ಸದಸ್ಯರ ಚರ್ಚೆಪುಟ:Jhonsontg/sandbox
ಸುಕ್ರೋಸ್ ಸುಕ್ರೋಸ್ ಎಂಬುದು ಕಾರ್ಬನಿಕ ಸಂಯುಕ್ತವಾಗಿದ್ದು, ಪುಡಿ ಸಕ್ಕರೆ ಎಂಬ ಹೆಸರಿನಿಂದ ಇದು ಸಾಮಾನ್ಯವಾಗಿ ಚಿರಪರಿಚಿತವಾಗಿದೆ ಮತ್ತು ಕೆಲವೊಮ್ಮೆ ಇದನ್ನು ಸ್ಯಾಕರೋಸ್ ಎಂದೂ ಕರೆಯಲಾಗುತ್ತದೆ. ಈ ಬಿಳಿಯದಾದ, ವಾಸನೆಯಿಲ್ಲದ, ಸ್ಫಟಿಕೀಯ ಪುಡಿಯು ಒಂದು ಹಿತಕರವಾದ, ಸಿಹಿರುಚಿಯನ್ನು ಹೊಂದಿದೆ. ಮಾನವ ಪೋಷಣೆಯಲ್ಲಿ ತಾನು ವಹಿಸುವ ಪಾತ್ರಕ್ಕೆ ಸಂಬಂಧಿಸಿದಂತೆ ಇದು ಹೆಚ್ಚು ಚಿರಪರಿಚಿತವಾಗಿದೆ. ಇದರ ಕಣವು ಒಂದು ಡೈಸ್ಯಾಕರೈಡ್ ಆಗಿದ್ದು, ಗ್ಲೂಕೋಸ್ ಮತ್ತು ಫ್ರಕ್ಟೋಸ್‌ನಿಂದ ಇದು ಜನ್ಯವಾಗಿದೆ ಹಾಗೂ C12H22O11 ಎಂಬ ಅಣುಸೂತ್ರವನ್ನು ಇದು ಹೊಂದಿದೆ. ವಾರ್ಷಿಕವಾಗಿ ಸುಮಾರು 150,000,000 ಟನ್ನುಗಳಷ್ಟು ಪ್ರಮಾಣದಲ್ಲಿ ಇದು ಉತ್ಪಾದಿಸಲ್ಪಡುತ್ತದೆ.[೨] ಭೌತಿಕ ಮತ್ತು ರಾಸಾಯನಿಕ ಗುಣಲಕ್ಷಣಗಳು
ಸುಕ್ರೋಸ್ ಒಂದು ಸಂಕೀರ್ಣಗೊಳಿಸಲ್ಪಟ್ಟ ಕಣವಾಗಿದ್ದು, ಅನೇಕ ತ್ರಿಮಿತೀಯ ಕೇಂದ್ರಗಳನ್ನು ಮತ್ತು ಕ್ರಿಯಾಪಟುಗಳಾಗಿರುವ ಅಥವಾ ಕ್ರಿಯಾಪಟುಗಳಾಗಬಲ್ಲ ಅನೇಕ ತಾಣಗಳನ್ನು ಇದು ಹೊಂದಿದೆ. ಈ ಸಂಕೀರ್ಣತೆಯ ಹೊರತಾಗಿಯೂ, ಸದರಿ ಕಣವು ಒಂದು ಏಕಸಮಾಂಗಿಯಾಗಿ (ಐಸಮರ್ ಆಗಿ) ತನ್ನ ಅಸ್ತಿತ್ವವನ್ನು ಹೊರಹೊಮ್ಮಿಸುತ್ತದೆ. ರಾಚನಿಕ β-D-ಫ್ರಕ್ಟೋಫ್ಯುರಾನೊಸಿಲ್-(2→1)-α-D-ಗ್ಲೂಕೋಪೈರನೋಸೈಡ್
ಸುಕ್ರೋಸ್‌ನಲ್ಲಿ, ಅಂಗಭಾಗಗಳಾದ ಗ್ಲೂಕೋಸ್ ಮತ್ತು ಫ್ರಕ್ಟೋಸ್ ಇವುಗಳು, ಗ್ಲೂಕೋಸಿಲ್ ಉಪಘಟಕದ ಮೇಲಿನ ಒಂದು C1 ಹಾಗೂ ಫ್ರಕ್ಟೋಸಿಲ್ ಘಟಕದ ಮೇಲಿನ C2 ನಡುವಿನ ಒಂದು ಈಥರ್ ಬಂಧದ ಮೂಲಕ ಸಂಪರ್ಕಿಸಲ್ಪಟ್ಟಿವೆ. ಈ ಬಂಧವನ್ನು ಒಂದು ಗ್ಲೈಕೊಸೈಡ್ ಸ್ವರೂಪದ ಕೂಡಿಕೆ ಎಂದು ಕರೆಯಲಾಗುತ್ತದೆ. ಎರಡು ಸಮಾಂಗೀನ "ಪೈರನೋಸ್‌ಗಳ" (α ಮತ್ತು β) ಸ್ವರೂಪಗಳಲ್ಲಿ ಗ್ಲೂಕೋಸ್ ಪ್ರಧಾನವಾಗಿ ತನ್ನ ಅಸ್ತಿತ್ವವನ್ನು ತೋರಿಸಿಕೊಳ್ಳುತ್ತದೆಯಾದರೂ, ಇವುಗಳ ಪೈಕಿಯ ಒಂದು ಸ್ವರೂಪದವು ಮಾತ್ರವೇ ಫ್ರಕ್ಟೋಸ್ ಜೊತೆಗಿನ ಕೊಂಡಿಗಳಾಗುತ್ತವೆ. ಫ್ರಕ್ಟೋಸ್ ಸ್ವತಃ ಸ್ವರೂಪಗಳ ಒಂದು ಮಿಶ್ರಣವಾಗಿಯೂ ಇದ್ದು, ಅವುಗಳ ಪೈಕಿ ಪ್ರತಿಯೊಂದೂ α ಮತ್ತು β ಸಮಾಂಗಿಗಳನ್ನು ಹೊಂದಿರುತ್ತದೆಯಾದರೂ, ಇಲ್ಲಿಯೂ ಸಹ ಕೇವಲ ಒಂದು ನಿರ್ದಿಷ್ಟ ಸಮಾಂಗಿಯು ಗ್ಲೂಕೋಸಿಲ್ ಘಟಕದ ಜೊತೆಗೆ ಸಂಪರ್ಕವನ್ನು ಹೊಂದುತ್ತದೆ. ಸುಕ್ರೋಸ್ ಕುರಿತಾದ ಒಂದು ಗಮನಾರ್ಹ ಅಂಶವೆಂದರೆ, ಬಹುಪಾಲು ಡೈಸ್ಯಾಕರೈಡ್‌ಗಳಿಗಿಂತ ಭಿನ್ನವಾಗಿ ಗ್ಲೂಕೋಸ್ ಮತ್ತು ಫ್ರಕ್ಟೋಸ್‌ನ ಅಪಕರ್ಷಿಸುವ ತುದಿಗಳ ನಡುವೆ ಗ್ಲೈಕೊಸೈಡ್ ಸ್ವರೂಪದ ಬಂಧವು ರೂಪುಗೊಳ್ಳುತ್ತದೆಯೇ ಹೊರತು, ಒಂದರ ಅಪಕರ್ಷಿಸುವ ತುದಿ ಹಾಗೂ ಮತ್ತೊಂದರ ಅಪಕರ್ಷಿಸದ ತುದಿಯ ನಡುವೆ ಅಲ್ಲ. ಈ ಕೂಡಿಕೆಯು ಇತರ ಸ್ಯಾಕರೈಡ್ ಘಟಕಗಳಿಗೆ ಮುಂದಿನ ಬಂಧಕತೆಯನ್ನು ಪ್ರತಿಬಂಧಿಸುತ್ತದೆ. ಇದು ಅನೋಮರ್ ಲಕ್ಷಣಗಳುಳ್ಳ ಯಾವುದೇ ಹೈಡ್ರಾಕ್ಸಿಲ್ ಗುಂಪುಗಳನ್ನು ಒಳಗೊಳ್ಳುವುದಿಲ್ಲವಾದ್ದರಿಂದ, ಇದನ್ನು ಒಂದು ಅಪಕರ್ಷಿಸದ ಸಕ್ಕರೆಯಾಗಿ ವರ್ಗೀಕರಿಸಲಾಗಿದೆ.
ಸ್ಫಟಿಕಶಾಸ್ತ್ರವು ಆಣ್ವಿಕ ರಚನೆಯ ಕುರಿತಾದ ಅತೀವ ಕರಾರುವಾಕ್ಕಾದ ಮಾಹಿತಿಯನ್ನು ನೀಡುವ ಕೌಶಲವಾಗಿದೆ. P21 ಎಂಬ ಏಕಪ್ರವಣತೆಯ ಅವಕಾಶದ ಗುಂಪಿನಲ್ಲಿ ಸುಕ್ರೋಸ್ ಸ್ಫಟಿಕೀಭವಿಸುತ್ತದೆ; 300 Kಯಲ್ಲಿ ಈ ಗುಂಪು ಹೊಂದಿರುವ ಮೌಲ್ಯಗಳು ಈ ರೀತಿ ಇವೆ: a = 1.08631 nm, b = 0.87044 nm, c = 0.77624 nm, β = 102.938°.[೩][೪]
ಧ್ರುವೀಯತಾ ಮಾಪನದಿಂದ ಸುಕ್ರೋಸ್‌ನ ಪರಿಶುದ್ಧತೆಯ ವಾಡಿಕೆಯ ಮಾಪನವನ್ನು ನಡೆಸಲಾಗುತ್ತದೆ; ಇದು ಸಕ್ಕರೆಯ ಒಂದು ದ್ರಾವಣದಿಂದ ಆಗುವ ತಲೀಯ-ಧ್ರುವೀಕರಿಸಲ್ಪಟ್ಟ ಬೆಳಕಿನ ಆವರ್ತದ ಅಳೆಯುವಿಕೆಯಾಗಿದೆ. ಹಳದಿ "ಸೋಡಿಯಂ-D" ಬೆಳಕನ್ನು (589 nm) ಬಳಸಿಕೊಂಡು 20 °Cಯಲ್ಲಿ ಆಗುವ ವಿಶಿಷ್ಟ ಆವರ್ತವು +66.47°ಯಷ್ಟಿರುತ್ತದೆ. ಈ ಮಾಪನ ಲಕ್ಷಣವನ್ನು ಬಳಸಿಕೊಂಡು ಸಕ್ಕರೆಯ ವ್ಯಾಪಾರೀ ಮಾದರಿಗಳನ್ನು ವಿಶ್ಲೇಷಣೆ ಮಾಡಲಾಗುತ್ತದೆ.