ಸದಸ್ಯರ ಚರ್ಚೆಪುಟ:Pragathi B N

ವಿಕಿಪೀಡಿಯ ಇಂದ
Jump to navigation Jump to search
pragathi b n
ಪ್ರಗತಿ
2015
ಜನ್ಮನಾಮ
pragathi

26 july 1997
chikamagalur
ರಾಷ್ಟ್ರೀಯತೆindian
ವಿದ್ಯಾಭ್ಯಾಸchrist institutions
ವೃತ್ತಿstudent

ನನ್ನ ತಂದೆ ತಾಯಿ ನನಗಿಟ್ಟ ಹೆಸರು ಪ್ರಗತಿ. ನನ್ನ ತಂದೆಯ ಹೆಸರು ನಂದೀಶ್ ಹಾಗು ತಾಯಿಯ ಹೆಸರು ಮಮತ. ತಂದೆ ತಾಯಿಗೆ ಒಬ್ಬಳೇ ಮಗಳಾಗಿರುವುದರಿಂದ ನನಗೆ ಮನೆಯಲ್ಲಿ ಮುದ್ದು ಜಾಸ್ತಿ.

ಹುಟ್ಟು[ಬದಲಾಯಿಸಿ]

ನಾನು ೧೯೯೭ರಲ್ಲಿ ಕರ್ನಾಟಕದ ಕಾಪಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಟ್ಟಿದ್ದು. ಬೆಳೆದದ್ದು ಬೆಂಗಳೂರಿನಲ್ಲಿ.

ಶಿಕ್ಷಣ[ಬದಲಾಯಿಸಿ]

ನನ್ನ ಶಾಲಾ ಶಿಕ್ಷಣವನ್ನು ಕ್ರೈಸ್ಟ್ ಸ್ಕೂಲಿನಲ್ಲಿ ಪಡೆದು ನನ್ನ ಪಿ.ಯು.ಸಿಯನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದೆ. ಈ ನನ್ನ ಕ್ರೈಸ್ಟ್ ಸಂಪ್ರದಾಯವುನ್ನು ಪೂರ್ಣಗೊಳಿಸಲು ನಾನು ಈಗ ಕ್ರೈಸ್ಟ್ ಯೂನಿವರ್ಸಿಟಿನಲ್ಲಿ ನನ್ನ ಬಿ.ಕಾಂ ಮಾಡುತಿದ್ದೀನಿ.

ಆಸಕ್ತಿ[ಬದಲಾಯಿಸಿ]

ನಾನು ವಾಣಿಜ್ಯ ವಿದ್ಯಾರ್ಥಿ ಆಗಿರುವುದರಿಂದ ನನ್ನ ಆಸಕ್ತಿ ವ್ಯಾಪಾರ ವಿಶ್ವದಲ್ಲಿ ಅಡಗಿದೆ. ಅದರ ಜೊತೆಗೆ ನನಗೆ ಚಿಕ್ಕಂದಿನಿಂದಲೂ ಕಲೆಯಲ್ಲಿ ಬಹಳ ಆಸಕ್ತಿ ಇದೆ. ನನಗೆ ಚಿತ್ರ ಬಿಡುಸುವುದು ಎಂದರೆ ಬಹಳ ಇಷ್ಟ. ಇದರ ಜೊತೆಗೆ ಕಥೆ ಪುಸ್ತಕ ಓದುವುದು, ನರ್ತನೆ, ತೋಟಗಾರಿಕೆ ನನ್ನ ಹವ್ಯಾಸಗಳು. ನನಗೆ ರಹಸ್ಯ ಕಥೆಗಳೆಂದರೆ ತುಂಬಾ ಇಷ್ಟ. ನನಗೆ ವಿಜ್ಞಾನದಲ್ಲಿ ಆಸಕ್ತಿ ಇದೆ ಆದರೆ ಗಣಿತವೆಂದರೆ ಆಗದು. ಗಣಿತವನ್ನು ಬಿಟ್ಟು ಬೇರೆ ಯೇನಾದರು ಮಾಡುತ್ತೇನೆ. ನನಗೆ ತಿಂಡಿ ತಿನಿಸುಗಳೆಂದರೆ ಪ್ರಾಣ. ನಾನು ಯಾವಾಗಲೂ ಅಡುಗೆ ಮನೆಯಲ್ಲಿ ಒಂದಲ್ಲಾ ಒಂದು ಪ್ರಯೋಗ ಮಾಡುತಿರುತ್ತೇನೆ. ನಾನು ಸ್ನೇಹಮಯಿಯೂ ಹೌದು. ನನ್ನ ಬಿಡು ಸಮಯವನ್ನು ಸ್ನೇಹಿತರ ಜೊತೆ ಕಳೆಯುತ್ತೇನೆ. ಪ್ರಾಣಿಗಳೆಂದರೆ ನನಗೆ ಎಲ್ಲಿಲ್ಲದ ಒಲವು. ಬೀದಿಯಲ್ಲಿ ಅಲೆಯುವ ನಾಯಿ ಇರಲಿ ಅಥವ ಪಕ್ಕದ ಮನೆಯ ಬೆಕ್ಕಿರಲಿ, ನನಗೆ ಎಲ್ಲದರ ಮೇಲೆ ಬಹಳ ಅಕ್ಕರೆ. ಶಾಲಾ ಕಾಲೆಜಿನಲ್ಲಿ ನಾನು ತಕ್ಕ ಮಟ್ಟಿನ ಅಂಕಗಳನ್ನು ಪಡೆದು ಬಂದಿದ್ದೀನಿ ಆದರೂ ನನ್ನ ಆಸಕ್ತಿಯೆಲ್ಲಾ ಪಠ್ಯೇತರ ವಿಶಯಗಳಲ್ಲಿಯೇ ಅಡಗಿದೆ. ನನಗೆ ವಿಕಿಪೀಡೀಯದಿಂದ ಬಹಳ ಉಪಯೋಗವಾಗಿದೆ. ಯಾವುದರ ಬಗ್ಗೆ ಮಾಹಿತಿ ತಿಳಿಯಬೇಗಕಾಗಿದಲ್ಲಿ ಅಥವ ಕಾಲೇಜಿಗೆ ಸಂಬಂಧಿಸಿದ ಯಾವುದೇ ಹುದ್ದೆಗೆ ವಿಕಿಪೀಡಿಯ ಬಹಳ ಸಹಾಯಕಾರಿಯಾಗಿದೆ. ನನಗೆ ವಾಸ್ತುಶಿಲ್ಪ, ಕಟ್ಟಡ ನಿರ್ವಾಹಣೆ,ಆಂತರಿಕ ವಿನ್ಯಾಸದಲ್ಲಿ ಬಹಳ ಆಸಕ್ತಿ ಇರುವುದರಿಂದ ನಾನು ವಿಕಿಪೀಡಿಯದಲ್ಲಿ ಇವುದರಕ್ಕೆ ಸಂಬಂಧಿಸಿದ ಲೇಖನಗಳ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ. ಇಲ್ಲ ಬೇರೆ ಯಾವ ಕ್ಷೇತ್ರವಾದರು ನನಗೆ ಏನು ತೊಂದರೆ ಇಲ್ಲ. ಇಲ್ಲಿ ಬಂದಿರುವುದೇ ಕಲಿಯುವುದಕ್ಕಾಗಿ ಆದರಿಂದ ಯಾವ ತರಹದ ಲೇಖನಗಳಾದರು ಪರ್ವಾಗಿಲ್ಲ. ಧನ್ಯವಾದಗಳು.