ಸದಸ್ಯರ ಚರ್ಚೆಪುಟ:MENE JACK

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪದರಹಿತ/ಮಾತಿಲ್ಲದ ಸಂವಹನ(ಸಂಜ್ಞಾ ಸಂಪರ್ಕ)

ಪದರಹಿತ ಸಂವಹನವೆಂದರೆ ಪದರಹಿತ ಸಂದೇಶಗಳನ್ನು ರವಾನಿಸುವ ಮತ್ತು ಸ್ವೀಕರಿಸುವ ಪ್ರಕ್ರಿಯೆಯಾಗಿದೆ. ಅಂಗಸನ್ನೆ, ದೇಹ ಭಾಷೆ ಅಥವಾ ಶಾರೀರಿಕ ನಿಲವು, ಮುಖಭಾವ , ಕಣ್ಣ ನೋಟವನ್ನೊಳಗೊಂಡ ನಡವಳಿಕೆ/ವರ್ತನೆ ಯಂತಹ ಸಾಮಾನ್ಯ ಸಂವಹನಕ್ಕಿಂತ ಹೆಚ್ಚಾಗಿ ಉಡುಪು, ಕೇಶ ವಿನ್ಯಾಸ, ವಾಸ್ತು-ಕಲೆ ವಿನ್ಯಾಸ ಅಥವಾ ಸಂಕೇತಗಳು ಮತ್ತು ಮಾಹಿತಿ ನಕ್ಷೆಗಳಂತಹ ಭೌತಿಕ ಸಂವಹನಗಳು ತಮ್ಮದೇ ಆದ ರೀತಿಯಲ್ಲಿ ಸಂದೇಶಗಳನ್ನು ರವಾನಿಸುತ್ತವೆ. ಪ್ರತಿಯೊಬ್ಬರ ದೈನಂದಿನ ಜೀವನದಲ್ಲಿನ ಅಳವಡಿಕೆಯಿಂದ ಹಿಡಿದು ರೋಮಾಂಚಕಾರಿ-ಭಾವಪೂರ್ಣ ಸಂದರ್ಭದವರೆಗೆ ಪದರಹಿತ ಸಂವಹನವು ಪ್ರಮುಖ ಪಾತ್ರ ವಹಿಸುವುದು.

ಭಾಷಣವೆಂದರೆ ಧ್ವನಿಯ ಗುಣಮಟ್ಟ, ಭಾವನೆ, ಮಾತನಾಡುವ ಶೈಲಿ, ಲಯಬದ್ಧತೆ, ಧ್ವನಿಯ ಏರಿಳಿತ ಮತ್ತು ಒತ್ತು ನೀಡುವಿಕೆಯಂತಹ ಛಂದಸ್ಸಿನ ಲಕ್ಷಣಗಳು ಸೇರಿದಂತೆ ಪೂರಕ ಭಾಷೆಯಂತಿರುವ ಪದರಹಿತ ಸಂವಹನದ ಅಂಶಗಳನ್ನು ಒಳಗೊಂಡಿರುತ್ತದೆ. ಹಾಗೆಯೇ, ಬರೆದ ಪಠ್ಯವು ಸಹ ಬರವಣಿಗೆ ಶೈಲಿ, ಪದಗಳ ಜೋಡಣೆ ಅಥವಾ ಎಮೋಟಿಕಾನ್‌ಗಳ(ಭಾವನೆಗಳನ್ನು ಸ್ಫುರಿಸುವ ಸಂಜ್ಞಾರೂಪಗಳು) ಬಳಕೆಯು ಪದ-ಶಬ್ದರಹಿತ ಅಂಶಗಳನ್ನು ಒಳಗೊಂಡಿರುತ್ತದೆ. ಈ ಪದವು ಎಮೋಷನ್‌ (ಅಥವಾ ಎಮೋಟ್‌) ಮತ್ತು ಐಕಾನ್‌ ಎಂಬ ಪದಗಳಿಂದ ರಚನೆಯಾಗಿದೆ. ಎಮೋಟಿಕಾನ್‌ ಎಂದರೆ ಬರಹ ಅಥವಾ ಸಂದೇಶ ಪ್ರಕಾರದಲ್ಲಿ ಭಾವನೆಗೆ ಸಂಬಂಧಿಸಿದ ವಿಷಯವನ್ನು ವ್ಯಕ್ತಪಡಿಸಲು ಬಳಸುವ ಸಂಕೇತ ಅಥವಾ ಸಂಕೇತಗಳ ಸಮೂಹವಾಗಿದೆ.

ಎಮೋಟಿಕಾನ್‌ ಪರ್ಯಾಯ ಮಾಧ್ಯಮ-ವಾಹಕಗಳ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಭಾವನೆಗಳ ಸಂಕೇತಗಳನ್ನು ರವಾನಿಸುವ ಟೆಲಿಗ್ರಾಫಿ(ವಿದ್ಯುತ ತಂತಿಗಳ ಮೂಲಕ ಸಂದೇಶ) ಯಂತಹ ಇತರ ಸಂವಹನಗಳಿಗೆ ಸೂಕ್ತವಾಗಿದೆ. ಇದು ಸಾಂಕೇತಿಕ ಪದ, ವಿಷಯ ಅಥವಾ ಸ್ವಲ್ಪ ಮಟ್ಟಿನ ಯೋಚನೆಗಳನ್ನು ಪ್ರತಿನಿಧಿಸುತ್ತದೆ. ಇದೇ ರೀತಿ ಮಾನವನು ಆಂಗಿಕ ಭಾಷೆ, ಧ್ವನಿ ಶೈಲಿ ಮಾರ್ಪಾಡು ಮತ್ತು ಪದಗಳಿಲ್ಲದೆ ನೇರವಾಗಿ ಸಂವಹನ ನಡೆಸಬಹುದೆಂದು ಪ್ರಯೋಗಗಳಿಂದ ಸಾಬೀತಾಗಿದೆ.

