ಸದಸ್ಯರ ಚರ್ಚೆಪುಟ:Nileema monteiro

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂತ ಜೋಸೆಫ್ ವಾಜ್

   ಜೋಸೆಫ್ ವಾಜ್ ನವರು ೧೬೫೧ ಏಪ್ರಿಲ್ ೨೧ ತಾರೀಖಿಕೆ ತನ್ನ ಬೆನವ್ಲಿ ಎಂಬ ಊರಿನಲ್ಲಿ ಜನಿಸಿದರು. ಅವರ ತಂದೆಯ 

ಹೆಸರು ಕ್ರಿಸ್ತೋಫರ್ ವಾಜ್ ಮತ್ತು ತಾಯಿ ಮರಿಯಾ ಮಿರಾಂದಾ ದಂಪತಿಗಳ ಆರು ಮಕ್ಕಳಲ್ಲಿ ಜುಜೆ ವಾಜ್ ೩ನೇಯವರು. ಅವರ ತಂದೆತಾಯಿ ಕೊಂಕಣಿ ಪ್ರೀಯರು. ಅವರು ೬ ಮಕ್ಕಳಿಗೆ ದೇವರ ಪ್ರೀತಿಯಿಂದ ಸಾಕಿದರು. ಇದೇ ರೀತಿ ಜೋಸೆಫ್ ವಾಜ್ ಯವರು ಸಣ್ಣ ಪ್ರಾಯದಿಂದ ದೇವರ ಪ್ರೀತಿಯಿಂದ ಕುಟುಂಬಗಳ ಸಹಾಯದಿಂದ ಬೆಳೆದರು. ಅವರಿಗೆ ಪ್ರಾಯದಿಂದ ದೇವರ ಭಕ್ತಿ, ಪ್ರೀತಿ ಇತ್ತು. ಅವರಿಗೆ ದೇವರ ಪ್ರೀತಿ ಹೇಗೆ ಇತ್ತು ಹಾಗೆತಯೇ ಬಡವರ ಮೇಲೆ ತುಂಬಾ ಪ್ರೀತಿ. ಇದನ್ನು ನೋಡಿದ ಜನರು ಇವರನ್ನು "ದೇವರ ಮಗ" ಎಂದು ಕರೆದಿದ್ದರು.ಬೆಳೆಯುತ್ತಾ ಬೆಳೆಯುತ್ತಾ ಅವರಿಗೆ ಗುರು ಆಗಬೇಕೆಂಬ ಮನಸ್ಸು ಆಯಿತು.

    ನಂತರ ಇವರ ಪ್ರಾಥಮಿಕ ಶಿಕ್ಷಣ ಸಾಂಕ್ವಾಲೆಯಲ್ಲಿ ಪಡೆದರು. ಅವರು ಆದರ್ಶ ವಿದ್ಯಾರ್ಥಿಯಾಗಿದ್ದರು. 

ಜೊತೆಗೆ ಇದ್ದವರೂ ತುಂಬಾ ಪ್ರೀತಿ, ಕಲಿಕೆಯಲ್ಲಿ ಹಿಂದೆ ಇದ್ದವರಿಗೆ ಸಹಾಯವನ್ನು ಮಾಡುತ್ತಿದ್ದರು. ನಂತರ ಸಂತ ಪಾವ್ಲ್ ಜೆಜ್ವಿತಾ

ಕಾಲೇಜಿಗೆ ಕಳಿಸಿದರು. ಸಂತ ಇನಾಸ್ ನ ಜೊತೆಗೆ ಗೆಳೆತನವನ್ನು ಬೆಳೆಸಿದರು.
   ನಂತರ ಇವರು ಅನೇಕ ಜನರಿಗೆ ಸಹಾಯವನ್ನು ಮಾಡುತ್ತಿದ್ದರು. ಸಂಜೆಗೆ ಹಳ್ಳದಲ್ಲಿರುವ ಅನಾಥ ರೋಗಿಗಳಿಗೆ ಭೇಟಿ
ಮಾಡಿ ಅವರಲ್ಲಿರುವ ಗಾಯವನ್ನು ಸ್ವಚ್ಚ ಮಾಡಿ ಗಾಯದಲ್ಲಿ ಮದ್ದನ್ನು ಹಾಕುತ್ತಿದ್ದರು. ಅವರಿಗೆ ಸಿಕ್ಕಿದ ಹಣವನ್ನು ಮಕ್ಕಳಿಗಾಗಿ 

