ಸದಸ್ಯರ ಚರ್ಚೆಪುಟ:Melani M D'Souza

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                             ಹಳ್ಳಿ ಜೀವನ
           ಹಳ್ಳಿ ಜೀವನವನ್ನು ನಮ್ಮ ಆಧುನಿಕ ಜೀವನಕ್ಕೆ ಹೋಲಿಸಿದ್ದಾರೆ. ಅಜಗಜಾಂತರ ವ್ಯತ್ಯಾಸವಿರುವುದನ್ನು ಕಾಣಬಹುದು. ಹಳ್ಳಿ ಜೀವನವನ್ನು ನಾನು ನನ್ನ ಬಾಲ್ಯ ಜೀವನದಲ್ಲಿ ಅಂದರೆ  ಆರನೇ ತರಗತಿಯ ತನಕ ಅನುಭವಿಸಿದ್ದೇನೆ. ಅದರಲ್ಲೂ ಅಜ್ಜಿ ಹೇಳಿದ ಕೆಲವು ಮಾತುಗಳಿಂದ ಜೀವನದ ಚಿತ್ರವನ್ನು ನಾನು ಅನುಭವಿಸಿದರಿಂದ ಈ ಲೇಖನವನ್ನು ಬರೆಯಲು ನನ್ನ ಲೇಖನಿಯನ್ನು ಹಿಡಿದೆ. ಮೂಲಭೂತ ಸೌಕರ್ಯಗಳಾದ ವಿದ್ಯುತ್, ರಸ್ತೆ, ಶೌಚಾಲಯ , ಬಾವಿ, ಶಾಲೆ, ಆಸ್ಪತ್ರೆ, ಬಸ್ಸು ನಿಲ್ದಾಣ ಹೀಗೆ ಕ್ರಮಬದ್ದವಾದ ಯೋಜನೆ ಇಲ್ಲದ ಪ್ರದೇಶವನ್ನು ಹಳ್ಳಿ  ಎಂದು ಕರೆದರೆ ಇನ್ನೊಂದು ಅರ್ಥದಲ್ಲಿ ಗದ್ದೆ, ತೋಟ, ಗುಡ್ದಬೆಟ್ಟ, ಕೆರೆ, ಹಟ್ಟಿ, ದನ, ಹೊಳೆ, ಕರುಗಳು, ಹೈನುಗಾರಿಕೆ, ಕೋಳಿ ಸಾಕಣಿಕೆ, ಜನಪದ ಆಟ, ಇತ್ಯಾದಿಗಳಿಂದ ಕೂಡಿದ ಪ್ರದೇಶವನ್ನು  ಹಳ್ಳಿ ಎಂದು ಕರೆಯುತ್ತಾರೆ. ಹಳ್ಳಿ ಜೀವನ ನಡೆಸಲು ಕ‍‌ಷ್ಟವಾದರೂ ಪಟ್ಟಣ ಜೀವನದಲ್ಲಿರುವ ಜೀವನ ಶೈಲಿ ಹೋಲಿಸಿದಾಗ ಆ ಹಳ್ಳಿ ಜೀವನದ ಸಂತೋಷ ಪಟ್ಟಣ ಜೀವನದಲ್ಲಿ ಸಿಗುವುದಿಲ್ಲ. ಹಳ್ಳಿ ಜೀವನದಲ್ಲಿ ಒಂದು ಮಗು ಎಲ್ಲ ರೀತಿಯ ಸಾಮರ್ಥ್ಯಗಳನ್ನು ಪಡೆದು ಎಲ್ಲ ದಲ್ಲೂ ಭಾಗವಹಿಸಲು ಸಮರ್ಥನಾಗುತ್ತಾನೆ.
               ಹಳ್ಳಿಯಲ್ಲಿ ನಡೆಯುವಂತ ಪ್ರತಿಯೊಂದು ಕಾರ್ಯಕ್ರಮದಲ್ಲಿ ಪ್ರತಿಯೊಬ್ಬನ ಹಾಜರಾತಿ ವಿಶೇಷವಾಗಿದೆ. ಹಳ್ಳಿಯ ಕಾರ್ಯಕ್ರಮ ಎಂದರೆ ಒಂದು ಕುಟುಂಬದ ಕಾರ್ಯಕ್ರಮದಂತೆ ಒಂದು ಹಳ್ಳಿಯೆಂದರೆ ಯಾವುದೇ ಜಾತಿ ಮತ ಧರ್ಮಗಳ ಭೇದವಿಲ್ಲದೇ ಹಿರಿಯ ಕಿರಿಯರು ಅಂತರವಿಲ್ಲದೇ ಎಲ್ಲರೂ ಎಲ್ಲರ ಸಹಕಾರ ಸಲಹೆಗಳೊಂದಿಗೆ ಒಂದು ಕಾರ್ಯವನ್ನು ನಡೆಸಿಕೊಡುವ ವೈಖರಿಯೇ ವಿಶೇಷವಾಗಿದೆ. 
