ಸದಸ್ಯರ ಚರ್ಚೆಪುಟ:Rashu 612
ಭಾರತದ ಯೋಜನಾ ಆಯೋಗ.
ಯೋಜನಾ ಆಯೋಗವು ಒಂದು ಸಂಸ್ಥೆಯಾಗಿ ೧೫ ಮಾರ್ಚ್ ೧೯೫೦ ನೇ ಸಂವತ್ಸರದಲ್ಲಿ ರೂಪುಗೊಂಡಿಟುೀದೂ ಭಾರತದ ಪಾಂಚವಾರ್ಷಿಕ ಯೋಜನೆಗಳನ್ನು (ಮುಖ್ಯವಾಗಿ) ಒಳಗೊಂಡಿತ್ತು. ಇದರ ಮುಖ್ಯಕಾರ್ಯಾಲಯವು ಯೋಜನಾ ಭವನ, ಸಂಸದ್ ಮಾರ್ಗ , ದೆಹಲಿಯಲ್ಲಿತ್ತು. ಆದರೆ ೨೦೧೪ರಲ್ಲಿ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರು ತಮ್ಮ ಸ್ವಾತಂತ್ರ್ಯ ದಿನದಂದು ನಡೆಸಿದ ಭಾಷಣೆಯಲ್ಲಿ 'ಯೋಜನಾ ಆಯೋಗ'ವನ್ನು ರದ್ದುಗೊಳಿಸಿ 'ನೀತಿ' ಆಯೋಗವನ್ನು ಜಾರಿಗೆ ತಂದರು.
ಮೊಟ್ಟಮೊದಲಿಗೆ ಭಾರತೀಯ ರಾಷ್ಟ್ರೀಯ ಸೇನೆಯ ಸರ್ವೋಚ್ಛ ನಾಯಕರಾದ ಸುಭಾಷ್ ಚಂದ್ರ ಬೋಸ್ ರವರು ಮೆಘನಾದ್ ಸಹ ರವರ ಸಹಕಾರ ಮತ್ತು ಒತ್ತಾಯದಿಂದ ಯೋಜನಾ ಸಮಿತಿಯನ್ನು ಸ್ಥಾಪಿಸಿದರು. 'ಬ್ರಿಟಿಷ್ ರಾಜ್ ' ಎಂದು ಕರೆಯಲ್ಪಡುತ್ತಿದ್ದಾಗಲೇ ಯೋಜನಾ ಸಮಿತಿಯು ೧೯೪೪ ರಿಂದ ೧೯೪೬ ವರೆಗೂ ಸ್ಥಾಪಿಸಲ್ಪಟ್ಟಿತ್ತು.
ಉದ್ಯಮಿಗಳು ಮತ್ತು ಅರ್ಥಶಾಸ್ತ್ರಜ್ಞರು ಸ್ವತಂತ್ರವಾಗಿ ಕನಿಷ್ಟ ಮೂರು ಯೋಜನೆಗಳನ್ನು ಸಿದ್ಧಪಡಿಸಿದ್ದರು.
ಕೆಲವು ಪಂಡಿತರ ಪ್ರಕಾರ ಯೋಜನೆಗಳನ್ನು ಜಾರಿಗೆ ತಂದಿದ್ದೆ ನೆಹರು ಮತ್ತು ಗಾಂಧೀಜಿಯವರ ನಡುವೆ ಸೈದ್ಧಾಂತಿಕ ವಿಭಾಗಗಳಿಗೆ ಕಾರಣವಾಯಿತು. ಯೋಜನಾ ಆಯೋಗದ ಮೊದಲ ಅಧ್ಯಕ್ಷರು ಜವಾಹರ್‌ಲಾಲ್ ನೆಹರು ಆಗಿದ್ದರು. ಯೋಜನಾ ಆಯೋಗದ ಸ್ಥಾಪನೆ ಅಥವಾ ನಿರ್ಮಾಣ ಭಾರತೀಯ ಸಂವಿಧಾನದ ಸಹಾಯದಿಂದ ರೂಪುಗೊಂಡಿಲ್ಲ. ಇದು ಕೇಂದ್ರ ಸರಕಾರದ ಅಂಗವಾಗಿ ರೂಪುಗೊಂಡಿತ್ತು.