ಖರ್ಚು ಮಾಡುತ್ತಿದ್ದರು. ಮಾರಿದ ಮಕ್ಕಳನ್ನು ಸಂತ ಜೊಸೆಫ್ ವಾಜ್ ಯವರು ಅವರನ್ನು(ಮಕ್ಕಳನ್ನು) ಹೊರಗೆ ಕರೆಯುತ್ತಿದ್ದರು. ಅವರು ಅನೇಕ ಪ್ರಯತ್ನವನ್ನು ಮಾಡಿದ್ದಾರೆ. ಇದನ್ನು ತಿಳಿದ ಕೆಲವು ಜನರು ಇವರನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದರು. ಆದರೆ ದೇವರ ದಯೆಯಿಂದ ಏನೂ ಆಗಿರಲಿಲ್ಲ. ಒಂದು ದಿನ ಅವರು ಪವಾಡವನ್ನು ಮಾಡಿದರು. ಅದು ಏನೆಂದರೆ ಒಂದು ದಿನ ಮುಡಿಪು ಗುಡ್ಡದಲ್ಲಿ ಜನರು ಇವರ ಜತೆಗೆ ಹೋಗುತ್ತಿರುವಾಗ ಜನರಿಗೆ ಬಾಯಾರಿಕೆಯಾಯಿತು. ಏನೂ ಕುಡಿಯಲು ಇಲ್ಲದಿದ್ದರಿಂದ ಜೊಸೆಫ್ ರವರು ದೇವರಲ್ಲಿ ಪ್ರಾರ್ಥಿಸಿ, ನೀರು ಹೊರ ಚಿಮ್ಮಿತ್ತು. ಅದೇ ಝರಿಯಲ್ಲಿದ್ದ ನೀರನ್ನು ಜನರು ಕೊಂಡು ಹೋಗುತ್ತಿದ್ದಾರೆ. ಹಾಗೆಯೇ ದನಗಳಿಗೆ ಬಂದಿದ್ದ

ರೋಗವನ್ನು ಇದೇ ನೀರಿನಿಂದ ಕುಡಿಯಲು ಕೊಡುತ್ತಿದ್ದಾರೆ . ಹಾಗೆಯೇ ಅನೇಕ ಪವಾಡವನ್ನು ಮಾಡಿದ್ದನ್ನು ನಮಗೆ ಇಲ್ಲಿ ತಿಳಿಯಬಹುದು.
  ಇಲ್ಲಿ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಹತ್ತಿರ ವಾಸಿಸುತ್ತಿರುವ ೬೩ ವರ್ಷದ ಕೆ. ಇಸ್ಮಾಯಿಲ್ ಶಾಫಿ, ಒಂದು ಶಾಲೆಯ
ಮೇಸ್ತ್ರಿಯಾಗಿರುವ, ಹೀಗೆ ಹೇಳುತ್ತಾನೆ. "೪೯ ವರ್ಷಗಳ ಹಿಂದೆ ೧೯೫೧ರಲ್ಲಿ  ಮುಡಿಪುನಲ್ಲಿರುವ ಭಾರತೀಯ ಹಿ.ಪ್ರಾ. ಶಾಲೆಯಲ್ಲಿ ಓದೌತ್ತಿರುವಾಗ, 

ಈ ಪವಾಡದ ಗುಡ್ಡಕ್ಕೆ ನನ್ನ ಸಂಗಡಿಯೊಂದಿಗೆ ನಾನೂ ಹೋಗಿದ್ದೆ. ನಾನು ಹೋದದ್ದು ಮೇ ತಿಂಗಳಿನ ಮೊದಲಿನ ವಾರದಲ್ಲಿ ಕಠಿಣ ಸೆಕೆಯ ಸಮಯ. ನಾನು ಅಲ್ಲಿಗೆ ಹೋದಾಗ, ಜೊಸೆಫ್ ವಾಜ್ ರವರ ಮೊಣಕಾಲಿನ ಹಾಗೂ ಕೋಲಿನ ಆ ೩ ಹೊಂಡಗಳಲ್ಲಿ ನೀರಿತ್ತು. ಈ ಹೊಂಡಗಳ ಹತ್ತಿರ ನೀರಿಲ್ಲದ

ಒಂದು ವಬಾವಿ ಹಾಗೂ ಮುರಿದು ಬಿದ್ದ ಚೈಕ್ಕ ಪ್ರಾರ್ಥನಾ ಮಂದಿರವಿತ್ತು. ಮಂದಿರದ ಮೇಲೆ ಇದ್ದ ಶಿಲುಬೆಯು ನೇತಾಡುತ್ತಿತ್ತು. ಜನರು ಹೊಟ್ಟಿನೋವು ಹಾಗೂ

ಇತರ ಕಾಯಿಲೆಗಳಿದ್ದಾಗ ಈ ಪವಾಡದ ಹೊಂಡದಲ್ಲಿರುವ ಪವಿತ್ರ ನೀರನ್ನು ಕೊಂಡು ಕುಡಿಯುವುದರಿಂದ ಅವರ ಕಾಯಿಲೆಗಳು ವಾಸಿಯಾಗುತ್ತವೆ ಎಂದು ಅವರ ನಂಬಿಕೆ. ನಾನೂ ಸಹ ಇದನ್ನು ನಂಬುತ್ತೇನೆ. ರೋಗಗಳನ್ನು ಗುಣಪಡಿಸುವ ಪವಾಡಸದ ಶಕ್ತಿ ಆ ಪವಿತ್ರ ನೀರಿನಲ್ಲಿದೆ ಎಂಬ ವಿಶ್ವಾಸ ಇಂದು ಎಷ್ಟೋ ಜನರಿಗಿದೆ. ಖಂಡಿತವಾಗಿಯೂ ಇದೊಂದು ಪವಾಡದ ಹಾಗೂ ಪವಿತ್ರ ಸ್ಥಳವೆಂದು, ಮುಡಿಪು ಪರಿಸರದಲ್ಲಿರುವ ಎಲ್ಲಾ ಧರ್ಮಗಳ ಜನರು ಭಾವಿಸುತ್ತಾರೆ" ಎಂದು ಹೇಳುತ್ತಾರೆ.