         ಶಿಕ್ಷಣದಿಂದ ವಂಚಿತರಾದ ಹಳ್ಳಿಗರು ಅವರಲ್ಲಿರುವ ಒಗ್ಗಟ್ಟಿನ ಮೂಲಕ ಎಲ್ಲಾ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾರೆ. ಅವರಲ್ಲಿ ಕೆಲವು ಮೂಢನಂಬಿಕೆಗಳು, ವಾಮಚಾರಗಳು, ಸಂಪ್ರದಾಯಗಳಿದ್ದರೂ ಕೂಡ ಅವರಲ್ಲಿ ಸಾಮರಸ್ಯವನ್ನು ಕಾಣಬಹುದು. ಮದುವೆ, ಮುಂಜಿ ಸಾವು ನೋವುಗಳಲ್ಲಿ ಇಬ್ಬರೂ ಇನೊಬ್ಬರಿಗೆ ಸಹಕಾರ ಸಾಂತ್ವನ ಮಾತುಗಳಿಂದ ಸುಧಾರಿಸುವುದನ್ನು ಕಾಣಬಹುದು. ಹಳ್ಳಿಯ ಜೀವನ ಕಷ್ಟವಾದರೂ ವ್ಯವಸ್ಥಿತವಾಗಿ ಅದನ್ನು ನಡೆಸಿಕೊಂಡು ಹೋಗುವ ರೀತಿ ಬೇರೆಯೆ. 
         ಪ್ರಾಥಕಾಲದಲ್ಲಿ ಅಂದರೆ ಕೋಳಿ ಕೂಗುವ ಮೊದಲೇ ಎದ್ದು ಕಾಡಿನಲ್ಲಿ ತಮ್ಮ ಬೆಳಗ್ಗಿನ ನಿತ್ಯ ಕೆಲಸವನ್ನು ಮುಗಿಸಿ ಇದ್ದಿಲಿನಲ್ಲಿ ಹಾಗು ಮಾವಿನ ಎಲೆಯಲ್ಲಿ ಹಲ್ಲುಜ್ಜಿ ಕೆರೆಯ ನೀರಿನಲ್ಲಿ ಮುಖ ತೊಳೆದು ಬೆಳಗ್ಗಿನ ಉಪಹಾರವನ್ನು ಮುಗಿಸಿ ತಮ್ಮ ತಮ್ಮ ವೃತ್ತಿಯಲ್ಲಿ ತೊಡಗುತ್ತಿದ್ದರು. ಹಳ್ಳಿಯಲ್ಲಿ ಮನೆ ಒಂದು ಕಡೆ, ಜಮೀನು ಒಂದು ಕಡೆ ಹೀಗಿರುವಾಗ ಮನೆ ಹೆಂಗಸರು ಬೇಗಬೇಗನೇ ರಾಗಿಮುದ್ದೆ, ಜೋಳ ರೊಟ್ಟಿ, ಪುಂಡಿ, ಅನ್ನ ಸಾಂಬರು ತಯಾರಿಸಿ ಬುತ್ತಿಯನ್ನು ಬಟ್ಟೆಯಲ್ಲಿ ಕಟ್ಟಿ ತಲೆಯ ಮೇಲೆ ಬುಟ್ಟಿಯಲ್ಲಿಟ್ಟು, ಅದರ ಜೊತೆಯಲ್ಲಿ ತೊಟ್ಟಿಲಲ್ಲಿ ಇದ್ದ ಮಗುವನ್ನು ಸೊಂಟಕ್ಕೆ ಕಟ್ಟಿ ತಮ್ಮ ಪಯಣವನ್ನು ಬರಿಗಾಲಿನಲ್ಲಿ ಕಾಲ್ನಡಿಗೆಯ ಮುಖಾಂತರ ಎಷ್ಟೋ ಮೈಲುಗಳವರೆಗೆ ನಡೆದು ಸಮಯಕ್ಕೆ ಸರಿಯಾಗಿ ತಮ್ಮ ಹೊಲಗಳಿಗೆ ಹೋಗಿ ಸಂತೋಷದಿಂದ ದುಡಿಯುವರು. ಹೀಗೆ ನಿರಂತರವಾಗಿ ಕೆಲಸದಲ್ಲಿ ತೊಡಗಿ ಮುಸ್ಸಂಜೆ ಹೊತ್ತಿನಲ್ಲಿ ಪುನ: ಗಂಟು ಮೂಟೆ ಕಟ್ಟಿಕೊಂಡು ತಮ್ಮ ತಮ್ಮ ಗುಡಿಸಲುಗಳಿಗೆ ಹೋಗುವ ದೃಶ್ಯವನ್ನು ನೋಡಬಹುದು.
