ಸದಸ್ಯರ ಚರ್ಚೆಪುಟ:John britto maari/ನನ್ನ ಪ್ರಯೋಗಪುಟ/2

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  ಜಾಗತಿಕ ತಾಪಮಾನ 
ಏರಿಕೆ ಯೆಂದರೆ ೨೦ನೇ ಶತಮಾನದ ಮಧ್ಯಭಾಗದಲ್ಲಿ ಭೂಮಿಯ ಮೇಲ್ಮೈ ಸಮೀಪದಲ್ಲಿರುವ ವಾಯು ಮತ್ತು ಸಾಗರ ಪ್ರದೇಶಗಳಲ್ಲಿ ಆದ ಸರಾಸರಿ ತಾಪಮಾನದ ಏರಿಕೆ ಹಾಗೂ ಅದರ ಪ್ರಕ್ಷೇಪಿತ ಮುಂದುವರಿಕೆ. ಜಾಗತಿಕ ಮೇಲ್ಮೈ ಉಷ್ಣತೆಯು ಕಳೆದ ಶತಮಾನದಲ್ಲಿ 0.74 ± 0.18 °C (1.33 ± 0.32 °F)ರಷ್ಟು ಹೆಚ್ಚಿದೆ. ಹವಾಮಾನ ಬದಲಾವಣೆಯ ಕುರಿತಾದ ಅಂತರ-ಸರಕಾರಿ ಮಂಡಳಿಯು ಅಗೆದು ತೆಗೆದ ಇಂಧನಗಳು ಮತ್ತು ಅರಣ್ಯನಾಶಗಳಂತಹಾ ಮಾನವ ಚಟುವಟಿಕೆಗಳಿಂದಾದ ಹಸಿರುಮನೆ ಅನಿಲಗಳ ಸಂಗ್ರಹದ ಹೆಚ್ಚಳವು ೨೦ನೇ ಶತಮಾನದ ಮಧ್ಯಕಾಲದ ನಂತರದ ತಾಪಮಾನ ಏರಿಕೆಗೆ ಕಾರಣವೆಂದು ತೀರ್ಮಾನಕ್ಕೆ ಬಂದಿದೆ. ಸೌರ ವಿಕಿರಣಗಳ ಪ್ರಸರಣ ಮತ್ತು ಅಗ್ನಿಪರ್ವತಗಳಂತಹಾ ನೈಸರ್ಗಿಕ ವೈಪರೀತ್ಯಗಳು ಕೈಗಾರಿಕಾ ಯುಗಕ್ಕೂ ಹಿಂದಿನ ಕಾಲದಿಂದ ೧೯೦ರವರೆಗಿನ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದ್ದುದಲ್ಲದೇ, ನಂತರ ಅಲ್ಪ ಪ್ರಮಾಣದಲ್ಲಿ ತಂಪಾಗಲೂ ನೆರವಾಯಿತು ಎಂದೂ ಐಪಿಸಿಸಿ ವಿಶ್ಲೇಷಿಸಿದೆ. ಈ ಪ್ರಾಥಮಿಕ ತೀರ್ಮಾನಗಳನ್ನು ಎಲ್ಲಾ ಪ್ರಮುಖ ಕೈಗಾರಿಕಾ ರಾಷ್ಟ್ರಗಳ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಗಳೂ ಸೇರಿದಂತೆ [ವಾತಾವರಣ ಬದಲಾವಣೆಯ ಬಗ್ಗೆ ವೈಜ್ಞಾನಿಕ ಅಭಿಪ್ರಾಯ ೪೦ಕ್ಕೂ ಹೆಚ್ಚು ವೈಜ್ಞಾನಿಕ ಸಮುದಾಯಗಳು ಮತ್ತು ವೈಜ್ಞಾನಿಕ ಅಕಾಡೆಮಿಗಳು ಅನುಮೋದಿಸಿವೆ]. ಅಲ್ಪ ಸಂಖ್ಯೆಯ ಕೆಲ ವಿಜ್ಞಾನಿಗಳು ಈ ಬಹುಮತ ಅಭಿಪ್ರಾಯದ ಬಗ್ಗೆ ಭಿನ್ನಮತ ಹೊಂದಿದ್ದಾರೆ.