ಮೊದಲ ಐದು ಪಂಚ ವಾರ್ಷಿಕ ಯೋಜನೆಗಳು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿತ್ತು . ನಂತರ ೧೯೬೬ ಮತ್ತು ೧೯೬೯ ವರ್ಷಗಳ ವಾರ್ಷಿಕ ಯೋಜನೆಯ ಬಳಿಕ ೧೯೬೯ರಲ್ಲಿ ನಾಲ್ಕನೇ ಪಂಚವಾರ್ಷಿಕ ಯೋಜನೆಯನ್ನು ಜಾರಿಗೆ ತರಲಾಯಿತು. ಕೇಂದ್ರ ಸರಕಾರದ ಝಾಂಝಾತಗಳಿಂದಾಗಿ ಎಂಟನೇ ಪಂಚವಾರ್ಷಿಕ ಯೋಜನೆಯು ೧೯೯೨ ರಲ್ಲಿ ಜಾರಿಗೆ ತರಲಾಯಿತು.
ಯೋಜನಾ ಆಯೋಗದ ಕಾರ್ಯಗಳು ೧)ದೇಶದ ಸಂಪನ್ಮೂಲಗಳನ್ನು ಅತ್ಯಂತ ಪರಿಣಾಮಕಾರಿಯಾದ ಹಾಗೂ ಸಮತೋಲಿತವಾದ ಬಳಕೆಗಾಗಿ. ೨)ದೇಶದ ಆರ್ಥಿಕ ಅಭಿವೃದ್ಧಿಯನ್ನು ತಡೆಯಬಲ್ಲ ಅಂಶಗಳನ್ನು ಪರಿಗಣಿಸುವುದಕ್ಕಾಗಿ. ೩)ದೇಶದ ಸ್ಥಾನಿಕ ಸಾಮಾಜಿಕ ರಾಜಕೀಯ ಸ್ಥಿತಿಗಳಲ್ಲಿ ವಿವಿಧ ಯೋಜನೆಗಳನ್ನು ಯಶಸ್ವಿಗೊಳಿಸಲು. ೪)ಯೋಜನೆಯ ಯಶಸ್ಸಿಗೆ ನೆರವಾಗಿರುವ ಅನುಷ್ಠಾನಗಳು ಮತ್ತು ಯಂತ್ರೋಪಕರಣಗಳ ಸ್ವರೂಪ
ನಿರ್ಧರಿಸಲು.
೫)ಆದ್ಯತೆಗೆ ತಕ್ಕಂತೆ ಹಂತಗಳನ್ನು ಪ್ರಕಟಿಸಿ ಇವುಗಳ ಪ್ರಕಾರ ಸಂಪನ್ಮೂಲಗಳನ್ನು ಹಂಚುವುದು. ೬)ಕಾಲಕಾಲಕ್ಕೆ ಯೋಜನೆಯ ಪ್ರಗತಿಯ ಪರಿಶೀಲನೆ ಮತ್ತು ಅದಕ್ಕೆ ಸೂಕ್ತ ನಿಯಮಗಳನ್ನು , ಬೇಕಾದಲ್ಲಿ,
ತಿದ್ದುಪಡಿಸುವುದು.
ಈ ಮೇಲ್ಕಂಡ ಕಾರ್ಯಗಳನ್ನು ನಿರ್ವಹಿಸುವುದಲ್ಲದೆ ಯೋಜನಾ ಆಯೋಗದ ದೃಷ್ಟಿಯು ತುರ್ತು ಸಮಸ್ಯೆಗಳಾದ ಆರ್ಥಿಕ ಭದ್ರತೆ , ಬಡತನ, ನೀರು ಸರಬರಾಜು , ಗ್ರಾಮೀಣ ಜನರ ಅಗತ್ಯತೆಗಳು, ಶಿಕ್ಷಣ, ಆರೋಗ್ಯ ಕ್ಷೇತ್ರ ಸೇರಿದಂತೆ ಮೊದಲಾದ ಕ್ಷೇತ್ರಗಳತ್ತ ಇತ್ತು. ಅವುಗಳ ಸುಧಾರಣೆಗೂ ಆಯೋಗವು ಬಹಳ ಶ್ರಮ ಪಟ್ಟಿತ್ತು.
