ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Poornima1310072

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ನಿಯಂತ್ರಿತ ಮರುಕಟ್ಟೆಗಳು(ಕರ್ನಾಟಕ)'

ವಿಶೇಷವಾಗಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ನಿಯಂತ್ರಿತ ಮರುಕಟ್ಟೆ ಸೌಲಭ್ಯವನ್ನು ಒದಗಿಸುವ ಮೂಲಕ ರೈತರಿಗೆ ಯೋಗ್ಯವಾದ ಮತ್ತು ಸೂಕ್ತವಾದ ಬೆಲೆಗಳನ್ನು ದೊರಕಿಸಿಕೊಡುವುದರ ಅವಶ್ಯಕತೆಯನ್ನು ೧೯೨೮ ರಚನೆಗೊಂಡ 'ರಾಯಲ್ ಕಮಿಷನ್ ಆನ್ ಅಗ್ರಿಕಲ್ಚರ್ ಸಮಿತಿ, ತನ್ನ ವರದಿಯಲ್ಲಿ ಪ್ರಥಮವಾಗಿ ಸೂಚಿಸಿತ್ತು. ಅದರನ್ವಯ ಏಕೀಕರಣ ಪೂರ್ವದಲ್ಲಿ ಕರ್ನಾಟಕದ ವಿವಿಧ ಭಗಗಳಲ್ಲಿ ಅವಶ್ಯಕತೆಗೆ ತಕ್ಕ೦ತೆ ಬೇರೆ ಬೇರೆ ಹಂತಗಳಲ್ಲಿ ನಿಯಂತ್ರಿತ ಮರುಕಟ್ಟೆಗಳನ್ನು ಆಯೋಜಿಸುವ ಪ್ರಯತ್ನಗಳು ನಡೆದವು. ಹಳೆಯ ಮುಂಬಯಿ ಕರ್ನಾಟಕ ಪ್ರದೇಶದಲ್ಲಿ ೧೯೨೭ರಲ್ಲಿಯೇ ಆಭಗದ ಪ್ರಮುಖ ವಾಣಿಜ್ಯ ಬೆಳೆಯಾದ ಹತ್ತಿಯ ಮಾರಾಟವನ್ನು ಬೊಂಬಾಯಿ ಕಾಟನ್ ಮರ್ಕೆಟ್ ಖಾಯಿದೆ ೧೯೨೭ರ ನಿಯಂತ್ರಿಣಕ್ಕೆ ಒಳಪಡಿಸಲಾಯಿತು. ಅದರಂತೆ ಈ ಹಿಂದಿನ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ೧೯೩೦ರಲ್ಲಿ ನಿಯಂತ್ರಿತ ಮರುಕಟ್ಟೆ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಮದ್ರಾಸ್-ಕರ್ನಾಟಕ ಪ್ರದೇಶದಲ್ಲಿ ಮದ್ರಾಸ್ ವಾಣಿಜ್ಯ ಬೆಳೆಗಳ ಕಾನೂನು ೧೯೩೩ರನ್ವಯ ವಾಣಿಜ್ಯ ಬೆಳೆಗಳ ಮಾರಟವನ್ನು ನಿಯಂತ್ರಣಕ್ಕೆ ಒಳಪಡಿಸಲಾಯಿತು.

ಇನ್ನು ಚಿಕ್ಕ ರಾಜ್ಯ ಕೊಡಗಿನಲ್ಲೂ ಪ್ರಮುಖ ಬೆಳೆಯಾದ ಕಾಫಿ ಮಾರಾಟವನ್ನು ಕೇಂದ್ರ ಸರ್ಕಾರದ ಕಾಫಿ ಮಾರಾಟ ವಿಸ್ತರಣೆ ಕಾನೂನು ೧೯೪೨(coffee marketing expansion act 1942) ಮತ್ತು ಕಾಫೀ ಕಾಯಿದೆ ೧೯೪೨ರ (coffee act 1942) ಅನ್ವಯ ನಿಯಂತ್ರಣಕ್ಕೆ ಒಳಪಡಿಸಲಾಯಿತು. ಹಳೆಯ ಮೈಸೂರು ಸಂಸ್ಥಾನದಲ್ಲಿ ಈ ಉದ್ದೇಶಕ್ಕಾಗಿ ಮೈಸೂರು ವ್ಯವಸಾಯ ಉತ್ಪನ್ನಗಳ ಅಧಿನಿಯಮ ೧೯೩೯ರಲ್ಲಿ ಜಾರಿಗೆ ತರಲಾಯಿತು. ಮೈಸೂರು ಸಂಸ್ಥಾನದಲ್ಲಿ ಪ್ರಥಮ ನಿಯಂತ್ರಿತ ಮರುಕಟ್ಟೆಯನ್ನು ತಿಪಟೂರಿನಲ್ಲಿ, ಕೊಬ್ಬರಿ ಮತ್ತು ತೆಂಗು ಮಾರಾಟವನ್ನು ನಿಯಂತ್ರಣಕ್ಕೆ ಒಳಪಡಿಸುವ ಮೂಲಕ ಆರಂಭಿಸಲಾಯಿತು.