ಸುಕ್ರೋಸ್ ಗಾಳಿಯಿಂದ ಹಾನಿಗೊಳಗಾಗುವುದಿಲ್ಲ. ಉಷ್ಣದ ಮತ್ತು ಉತ್ಕರ್ಷಣಶೀಲ ಸರಳ ಸಂಯುಕ್ತಗಳಾಗಿ ಒಡೆಯುವಿಕೆ ನೀರಿಗೆ ಎದುರಾಗಿ ತಾಪಮಾನವಿರುವ ಸಜ್ಜಿಕೆಯಲ್ಲಿನ ಸುಕ್ರೋಸ್‌ನ ದ್ರಾವ್ಯತೆ T (°C) S (g/ml) 50 2.59 55 2.73 60 2.89 65 3.06 70 3.25 75 3.46 80 3.69 85 3.94 90 4.20
186 °C (367 °F)ನಲ್ಲಿ ಕರಗುವ ಸುಕ್ರೋಸ್ ವಿಘಟನೆಗೆ ಒಳಗಾಗಿ ಸುಟ್ಟ ಸಕ್ಕರೆಯನ್ನು ರೂಪಿಸುತ್ತದೆ. ಇತರ ಶರ್ಕರಪಿಷ್ಟಗಳಂತೆಯೇ ಇದು ದಹನಕ್ಕೊಳಗಾಗಿ, ಇಂಗಾಲದ ಡೈಯಾಕ್ಸೈಡ್ ಮತ್ತು ನೀರನ್ನು ಉತ್ಪತ್ತಿಮಾಡುತ್ತದೆ. ಉದಾಹರಣೆಗೆ, ರಾಕೆಟ್ ಕ್ಯಾಂಡಿ ಎಂದು ಕರೆಯಲ್ಪಡುವ ಅಕುಶಲವಾದ ಕ್ಷಿಪಣಿ ಮೋಟಾರು ನೋದಕದಲ್ಲಿ ಇದು ಉತ್ಕರ್ಷಣಕಾರಿ ಪೊಟಾಷಿಯಂ ನೈಟ್ರೇಟ್ ಜೊತೆಯಲ್ಲಿನ ಇಂಧನವಾಗಿದೆ.[ಸೂಕ್ತ ಉಲ್ಲೇಖನ ಬೇಕು]
48 KNO3 + 5 C12H22O11 → 24 K2CO3 + 24 N2 + 55 H2O + 36 CO2
ಗಂಧಕಾಮ್ಲ ಮತ್ತು ಪೊಟಾಷಿಯಂ ಕ್ಲೋರೇಟ್‌ನ ರಾಸಾಯನಿಕ ಕ್ರಿಯೆಯಿಂದ ರೂಪುಗೊಂಡ ಕ್ಲೋರಿಕ್ ಆಮ್ಲದೊಂದಿಗೆ ಸುಕ್ರೋಸ್ ದಹಿಸುತ್ತದೆ:
8 HClO3 + C12H22O11 → 11 H2O + 12 CO2 + 8 HCl
ಸುಕ್ರೋಸ್‌ನ್ನು ಗಂಧಕಾಮ್ಲದೊಂದಿಗೆ ನಿರ್ಜಲೀಕರಿಸಲು ಸಾಧ್ಯವಿದ್ದು, ಈ ಕ್ರಿಯೆಯು ಒಂದು ಕಪ್ಪಾದ, ಇಂಗಾಲ-ಸಮೃದ್ಧ ಘನವನ್ನು ರೂಪಿಸುತ್ತದೆ; ಈ ಪ್ರಕ್ರಿಯೆಯು ಈ ಕೆಳಕಂಡ ಆದರ್ಶೀಕರಿಸಲ್ಪಟ್ಟ ಅಥವಾ ಮಾದರಿಯಾಗಿ ರೂಪುಗೊಂಡ ಸಮೀಕರಣದಿಂದ ಸೂಚಿಸಲ್ಪಟ್ಟಿದೆ:
H2SO4(ವೇಗವರ್ಧಕ) + C12H22O11 → 12 C + 11 H2O + ಶಾಖ ಮತ್ತು H2O + SO3 ಶಾಖದ ಒಂದು ಫಲವಾಗಿ
Start a discussion about ಸದಸ್ಯ:Jhonsontg/sandbox
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಸದಸ್ಯ:Jhonsontg/sandbox.