ಯರ ಚರ್ಚೆಪುಟ:Renisha Thomas

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಸ್ಯ ಅಂಗಾಂಶ ಕೃಷಿ''''

ಸಸ್ಯ ಅಂಗಾಂಶ ಕೃಷಿಯು ಸಸ್ಯ ಕೋಶಗಳ, ಅಂಗಾಂಶಗಳ ಅಥವಾ ಅಂಗಗಳ ಮುಖಾ೦ತರ ಹೊಸ ಸಸ್ಯವನ್ನು ಬೆಳೆಸುವ ವಿಧಾನಗಳ ಸಂಗ್ರಹವಾಗಿದೆ. ಸಸ್ಯ ಅಂಗಾಂಶ ಕೃಷಿ ವ್ಯಾಪಕವಾಗಿ ಪ್ರಸರಣ ಎಂಬ ವಿಧಾನದ ಮೂಲಕ ಒಂದು ಸಸ್ಯದ ತದ್ರೂಪುಗಳನ್ನು ತಯಾರಿಸಲು ಬಳಸಲಾಗುತ್ತದೆ.

ಶಾಶ್ವತ ಅಂಗಾಂಶಗಳು

ಈ ಅಂಗಾಂಶಗಳು ಪ್ರೌಡಜೀವಕೋಶಗಳಿಂದ ಉಂಟಾಗಿವೆ. ಜೀವಕೋಶಗಳ ಕೋಶ ಭಿತ್ತಿಯು ಸೆಲ್ಯುಲೋಸ್ ನಿಂದ ಕೂಡಿದೆ. ಜೊತೆಗೆ ಹೆಮಿಸೆಲ್ಯುಲೋಸ್, ಪೆಕ್ಟಿನ್ ಹಾಗೂ ಲಿಗ್ನಿನ್ ಎಂಬ ವಸ್ತುಗಳೂ ಇರಬಹುದು. ಪ್ಲಾಸ್ಟಿಡ್ ಗಳು ಮತ್ತಿತರೆ ಕಣದಂಗಗಳು ಅಭಿವೃದ್ಧಿಯಾದ ಸ್ಥಿತಿಯಲ್ಲಿರುತ್ತ್ತವೆ. ಕೋಶಾವಕಾಶಗಳು ದೊಡ್ಡದಾಗಿದ್ದ್ದು, ಪ್ರಮುಖವಾಗಿರುತ್ತವೆ. ಪ್ರೌಢ ಹಂತದಲ್ಲಿ ಕೋಶಕೇಂದ್ರ ಇರಬಹುದು, ಇಲ್ಲದೆಯೂಇರಬಹುದು. ಶಾಶ್ವತ ಅಂಗಾಂಶಗಳನ್ನು ಎರಡು ಪ್ರಮುಖ ಗುಂಪುಗಳಲ್ಲಿ ಗುರುತಿಸಬಹುದು. ಅವುಗಳೆಂದರೆ, ಸರಳ ಶಾಶ್ವತ ಅಂಗಾಂಶಗಳು ಮತ್ತು ಸಂಕೀರ್ಣ ಶಾಶ್ವತ ಅಂಗಾಂಶಗಳು. ಸರಳ ಷಾಶ್ವತ ಅಂಗಾಂಶಗಳು: ಸರಳ ಶಾಶ್ವತ ಅಂಗಾಂಶಗಳಲ್ಲಿ ಎಲ್ಲ ಜೀವಕೋಶಗಳು ಒಂದೇರೀತಿಯಲ್ಲಿದ್ದು, ಒಂದೇ ರೀತಿಯ ಕಾರ್ಯವನ್ನು ನಿರ್ವಹಿಸುತ್ತವೆ. ಸಸ್ಯ ದೇಹದ ಬಹುಭಾಗವನ್ನು ಆಕ್ರಮಿಸುವ ಈ ಅಂಗಾಂಶಗಳು ಸಂಗ್ರಹ, ಆಧಾರ ಮುಂತಾದ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತವೆ. ಮೂರು ಬಗೆಯ ಸರಳ ಶಾಶ್ವಥ ಅಂಗಾಂಶಗಳನ್ನು ಗುರುತಿಸಬಹುದು.

