ಸದಸ್ಯರ ಚರ್ಚೆಪುಟ:Mayuri2719
ಟೆಡ್ ಹ್ಯೂಸ್ (Ted Hughes) ಅವರು ೨೦ನೇ ಶತಮಾನದ ಪ್ರಮುಖ ಸಾಹಿತ್ಯಗಾರರಲ್ಲಿ ಒಬ್ಬರಾಗಿದ್ದರು. ಅವರು ಆಂಗ್ಲ ಭಾಷೆಯಲ್ಲಿ ಅನೇಕ ಕಾವ್ಯಗಳನ್ನು ಮತ್ತು ಮಕ್ಕಳಿಗಾಗಿ ಕಥೆಗಳನ್ನು ಬರೆದರು. ಅವರ ಹುಟ್ಟು ಹೆಸರು ಎಡ್ವರ್ಡ್ ಜೇಮ್ಸ್ ಹ್ಯೂಸ್. ಅವರು ಇಂಗ್ಲೆಂಡಿನ ಮೈಥೊಲ್‍ಮ್ರೊಯ್ಡ್ ಎಂಬ ಸ್ಥಳದಲ್ಲಿ ಜನಿಸಿದರು. ಅವರ ತಂದೆ ವಿಲ್ಲಿಯಮ್ ಹೆನ್ರಿ ಮತ್ತು ಅವರ ತಾಯಿಯ ಹೆಸರು ಎಡೀತ್ ಹ್ಯೂಸ್. ಅವರು ತಮ್ಮ ಬಾಲ್ಯವನ್ನು ಕ್ಯಾಲ್ಡ್ರ ಕಣಿವೆಯಲ್ಲಿ ಕಳೆದರು. ಅವರ ಅಣ್ಣ ಜೆರಾಲ್ಡ್, ಟೆಡ್ ಹ್ಯೂಸ್ ಅವರಿಗಿಂತ ಹತ್ತು ವರ್ಷ ಹಿರಿಯರಾಗಿದ್ದರು ಮತ್ತು ಅವರ ಅಕ್ಕ ಒಲ್ವಿನ್ ಎರಡು ವರ್ಷ ಹಿರಿಯರಾಗಿದ್ದರು. "ನನ್ನ ಮೊದಲ ಆರು ವರ್ಷಗಳು ಎಲ್ಲ್ವನ್ನು ರೂಪಿಸಿದವು," ಎಂದು ಅವರು ಹೇಳಿದ್ದರು. ಅವರಿಗೆ ಬೇಟೆ, ಮೀನುಗಾರಿಕೆ ಮತ್ತು ಈಜುವುದರಲ್ಲಿ ಆಸಕ್ತಿ ಇತ್ತು. ಏಳು ವರ್ಷಗಳ ವಯಸ್ಸಿನ ತನಕ ಅವರು ಬರ್ನ್ಲಿ ಶಾಲೆಯಲ್ಲಿ ಓದಿದರು; ನಂತರ ಅವರ ಕುಟುಂಬ ಮೆಕ್ಸ್ಬೊರೊ ಎಂಬ ಜಾಗೆಕೆ ಸ್ಥಳಾಂತರ ಮಾಡಿದಾಗ ಅವರು ಸ್ಕೊಫೀಲ್ಡ್ ಜೂನಿಯರ್ ಶಾಲೆಯಲ್ಲಿ ಓದಿದರು. ಅವರ ಆತ್ಮೀಯ ಗೆಳೆಯನಾದ ಜಾನ್ ವೊಲ್ಲಿ, ಅವರನ್ನು ಕ್ರೂಕ್‍ಹಿಲ್ ಎಸ್ಟೇಟಿಗೆ ಕರೆದೊಯ್ದರು; ಅವರಿಬ್ಬರು ಅಲ್ಲಿ ಬಹಳಷ್ಟು ಸಮಯವನ್ನು ಕಳೆದರು. ಹ್ಯೊಸ್ ಅವರು ಜಾನ್ ವೊಲ್ಲಿ ಅವರ ಕುಟುಂಬದವರಿಗೆ ಹತ್ತಿರವಾದರು; ವೊಲ್ಲಿಯವರ ತಂದೆಯವರು ಬೇಟೆಪಾಲಕರಾಗಿದ್ದರಿಂದ ಹ್ಯೂಸ್ ಅವರಿಂದ ಕಾಡುಮೃಗಗಳ ಬಗ್ಗೆ ಕಲಿತರು. ಅವರು ಮೆಕ್ಸ್ಬೊರೊ ವ್ಯಾಕರಣ ಶಾಲೆಯಲ್ಲಿ ಓದುತ್ತಿರುವಾಗ, ಶಿಕ್ಷಕರ ಪ್ರೋತ್ಸಾಹದಿಂದ ಅವರು ಬರಹ ಮತ್ತು ಕಾವ್ಯರಚನೆಯಲ್ಲಿ ಅಭಿರುಚಿಯನ್ನು ಬೆಳೆಸಿಕೊಂಡರು. ಅವರ ಶಿಕ್ಷಕರಾಗಿದ್ದ ಮಿಸ್. ಮೆಕ್ ಲಿಯೊಡ್ ಮತ್ತು ಪಾಲೀನ್ ಮೇನ್, ಹ್ಯೂಸ್ ಅವರನ್ನು ಆಂಗ್ಲ ಭಾಷೆಯ ಪ್ರಮುಖ ಕವಿಗಳದ ಜಾನ್ ಹಾಪ್‌ಕಿನ್ಸ್ ಮತ್ತು ಟಿ. ಎಸ್. ಈಲಿಯಟ್ ಅವರಿಗೆ ಪರಿಚಯ ಮಾಡಿದರು. ಅವರು ತಮ್ಮ ಅಕ್ಕ ಒಲ್ವಿನ್ ಮತ್ತು ಜಾನ್ ಫಿಶರ್ ಅವರಿಂದಲೂ ಕವಿತೆಗಳ ಬಗ್ಗೆ ಕಲಿತರು. ೧೯೪೬ರಲ್ಲಿ ಹ್ಯೂಸ್ ಅವರ ಕವಿತೆ 'ವೈಲ್ಡ್ ವೆಸ್ಟ್' ಮತ್ತು ಒಂದು ಸಣ ಕಥೆ ಶಾಲಾ ಪತ್ರಿಕೆಯಲ್ಲಿ ಪ್ರಕಟಗೊಂಡವು. ಹದಿನಾರು ವರ್ಷಗಳ ವಯಸ್ಸಿನಲ್ಲಿ ಅವರು ಕವಿಯಾಗಬೇಕೆಂಬ ನಿರ್ಣಯವನ್ನು ಮಾಡಿದರು. ೧೯೪೮ರಲ್ಲಿ ಅವರಿಗೆ ಪೆಂಬ್ರೋಕ್ ಕಾಲೇಜಿನಲ್ಲಿ ಮುಕ್ತ ಪ್ರದರ್ಷನ ನಡೆಸುವ ಅವಕಾಶ ಬಂದರೂ ಅವರು ಮೊದಲು ರಾಷ್ಟ್ರೀಯ ಸೇವೆಯನ್ನು ಮುಗಿಸಲು ನಿರ್ಧಾರ ಮಾಡಿ, ಎರಡು ವರ್ಷಗಳ ಕಾಲ ತಮ್ಮ ದೆಶದ ಸೆವೆಯಲ್ಲಿ ಕಳೆದರು. ಬಿಡುವಿನ ಸಮಯದಲ್ಲಿ ಅವರು ಶೇಕ್‌ಸ್ಪಿಯರ್ ಮತ್ತು ಡಬಲ್ಯು. ಬಿ. ಯೀಟ್ಸ್ ಅವರ ರಚನೆಗಳನ್ನು ಓದಿದರು.