ಮೇಲೆಯೇ ಹೇಳಿದಂತೆ ೨೦೧೪ರಲ್ಲಿ ಪ್ರಧಾನಿಯಾದ ಮೋದಿಯವರು ಯೋಜನಾ ಆಯೋಗವನ್ನುರದ್ದುಗೊಳಿಸಿ ಅದಕ್ಕಿಂತ ಕ್ರಿಯಾತ್ಮಕ ಮತ್ತು ಕ್ರಾಂತಿಕಾರಿಯಾದ "ನೀತಿ ಆಯೋಗ"ವನ್ನು ರೂಪುಗೊಳಿಸಿ ಜಾರಿಗೆ ತಂದಿದ್ದಾರೆ.
ಕವಿರಾಜಮಾರ್ಗ
ಕವಿರಾಜಮಾರ್ಗ (೮೫೦ ಸದಿ) ಎಂಬುದು ಕನ್ನಡದ ಮೊದಲ ವಾಕ್ಚಾತುರ್ಯ , ಕಾವ್ಯಮೀಮಾಂಸೆ ಮತ್ತು ವ್ಯಾಕರಣವನ್ನು ಹೊಂದಿದ ಲಭಕೃತಿ. ಈ ಕೃತಿಯನ್ನು ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗ ಎಂಬ ಪ್ರಸಿದ್ಧ ಅರಸ ಬರೆದ್ದಿದ್ದಾನೆ. ಕೆಲವು ಇತಿಹಾಸಕಾರರ ಪ್ರಕಾರ ಈ ಕೃತಿಯು ಭಾಗಶಹ
ಸಂಸ್ಕೃತ ಭಾಷೆಯ "ಕಾವ್ಯದರ್ಸ" ಎಂಬ ಬರವಣಿಗೆಯನ್ನು ಆಧರಿಸಿದೆ. ಇನ್ನೂ ಕೆಲವರು ಈ ಕೃತಿಗೆ ಕನ್ನಡ ಭಾಷಾ ಸಿದ್ಧಾಂತಿಯಾಗಿದ್ದ ಶ್ರೀವಿಜಯ
ಸಾಹಾಲೇಖಕರಾಗಿದ್ದರು ಎಂದು ಭಾವಿಸುತ್ತಾರೆ .
ಕಾವ್ಯದ ಹೆಸರು " ದ ಪೊಎಟ್ಸ್ ರಾಯಲ್ ಪಾಥ್' ಎಂಬರ್ಥವನ್ನು ನೀಡುತ್ತದೆ. ಅಲ್ಲದೆ ಇದು ಹಲವು ಪಂಡಿತರಿಗೆ ಮಾರ್ಗದರ್ಶನವನ್ನು ನೀಡುವ ಗ್ರಂಥ ಅಥವಾ ಕೃತಿಯಾಗಿದೆ.
ಅಮೋಘವರ್ಷನ ಪಟ್ಟಾಭಿಷೇಕದ ಪೂರ್ವ ಹೆಸರು ಶರ್ವ ಎಂದಾಗಿತ್ತು. ಅವನು ಶ್ರಭವನದಲ್ಲಿ ಗೋವಿಂದ (ಮೂರನೇ ಕ್ರಮಾಂಕ) ಎಂಬ ರಾಜನಿಗೆ ಕುಮಾರನಾಗಿ ಜನಿಸಿದನು. ಅಮೋಘವರ್ಷ ೧೪ನೇ ವಯಸ್ಸಿನಲ್ಲಿಯೇ ಸಿಂಹಾಸನವನ್ನು ಏರಿ ಶೋಭಿಸಿದ್ದನು. ಕನ್ನಡ ಸಾಹಿತ್ಯ , ಸಂಸ್ಕೃತಿ ಮತ್ತು ಭಾಷೆಯಲ್ಲಿ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿದ್ದ. ಈ ಎಲ್ಲ ವಿವರಗಳನ್ನು ಅವನು ತನ್ನ ಕೃತಿಯಲ್ಲಿ ವ್ಯಕ್ತಪಡಿಸಿದ್ದಾನೆ.
