ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Karthik960/ನನ್ನ ಪ್ರಯೋಗಪುಟ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಯಾತೊಲ್ಲಾ ಸಯ್ಯದ್ ರುಹೊಲ್ಲಾ ಮೂಸಾವಿ ಕೊಮೆನಿಯು ಸೆಪ್ಟೆಂಬರ್ ೨೪,೧೯೦೨ರಲ್ಲಿ ಕೊಮ್ಯಾನ್ ಎಂಬ ಪರ್ಷಿಯನ್ ರಾಜ್ಯದಲ್ಲಿ ಜನಿಸಿದನು. ಈತನನ್ನು ಪಾಶ್ಚಾತ್ಯರು"ಆಯಾತೊಲ್ಲಾ ಕೊಮೆನಿ" ಎಂದು ಕರೆಯುತ್ತಾರೆ. ಈತನು ಇರಾನಿನ ಶಿಯಾ ಪಂಥದ ಧರ್ಮಗುರು, ಕ್ರಾಂತಿಕಾರಿ, ಮತ್ತು ರಾಜಕಾರಿಣಿ."ಇಸ್ಲಾಮಿಕ್ ರಿಪಬ್ಲಿಕ್ ಆಪ್ ಇರಾನ್" ಪಕ್ಷದ ಸಂಸ್ಥಾಪಕ. ೧೯೭೯ರಲ್ಲಿ ಇರಾನ್ ಕ್ರಾಂತಿಯ ರೂವಾರಿ.ಇದರ ಮೂಲಕ ಪಹ್ಲವಿ ರಾಜಮನೆತನದ ಆಡಳಿತವನ್ನು ಕೊನೆಗೊಳಿಸಿದ ಈ ಕ್ರಾಂತಿಯ ಮುಖಾಂತರ ಕೊಮೆನಿ ಇರಾನಿನ "ಸರ್ವೋಚ್ಚ ನಾಯಕ" ನಾದನು.ಈ ಸ್ಥಾನವನ್ನು ಇಸ್ಲಾಮಿಕ್ ರಿಪಬ್ಲಿಕ್ ಪಕ್ಷ ಅಳವಡಿಸಿದ ಸಂವಿಧಾನದ ಮುಖಾಂತರ ಈ ಸ್ಥಾನವನ್ನು ಅಂಗಿಕರಿಸಲಾಯಿತು. ರುಹೊಲ್ಲಾ ಕೊಮೆನಿ ಎಂಬುದು ಪರ್ಷಿಯನ್ ಹೆಸರಾಗಿದ್ದು ಅರ್ಥ "ಭಕ್ತಿಯೋಗ' ಎಂಬುದಾಗಿದೆ. ಈತನನ್ನು ತಾಯಿಯಾದ ಹಜೀರ್ ಆಘಾಖಾನಮ್ ಮತ್ತು ಚಿಕ್ಕಮ್ಮಳಾದ ಸಹೇಬತ್ ರ ಅಡಿಯಲ್ಲಿ ಬೆಳೆದನು. ಈತ ಹುಟ್ಟಿದ ೫ ತಿಂಗಳ ನಂತರ ಈತನ ತಂದೆಯ ಕೊಲೆಯಾಯಿತು. ಕೊಮೆನಿಯು ತನಗೆ ೫ ವರ್ಷಗಳಿದ್ದಾಗ ಕುರಾನಿನ ಅದ್ಯಯನವನ್ನು ಆರಂಭಿಸಿದ ಮತ್ತು ೬ವರ್ಷಗಳಿದ್ದಾಗ ಪಷಿಯನ್ ಭಾಷೆಯ ಅಧ್ಯಯನವನ್ನು ಆರಂಬಿಸಿದನು.

Start a discussion about ಸದಸ್ಯ:Karthik960/ನನ್ನ ಪ್ರಯೋಗಪುಟ

Start a discussion