ಸದಸ್ಯರ ಚರ್ಚೆಪುಟ:Rajashree.s.k

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಂದ್ರಶೇಖರ ಕಂಬಾರ

ಚಂದ್ರಶೇಖರ ಕಂಬಾರರು ೧೯೩೮ರಲ್ಲಿ ,ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ಜನಿಸಿದರು.ಇವರು ಕನ್ನಡಕ್ಕೆ ೭ನೇ ಜ್ನಾನಪೀಟ ಪ್ರಶಸ್ತಿ ತಂದು ಕೊಟ್ಟರು. ಕನ್ನಡ ನಾಡಿನ ಸಾಹಿತ್ಯ ಮತ್ತುಸಾಂಸ್ಕ್ರತಿಕ ಲೋಕದಲ್ಲಿ ಕವಿಯಗಿ,ಜಾನಪದ ವಿದ್ವಾಂಸರಾಗಿ,ನಾಟಕಕಾರರಾಗಿ ,ಕಾದಂಬರಿಕಾರರಾಜಗಿ,ಸಿನಿಮಾ ನಿರ್ದೇಶಕರಾಗಿ ಪ್ರಸಿದ್ಧರಾದವರು.ಹಂಪಿ ವಿಶ್ವವಿದ್ಯಾನಿಲಯದ ಕುಲಪತಿಗಳಗಿ ಸೇವೆ ಸಲ್ಲಿಸಿದ್ದಾರೆ. 'ಚಕೋರಿ' ಇವರ ಮಹಾ ಕಾವ್ಯವಾಗಿದೆ. ಸಾವಿರದ ನೆರಳು ,ಬೆಳ್ಳಿ ಮೀನು ,ಇವರ ಕವನ ಸಂಕಲನಗಳು. ಸಂಗ್ಯಾ ಬಾಳ್ಯಾ ,ಸಿರಿಸಂಪಿಗೆ ಹರಕೆಯ ಕುರಿ,ಅಂಗಿಮ್ಯಲಂಗಿ ಮುಂತದವು ಇವರ ನಾಟಕಗಳು. ಕರಿಮಾಯಿ ,ಸಿಂಗಾರವ್ವ ಮತ್ತು ಅರಮನೆ ಇವರ ಕಾದಂಬರಿಗಳು. ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ,ಕಬೀರ್ ಸನ್ಮಾನ್ ಪ್ರಶಸ್ತಿ, ಕಮಲಾ ದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿಗಳು ದೊರೆತಿವೆ . ಇವರು ಬೇಂದ್ರೆಯವರ ತರುವಾಯ ಕನ್ನಡ ಕಾವ್ಯ ಹಾಗೂ ನಾಟಕಗಳಿಗೆ ಜಾನಪದ ಸೊಗಡನ್ನು ತ್ಂಬಿ ಹೊಸತನವನ್ನು ತಂದುಕೊಟ್ಟವರಲ್ಲಿ ಮುಖ್ಯರು.