ಸದಸ್ಯರ ಚರ್ಚೆಪುಟ:Joylinedsouza

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರೊ.ಟಿ.ಎಲ್ಲಪ್ಪ ರವರು ೨.೧೦.೧೯೭೦ರಲ್ಲಿ ಜನಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎ.ನಾರಾಯಣಪುರದಲ್ಲಿ ಶ್ರೀಮತಿ ಮುನಿಯಮ್ಮ-ಶ್ರೀ ತಾಯಪ್ಪ ಎಂಬ ಕ್ರಷಿಕಾರ್ಮಿಕ ದಂಪತಿಗಳ ಮಗನಾಗಿ ದಲಿತ ಕುಟುಂಬದಲ್ಲಿ ಜನಿಸಿದರು. ಪ್ರೌಢಶಾಲಾ ದಿನಗಳಿಂದಲೇ ಕವಿತಾ ರಚನೆಯಲ್ಲಿ ಆಸಕ್ತಿ ಹೊಂದಿದ್ದ ಎಲ್ಲಪ್ಪ ಅನೇಕ ಪ್ರತಿಷ್ಠಿತ ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಪ್ರತಿಭಾವಂತ. ೨೨ರ ಅಳಲು (ಲಲಿತ ಪ್ರಬಂಧ) ಕಡಲಿಗೆ ಕಳಿಸಿದ ದೀಪ, ಚಿಟ್ಟೆ ಮತ್ತು ಜೀವಯಾನ, ನವಿಲಿಗೆ ಬಿದ್ದ ಕತ್ತಲ ಕನಸು (ಕವಿತಾ ಸಂಕಲನಗಳು ) ಇತ್ಯಾದಿ ಕ್ರತಿಗಳನ್ನು ಹೊರತಂದಿದ್ದಾರೆ. "ಕಡಲಿಗೆ ಕಳಿಸಿದ ದೀಪ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪುರಸ್ಕಾರ ಪಡೆದಿರುವ ಶ್ರೀಯುತರು ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಚೆನ್ನವೀರ ಕಣವಿ ಕಾವ್ಯ ಪ್ರಶಸ್ತಿಗಳನ್ನು ಪಡೆದಿರುವರು. ಇವರ "ಕಡಲಿಗೆ ಕಳಿಸಿದ ದೀಪ" ಕೃತಿಯು "ಆಂಕ್ಲೆಟ್ಸ್" ಎಂಬ ಶೀರ್ಶಿಕೆಯಲ್ಲಿ ಇಂಗ್ಲೀಷ್ಗೆ ಭಾಷಾಂತರಗೊಂಡಿದೆ. "ಚಿಟ್ಟೆ ಮತ್ತು ಜೀವಯಾನ" ಕೃತಿಗೆ ವೀಚೀ ಕಾವ್ಯ ಪುರಸ್ಕಾರ ಮತ್ತು ಹರಿಹರ ಶ್ರೀ ಕಾವ್ಯ ಪುರಸ್ಕಾರಗಳು ಲಭಿಸಿವೆ. ಪ್ರಸ್ತುತ ಬೆಂಗಳೂರಿನ ಕೆ.ಆರ್.ಪುರಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.