   ಡಿಸೆಂಬರ್ ೧೭೧೦ ಸಂತ ಜೊಸೆಫ್ ವಾಜ್ ಯವರು ಅವರ ಜತೆಗೆ ಪ್ರಾರ್ಥನೆಯನ್ನು ನಡೆಸಲು ಪ್ರಯತ್ನಿಸಿದರು. 

ಆದರೆ ಅವರನ್ನು ಹಲ್ಲೆ ಮಾಡಿದ ಅವರ ಕಾಲಿಗೆ ಗಾಯವಾಯಿತು. ಆದರೆ ಪ್ರಾರ್ಥನೆ ಮಾಡುತ್ತಿರುವಾಗ ಕಾಲಿಗೆ ಗಾಯವಾಗಿದ್ದರಿಂದ ಅಸ್ವಸ್ಥನಾದನು. ಇವರನ್ನು ಅನೇಕ ಗುರುಗಳು ಸಹಾಯ ಮಾಡಿದರು. ಕೊನೆಗೆ ೧೭೧೧ ಜನವರಿ ೧೬ ತಾರೀಖಿಗೆ ಅದು ಶುಕ್ರವಾರ ದಿನವಾಗಿತ್ತು. ಅವರ ಸ್ಥಿತಿ ಗಂಭೀರವಾಗಿದ್ದರಿಂದ ಏನೂ ಊಟ ಮಾಡದೆ ಅಸ್ವಸ್ಥನಾಗಿದ್ದರಿಂದ ಅವರನ್ನು ಕುಡಿಯಲು ಸೂಪನ್ನು ನೀಡಿದರು. ಆದರೆ ಅವರಿಗೆ ಕುಡಿಯಲು ಮನಸ್ಸಾಗಲಿಲ್ಲ. ಕೊನೆಗೆ ಗುರುಗಳ ಮಾತಿನಿಂದ ಸ್ವಲ್ಪ ಸೂಪನ್ನು ಕುಡಿದನು. ಅವರು ಮಕ್ಕಳನ್ನು ಕರೆದು ದೇವರ ಪ್ರೀತಿಯಿಂದ ಬಾಳಲು ಎಂಬ ಬುದ್ಧಿವಾದವನ್ನು ತಿಳಿಸಿದನು. ಕೊನೆಗೆ ಮರಣ ಸಮೀಪ ಬಂದಾಗ ಅವರ ಜೊತೆಗೆ ಇದ್ದ ಗುರುಹಗಳಿಗೆ ತಿಳಿದು ಏನು ಸಂದೇಶವನ್ನು ಹೇಳಲು ಬಯಸುತ್ತೀ ಎಂದಾಗ ಸಂತ ಜೊಸೆಫ್ ವಾಜ್ ಯವರು, "ನೆನಪಿನಲ್ಲಿರಲಿ, ಯಾವುದೇ ನಿಮ್ಮ ಜೀವನದಲ್ಲಿ ಕೆಲಸಗಳು ಆಗದಿದ್ದಾಗ, ಮರಣದ ಸಮೀಪದಲ್ಲಿ ಕೆಲಸವನ್ನು ಮಾಡಲು ಸಾಧ್ಯವಿಲ್ಲ." ಎಂದನು. ಕೊನೆಗೆ ಅವರ ಕೈಯಲ್ಲಿ ಏಸು ಕ್ರಿಸ್ತನ ಮೂರ್ತಿಯನ್ನು ಹಿಡಿದು, ಏಸು ಕ್ರಿಸ್ತನ ಹೆಸರನ್ನು ಹೇಳಿ, ೬೦ನೇ ವರ್ಷದಲ್ಲಿ ತನ್ನ ಆತ್ಮವನ್ನು ದೇವರಿಗೆ ಸಮರ್ಪಿಸುತ್ತಾನೆ.

      ಇಂದು ಶ್ರೀಲಂಕಾದ ಜನರು ಶೇಕಡಾ ೭ರಷ್ಟು ರೋಮನ್ ಕಾಥೋಲಿಕ್ ಆಗಿದ್ದಾರೆ ಗಹಾಗೂ ಅವರ ಜೀವನದಲ್ಲಿ ಸಂತ 

ಜೊಸೆಫ್ ವಾಜ್ ಯವರ ನೆನಪು ಇಂದು ಜೀವಂತವಾಗಿ ಉಳಿದಿದೆ.