ಸದಸ್ಯರ ಚರ್ಚೆಪುಟ:Madhushree12345

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭೂಮಿ - ಇದು ಸೌರಮಂಡಲದಲ್ಲಿ ೫ನೇ ಅತಿ ದೊಡ್ಡ ಗ್ರಹ. ಸೂರ್ಯನಿಂದ ಆರೋಹಣ ಕ್ರಮದಲ್ಲಿ ೩ನೇ ಗ್ರಹವಾಗಿದೆ. ಸೌರಮಂಡಲದ ಘನರೂಪಿ ಗ್ರಹಗಳಲ್ಲಿ ರಾಶಿ ಮತ್ತು ಗಾತ್ರದಿಂದ ಅತಿ ದೊಡ್ಡ ಗ್ರಹ, ಇದಲ್ಲದೆ, ಮಾನವರಿಗೆ ಈಗ ತಿಳಿದಿರು ವಂತೆ, ಇಡೀ ಬ್ರಹ್ಮಾಂಡದಲ್ಲೇ ಜೀವ ಸಂಕುಲವನ್ನು ಹೊಂದಿರುವ ಏಕೈಕ ಕಾಯ - ಭೂಮಿ. ಅಷ್ಟೇ ಅಲ್ಲ, ಇದರ ಸಾಂದ್ರತೆಯೂ ಅತಿ ಹೆಚ್ಚು.

ಇತಿವೃತ್ತ[ಬದಲಾಯಿಸಿ] ವೈಜ್ಞಾನಿಕ ಅಧ್ಯಯನದ ಪ್ರಕಾರ ಭೂಮಿಯು ೪೬೦ಕೋಟಿ ವರ್ಷಗಳ ಹಿಂದೆ ರೂಪು ಗೊಂಡಿತು.[೧] ಭೂಮಿಯ ನೈಸರ್ಗಿಕ ಉಪಗ್ರಹವಾದ ಚಂದ್ರ ಅದರ ಸ್ವಲ್ಪವೇ ನಂತರ, ಸುಮಾರು ೪೫೩ ಕೋಟಿ ವರ್ಷಗಳ ಹಿಂದೆ ರೂಪುಗೊಂಡಿತು.

ಪರಿಚಯ[ಬದಲಾಯಿಸಿ] ಭೂಮಿಯ ಚಿಪ್ಪು ಹಲವು ಫಲಕಗಳಾಗಿ ಒಡೆದಿದೆ. ಈ ಭೂಫಲಕಗಳು ನಿಧಾನವಾಗಿ ಭೂಮಿಯ ಅತ್ತಿಂದಿತ್ತ ಅಸ್ತೆನೋ ಗೋಳದ ಮೇಲೆ ಚಲಿಸುತ್ತವೆ. ಭೂಮಿಯ ಒಳಭಾಗವು ಇನ್ನೂ ಸಾಕಷ್ಟು ಚಟುವಟಿಕೆಗಳಿಂದ ಕೂಡಿದೆ. ಭೂಮಿಯ ಅತ್ಯಂತ ಮೇಲಿನ ಪದರ ಚಿಪ್ಪು. ಇದು ಸಿಲಿಕ -ಅಲ್ಯುಮಿನಿಯಂನಿಂದಾದ ಹೊರ¥Àಪದರ,, ಸಿಲಿಕ-ಮೆಗ್ಮೀನಿಸಿಯಂನಿಂದಾದ ಕೆಳಪದರದಿಂದ ಕೂಡಿದೆ. ಖಂಡದ ಕೆಳಗೆ ಚಿಪ್ಪು ಹೆಚ್ಚು ಮಂದವಿದೆ. ಆದರೆ ಸಾಗರದಡಿಯಲ್ಲಿ ತೆಳುವಾಗಿದೆ. ಕವಚವು ಅರೆಘನಸ್ಥಿತಿಯಲ್ಲಿದೆ.ಬಹುತೇಕ ಎಲ್ಲ ಲೋಹಗಳ ಭಂಡಾರವಿದು. ಭೂಗರ್ಭವು ಕಬ್ಬಿಣ ಮತ್ತು ನಿಕ್ಕಲ್ ನಿಂದ ನಿರ್ಮಿತವಾಗಿದೆ. ಭೂಮಿಯ ಕಾಂತಕ್ಷೇತ್ರದ ನೆಲೆ ಇದು. ಜೀವಸಂಕುಲಗಳ ಅಸ್ತಿತ್ವದ ಕಾರಣದಿಂದ ಭೂಮಿಯ ವಾಯುಮಂಡಲದ ಗುಣಲಕ್ಷಣಗಳು ಗಮನಾರ್ಹವಾಗಿ ಬದಲಾಗಿವೆ.

