ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Ranjeet kumar

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

I RANJEET KUMAR STUDING 1 B.COM. IN ST ALOYSIUS COLLEGE MANGALORE.

ಶಾಂತಿನಿಕೇತನ (೧೯೦೧–೧೯೩೨) Main article: Life of Rabindranath Tagore (1901–1932) ಗಾಢ ನೀಳುಡುಪಿನಲ್ಲಿರುವ ಗಡ್ಡವಿರುವ ಮಧ್ಯವಯಸ್ಕರ ಕಪ್ಪು-ಬಿಳುಪು ಛಾಯಾಚಿತ್ರ.ಅವರು ಸುಂದರವಾದ ಕೊಠಡಿಯ ನೆಲದಲ್ಲಿ ಮತ್ತು ಬೆಲೆಬಾಳುವ ಸೋಫಾದಲ್ಲಿ ಕುಳಿತಿದ್ದಾರೆ; ಅವರು ಕ್ಯಾಮೆರಾವನ್ನು ನೋಡುತ್ತಿಲ್ಲ. ಟಾಗೋರ್, ಹ್ಯಾಂಪ್‌ಸ್ಟೆಡ್‌ನಲ್ಲಿ ಜಾನ್ ರೊಥೆನ್‌ಸ್ಟೈನ್‌ರಿಂದ ತೆಗೆದ ಛಾಯಾಚಿತ್ರ, 1912

೧೯೦೧ರಲ್ಲಿ ಟಾಗೋರ್‌ ಶಿಲೈದಾಹವನ್ನು ಬಿಟ್ಟು ಶಾಂತಿನಿಕೇತನಕ್ಕೆ ಬಂದರು. ಅಲ್ಲೊಂದು ಆಶ್ರಮ ಸ್ಥಾಪಿಸಿದರು. ಅಮೃತ ಶಿಲೆಯ ನೆಲದ ಪ್ರಾರ್ಥನಾ ಮಂದಿರ ಅಲ್ಲಿ ತಲೆ ಎತ್ತಿತು. ಗಿಡ ಮರಗಳ ತೋಪು, ಉದ್ಯಾನ, ಗ್ರಂಥಾಲಯ ಜೊತೆಗೊಂದು ಪ್ರಾಯೋಗಿಕ ಶಾಲೆ-ಇವೆಲ್ಲ ಸಿದ್ಧವಾದವು.[೧೯] ಟಾಗೋರ್‌ರ ಪತ್ನಿ ಮತ್ತು ಇಬ್ಬರು ಮಕ್ಕಳು ಇಲ್ಲಿ ಕೊನೆಯುಸಿರೆಳೆದರು. ೧೯೦೫ರ ಜನವರಿ ೧೯ರಂದು ಅವರ ತಂದೆ ವಿಧಿವಶರಾದರು. ಪಿತ್ರಾರ್ಜಿತವಾಗಿ ಇವರಿಗೆ ಸಂದಾಯವಾಗಬೇಕಿದ್ದನ್ನು ಪ್ರತಿ ತಿಂಗಳೂ ಅವರು ಪಡೆಯಲಾರಂಭಿಸಿದರು. ತ್ರಿಪುರದ ಮಹಾರಾಜನಿಂದ ಒಂದಷ್ಟು ಹಣ ಪಡೆದರು. ಕುಟುಂಬದ ಆಭರಣಗಳ ಮಾರಾಟದಿಂದ ಸ್ವಲ್ಪ ಬಂತು, ಪುರಿಯಲ್ಲಿನ ಸುಮುದ್ರತೀರದ ಬಂಗಲೆಯಿಂದ ಇನ್ನಷ್ಟು ಕೈ ಸೇರಿತು, ಇಷ್ಟಲ್ಲದೆ ಅವರ ಬರಹಗಳಿಗೆ ಸಿಕ್ಕಿದ ಸಾಧಾರಣ ರಾಯ ಧನಗಳಿಂದ (Rs. ೨,೦೦೦) ಸಿಗುತ್ತಿದ್ದುದು ಅವರ ಮತ್ತೊಂದು ಆದಾಯ ಮೂಲವಾಯಿತು.[೨೦]ಈ ಹೊತ್ತಿಗೆ ಅವರ ಬರಹಗಳು ಅವರಿಗೆ ಹೆಚ್ಚಿನ ಬಂಗಾಳಿ ಅಭಿಮಾನಿಗಳನ್ನು ಮತ್ತು ವಿದೇಶಿ ಓದುಗರನ್ನು ತಂದು ಕೊಟ್ಟಿತು. ನೈವೇದ್ಯ (೧೯೦೧) ಮತ್ತು ಖೇಯ (೧೯೦೬) ಪುಸ್ತಕಗಳನ್ನು ಪ್ರಕಟಿಸಿದರು. ಇದೇ ಸಮಯದಲ್ಲಿ ಅವರು ತಮ್ಮ ಗೀತೆಗಳನ್ನು ಮುಕ್ತ ಛಂದಸ್ಸಿನ ಪದ್ಯಗಳನ್ನಾಗಿ ಅನುವಾದಿಸುವ ಕಾಯಕದಲ್ಲಿ ತೊಡಗಿದರು. ೧೯೧೩ರ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ತಮ್ಮ ಪಾಲಿಗೆ ಸಂದಿದ್ದು ಟಾಗೋರ್‌ಗೆ ೧೯೧೩ರ ನವೆಂಬರ್ ೧೪ರಂದು ಗೊತ್ತಾಯಿತು. ಗೀತಾಂಜಲಿ: ಪದ್ಯಾರ್ಪಣೆಗಳು ಹಾಗೂ ಇನ್ನಿತರ ಅವರ ಅನುವಾದಿತ ಸಾಹಿತ್ಯ ಪಾಶ್ಚಾತ್ಯ ಓದುಗರಿಗೆ ಸಣ್ಣ ಪ್ರಮಾಣದಲ್ಲಿ ದೊರೆಯುವಂತಾದದ್ದನ್ನು ಹಾಗೂ ಅದರ ಆದರ್ಶವಾದವನ್ನು ಸ್ವೀಡಿಶ್ ಅಕಾಡೆಮಿ ಮೆಚ್ಚಿಕೊಂಡಿತು.[೨೧] ೧೯೧೫ರಲ್ಲಿ ಬ್ರಿಟಿಷ್ ಚಕ್ರಾಧಿಪತ್ಯ ಟಾಗೋರ್‌ಗೆ ನೈಟ್ ಬಿರುದನ್ನು ನೀಡಿ ಗೌರವಿಸಿತು .

