ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:PRAKASH KARIGAR

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯತ್ನಟ್ಟಿ

     

      ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನಲ್ಲಿರುವ ಗ್ರಾಮವೇ ಯತ್ನಟ್ಟಿ. ಇದು ಬೀಳಗಿ ಪಟ್ಟಣದಿಂದ ಹದಿನೈದು ಕಿಲೋಮೀಟರ್ ದೂರದಲ್ಲಿದೆ. ಯತ್ನಟ್ಟಿ ಗ್ರಾಮ ಅನಗವಾಡಿ ಹೋಬಳಿಯ ಅಡಿಯಲ್ಲಿ ಬರುತ್ತದೆ. ಗ್ರಾಮ ಪಂಚಾಯತಿಯ ಕೇಂದ್ರ ಕಚೇರಿಯು ಹೊನ್ನಿಹಾಳದಲ್ಲಿದೆ.

ಇತಿಹಾಸ:-

      ನಾಲ್ಕೈದು ತಲೆಮಾರಿನ ಹಿಂದೆ ಯತ್ನಟ್ಟಿಯನ್ನು ಎತ್ತಿನಹಟ್ಟಿ ಎದ್ದು ಕರೆಯುತ್ತಿದ್ದರು ಎಂಬ ಪ್ರತಿತಿ ಇದೆ. ಕಾರಣವೇನೆಂದರೆ ಎತ್ತುಗಳನ್ನು ಅಧಿಕವಾಗಿ ಸಾಕುತ್ತಿದ್ದರು. ಎತ್ತುಗಳ ಗುಂಪಿಗೆ ರಕ್ಷಣೆ ಒದಗಿಸಲು ಸಾಕಷ್ಟು ಗುಡಿಸಲು ಅಥವಾ ಗ್ವಾದಾಲಿ ಇದ್ದವು ಹಾಗಾಗಿ ಎತ್ತಿನ ಹಟ್ಟಿ ಎಂದು ಕರೆಯುತ್ತಿದ್ದರು.

     ಯತ್ನಟ್ಟಿ ಊರು ಘಟಪ್ರಭಾ ನದಿಯ ದಡದ ಮೇಲೆ ಇದೆ. ಇದು ಕೃಷ್ಣಾ ನದಿಯ ಉಪನದಿಯಾಗಿದೆ. ಕೃಷ್ಣಾ ನದಿಗೆ ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಲಾಲ ಬಹುದ್ದೂರ್ ಶಾಸ್ತ್ರಿ ಅಣೆಕಟ್ಟು ನಿರ್ಮಿಸಲಾಗಿದೆ. ಹಾಗಾಗಿ 1997ರಲ್ಲಿ ಯತ್ನಟ್ಟಿ ಗ್ರಾಮವು ಪುನರ್ ವಸತಿ ಕೇಂದ್ರವಾಗಿದೆ. 1997 ಕ್ಕಿಂತ ಪೂರ್ವದಲ್ಲಿ ಯತ್ನಟ್ಟಿ,ಬಾದರದಿನ್ನಿ ಮತ್ತು ಹೊನ್ನಿಹಾಳ ಎಂಬ ಮೂರು ಗ್ರಾಮಗಳು ಸೇರಿಕೊಂಡಿದ್ದವು. ಈಗಲೂ ಸಹ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಘಟಪ್ರಭಾ ನದಿ ಹಿಂದಕ್ಕೆ ಸರಿದಾಗ ಇವು ಕಂಡುಬರುತ್ತವೆ. ಪ್ರಸ್ತುತ ಯತ್ನಟ್ಟಿಯಲ್ಲಿ 900 ರಿಂದ 1100 ಒಂದು ರವರೆಗೆ ಮತದಾರರಿದ್ದಾರೆ ಪ್ರಸ್ತುತ ಪುಣರ್ ವಸತಿ ಕೇಂದ್ರವು 01ರಿಂದ07ನೇ ತರಗತಿವರೆಗೆ ಪ್ರಾಥಮಿಕ ಶಾಲೆ ಇದೆ ಹಾಗೂ 8 ರಿಂದ 9ನೇ ತರಗತಿಯವರೆಗೆ ಪ್ರೌಢ ಶಾಲೆ ಇದೆ.

ಕೃಷಿ:-

      ಘಟಪ್ರಭಾ ನದಿ ದಡದಲ್ಲಿ ಇರುವುದರಿಂದ ಎಲ್ಲಾ ಕೃಷಿಕರು ನೀರಾವರಿ ಆಶ್ರಯದಲ್ಲಿ ಕೃಷಿ ಮಾಡುತ್ತಿದ್ದಾರೆ.. ಪ್ರಮುಖವಾಗಿ ಬೆಳೆಯುವ ಬೆಳೆಗಳೆಂದರೆ. ಕಬ್ಬು,ಶೇಂಗಾ,ಮೆಕ್ಕೆಜೋಳ,ಈರುಳ್ಳಿ,ಗೋಧಿ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ.

ಧಾರ್ಮಿಕ ಆಚರಣೆ:-

        ಕಾರ್ತಿಕ ಮಾಸದಲ್ಲಿ ಒಂದು ತಿಂಗಳ ಕಾಲ ಪ್ರತಿದಿನ ಶ್ರೀ ಮಾರುತೇಶ್ವರ ದೇವಾಲಯದಲ್ಲಿ ದೀಪ ಬೆಳಗಿಸುವ ಕಾರ್ಯಕ್ರಮ ಇರುತ್ತದೆ. ಪ್ರತಿದಿನ ಒಂದು ಮನೆತನದವರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಕಾರ್ತಿಕ ಮಾಸದ ಕೊನೆಯ ಅಮಾವಾಸ್ಯೆಯ ಇಂದ ಬರುವ ಶನಿವಾರದಂದು ಶ್ರೀ ಮಾರುತೇಶ್ವರ ಭವ್ಯ ಪಾಲಿಕೆ ಮೆರವಣಿಗೆ ಮತ್ತು ರಾತ್ರಿ ವೇಳೆ ಕಾರ್ತಿಕೋತ್ಸವ ದೀಪಾವಲಂಕಾರದಿಂದ ಕಂಗೊಳಿಸುತ್ತದೆ ಅಷ್ಟೇ ಅಲ್ಲದೆ ಆ ದಿನ ಮಧ್ಯಾಹ್ನದಿಂದ ರಾತ್ರಿಯವರೆಗೂ ಅನ್ನಸಂಪರ್ಪಣೆ ವ್ಯವಸ್ಥೆ ಮಾಡಲಾಗುತ್ತದೆ. 2020 ರಿಂದ ಹಾಲೋಕಳಿಯನ್ನು ಸಹ ಪ್ರತಿವರ್ಷ ಏರ್ಪಡಿಸುತ್ತಾರೆ

         ಹಿಂದೂ ಮುಸ್ಲಿಮರ ಧಾರ್ಮಿಕ ಹಬ್ಬವಾದ ಮೊಹರಂ ಅನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಐದು ದಿನಗಳ ಕಾಲ ದೀಪ ಅಲಂಕಾರ ಮತ್ತು ಕೊನೆಯ ಎರಡು ದಿನ ಪಟಾಕಿ ಸುಡುವುದು ವಿಶೇಷತೆ.

Start a discussion with PRAKASH KARIGAR

Start a discussion