ಆಕಾರ[ಬದಲಾಯಿಸಿ] ಭೂಮಿಯ ಅಕಾರವು heಸರಿಸುಮಾರು ಹ್ರಸ್ವಾಕ್ಷ ಗೋಳಕಲ್ಪಎನ್ನಬಹುದು.. ಅಂದರೆ ಗೋಳಕಲ್ಪವು ಅದರ ಅಕ್ಷದ ದಿಶೆಯಲ್ಲಿ ಧ್ರುವದಿಂದ ಧ್ರುವಕ್ಕೆ ಚಪ್ಪಟೆಯಾಗಿದೆ. ಇದರ ಪರಿಣಾಮವಾಗಿ ಸಮಭಾಜಕ ವೃತ್ತದಲ್ಲಿ ಅದು ಉಬ್ಬಿದೆ. ಭೂಮಿಯ ಗಿರಕಿಯಿಂದಾಗಿ ಈ ಉಬ್ಬು ಮೈದಳೆದಿದೆ. ಈ ಕಾರಣಕ್ಕಾಗಿ ಸಮಭಾಜಕ ವೃತ್ತದಲ್ಲಿ ಇದರ ವ್ಯಾಸ ಧ್ರುವದಿಂದ ಧ್ರುವಕ್ಕೆ ಇರುವ ವ್ಯಾಸಕ್ಕಿಂತ 43 ಕಿ.ಮೀ. ಹೆಚ್ಚಾಗಿದೆ. ಈ ಅಂಶವನ್ನು ಪರಿಗಣಿಸಿದರೆ ಭೂ ರಾಶಿ ಕೇಂದ್ರದಿಂದ ಅತಿ ಎತ್ತರದ ಬಿಂದುವೆಂದರೆ ಈಕ್ವೇಡಾರ್ ನಲ್ಲಿರುವ ಚಿಂಬೊರಾಜೋ ಜ್ವಾಲಾಮುಖಿಯ ಶೃಂಗ. ಭೂಮಿಯ ಮೇಲ್ಮೈನಲ್ಲಿ ಅತ್ಯಧಿಕ ಸ್ಥಳೀಯ ವಿಚಲತೆಗಳೆಂದರೆ ಮೌಂಟ್ ಎವರೆಸ್ಟ್ (ಸ್ಥಳೀಯ ಸಾಗರ ಮಟ್ಟಕ್ಕಿಂತ ೮,೮೫೦ ಮೀ. ಮೇಲೆ) ಮತ್ತು ಮೇರಿಯಾನ ಕಂದಕ (ಸ್ಥಳೀಯ ಸಾಗರ ಮಟ್ಟಕ್ಕಿಂತ ೧೦,೯೨೪ ಮೀ. ಕೆಳಗೆ). ಆದ್ದರಿಂದ, ಒಂದು ಪರಿಪೂರ್ಣ ದೀರ್ಘವೃತ್ತಜಕ್ಕೆ ಹೋಲಿಸಿದರೆ, ಭೂಮಿಯು ಸುಮಾರು ೦.೧೭% [[:en:tolerance (engineering)ಆಕಾರ ವಕ್ರತೆಯನ್ನು ಹೊಂದಿದೆ. ಹೋಲಿಕೆಯಲ್ಲಿ, ಬಿಲಿಯರ್ಡ್ ಚೆಂಡುಗಳು ೦.೨೨%ಗಿಂತ ಕಡಿಮೆ ಆಕಾರ ವಕ್ರತೆಯನ್ನು ಹೊಂದಿರುತ್ತವೆ.