ರಾಜ್ಯ ಪುನಾರಚನೆಯ ನಂತರ (೧೯೫೬) ರಾಜ್ಯದ ವಿವಿಧ ಭಾಗಗಳಲ್ಲಿ ಈ ಮೊದಲು ಬೇರೆ ಬೇರೆ ಕಾನೂನಿನನ್ವಯ ಕರ್ಯನಿರ್ವಹಿಸುತ್ತಿದ್ದ ೫೪ ಮಾರುಕಟ್ಟೆಗಳು, ಆ ಮಾರುಕಟ್ಟೆ ಸಮಿತಿಗಳ ಸಿಬ್ಬಂದಿ ವರ್ಗದವರು ಮತ್ತು ಅವುಗಳಲ್ಲಿ ಕರ್ಯನಿರ್ವಹಿಸುತ್ತಿದ್ದ ಮಾರುಕಟ್ಟೆಯ ಕರ್ಯಕರ್ತರುಗಳನ್ನು(functionaries) ಹೊಸರಾಜ್ಯದ ನಿಂತ್ರಣಕ್ಕೆ ಒಳಪಡಿಸಲಾಯಿತು. ೧೯೬೬ರಲ್ಲಿ, ಇಡೀ ರಾಜ್ಯಕ್ಕೆ ಅನ್ವಯವಾಗುವ, ಹೆಚ್ಚು ವಿಸ್ತೃತವೂ, ಸಮಗ್ರವೂ ಆದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಂತ್ರಣ) ಅಧುನಿಯಮವನ್ನು ರೂಪಿಸಿ, ೧೯೬೮ರ ಮೇ ತಿಂಗಳಿನಲ್ಲಿ ಜಾರಿಗೆ ತರಲಾಯಿತು.

ರಾಜ್ಯದಲ್ಲಿ ಮುಂಬೈ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿನಿಯಮದ ಮೇರೆಗೆ ೧೯೩೬ರಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಮಾರುಕಟ್ಟೆಯನ್ನು, ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆ ಅಧಿನಿಯಮ ೧೯೩೯ರಡಿಯಲ್ಲಿ ತುಮಕೂರು ಜಿಲ್ಲೆಯ ತಿಪಟುರಿನಲ್ಲಿ ೧೯೪೮ರಲ್ಲಿ ಮತ್ತೊಂದು ಮಾರುಕಟ್ಟೆಯನ್ನು ಸ್ಥಾಪಿಸಿದ್ದು, ಆನಂತರ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಮಾರುಕಟ್ಟೆ ಸೇವೆಯ ವಿಸ್ತರಿಸಿದ್ದು, ೨೦೧೧ ಮಾರ್ಚ್ ಅಂತ್ಯ ವೇಳೆಗೆ ರಾಜ್ಯದಲ್ಲಿ ೧೫೨ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಹಾಗೂ ೩೫೨ ಉಪ ಮಾರುಕಟ್ಟೆಗಳು ಕಾರ್ಯ ನಿರ್ವಹಿಸುತ್ತಿದ್ದವು. ಕೃಷಿ ಮಾರಾಟ ಇಲಾಖೆ ಮೂಲತಃ ಸಹಕಾರ ಇಲಾಖೆಯ ಭಾಗವಾಗಿದ್ದು, ೧೯೭೨ ರಿಂದ ಸ್ವತಂತ್ರ ಇಲಾಖೆಯಾಗಿರುತ್ತದೆ.

Start a discussion with Poornima1310072

Start a discussion