ಸದಸ್ಯರ ಚರ್ಚೆಪುಟ:Mariaalice22/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ತರ ಕನ್ನಡ ನಾಡು ನಮ್ಮದು ಸುಂದರವಾಗಿದೆ. ಮತ್ತು ಆ ನಾಡು ಮನಸ್ಸಿಗೆ ನೆಮ್ಮದಿ ತರುವಂತಹ ನಾಡಾಗಿದೆ. ಅದರಲ್ಲೂ ಕಡಲ ತೀರ ನೋಡಲು ತುಂಬಾ ವಿಸ್ಮಯಕಾರಿಯಾಗಿದೆ. ಈ ಕಡಲ ತೀರದ ಹತ್ತಿರವಿರುವ ಕಾರವಾರ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಎಂಬ ಊರು ತುಂಬಾ ರಮಣೀಯವಾಗಿದೆ.ಸುತ್ತಲೂ ನೀರಿನಿಂದ ಆವರಿಸಿದೆ.ಒಂದು ಕಡು ಶರಾವತಿ ನದಿ ಜುಳುಜುಳು ಹರಿದರೆ ಇನ್ನೊಂದು ಕಡೆ ಅರಬ್ಬೀ ಸಮುದ್ರ ತನ್ನ ನೀರಿನ ಅಲೆಯಿಂದ ಗೋರಿಸುತ್ತದೆ. ಹಾಗೂ ಪ್ರವಾಸಿತಾಣವಾಗಿರುವ ಈ ಪರಿಸರದ ವರ್ಣನೆ ಮಾಡಲು ಯಾರಿಂದಲೂ ಸಾಧ್ಯವಾಗದು. ಅಷ್ಟು ಸುಂದರ ಮತ್ತು ರಮಣೀಯವಾದ ಇದೇ ಊರಿನಲ್ಲಿ ಅಂದರೆ ಹೊನ್ನಾವರ ತಾಲೂಕಿನ ಕಾಸರಕೋಡನಲ್ಲಿ ನನ್ನ ಜನನವಾಯಿತು. ನನ್ನ ಹೆಸರು ಮರಿಯಾ. ಈಗ ನಾನು ಪ್ರಸ್ತುತ ಸಂತ್ ಅಲೋಶಿಯಸ್ ಕಾಲೇಜನಲ್ಲಿ ಪ್ರಥಮ ಬಿ.ಎ ಯನ್ನು ಮಾಡುತ್ತಿರುವೆನು.

       ನಾನು ನನ್ನ ಪ್ರಾಥಮಿಕ ಮತ್ತು ಪ್ರೊಢ ಶಾಲೆಯನ್ನು ಜನತಾವಿದ್ಯಾಲಯ ಕಾಸರಕೋಡಿನಲ್ಲಿ ಮುಗಿಸಿದೆನು. ನನ್ನ ಹವ್ಯಾಸಗಳೆಂದರೆ ದೇವರ ಹಾಡುಗಳನ್ನು ಕೇಳುವುದು, ಜೋಕ್ಸಗಳನ್ನು ಮಾಡುವುದು, ಅಂದರೆ  ಬೇರೆಯವರನ್ನ ನಗಾಡಿಸುವುದು, ಸಂಗೀತವನ್ನು ಕೇಳುವುದು ಇತ್ಯಾದಿ. ತ್ರೋ ಬಾಲ್ ಮತ್ತು ವಾಲಿಬಾಲ್ ಆಟಗಳು ನನ್ನ ಇಷ್ಟವಾದ ಆಟಗಳು.
    
