ಸದಸ್ಯರ ಚರ್ಚೆಪುಟ:Krishnaprashanthv

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಶ್ರೀ ಕೃಷ್ಣ ಪಾರಿಜಾತ[ಬದಲಾಯಿಸಿ]

ಶ್ರೀ ಕೃಷ್ಣ ಪಾರಿಜಾತದ ಕಥೆ ಪ್ರಾಚೀನವಾದುದು. ಅಷ್ಟೇ ಜನಪ್ರಿಯವಾದುದು. ಭಾಗವತ ಹರಿವಂಶಗಳಲ್ಲಿ ನಿರೂಪಿತವಾಗಿರುವ ಕಥಾಂಶ ಮುಂದೆ ಹಲವು ಸ್ವತಂತ್ರ ರಚನೆಗಳಿಗೆ ವಸ್ತುವಾಯಿತು. ಕನ್ನಡದಲ್ಲಿ ಮೊದಲು ಈ ಕಥೆ ಕಂಡುಬರುವುದು 'ಜಗನ್ನಾಥ ವಿಜಯ'ದಲ್ಲಿ. ಪ್ರಸನ್ನ ವೆಂಕಟದಾಸರು 'ಕೃಷ್ಣ ಪಾರಿಜಾತ' ಎಂಬ ಲಘು ಕಾವ್ಯ ಬರೆದಿದ್ದಾರೆ. ಆ ಹೊತ್ತಿಗಾಗಲೇ ಕನ್ನಡದಲ್ಲಿ ಯಕ್ಷಗಾನ ಸಾಹಿತ್ಯ ತನ್ನ ನೆಲೆ ಕಂಡುಕೊಂಡಿತ್ತು. ಮಧ್ಯಮ ವರ್ಗದ ಕವಿಗಳ ದಂಡು ಯಕ್ಷಗಾನಕ್ಕೆ ಪ್ರವೇಶಿಸಿ ಸಮೃಧ್ಧವಾದ ಸಾಹಿತ್ಯ ರಚಿಸಿದರು. ಅವರಿಗೆಲ್ಲಅ ಈ ಪಾರಿಜಾತದ ಕಥೆ ಆಕಷ‍ಕವೆನಿಸಿತು. ಆಕಷ‍ಣೆ ಹೆಚ್ಚಾದಂತೆ ಮೂಲಕಥೆಯನ್ನು ವೈವಿಧ್ಯಮಯವಾಗಿ ಬೆಳೆಸಿಕೊಳ್ಳುವ ಪ್ರವೃತ್ತಿಯೂ ಬೆಳೆಯಿತು. ರಾಮ ಪಾರಿಜಾತ, ವೀರಭದ್ರ ಪಾರಿಜಾತ ಮುಂತಾದ ೩೫ ಪಾರಿಜಾತ ಕೃತಿಗಳು ರಚನೆಗೊಂಡಿವೆ.