ಟಾಗೋರ್ ಮತ್ತು ಕೃಷಿ ಅರ್ಥಶಾಸ್ತ್ರಜ್ಞ ಲಿಯೊನಾರ್ಡ್ ಎಲ್ಮಿರ್ಸ್ಟ್ಸೇರಿಕೊಂಡು ಶಾಂತಿನಿಕೇತನದ ಆಶ್ರಮದ ಹತ್ತಿರದ ಹಳ್ಳಿ ಸುರುಲ್‌ನಲ್ಲಿ ೧೯೨೧ರಲ್ಲಿ ಗ್ರಾಮೀಣ ಪುನರುತ್ಥಾನಕ್ಕಾಗಿ ಸಂಸ್ಥೆಯೊಂದನ್ನು (ಟಾಗೋರ್‌ ಇದಕ್ಕೆ ಶ್ರೀನಿಕೇತನ—"ಸಂಪತ್ತಿನ ನೆಲೆ" ಎಂದು ಮರುಹೆಸರಿಸಿದರು) ಪ್ರಾರಂಭಿಸಿದರು. ಗಾಂಧಿ ನೇತೃತ್ವದ ಪ್ರತೀಕಕ್ಕೆ, ಸ್ವರಾಜ್ ಚಳವಳಿಗೆ ಬೆಂಬಲ ನೀಡಿ ಪರ್ಯಾಯವೊಂದನ್ನು ಟಾಗೋರ್‌ ಒದಗಿಸಲು ಯತ್ನಿಸಿದರು.[೨೨]"ಅಸಹಾಯಕತೆ ಮತ್ತು ಅಜ್ಞಾನದ ತೊಳಲಾಟದಿಂದ ನರಳುತ್ತಿರುವ ಹಳ್ಳಿಗಳನ್ನು" 'ಜ್ಞಾನಾಭಿವೃದ್ಧಿ'ಯಿಂದ ಮುಕ್ತವಾಗಿಸುವ, ಮತ್ತು ಇದಕ್ಕಾಗಿ ಸಂಸ್ಥೆಗೆ ನೆರವಾಗುವ ಉದ್ದೇಶದಿಂದ ವಿದ್ವಾಂಸರು, ದಾನಿಗಳು ಮತ್ತು ಅಧಿಕಾರಿಗಳನ್ನು ಬೇರೆ ಬೇರೆ ರಾಷ್ಟ್ರಗಳಿಂದ ನಿಯೋಜಿಸಿದರು.[೨೩][೨೪]ಭಾರತದ "ಜಾತಿ ಪದ್ಧತಿಯ ಕಾಠಿಣ್ಯ" ಮತ್ತು ಅಸ್ಪೃಶ್ಯತೆಯ ಆಚರಣೆಯನ್ನು ೧೯೩೦ರ ಆರಂಭದಲ್ಲಿ ಅವರು ಖಂಡಿಸಿದರು.ಈ ಎಲ್ಲ ಅನಿಷ್ಟಗಳ ವಿರುದ್ಧ ದನಿ ಎತ್ತಿದರು, ನಾಟಕ ಮತ್ತು ಕವನಗಳನ್ನು ರಚಿಸಿದರು, ಯಶಸ್ವೀ ಆಂದೋಲನದ ಮೂಲಕ ಗುರುವಾಯೂರ್‌ ದೇವಾಲಯವನ್ನು ದಲಿತರ ಪ್ರವೇಶಕ್ಕಾಗಿ ಮುಕ್ತಗೊಳಿಸಿದರು.[೨೫][೨೬]

Start a discussion with Ranjeet kumar

Start a discussion