ಇ-ಕಾಮರ್ಸ್ ಪ್ರಕಾರಗಳು

ಆಧುನಿಕ ಇಲೆಕ್ಟ್ರಾನಿಕ್ ವ್ಯವಹಾರವು ತಕ್ಷಣದ ಆನ್ಲೈನ್ ಬಳಕೆಯಾದ(ಡಿಜಿಟಲ್ ) "ಅಂಕೀಯ" ವಸ್ತುಗಳ ಬೇಡಿಕೆಯಿಂದ ಹಿಡಿದು ಸಾಂಪ್ರದಾಯಿಕ ಸರಕುಗಳು ಹಾಗು ಸೇವೆಗಳ ಬೇಡಿಕೆಯವರೆಗೆ ಹಾಗು ಇಲೆಕ್ಟ್ರಾನಿಕ್ ವ್ಯವಹಾರದ ಇತರ ವಿಧಾನಗಳನ್ನು ಸುಲಭಗೊಳಿಸುವ "ಮೆಟಾ" ಸೇವೆಗಳೆಲ್ಲವನ್ನು ಒಳಗೊಂಡಿದೆ. ಗ್ರಾಹಕ ಮಟ್ಟದಲ್ಲಿ, ಇಲೆಕ್ಟ್ರಾನಿಕ್ ವ್ಯವಹಾರವನ್ನು ಸಾಮಾನ್ಯವಾಗಿ ವರ್ಲ್ಡ್ ವೈಡ್ ವೆಬ್ ನಲ್ಲಿ ನಡೆಸಲಾಗುತ್ತದೆ. ಒಬ್ಬ ವ್ಯಕ್ತಿಯು ಆನ್ಲೈನ್ ನಲ್ಲಿ ಪುಸ್ತಕಗಳಿಂದ ಹಿಡಿದು ದಿನಸಿಯವರೆಗೆ, ದುಬಾರಿ ವಸ್ತುಗಳಾದ ರಿಯಲ್ ಎಸ್ಟೇಟ್ ತನಕ ಯಾವುದನ್ನಾದರೂ ಖರೀದಿಸಬಹುದಾಗಿದೆ. ಮತ್ತೊಂದು ಉದಾಹರಣೆಯೆಂದರೆ ಆನ್ಲೈನ್ ಬ್ಯಾಂಕಿಂಗ್, ಅದೆಂದರೆ ಆನ್ಲೈನ್ ನಲ್ಲಿ ಬಿಲ್ ಪಾವತಿ, ಸಾಮಾನು ಖರೀದಿ, ಒಂದು ಅಕೌಂಟ್ ನಿಂದ ಮತ್ತೊಂದಕ್ಕೆ ಹಣದ ವರ್ಗಾವಣೆ, ಹಾಗು ಮತ್ತೊಂದು ದೇಶಕ್ಕೆ ತಂತಿಯ ಮೂಲಕ ಹಣವನ್ನು ಪಾವತಿಸಲು ಉಪಕ್ರಮಿಸುವುದು ಸೇರಿದೆ. ಈ ಎಲ್ಲ ಚಟುವಟಿಕೆಗಳನ್ನು ಕೀಬೋರ್ಡ್ ನ ಮೂಲಕ ಕೆಲವೇ ಕ್ಷಣದಲ್ಲಿ ಮಾಡಬಹುದಾಗಿದೆ. ಸಾಂಘಿಕ ಮಟ್ಟದಲ್ಲಿ, ದೊಡ್ಡ ಸಂಸ್ಥೆಗಳು ಹಾಗು ಹಣಕಾಸು ಸಂಸ್ಥೆಗಳು, ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ವ್ಯವಹಾರಗಳನ್ನು ಸುಲಭಗೊಳಿಸುವ ಸಲುವಾಗಿ ಅಂತರ್ಜಾಲದಲ್ಲಿ ಹಣಕಾಸಿನ ಡಾಟಾವನ್ನು(ಅಂಕಿಅಂಶ) ವಿನಿಮಯ ಮಾಡಿಕೊಳ್ಳುತ್ತವೆ. ಡಾಟಾ ಸಮಗ್ರತೆ ಹಾಗು ಭದ್ರತೆಗೆ ಇಂದಿನ ಇಲೆಕ್ಟ್ರಾನಿಕ್ ವ್ಯವಹಾರದಲ್ಲಿ ತುಂಬಾ ಗಾಢವಾದ ಹಾಗು ಒತ್ತುಕೊಡುವಂತಹ ವಿಷಯವಾಗಿದೆ.

ಇ-ಕಾಮರ್ಸ್

ಪ್ರಕಾರಗಳು