ಸದಸ್ಯರ ಚರ್ಚೆಪುಟ:Ml satyanarayana/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕನ್ನಡ ಭಾಶೆಗೆ ಏನಾಗಿದೆ? ಏಕಾಗಿದೆ?

ಮಾನ್ಯರೇ , ಭಾಷೆ -ಭಾಶೆಯಾಗಿದೆ ! ; ಕನ್ನಡ ದಿಗ್ಗಜರೆಲ್ಲಾ ಸಭೆ ಸಮ್ಮೇಳನ ನೆಡೆಸುತ್ತಾ ವೇದಿಕೆ ಏರಿ ಕುಳಿತು ಭಾಷಣ, ಉಪದೇಶದಲ್ಲಿ ನಿರತರಾಗಿದ್ದಾರೆ ; ಕೆಲವರು ನಿಶ್ಶಬ್ದವಾಗಿ ಕನ್ನಡದ ಕೆಲಸಮಾಡುತ್ತಾ ಮೌನವಾಗಿ ಮೂಲೆಯಲ್ಲಿ ಸೇವೆಮಾಡುತ್ತಿದ್ದಾರೆ. ಸರ್ಕಾರ ಸಂಸ್ಕೃತಿ ಇಲಾಖೆಗೆ, ಕನ್ನಡ ಅಭಿವೃದ್ಧಿ ಮಂಡಳಿಗೆ , ಸಾಹಿತ್ಯ ಪರಿಷತ್ತು -ಇತ್ಯಾದಿ ಸಂಸ್ಥೆಗಳಿಗೆ ಕೊಡಮಾಡಿದ ಹಣ - ಸಭೆ-ಸಮಾರಂಭ-ತಿರುಗಾಟಗಳಿಗೆ ಖರ್ಚಾಗುತ್ತೆ. ಕನ್ನಡ ವಿಶ್ವವಿದ್ಯಾಲಯ ವಿಭಾಗಗಳು ತಜ್ಞರು,ವಿದ್ವಾಂಸರು, ಪ್ರತಿಭಾವಂತರು , ಹಣ ಇಲ್ಲದೆ ಸೊರಗುತ್ತಿದೆ. ಕನ್ನಡ ವಿಶ್ವವಿದ್ಯಾಲಯ ವಿಭಾಗಗಳು , ಜಾತಿ ರಾಜಕೀಯದ, ಹಣ ಮಾಡುವ -ಕಣಗಳಾಗಿವೆಯೇ ಎಂಬ ಅನುಮಾನ ಬರತ್ತೆ ? ಈ ಮಧ್ಯೆ ಕೆಲವರು/ಅಧಿಕಾರಿಗಳು/ಸಮಾಜ ಸೇವಕರು ಕಳಕಳಿಯಿಂದ ಕನ್ನಡಕ್ಕಾಗಿ ನಿಷ್ಟೆಯಿಂದ ದುಡಿಯುತ್ತಿದ್ದಾರೆ . ಸರ್ವ ಬಣ್ಣವನ್ನೂ ಮಸಿನುಂಗಿದಂತೆ , ಅಧಿಕಾರದಾಹಿ ರಾಜಕೀಯ / ಜಾತಿ-ರಾಜಕೀಯ ಎಲ್ಲಾ ಬಗೆಯ ಪ್ರಾಮಾಣಿಕ ಕೆಲಸ/ಕೆಲಸಗಾರರನ್ನು ಬದಿಗೊತ್ತುತ್ತಿದೆ.ಪತ್ರಿಕೆಯಲ್ಲಿ ದಿನನಿತ್ಯ ಬರುವ ವರದಿಗಳನ್ನು ನೋಡಿದರೆ, ಇಲ್ಲಿ ಕನ್ನಡನಾಡಿನಲ್ಲಿ ಇರುವಷ್ಟು ನೇಮಕಾತಿಯೇ ಮೊದಲಾದ ಇತರೆ ವ್ಯವಹಾರಗಳಲ್ಲಿ ನೆಡೆಯುವಷ್ಟು ಗೋಲುಮಾಲು ಇನ್ನೆಲ್ಲಿಯೂ ಇಲ್ಲವೇನೋ ಎನಿಸುತ್ತೆ.?? ಜೈಕನ್ನಡ !! ಜೈಕರ್ನಾಟಕ !! Bschandrasgr ೧೦:೨೧, ೧೨ ಮಾರ್ಚ್ ೨೦೧೪ (UTC)