ಸದಸ್ಯರ ಚರ್ಚೆಪುಟ:Prabhu456

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                              ಡಮಾಸ್ಕಸ್  ಗೇಟ್  ರೆಸ್ಟಾರೆಂಟ್
     ಸಿರಿಯಾದ   ಬಾವಾಬೇಟ್   ದಿಮಾಶ್ಕ್  ರೆಸ್ಟಾರೆಂಟ್   (ಡಮಾಸ್ಕಸ್  ಗೇಟ್  ರೆಸ್ಟಾರೆಂಟ್)  ಜಗತ್ತಿನ   ಅತಿ  ದೊಡ್ದ  ಊಟದ   ಹೋಟೆಲ್   ಎಂದು  ಗಿನ್ನಿಸ್ ವಿಶ್ವದಾಖಲೆ  ಸ್ಥಾಪಿಸಿದೆ. ಈ  ಹೋಟೆಲ್ ನಲ್ಲಿ ೬೦೧೪  ಸೀಟುಗಳಿವೆ.ಸಾವಿರಾರು ಜನರಿಗೆ ಒಮ್ಮೆಗೆ  ಆರ್ಡರ್ ಗೆ ತಕ್ಕಂತೆ   ಉತ್ತಮ ಗುಣಮಟ್ಟದ   ಆಹಾರ  ಒದಗಿಸಿವುದು ಕಷ್ಟ.ಆದರೆ   ಈ  ಹೋಟೆಲ್ ನ  ತಿಂಡಿ  ತಿನಿಸುಗಳು   ರುಚಿಕರವಾಗಿದ್ದು,ಐದು ಸಾವಿರಕ್ಕೂ  ಹೆಚ್ಚು  ಜನರಿಗೆ ಒಮ್ಮೆಗೇ ಆಹಾರ  ಒದಗಿಸುವ  ವ್ಯವಸ್ಠೆಗಳಿವೆ.
    ಈ ಹೋಟೆಲ್ ನ ಒಳಗೆ  ೧೮೦೦   ಸಿಬಂದಿಗಳಿದ್ದಾರೆ.೨೬೦೦೦  ಚದರಡಿ  ವಿಸ್ತೀರ್ಣದ ಅಡುಗೆ  ಕೋಣೆ  ಇದೆ.ಇಲ್ಲಿ  ಅರಬ್ಬಿ, ಭಾರತೀಯ  ಮತ್ತು  ಖಾದ್ಯಗಳು   ತಯಾರಾಗುತ್ತವೆ.ನೋಡಲು   ಕೂಡ   ಸುಂದರವಾಗಿರುವ ಈ  ಹೋಟೆಲ್  ಒಂದು   ಚಲನಚಿತ್ರದ  ಸೆಟ್ ನಂತೆ  ಕಾಣಿಸುತ್ತದೆ,ಹೋಟೆಲ್ ನ   ನಡುವೆ ಸರ್ಚ್ ಲೈಟ್ ಗಳು,  ನಕಲಿ  ಜಲಪಾತಗಳು,ಕಾರಂಜಿಗಳು,ಗ್ರಾಹಕರಿಗೆ ಅದ್ಬುತ ಅನುಭವ  ಕೊಡುತ್ತದೆ.