        ನನ್ನ ಕುಟುಂಬದಲ್ಲಿ ತಂದೆ-ತಾಯಿ, ಅಕ್ಕ, ಅಣ್ಣಂದಿರು ಮತ್ತು ನಾನು.ಬಡತನದಲ್ಲಿ ಹುಟ್ಟಿ ಬೆಳೆದ ನನಗೆ ಬಡವರಿಗೋಸ್ಕರ ದುಡುಯುವ ಆಸೆಯೊಂದು ನನ್ನಲ್ಲಿ ಮನೆ ಮಾಡಿತು.ಈ ಆಸೆಯನ್ನು ಪೂರೈಸಿಕೊಳ್ಳಲು ನಾನು ಸಿ.ಸಿ.ಎಸ್.ಟಿ ಎಂಬ ಸಂಸ್ಥೆಯಲ್ಲಿ, ದೇವರ ಕರೆಗೆ ಓಗೊಟ್ಟು,"ಕರೆದೆ ನೀ ನನ್ನನ್ನು ಓ ದೇವನೇ, ನಿನ್ನ ಸೇವೆಗೆ ನಾನು ನನ್ನನ್ನೇ ಅಪಿಸುವೆನು" ಎಂದು ನುಡಿದು ನನ್ನ ಕನ್ಯಾ ಜೀವನವನ್ನು ಮುಂದುವರೆಸಿದೆ.ಇಲ್ಲಿ ಸಿಕ್ಕಂತಹ ತರಬೇತಿಗಳಿಂದ ಬಡವರಿಗೆ ಅದರಲ್ಲೂ ಬಡ ಮಕ್ಕಳಿಗೆ ವಿದ್ಯಾಬ್ಯಾಸವನ್ನು ಹೇಳಿಕೊಳ್ಳಲು ಸಾಧ್ಯವಾಯಿತು.ಮತ್ತು ನಾನು ಬೆಂಗಳೂರಿನ ಮೌಂಟ್ ಕಾರ್ಮಲ್  ಕಾಲೇಜಿನಲ್ಲಿ office staff ಆಗಿ ಸೇವೆಯನ್ನು ಸಲ್ಲಿಸಿದೆ. ಅಲ್ಲಿಯೂ ಕೂಡ ನನಗೆ ಬಡವರಿಗೆ ಸಹಾಯ ಮಾಡಲು ಸಾಧ್ಯವಾಯಿತು. ಹಾಗೆಯೇ ನನ್ನ ಆಸೆಯು ಕೂಡ ಇಡೇರಿಸಿತು. ಇದು ನನ್ನ ಜೀವನದ ಒಂದು ಪುಟ್ಟ ಪರಿಚಯ.
                                            == ಬೆಂಜಮಿನ್ ಲೂಯಿ ರೈಸ್ ==

ಶಿಕ್ಷಣ ಗ್ರಂಥ ಸಂಪಾದನೆ, ಪ್ರಾಚ್ಯವಸ್ತು ಸಂಶೋಧನೆ, ಶಾಸನಗಳ ಸಂಗ್ರಹ ಹಾಗೂ ಮುದ್ರಣಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿ ಪಂಪಭಾರತ, ಅಮರಕೋಶ,ಕರ್ನಾಟಕ ಭಾಷಾಭೂಷಣ, ಶಬ್ದಾನುಶಾಸನ ಹಾಗೂ ಎಪಿಗ್ರಾಫಿಯಾ ಕರ್ನಾಟಕ ಸಂಪುಟಗಳನ್ನು ಪ್ರಕಟಿಸುವುದರ ಮೂಲಕ ಕನ್ನಡ ಸಾಹಿತ್ಯ ಸಂಶೋಧನೆಯ ಕ್ಷೇತ್ರದಲ್ಲಿ ಅಗ್ರಗಣ್ಯರೆನಿಸಿದವರು ಬಿ.ಎಲ್. ರೈಸರು.

ಕೊಡುಗೆ:- ಶಿಕ್ಷಣ ಗ್ರಂಥ ಸಂಪಾದನೆ, ಗೆಜೆಟಿಯರ್ ಹಾಗೂ ಚಾರಿತ್ರಿಕ ಅಧ್ಯಯನಗಳ ಕ್ಷೇತ್ರದಲ್ಲಿ ರೈಸರು ಸಲ್ಲಿಸಿರುವ ಕೊಡುಗೆಗಳು ನಾಡಿನ ಇತಿಹಾಸದಲ್ಲಿ ಅವರ ಹೆಸರನ್ನು ಚಿರಸ್ಥಾಯಿಯನ್ನಾಗಿ ಮಾಡಿವೆ. ಶಿಕ್ಷಣಾಧಿಕಾರಿಗಳಾಗಿದ್ದಾಗ ಅವರು ಆರಂಭಿಸಿದ ಹೋಬಳಿ ಶಾಲೆಗಳಿಂದಾಗಿ ಮೈಸೂರು ಸಂಸ್ಥಾನದ ವಿದ್ಯಾವಂತರ ಸಂಖ್ಯೆ ಗಣನೀಯವಾಗಿ ಹೆಚ್ಚಿತು. ಮೈಸೂರಿಗೆ ಒಂದು ಪ್ರತ್ಯೇಕ ವಿಶ್ವವಿದ್ಯಾಲಯದ ಅವಶ್ಯ ಕತೆಯಿದೆಯೆಂಬ ಅರಿವು ಮೂಡುವಂತಾಯಿತು. ಪರಿಣಾಮವಾಗಿ ೧೯೧೬ರಲ್ಲಿ ಮೈಸೂರು ವಿಶ್ವವಿದ್ಯಾಲಯವು ತಲೆಯೆತ್ತಿತು.ಅವರು ರಚಿಸಿರುವ ಗೆಜೆಟಿಯರ್ ಸಂಪುಟಗಳು ಇಂದಿಗೂ ಪ್ರಸ್ತುತವೆನಿಸುವ ಆಕರಗ್ರಂಥಗಳಾಗಿವೆ.