ಇತ್ತೀಚಿನ ಐಪಿಸಿಸಿ ವರದಿಯಲ್ಲಿನ ಹವಾಮಾನದ ಮಾದರಿ ಪ್ರಕ್ಷೇಪಗಳ ಪ್ರಕಾರ ಜಾಗತಿಕ ಮೇಲ್ಮೈ ಉಷ್ಣತೆಯು ಬಹುಶಃ ಇನ್ನೂ 1.1 to 6.4 °C(2.0 to 11.5 °F)ರಷ್ಟು ಇಪ್ಪತ್ತೊಂದನೇ ಶತಮಾನದಲ್ಲಿ ಹೆಚ್ಚಳವಾಗಲಿದೆ. ಆದರೆ ಈ ಅಂದಾಜಿನಲ್ಲಿನ ಅನಿಶ್ಚಿತತೆಯು ವಿಶ್ಲೇಷಣೆಗೆ ಬಳಸಿದ ವಿವಿಧ ಮಾದರಿಗಳಲ್ಲಿನ ಹಸಿರುಮನೆ ಅನಿಲಗಳ ಸಂಗ್ರಹದ ಬಗೆಗಿನ ಸಂವೇದನೆಗಳಲ್ಲಿನ ವ್ಯತ್ಯಾಸಗಳು ಮತ್ತು ಭವಿಷ್ಯದ ಹಸಿರುಮನೆ ಅನಿಲಗಳ ಉತ್ಪಾದನೆಯ ಪ್ರಮಾಣದ ಅಂದಾಜುಗಳಲ್ಲಿನ ವ್ಯತ್ಯಾಸದಿಂದುಂಟಾಗಿದೆ. ಇನ್ನಿತರ ಅನಿಶ್ಚಿತತೆಗಳೆಂದರೆ ವಿಶ್ವದಾದ್ಯಂತ ತಾಪಮಾನ ಹೆಚ್ಚಳ ಹಾಗೂ ಸಂಬಂಧಿತ ಬದಲಾವಣೆಗಳು ಪ್ರದೇಶದಿಂದ ಪ್ರದೇಶಕ್ಕೆ ಎಷ್ಟರಮಟ್ಟಿಗೆ ವ್ಯತ್ಯಾಸವಾಗಬಹುದು ಎಂಬುದು. ಹೆಚ್ಚಿನ ಅಧ್ಯಯನಗಳು 2100ನೇ ಇಸವಿಯವರೆಗಿನ ಅವಧಿಯನ್ನು ಗುರಿಯಾಗಿಸಿಕೊಂಡಿವೆ. ಈ ಹೊರಸೂಸುವಿಕೆಯು ನಿಂತರೂ ಕೂಡಾ 2100ರ ನಂತರವೂ ತಾಪಮಾನ ಹೆಚ್ಚಳವು ಮುಂದುವರೆಯಲಿದ್ದು ಅದಕ್ಕೆ ಮುಖ್ಯ ಕಾರಣ, ಸಾಗರಗಳ ಅಗಾಧ ಉಷ್ಣತೆಯನ್ನು ಕಾಪಿಟ್ಟುಕೊಳ್ಳಬಲ್ಲ ಹಾಗೂ ಇಂಗಾಲದ ಡೈಆಕ್ಸೈಡ್‌ನ ವಾತಾವರಣದಲ್ಲಿ ದೀರ್ಘಕಾಲ ಇರಬಲ್ಲ ಸಾಮರ್ಥ್ಯಗಳು. ಉಷ್ಣತೆಯ ಬದಲಾವಣೆಗಳು ಭೂಮಿಯ ಮೇಲ್ಮೈ ಸಮೀಪದಲ್ಲಿನ ಜಾಗತಿಕ ಉಷ್ಣತೆಯ ಸರಾಸರಿಯಲ್ಲಿನ ಪ್ರವೃತ್ತಿಯನ್ನು ಸಾಧಾರಣವಾಗಿ ಜಾಗತಿಕ ತಾಪಮಾನ ಏರಿಕೆಯ ಮಾಪನವನ್ನಾಗಿ ಬಳಸಲಾಗುತ್ತದೆ. ರೇಖೀಯ ಪ್ರವೃತ್ತಿಯ ವ್ಯಕ್ತಪಡಿಸುವಿಕೆಯಲ್ಲಿ ೧೯೦೬-೨೦೦೫ರ ಅವಧಿಯಲ್ಲಿ ಈ ತಾಪಮಾನವು 0.74 °C ±0.18 °Cರಷ್ಟು ಹೆಚ್ಚಳವನ್ನು ಕಂಡಿದೆ. ಆ ಕಾಲಾವಧಿಯ ಕಡೆಯ ೫೦ ವರ್ಷಗಳಲ್ಲಿನ ತಾಪಮಾನ ಹೆಚ್ಚಳದ ಪ್ರಮಾಣವು ಬಹುಪಾಲು ಇಡೀ ಕಾಲಾವಧಿಯಲ್ಲಾದ ಹೆಚ್ಚಳದ ಎರಡರಷ್ಟಾಗುತ್ತದೆ (ಕಡೆಯ ಪ್ರತಿ ದಶಕದ ಹೆಚ್ಚಳ 0.13 °C ±0.03 °C ಆಗಿದ್ದರೆ, ಇಡೀ ಕಾಲಾವಧಿಯ ಹೆಚ್ಚಳ ಪ್ರತಿ ದಶಕದ ಹೆಚ್ಚಳ 0.07 °C ± 0.02 °Cರಷ್ಟಿತ್ತು). 1900 ರಿಂದ ಪ್ರತಿ ದಶಕಕ್ಕೆ 0.002 °Cರಷ್ಟು ಹೆಚ್ಚಳವು ನಗರ ಪ್ರದೇಶಗಳ ಉಷ್ಣ ದ್ವೀಪಪರಿಣಾಮದಿಂದಾಗಿದೆಯೆಂದು ಅಂದಾಜಿಸಲಾಗಿದೆ. ಉಪಗ್ರಹ ಉಷ್ಣತಾ ಮಾಪನಗಳ ಪ್ರಕಾರ 1979ರಿಂದ ಕೆಳಮಟ್ಟದ ಹವಾಗೋಳದಲ್ಲಿನ ತಾಪಮಾನವು 0.12ರಿಂದ 0.22 °Cವರೆಗೆ (0.22ರಿಂದ 0.4 °Fವರೆಗೆ) ಹೆಚ್ಚಳ ಕಂಡಿದೆ. 1850ರ ಮುಂಚೆ ಸಾವಿರ ಇಲ್ಲವೇ ಎರಡು ಸಾವಿರ ವರ್ಷಗಳ ಕಾಲ ತಾಪಮಾನವು ಮಧ್ಯಯುಗದ ಉಷ್ಣ ಕಾಲಾವಧಿ ಇಲ್ಲವೇ ಕಿರು ಹಿಮಯುಗದ ಹಾಗೆ ಪ್ರದೇಶವಾರು ವ್ಯತ್ಯಾಸದೊಂದಿಗೆ ಸಾಪೇಕ್ಷ ಸ್ಥಿರತೆಯನ್ನು ಕಂಡುಕೊಂಡಿತ್ತು. ೧೮೦೦ರ ಶತಮಾನದ ಉತ್ತರಾರ್ಧದಲ್ಲಿ, ವಿಶ್ವಾಸಾರ್ಹ ಉಪಕರಣಗಳ ಮೂಲಕ ಪತ್ತೆಹಚ್ಚಲು ಸಾಧ್ಯವಾದ ಕಾರಣ, ನಾಸನ ಗೊಡ್ಡಾರ್ಡ್‌ಇನ್‌ಸ್ಟಿಟ್ಯೂಟ್‌ಫಾರ್ ಸ್ಪೇಸ್‌ಸ್ಟಡೀಸ್‌ನ ಅಂದಾಜಿನ ಪ್ರಕಾರ 1998ರ ದಾಖಲೆಯ ತಾಪಮಾನವನ್ನು ಡಿಗ್ರಿಯ ಕೆಲ ಶತಾಂಶಗಳಷ್ಟು ಹಿಂದಿಕ್ಕಿ 2005ನೇ ವರ್ಷ ಇದುವರೆಗಿನ ಅತಿ ಹೆಚ್ಚು ಉಷ್ಣತೆಯ ವರ್ಷವಾಗಿದೆ. ವಿಶ್ವ ಪವನಶಾಸ್ತ್ರ ಸಂಸ್ಥೆ ಹಾಗೂ ಹವಾಗುಣ ಸಂಶೋಧನಾ ವಿಭಾಗಗಳು ಸಿದ್ಧಪಡಿಸಿದ ಅಂದಾಜಿನ ಪ್ರಕಾರ ೧೯೯೮ ರ ನಂತರ ೨೦೦೫ ಅತೀವ ತಾಪಮಾನ ಹೊಂದಿದ ವರ್ಷವೆನ್ನಲಾಗಿದೆ. ೧೯೯೮ರ ಲ್ಲಿ ಆ ಶತಮಾನದಲ್ಲೇ ಶಕ್ತಿಶಾಲಿಯಾದದ್ದು ಎನ್ನಲಾದ ಎಲ್‌ನಿನೊದ ಹಾವಳಿಯಿಂದಾಗಿ ತಾಪಮಾನವು ಅಸಹಜ ಪ್ರಮಾಣವನ್ನು ಮುಟ್ಟಿತ್ತು. ಹಸಿರುಮನೆ ಅನಿಲಗಳು ವಾಯುಮಂಡಲದಲ್ಲಿನ ಅನಿಲಗಳಿಂದಾಗುವ ಅವಗೆಂಪು ವಿಕಿರಣಗಳ ಹೀರುವಿಕೆ ಹಾಗೂ ಹೊರಸೂಸುವಿಕೆಯು ಗ್ರಹವೊಂದರ ಕೆಳಮಟ್ಟದ ವಾಯುಮಂಡಲ ಹಾಗೂ ಮೇಲ್ಮೈಯ ಉಷ್ಣತೆಯನ್ನು ಹೆಚ್ಚಿಸುವ ಪ್ರಕ್ರಿಯೆಯನ್ನು ಹಸಿರುಮನೆ ಪರಿಣಾಮವೆನ್ನುತ್ತಾರೆ. ಈ ವಿಚಾರವನ್ನು ೧೮೨೪ರಲ್ಲಿ ಮೊದಲಿಗೆ ಜೋಸೆಫ್‌ಫ್ಯೂರಿಯರ್ ಪತ್ತೆಹಚ್ಚಿದರು. ನಂತರ ೧೮೯೬ರಲ್ಲಿ ಸ್ವಾಂಟೆ ಅರ್ರ್‌‌ಹೆನಿಯಸ್‌ರವರು ಇದನ್ನು ಪರಿಮಾಣಾತ್ಮಕವಾಗಿ ಪರಿಶೀಲನೆ ನಡೆಸಿದರು. ಹಸಿರುಮನೆ ಪರಿಣಾಮದ ಅಸ್ತಿತ್ವವನ್ನು ಇತ್ತೀಚಿನ ತಾಪಮಾನ ಹೆಚ್ಚಳಕ್ಕೆ ಮಾನವ ಚಟುವಟಿಕೆ ಕಾರಣವಲ್ಲ ಎಂದು ವಾದಿಸುವವರೂ ಸಹಾ ಅಲ್ಲಗಳೆಯುವುದಿಲ್ಲ. ಆದರೆ ಪ್ರಮುಖ ಪ್ರಶ್ನೆಯೆಂದರೆ ವಾತಾವರಣದಲ್ಲಿನ ಹಸಿರುಮನೆ ಅನಿಲಗಳ ಸಂಗ್ರಹವನ್ನು ಮಾನವ ಚಟುವಟಿಕೆಯು ಹೆಚ್ಚಿಸಿದಾಗ ಹಸಿರುಮನೆ ಪರಿಣಾಮದ ಪ್ರಭಾವ ಹೆಚ್ಚಾಗುವುದು ಹೇಗೆ ಎಂಬುದು. ನೈಸರ್ಗಿಕವಾಗಿ ಉತ್ಪನ್ನವಾಗುವ ಹಸಿರುಮನೆ ಅನಿಲಗಳು ಸುಮಾರು 33 °C (59 °F)ರಷ್ಟು ಮಧ್ಯಮ ಪ್ರಮಾಣದ ಉಷ್ಣಾಂಶ ಹೆಚ್ಚಳಕ್ಕೆ ಕಾರಣವಾಗುತ್ತವೆ. ಪ್ರಮುಖ ಹಸಿರುಮನೆ ಅನಿಲಗಳೆಂದರೆ 36ರಿಂದ 70 ಪ್ರತಿಶತ ಹಸಿರುಮನೆ ಪರಿಣಾಮಕ್ಕೆ ಕಾರಣವಾಗುವ ನೀರಿನ ಆವಿ, 9ರಿಂದ 26 ಪ್ರತಿಶತ ಕಾರಣವಾಗುವ ಇಂಗಾಲದ ಡೈಆಕ್ಸೈಡ್‌(CO2), 4ರಿಂದ 9 ಪ್ರತಿಶತ ಕಾರಣವಾಗುವ ಮೀಥೇನ್‌(CH4); ಮತ್ತು 3ರಿಂದ 7 ಪ್ರತಿಶತ ಕಾರಣವಾಗುವ ಓಝೋನ್(O3). ಮೋಡಗಳು ಸಹಾ‌ವಿಕಿರಣ ಅಸಮತೋಲನಕ್ಕೆ ಕಾರಣವಾಗುವುದಾದರೂ ಅವು ದ್ರವರೂಪದ ನೀರು ಅಥವಾ ಹಿಮದಿಂದ ರೂಪುಗೊಂಡಿರುವ ಕಾರಣ ಅವನ್ನು ನೀರಿನ ಆವಿ ಹಾಗೂ ಇನ್ನಿತರ ಅನಿಲಗಳಿಂದ ಪ್ರತ್ಯೇಕಿಸಿ ನೋಡಲಾಗುತ್ತದೆ. ಕೈಗಾರಿಕಾ ಕ್ರಾಂತಿಯ ನಂತರ ಮಾನವ ಚಟುವಟಿಕೆಯು ವಾಯುಮಂಡಲದಲ್ಲಿನ ಹಸಿರುಮನೆ ಅನಿಲಗಳ ಪ್ರಮಾಣವನ್ನು ಹೆಚ್ಚಿಸುತ್ತಾ CO2, ಮೀಥೇನ್‌, ಹವಾಗೋಳದ ಓಝೋನ್‌, CFCಗಳು ಹಾಗೂ ನೈಟ್ರಸ್‌ಆಕ್ಸೈಡ್‌ಗಳಿಂದಾಗುವ ವಿಕಿರಣಾತ್ಮಕ ಒತ್ತಡವನ್ನು ಹೆಚ್ಚಿಸುತ್ತಿದೆ. 1700ರ ಶತಮಾನದ ಮಧ್ಯಭಾಗದಿಂದ CO2 ಮತ್ತು ಮೀಥೇನ್‌ಗಳ ಸಂಗ್ರಹಣೆಯು ಅನುಕ್ರಮವಾಗಿ 36%ರಷ್ಟು ಹಾಗೂ 148%ರಷ್ಟು ಹೆಚ್ಚಿದೆ. ಈ ಪ್ರಮಾಣಗಳು, ಹಿಮಗರ್ಭದ ಉತ್ಖನನದಿಂದ ಪಡೆದ ವಿಶ್ವಾಸಾರ್ಹ ಮಾಹಿತಿಯ ಪ್ರಕಾರ ಕಳೆದ 650,000 ವರ್ಷಗಳಲ್ಲಿನ ಯಾವುದೇ ಸಮಯದಲ್ಲಿನ ಪ್ರಮಾಣಕ್ಕಿಂತ ಬಹಳ ಹೆಚ್ಚಿವೆ. ಅಪರೋಕ್ಷ ಭೂವೈಜ್ಞಾನಿಕ ಕುರುಹುಗಳ ಪ್ರಕಾರ ಈ ಪ್ರಮಾಣದ CO2 ಅನಿಲವು 20 ದಶಲಕ್ಷ ವರ್ಷಗಳ ಹಿಂದೆ ಮಾತ್ರವೇ ಇತ್ತು. ಅಗೆದು ತೆಗೆದ ಇಂಧನಗಳ ಉರಿಸುವಿಕೆಯು ಕಳೆದ 20 ವರ್ಷಗಳಲ್ಲಿ ಮಾನವ ಚಟುವಟಿಕೆಯಿಂದಾದ CO2 ಹೆಚ್ಚಳದ ನಾಲ್ಕನೇ ಮೂರು ಭಾಗಕ್ಕೆ ಕಾರಣವಾಗಿದೆ. ಉಳಿದಂತೆ ಬಹುಪಾಲು ಭೂಬಳಕೆಯಲ್ಲಿನ ವ್ಯತ್ಯಾಸ, ನಿರ್ದಿಷ್ಟವಾಗಿ ಅರಣ್ಯನಾಶದಿಂದಾಗಿದೆ. CO2 ಸಂಗ್ರಹಗಳು ಅಗೆದು ತೆಗೆದ ಇಂಧನಗಳ ಉರಿಸುವಿಕೆಯಿಂದ ಹಾಗೂ ಭೂ-ಬಳಕೆಯಲ್ಲಿನ ಬದಲಾವಣೆಯಿಂದ ಹೆಚ್ಚುತ್ತಲೇ ಇದೆ. ಭವಿಷ್ಯದ ಏರುವಿಕೆಯ ದರವು ಅನಿರ್ದಿಷ್ಟ ಆರ್ಥಿಕ, ಸಮಾಜಶಾಸ್ತ್ರೀಯ, ತಾಂತ್ರಿಕ ಹಾಗೂ ನೈಸರ್ಗಿಕ ಅಭಿವೃದ್ಧಿಗಳ ಮೇಲೆ ಆಧರಿತವಾಗಲಿದೆ. IPCCಯ ಹೊರಸೂಸುವಿಕೆಯ ಸಂದರ್ಭಗಳ ಬಗ್ಗೆ ವಿಶೇಷ ವರದಿಯು 2100ರ ಇಸವಿಯ ಹೊತ್ತಿಗೆ 541ರಿಂದ 970 ppm ವ್ಯಾಪಕವಾಗಿ ಹರಡುವ ಭವಿಷ್ಯದ CO2 ಸಂದರ್ಭಗಳ ಬಗ್ಗೆ ಹೇಳುತ್ತದೆ. ಅಗೆದು ತೆಗೆವ ಇಂಧನದ ನಿಕ್ಷೇಪಗಳು ಈ ಮಟ್ಟವನ್ನು ತಲುಪಲು ಸಾಕಾಗುವುದಲ್ಲದೇ ಕಲ್ಲಿದ್ದಲು, ಟಾರ್‌ಮರಳು ಅಥವಾ ಮೀಥೇನ್‌ಜಾಲರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಂಡರೆ[೨೬] 2100ರ ನಂತರವೂ ಹೊರಸೂಸುವಿಕೆಯು ಮುಂದುವರೆಯಲಿದೆ.