ಕೃತಿಯಲ್ಲಿರುವ ಕೆಲ ವಿಷಯಗಳು:
ಕೃತಿಯು ಗೋದಾವರಿ ಮತ್ತು ಕಾವೇರಿ ನದಿಗಳ ಮಧ್ಯದ ಭಾಗವನ್ನು "ಕರ್ನಾಟ ದೇಶ" ಅಥವಾ " ಕರ್ನಾಟಕ" ಎಂದು ಪ್ರಕಟಿಸುತ್ತದೆ. ಅಲ್ಲದೆ ಇದರಲ್ಲಿ ಹಿಂದಿನ ಕನ್ನಡದ ಲೇಖಕರನ್ನು ಕುರಿತು ಉಲ್ಲೇಖನೆಗಳಿವೆ. ಹಲವು ಪ್ರಾಚೀನ ಶೈಲಿಗಳ ಬಗ್ಗೆಯೂ (ಗದ್ಯಕಥೆ, ಬೆದಂಡೆ ಮುಂತಾದವು) ಕೃತಿಯಲ್ಲಿ ವಿಷಯಗಳಿವೆ. ಅಮೋಘವರ್ಷನು ವಿಮಾಲಚಂದ್ರ, ಉದಯ, ನಾಗಾರ್ಜುನ, ಜಯಬಂಧು ಮತ್ತು ಗಂಗಾ ಸಾಮ್ರಾಜ್ಯದ ರಾಜ ದುರ್ವಿನೀತ ಇವರನ್ನು ಕನ್ನಡದ ಪ್ರಮುಖ ಗದ್ಯ ಲೇಖಕರಾಗಿ ಮತ್ತು ಶ್ರೀವಿಜಯ, ಕವಿಸ್ವರ, ಪಂಡಿತ, ಚಂದ್ರ ಮತ್ತು ಲೋಕಪಾಲ ಇವರನ್ನು ಪ್ರಮುಖ ಕವಿಗಳಾಗಿ ಈ ಬರವಣಿಗೆಯಲ್ಲಿ ವರ್ಣಿಸಿದ್ದಾನೆ.
ಕವಿರಾಜಮಾರ್ಗ ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಅಲ್ಲದೆ ಕನ್ನಡ ವ್ಯಾಕರಣ (ಅಂದಿನ) ವನ್ನು ಕುರಿತು ಸಾಕಷ್ಟು ಜ್ಞಾನ ನೀಡುತ್ತದೆ.
ಅಮೋಘವರ್ಷ ಕೆಲವು ಅಂಶಗಳನ್ನು ಟೀಕಿಸುತ್ತಾನೆ. ಅವನ ಪ್ರಕಾರ ಸಂಸ್ಕೃತ ಮತ್ತು ಕನ್ನಡದ ಮಿಶ್ರಣ 'ಕಿವಿಗೆ ಕಠಿಣವಾಗಿ' ಇರುತ್ತದೆ.
ಆದರೆ ಕನ್ನಡ ಮತ್ತು ಸಮ-ಸಂಸ್ಕೃತದ ಮಿಶ್ರಣ ಕಿವಿಗೆ ಆಹ್ಲಾದವನ್ನು ಉಂಟುಮಾಡುವ "ಸಂಗೀತ"ದಂತೆ ಎನಿಸುತ್ತದೆ ಎಂದು ಅವನ ಅಭಿಪ್ರಾಯ ಮತ್ತು ಅನಿಸಿಕೆಯಾಗಿದೆ.
Start a discussion with Rashu 612
Talk pages are where people discuss how to make content on ವಿಕಿಪೀಡಿಯ the best that it can be. Start a new discussion to connect and collaborate with Rashu 612. What you say here will be public for others to see.