ಗ್ರಂಥಸಂಪಾದನೆ:- ಕನ್ನಡದಲ್ಲಿ ಗ್ರಂಥಸಂಪಾದನೆಯ ಕಾರ್ಯವನ್ನು ಅರಂಭಿಸಿದವರಲ್ಲಿ ರೈಸರೂ ಒಬ್ಬರು. ಕನ್ನಡದ ಪ್ರಮುಖ ಕೃತಿಗಳಾದ ಪಂಪಭಾರತ, ಪಂಪರಾಮಾಯಣ,ಶಬ್ದಾನುಶಾಸನ, ಕವಿರಾಜಮಾರ್ಗ ಮುಂತಾದುವು ತಾಳೆಗರಿಯ ಹೊತ್ತಗೆಗಳಲ್ಲಿ ಉಳಿದು ಹೋಗಿ ಕತ್ತಲಲ್ಲಿ ಕೊಳೆಯುತ್ತಿರುವುದನ್ನು ಕಂಡು ವ್ಯಥಿತರಾದ ಅವರು 'ಬಿಬ್ಲಿಯಾಥಿಕಾ ಕರ್ನಾಟಕ' ಮಾಲೆಯಲ್ಲಿ ಹೊರಬರುವುದೂ ಅಷ್ಟೇ ಮುಖ್ಯ ಎಂಬುದು ಅವರ ನಿಲುವಾಗಿತ್ತು. ಪಂಪಭಾರತದ ಪ್ರಕಟಣೆಯ ಇತಿಹಾಸವನ್ನು ಗಮನಿಸಿದಾಗ ಈ ಅಂಶ ನಿಚ್ಚಳವಾಗುತ್ತದೆ.