           ಇಂಥ ಒಂದು ಚಿತ್ರಣವನ್ನು ನಾವು ನಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಕಾಣಲು ಸಾಧ್ಯವಿಲ್ಲ. ಯಾಕೆಂದರೆ ಅಭಿವೃಧಿ ಹೊಂದುತ್ತಿರುವ ನಮ್ಮ ದೇಶದಲ್ಲಿ ಹಳ್ಳಿಗಳು ಮಾಯವಾಗಿ ಕಾಂಕ್ರೀಟ್ ಕಟ್ಟಡಗಳೆ ಎದ್ದೇಳುತ್ತವೆ. ಹೀಗಿರುವಾಗ ಹಳ್ಳಿ ಜೀವನದ ಸವಿಯನ್ನು ಪಡೆಯಲು ನಮ್ಮಂತ ಮಕ್ಕಳು ವಂಚಿತರಾಗಿದ್ದೇವೆ. ಇನ್ನು ಕೆಲವು ವರ್ಷಗಳ ನಂತರ ಹಳ್ಳಿಯ ಬಗ್ಗೆ ತಿಳಿಯಬೇಕಾದರೆ ಸಾಹಿತ್ಯದಿಂದ ಮಾತ್ರ ಸಾಧ್ಯ. ಹಳ್ಳಿಯ ಜೀವನದಲ್ಲಿ ಹಳ್ಳಿಯ ಊಟ ಹಳ್ಳಿಗರಿಗೆ ಮಾತ್ರ ಇಷ್ಟ. ಗಂಜಿ ಚಟ್ನಿ, ಕಡ್ಲೆಪುಡಿ ಚಟ್ನಿ, ತೇವು ಸಾರು, ಉಪ್ಪು ನೀರಿಗೆ ಹಾಕಿದ ಮಾವು, ಹಲಸು, ಹೆಬ್ಬಲಸು, ಹತ್ತಿಕಾಯಿ, ಮೊದಲಾದವು. ಮನೆಯಲ್ಲಿಯೇ ಬೆಳೆಸಿದ ಸೊಪ್ಪು ತರಕಾರಿಯನ್ನು ಬಳಸಿ ಸದಾರು ಸಾಂಬರು ಮಾಡುವುದು ವಿಶೇಷ. ಹಳ್ಳಿ ಜೀವನದ ಶೈಲಿಗೆ ನಮ್ಮ ಆಧುನಿಕ ಯುಗದ ಮಕ್ಕಳು ಹೊಂದಾಣಿಕೆ ಮಾಡಿ ಜೀವನ ಮಾಡುವುದು ಬಹಳ ವಿರಳ. ಸಂತೋಷದ ವಿಷಯವೇನೆಂದರೆ, ಹಳ್ಳಿ ಮನೆಯಲ್ಲಿ ಅಜ್ಜ ಅಜ್ಜಿಯಂದಿರು, ಚಿಕ್ಕಮ್ಮ, ದೊಡ್ಡಮ್ಮ, ದೊಡ್ಡಪ್ಪ, ಮೊದಲಾದವರು ತಮ್ಮ ಮಕ್ಕಳೊಂದಿಗೆ ಜೊತೆ ಸೇರಿ ಅವಿಭಕ್ತ ಕುಟುಂಬದಲ್ಲಿ ಜೀವಿಸುವುದು ವಿಶೇಷವಾಗಿದೆ. 
         ಈಗಾಗಳೆ ಮಾಯವಾಗಿರುವ ಜನಪದ ಆಟಗಳು, ಹಾಡುಗಳು, ಕೊಲಾಟ, ಯಕ್ಷಗಾನ, ಬಯಲಾಟ, ಕೋಳಿ ಅಂಕ, ಕಂಬಳ, ಕುಂತಟೆಬಿಲ್ಲೆ, ಚಿನ್ನಿದಾಂಡು, ಲಗೋರಿ, ಮರಕೋತಿ, ಕಣ್ಣುಮುಚ್ಚಾಳೆ, ಮೊದಲಾದ ಆಟಗಳನ್ನು ಕೆಲವೊಂದು ಹಳ್ಳಿಗಳ ಮುಖಾಂತರ ದೂರದರ್ಶನದಲ್ಲಿ ಮಾತ್ರ ನೋಡಲು ಅವಕಾಶವಿರುವುದು. ಈ ಹಳ್ಳಿಯ ಜೀವನದ ಸವಿ ನಮ್ಮಂಥ ಮಕ್ಕಳಿಗೆ ದೂರವಾಗಿದೆ. ಇದನ್ನು ತಿಳಿಯಬೇಕಾದರೆ ಸಾಹಿತ್ಯದ ಪುಟಗಳನ್ನು ತಿರುವಿ ನೋಡಿದರೆ ಮಾತ್ರ ಹಳ್ಳಿಯ ಸಂತೋಷವನ್ನು ಆನಂದಿಸಬಹುದು.

ಕನ್ನಡ[ಬದಲಾಯಿಸಿ]

ಹಳ್ಳಿ ಜೀವನ ಚಂದವೋ ಪಟ್ಟಣ ಜೀವನ ಚಂದವೋ 2409:4071:D91:72AE:0:0:E5CB:7306 ೦೫:೧೬, ೭ ಫೆಬ್ರುವರಿ ೨೦೨೧ (UTC)

ನಂಗೆ ivathe ಬೇಕು please 2409:4071:D91:72AE:0:0:E5CB:7306 ೦೫:೧೭, ೭ ಫೆಬ್ರುವರಿ ೨೦೨೧ (UTC)