ನಿವಾರಣೆ ಜಾಗತಿಕ ತಾಪಮಾನ ಏರಿಕೆಯ ನಿವಾರಣೆಯನ್ನು ಮಾನವ ಜನ್ಯ ಹಸಿರುಮನೆ ಅನಿಲ ಬಿಡುಗಡೆಯ ದರವನ್ನು ಕಡಿಮೆಗೊಳಿಸುವುದರ ಮೂಲಕ ಸಾಧಿಸಬಹುದು. ಮಾದರಿಗಳ ಪ್ರಕಾರ ನಿವಾರಣೋಪಾಯಗಳು ಆದಷ್ಟು ಬೇಗ ಜಾಗತಿಕ ತಾಪಮಾನ ಏರಿಕೆಯನ್ನು ಕಡಿಮೆಗೊಳಿಸಿದರೂ, ಗಮನಾರ್ಹ ಪ್ರಮಾಣದಲ್ಲಿ ತಾಪಮಾನ ಕಡಿಮೆಯಾಗಲು ಅನೇಕ ಶತಮಾನಗಳೇ ಬೇಕು. ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದರ ಮೇಲಿನ ವಿಶ್ವದ ಪ್ರಮುಖ ಅಂತರರಾಷ್ಟ್ರೀಯ ಒಪ್ಪಂದ ಮತ್ತು ಕೈಗೊಂಡ ತೀರ್ಮಾನಕ್ಕೆ 1997ರಲ್ಲಿ ಸಂಧಾನದ ಮೂಲಕ UNFCCC ಮಾಡಿದ ತಿದ್ದುಪಡಿಯೇ ಕ್ಯೋಟೋ ನಿಯಮಾವಳಿಗಳು. ಈ ನಿಯಮಾವಳಿಗಳನ್ನು ಈಗ 160ಕ್ಕೂ ಹೆಚ್ಚಿನ ಸಂಖ್ಯೆಯ ರಾಷ್ಟ್ರಗಳು ಪಾಲಿಸುತ್ತವೆಯಲ್ಲದೇ, ಇದು ಪ್ರತಿಶತ 55ಕ್ಕೂ ಹೆಚ್ಚಿನ ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತಡೆಹಿಡಿದಿದೆ. ಜೂನ್‌2009ರ ಅವಧಿಗೆ ಸಂಬಂಧಿಸಿದ ಹಾಗೆ ಕೇವಲ ಯುನೈಟೆಡ್‌ಸ್ಟೇಟ್ಸ್‌, ಐತಿಹಾಸಿಕವಾಗಿ ಹಸಿರುಮನೆ ಅನಿಲಗಳ ವಿಶ್ವದ ಅತಿಹೆಚ್ಚಿನ ಪ್ರಮಾಣದ ಉತ್ಪಾದಕ ಮಾತ್ರವೇ ಅನುಮೋದಿಸದೇ ಇರುವುದು. ಈ ಒಪ್ಪಂದದ ಅವಧಿಯು 2012ರಲ್ಲಿ ಮುಕ್ತಾಯಗೊಳ್ಳುತ್ತದೆ. ಮೇ 2007ರಲ್ಲಿ ಪ್ರಸಕ್ತ ಒಪ್ಪಂದವನ್ನು ಮುಂದುವರೆಸುವ ಭಾವೀ ಒಪ್ಪಂದದ ಬಗ್ಗೆ ಅಂತರರಾಷ್ಟ್ರೀಯ ಮಾತುಕತೆಗಳು ಆರಂಭಗೊಂಡಿವೆ. ಡಿಸೆಂಬರ್‌2009ರಲ್ಲಿ ಕೋಪೆನ್‌ಹೇಗನ್‌ನಲ್ಲಿ ನಡೆಯಲಿರುವ UN ಸಭೆಯ ಬಗೆಗಿನ ಸಭಾಪೂರ್ವ ಮಾತುಕತೆಗಳು ಈಗ ವೇಗ ಪಡೆದುಕೊಂಡಿವೆ.