ಉಪಯೋಗಗಳು

ಸಸ್ಯ ಅಂಗಾಂಶ ಕೃಷಿ, ಸಸ್ಯ ವಿಜ್ಞಾನ, ಅರಣ್ಯ ಇಲಾಖೆಗಳನ್ನು ತೋಟಗಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಅಪರೂಪದ ಅಥವಾ ಅಳಿವಿನಂಚಿನಲ್ಲಿರುವ ಸಸ್ಯ ಜಾತಿಗಳನ್ನು ಸಂರಕ್ಷಿಸುತ್ತದೆ. ಒ೦ದೇ ತರಹದ ಅನೇಕ ಸಸ್ಯಗಳನ್ನು ಏಕ ಕಾಲದಲ್ಲಿ ವಾಣಿಜ್ಯ ಉತ್ಪಾದನೆಗೆ ಬೆಳೆಸಲು ಸಹಕಾರವಾಗುತ್ತದೆ.

ಸಸ್ಯ ಅ೦ಗಾ೦ಶ ಕೃಷಿ

ಈ ತ೦ತ್ರಜ್ನಾನವು ಸಸ್ಯಗಳ ಬೆಳವಣಿಗೆಯ ಸ್ಥಿತಿಯನ್ನು ನಿಯಂತ್ರಿಸಲು ಮತ್ತು ಪ್ರಕ್ರಿಯೆಗಳು ಸಿಂಕ್ರೊನೈಸ್ ಆಗಲು ಸೂಕ್ತ ಅವಕಾಶ ಒದಗಿಸುತ್ತದೆ. ಹೊಸ ಅ೦ಗಾ೦ಶ ಪರಿಚಯಿಸುವುದರಿ೦ದ, ಬೆಳೆ ಇಳುವರಿ ಹೆಚ್ಚಿಸಬಹುದು ಹಾಗು ಕೀಟಗಳಿಗೆ ಸೋಂಕಿಗೆ ಪ್ರತಿರೋಧ ನೀಡುವ೦ತೆ ಮಾಡಬಹುದು. ಸಸ್ಯ ಅಂಗಾಂಶ ಕೃಷಿಯಿ೦ದ ಕೇವಲ ಒಂದು ಸಸ್ಯವನ್ನು ಬಳಸಿಕೊಂಡು ಮೂರನೇ ವಿಶ್ವದ ರಾಷ್ಟ್ರಗಳಲ್ಲಿ ಹಸಿವು ನಿವಾರಿಸಬಹುದು. ಸಸ್ಯದ ಜೀನೋಮ್ ಬದಲಿಸುವುದರಿ೦ದ, ಅದೇ ಸಸ್ಯದಿ೦ದ ಒಂದಕ್ಕಿಂತ ಹೆಚ್ಚು ಸಾವಿರ ಸಸಿಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ.ಸಸ್ಯ ಅಂಗಾಂಶ ಕೃಷಿಯ ಲ್ಯಾಬಿನಲ್ಲಿ ಆವಿ ಹ್ಯುಮಿಡಿಫ಼ಿಕೆಷನ್ ವ್ಯವಸ್ಥೆ, ವಾತಾನುಕೂಲಿ, ಬಫರ್ ಕೊಠಡಿ ಅ೦ದರೆ ನೇರ ಪ್ರವೇಶ ನಿರ್ಭಂಧನೆಯುಳ್ಳ ಮಾಲಿನ್ಯ ನಿಯಂತ್ರಣ ಕೊಠಡಿ, ಏರ್ ಪರದೆ ಇತ್ಯಾದಿ ಇರುತ್ತವೆ.


  • ನಿಮ್ಮನ್ನು ಮೊದಲು ವಿಕಿಪೀಡಿಯಕ್ಕೆ ಪರಿಚಯಿಸಿ.--Lokesha kunchadka (ಚರ್ಚೆ) ೧೭:೦೬, ೧೦ ಡಿಸೆಂಬರ್ ೨೦೧೬ (UTC)