೧೯೫೧ರಲ್ಲಿ ಟೆಡ್ ಹ್ಯೂಸ್ ಅವರು ಪೆಂಬ್ರೋಕ್ ಕಾಲೇಜಿನಲ್ಲಿ ಎಮ್. ಜೆ. ಸಿ ಹೊದ್ಗಾರ್ಟ್ ಅವರ ಮಾರ್ಗದರ್ಶನದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಿದರು. ನಂತರ ಕೇಂಬ್ರಿಡ್ಜ್ ಮತ್ತು ಲಂಡನಿನಲ್ಲಿ ಗುಲಾಬಿ ತೋಟಗಾರನಾಗಿ ಮತ್ತು ಕಾವಲುಗಾರನಾಗಿ ಕೆಲಸ ಮಾಡಿದರು. ನಂತರ ಅವ್ರು ಲಂಡನಿನ ಮೃಗಾಲಯದಲ್ಲಿ ಕೆಲಸಮಾಡುವಾಗ ಮೃಗಗಳನ್ನು ಅವುಗಳ ವರ್ತನೆಯನ್ನು ಹತ್ತಿರದಿಂದ ಗಮನಿಸಿದರು. ಫಿಬ್ರವರಿ ೧೯೫೬ರಲ್ಲಿ ಟೆಡ್ ಹ್ಯೂಸ್ ಅವ್ರು ಸೈಂಟ್. ಬೊಟೊಲ್ಫ್ಸ್ ರೆವ್ಯು ಎಂಬ ಪುಸ್ತಕದ ಬಿಡುಗಡೆ ಮಾಡುವ ಸಂದರ್ಭದಲ್ಲಿ ಅಮೆರಿಕನ್ ಕವಯಿತ್ರಿ ಸಿಲ್ವಿಯ ಪ್ಲಾತ್ ಅವರನ್ನು ಭೇಟಿಯಾದರು. ನಲ್ಕು ತಿಂಗಳ ನಂತರ, ಜೂನ್ ೧೬, ೧೯೫೬ ರಂದು ಟೆಡ್ ಹ್ಯೂಸ್ ಅವರು ಸಿಲ್ವಿಯ ಅವರನ್ನು ಮದುವೆ ಮಾಡಿಕೊಂಡರು. ಸೆಪ್ಟೆಂಬರ್ ೧೯೫೭ರಲ್ಲಿ ಪ್ರಕಟವಾದ 'ಹಾಕ್ ಇನ್ ದಿ ರೈನ್' (Hawk in the Rain) ಪುಸ್ತಕ ಸೋಮರ್‌ಸೆಟ್ ಮೌಗ್‌ಹಾಮ್ (Somerset Maugham Award) ಪ್ರಶಸ್ತಿಯನ್ನು ಪಡೆಯಿತು. ಕಾವ್ಯಗಳ ಜೊತೆಗೆ ಅವರು ಅನೇಕ ಯೂರೋಪಿಯನ್ ನಾಟಕಗಳನ್ನು ಅನುವಾದಿಸಿದರು. ಒವಿಡ್ ಅವರ 'ಮೆಟಮೋರ್ಫಸಿಸ್' (Metamorphoses) ನಾಟಕವನ್ನು ಅನುವಾದ ಮಾಡಿ 'ಟೇಲ್ಸ್ ಫ್ರಮ್ ಒವಿಡ್' (Tales from Ovid) ರಚಿಸಿದರು. ಅವರು ಮಕ್ಕಳಿಗಾಗಿ ಬರೆದ ಸಾಹಿತ್ಯದಲ್ಲಿ 'ದಿ ಐರನ್ ಮ್ಯಾನ್' (The Iron Man) ಅತ್ಯಂತ ಪ್ರಸಿದ್ಧಿ ಹೊಂದಿತು.
೧೯೫೭ರಲ್ಲಿ ಟೆಡ್ ಹ್ಯೂಸ್ ಮತ್ತು ಸಿಲ್ವಿಯ ಪ್ಲಾತ್ ಅವರು ಅಮೆರಿಕಾಗೆ ಸ್ಥಳಾಂತರವಾದರು. ಅಲ್ಲಿ ಪ್ಲಾತ್ ಅವರು ಸ್ಮಿತ್ ಕಾಲೇಜಿನಲ್ಲಿ ಶಿಕ್ಷಕರಾಗಿ, ಮತ್ತು ಹ್ಯೂಸ್ ಅವರು ಯೂನಿವರ್ಸಿಟಿ ಆಫ್ ಮ್ಯಾಸಚೂಸೆಟ್ಸ್ ಅಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ೧೯೫೮ರಲ್ಲಿ ನಂತರ ಅವರು ಇಂಗ್ಲೆಂಡಿಗೆ ಹಿಂತಿರುಗಿ, ಲಂಡನಿನಲ್ಲಿ ವಾಸಿಸಿದರು. ೧೯೬೦ರಲ್ಲಿ ಅವರ ಮಗಳಾದ ಫ್ರೀಡಾ ರೆಬೆಕ್ಕ ಹುಟ್ಟಿದರು. ೧೯೬೨ರಲ್ಲಿ ಅವರ ಮಗ ನಿಕೊಲಸ್ ಹುಟ್ಟಿದರು. ಆದರೆ ೧೯೬೨ ರಲ್ಲಿ ಹ್ಯೂಸ್ ಅವರು ಅಸ್ಸಿಯ ವೆವಿಲ್ ಅವರ ಪ್ರೇಮ ಪ್ರಸಂಗವನ್ನು ಪ್ರಾರಂಭಿಸಿದರು. ಈ ವಿಷಯ ತಿಳಿದ ನಂತರ ಸಿಲ್ವಿಯ ಅವರು ಹ್ಯೂಸ್ ಅವರಿಂದ ಬೇರೆಯಾಗಿ, ಅವರ ಮಕ್ಕಳೊಂದಿಗೆ ಇನ್ನೊಂದು ಮನೆಯಲ್ಲಿ ಜೀವನ ನಡೆಯಲಾರಂಭಿಸಿದರು. ಡಿಪ್ರೆಷನ್‌ಗೆ ಗುರಿಯಾಗಿ ೧೧ ಫಿಬ್ರವರಿ ೧೯೬೩ರಲ್ಲಿ ಸಿಲ್ವಿಯ ಪ್ಲಾತ್ ಅವರು ಆತ್ಮಹತ್ಯೆ ಮಾಡಿಕೊಂಡರು. ಅವರ ಆತ್ಮಹತ್ಯೆಗೆ ಹ್ಯೂಸ್ ಅವರೇ ಕಾರಣವೆಂದು ಅವರ ಅಭಿಮಾನಿಗಳು ಭಾವಿಸಿದರು. ೧೯೯೮ರಲ್ಲಿ ಪ್ರಕಟವಾದ 'ಬರ್ತ್‌ಡೇ ಲೆಟರ್ಸ್' (Birthday Letters) ಕಾವ್ಯಸಂಕಲನದಲ್ಲಿ ಹ್ಯೂಸ್ ಅವರು ತಮ್ಮ ಮತ್ತು ಸಿಲ್ವಿಯ ನಡುವಿನ ಸಂಕೀರ್ಣ ಸಂಬಧದ ಬಗ್ಗೆ ರಚಿಸಿದರು. ಆಗಸ್ಟ್ ೧೯೭೦ರಲ್ಲಿ ಹ್ಯೂಸ್ ಅವರು ಕ್ಯಾರಲ್ ಓರ್ಚಾರ್ಡ್ ಅವರನ್ನು ಮದುವೆಯಾದರು.
ಹ್ಯೂಸ್ ಅವರು ಕುರುಳಿನ ಕ್ಯಾನ್ಸರ್‌ಗಾಗಿ ಚಿಕಿತ್ಸೆಯನ್ನು ಪಡೆಯುತ್ತಿರುವಾಗ ೨೮ ಅಕ್ಟೋಬರ್ ೧೯೯೮ರಂದು ಹೃದಯಘಾತದಿಂದ ಮರಣಿಸಿದರು. ೨೦೦೯ರಲ್ಲಿ ಅವರ ಸಾಹಿತ್ಯ ಕೊಡುಗೆಯ ಮಹತ್ವವನ್ನು ಗೌರವಿಸುತ್ತಾ 'ಟೆಡ್ ಹ್ಯೂಸ್ ಪ್ರಶಸ್ತಿ'ಯನ್ನು ಪ್ರಾರಂಭಿಸಲಾಯಿತು. ೨೦೧೩ರಲ್ಲಿ ಅವರ ಹೆಂಡತಿಯಾದ ಕ್ಯಾರಲ್ ಹ್ಯೂಸ್ ಅವರು ತಮ್ಮ ಮತ್ತು ಹ್ಯೂಸ್ ಅವರ ಮದುವೆ ಮತ್ತು ಜೀವನದ ಬಗ್ಗೆ ಪುಸ್ತಕವನ್ನು ರಚಿಸುವರೆಂದು ಹೇಳಿದರು.
2021 Wikimedia Foundation Board elections: Eligibility requirements for voters
[ಬದಲಾಯಿಸಿ]Greetings,
The eligibility requirements for voters to participate in the 2021 Board of Trustees elections have been published. You can check the requirements on this page.
You can also verify your eligibility using the AccountEligiblity tool.
MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)
Note: You are receiving this message as part of outreach efforts to create awareness among the voters.