ಕನ್ನಡದ ಆದಿಕವಿಯೆನಿಸಿದ ಪಂಪನ ವಿಕ್ರಮಾರ್ಜನವಿಜಯದ ಏಕೈಕ ಪ್ರತಿಯು ಬಹಳ ಹಿಂದೆಯೇ ದೊರೆತಿದ್ದರೂ ರೈಸರು ಪಾಠ ಪರಿಷ್ಕರಣೆಯ ಉದ್ದೇಶದಿಂದ ಅದನ್ನು ಪ್ರಕಟಿಸದೆ ಹಾಗೆಯೆ ಉಳಿಸಿಕೊಂಡಿದ್ದರು. ಕಡಗೆ ಬೇರೆ ಪ್ರತಿಗಳು ದೊರೆಯದೆ, ಇರುವ ಪ್ರತಿಯೂ ಹಾಳಾಗುವ ಸಂದರ್ಭ ಬಂದಾಗ ಅನಿವಾರ್ಯವಾಗಿ ೧೮೮೭ರಲ್ಲಿ ಅದನ್ನು ಸಾಧ್ಯವಿದ್ದಷ್ಟು ಪರಿಷ್ಕರಿಸಿ ಮುದ್ರಿಸಲು ಆರಂಭಿಸಲಾಯಿತು. ರೈಸರ ಅವಿರತ ಶ್ರಮದಿಂದಾಗಿ ಆರಂಭವಾದ ಪ್ರಾಚೀನ ಹಸ್ತಪ್ರತಿಗಳನ್ನು ಸಂಗ್ರಹಿಸುವ ಕಾರ್ಯ ವ್ಯಾಪಕವಾಗಿ ಮುಂದುವರಿದು ೧೮೮೭ರಲ್ಲಿ ಮೈಸೂರಿನ ಓರಿಯಂಟಲ್ ಲೈಬ್ರರಿಯ ಹುಟ್ಟಿಗೆ ಕಾರಣವಾಯಿತು. ಇಷ್ಟೇ ಅಲ್ಲದೆ ಗ್ರಂಥ ಸಂಪಾದನೆಯ ಕ್ಷೇತ್ರದಲ್ಲಿ ಸಮರ್ಥರಿನಿಸಿದ ಶಿಷ್ಯಪರಂಪರೆಯನ್ನು ಅವರು ಮೊದಲುಮಾಡಿದರು. 'ಕವಿರಾಜಮಾರ್ಗ'ವನ್ನು ಸಂಪಾದಿಸಿದ ಕೆ.ಬಿ. ಪಾಠಕ್. ಕರ್ನಾಟಕ ಕವಿಚರಿತೆಯ ಖ್ಯಾತಿಯ ಆರ್.ನರಸಿಂಹಾಚಾರ್ಯ, ಕರ್ನಾಟಕ ಕಾವ್ಯ ಕಲಾನಿಧಿ ಮಾಲೆಯ ಎಂ.ಎ ರಾಮಾನುಜಯ್ಯಂಗಾರ್ ಮುಂತಾದ ಅನೇಕರು ರೈಸರ ಮಾರ್ಗದರ್ಶನದಲ್ಲಿ ಮುಂದೆ ಸಾಗಿದವರೇ ಆಗಿದ್ದಾರೆ.

ಶಾಸನ ಶಾಸ್ತ್ರದಲ್ಲಿನ ರೈಸರ ಸಾಧನೆಗಳು ಅವರಿಗೆ ಅಂತರ ರಾಷ್ಟೀಯ ಮಟ್ಟದ ಖ್ಯಾತಿಯನ್ನು ತಂದಿತ್ತವು. ಅವರು ಟಂಕಿಸಿದ 'ಎಪಿಗ್ರಾಫಿಯ' ಎಂಬ ಶಬ್ದ ಇಂದು ವಿಶ್ವವ್ಯಾಪಿಯಾಗಿ ಬಳಕೆಯಲ್ಲಿದೆ. ಎಪಿಗ್ರಾಫಿಯ ಕರ್ನಾಟಕ ಸಂಪುಟಗಳನ್ನು ಸಂಪಾದಿಸುವಲ್ಲಿ ಅವರು ತೋರಿರುವ ವಿಶ್ಲೇಷಣಾತ್ಮಕ ಮನೋಭಾಬ ಹಾಗೂ ನಿಖರತೆಗೆ ಕೊಟ್ಟಿರುವ ಗಮನವು ಆನಂತರದಲ್ಲಿ ಪ್ರಕಟಿತವಾದ ಅನೇಕ ಈ ರೀತಿಯ ಗ್ರಂಥಮಾಲೆಗಳಿಗೆ ಮಾದರಿಯಾಗಿವೆ. ಇಂಡಿಯಾ ದೇಶದಲ್ಲಿ ಮತ್ತಾವ ರಾಜ್ಯವೂ, ಮತ್ತಾವ ವ್ಯಕ್ತಿಯೂ ಈ ಪ್ರಮಾಣದ ಶಾಸನಗಳನ್ನು ಪ್ರಕಟಿಸಿಲ್ಲ ಎಂಬ ಏಕೈಕ ಅಂಶವೇ ರೈಸರ ಹೆಗ್ಗಳಿಕೆಯನ್ನು ತೋರಿಸುತ್ತದೆ. ಜರ್ಮನಿಯ ಖ್ಯಾತ ವಿದ್ವಾಂಸರಾದ ವೆಬರ್ ಅವರು ಈ ಬಗ್ಗೆ ಆಡಿರುವ " A Splendid work of monumental character, that will bear your name to Uttarani ugani ಎಂಬ ಮಾತುಗಳು ರೈಸರ ಸಮಗ್ರ ಕೊಡುಗೆಯನ್ನು ಕುರಿತಾಗಿಯೂ ಅಕ್ಷರಶಃ ಸತ್ಯವಾಗಿದೆ.