ಸದಸ್ಯರ ಚರ್ಚೆಪುಟ:Moiddeen ashfhad/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಲೆಕ್ಸಾಂಡರ್ ಫ್ಲೆಮಿಂಗ್‌: ಸರ್ ಅಲೆಕ್ಸಾಂಡರ್ ಫ್ಲೆಮಿಂಗ್‌ ( ೬ ಆಗಸ್ಟ್‌ ೧೮೮೧ - ೧೧ ಮಾರ್ಚಿ ೧೯೫೫) - ಇವರು ಸ್ಕಾಟ್ಲೆಂಡ್‌ನ‌ ಪ್ರಸಿದ್ಧ ಜೀವಶಾಸ್ತ್ರಜ್ಞ ಮತ್ತು ಔಷಧ ವಿಜ್ಞಾನಿ ಅಗಿದ್ದರು. ಫ್ಲೆಮಿಂಗ್‌ ಬ್ಯಾಕ್ಟ್ರೀಯಶಾಸ್ತ್ರ, ರೋಗ ರಕ್ಷಾಶಾಸ್ತ್ರ ಮತ್ತು ಕೀಮೊಥೆರಪಿಯ (ರಸಾಯನ ಚಿಕಿತ್ಸೆ) ಬಗ್ಗೆ ಅನೇಕ ಲೇಖನಗಳನ್ನು ಬರೆದು ಪ್ರಕಟಿಸಿದರು. ಇಸವಿ ೧೯೨೩ರಲ್ಲಿ ಲೈಸೊಜೈಮ್ ಎಂಬ ಕಿಣ್ವ (ಎಂಜೈಮ್‌)ದ ಪತ್ತೆ, ಹಾಗೂ, ೧೯೨೮ರಲ್ಲಿ ಪೆನಿಸಿಲ್ಲಿಯಮ್ ನೊಟಾಟಮ್‌ ಎನ್ನುವ ಫಂಗಸ್‌ನಿಂದ (ಶಿಲೀಂಧ್ರ) ಪೆನಿಸಿಲಿನ್‌ ಎನ್ನುವ ಪ್ರತಿಜೀವಕ (ಆಂಟಿಬಯೋಟಿಕ್) ವಸ್ತುವಿನ ಸಂಶೋಧನೆಯು, ಇವರ ಅತ್ಯಂತ ಪ್ರಸಿದ್ಧ ಸಾಧನೆಗಳಾಗಿವೆ. ಈ ಸಂಶೋಧನೆಗಾಗಿ, ೧೯೪೫ರಲ್ಲಿ ಹಾವರ್ಡ್‌ ವಾಲ್ಟರ್‌ ಫ್ಲೋರೆ ಮತ್ತು ಎರ್ನಸ್ಟ್‌ ಬೋರಿಸ್‌ ಚೈನ್‌ ಜೊತೆಯಲ್ಲಿ ಫ್ಲೆಮಿಂಗ್‌ರಿಗೆ ಫಿಸಿಯೊಲಾಜಿ (ಶರೀರವಿಜ್ಞಾನ ಶಾಸ್ತ್ರ) ಅಥವಾ ಮೆಡಿಸಿನ್ (ವೈದ್ಯಕೀಯ ಶಾಸ್ತ್ರ)ಕ್ಕಾಗಿ ನೋಬಲ್‌ ಪ್ರಶಸ್ತಿ ಲಭಿಸಿತು. ಇತ್ತೀಚೆಗೆ ೧೯೯೯ರಲ್ಲಿ, ಪೆನಿಸಿಲಿನ್‌ ಸಂಶೋಧಕ ಫ್ಲೆಮಿಂಗ್‌ರನ್ನು 20ನೇ ಶತಮಾನದ ಅತಿ ಪ್ರಮುಖ 100 ಜನರ ಪಟ್ಟಿಯಲ್ಲಿ ಸೇರಿಸಿದ ಟೈಮ್‌ ಮ್ಯಾಗಜೀನ್‌ , ಈ ಹೇಳಿಕೆ ನೀಡಿ ಪ್ರಶಂಸಿಸಿತು: "ಈ ಶೋಧನೆಯು ಪ್ರಪಂಚದ ಇತಿಹಾಸವನ್ನು ಬದಲಾಯಿಸಿತು. ಫ್ಲೆಮಿಂಗ್‌ರು 'ಪೆನಿಸಿಲಿನ್'‌ ಎಂದು ಕರೆದ ಆ ಮೌಲ್ಡ್‌ನಲ್ಲಿದ್ದ ಸಕ್ರಿಯ ಆಂಶವು, ಸೋಂಕುಕಾರಕಗಳನ್ನು ಅಪಾರ ಪ್ರಬಲವಾಗಿ ಪ್ರತಿರೋಧಿಸುತ್ತಿತ್ತು.