ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Jesan dsouza

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರ್ ಎಂವಿ ಭಾರತ ಕಂಡ ವಿಶ್ವವಿಖ್ಯಾತ ಇಂಜಿನಿಯರ್[ಬದಲಾಯಿಸಿ]

ವೃತ್ತಿ ಜೀವನದ ಸಾಧನೆ:

ತಮ್ಮ 24 ನೆ ವಯಸ್ಸಿನಲ್ಲೆ (1884) ಬೊಂಬಾಯಿ ಪ್ರಾಂತ್ಯದಲ್ಲಿ ಸಹಾಯಕ ಇಂಜಿನಿಯರ್ ಅಧಿಕಾರಿಯಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿ ಸತತ 24 ವರ್ಷಗಳಷ್ಟು ಕಾಲ ಇಂಜಿನಿಯರಿಂಗ್ ವಿಭಾಗದ ಎಲ್ಲ ಉನ್ನತ ಹುದ್ದೆಗಳಿಗೂ ಬಹಳ ಬೇಗ ತಮ್ಮ ಸಾಮರ್ಥ್ಯ ಮತ್ತು ದಕ್ಷತೆಯಿಂದ ಮೇಲೆರಿದರು. * ಮೊದಲ ಯೋಜನೆ : ಪಂಜ್ರಾ ನದಿಯಿಂದ ದಾತಾರಿ ಗ್ರಾಮಕ್ಕೆ "ಸೈಫನ್" ವಿಧಾನದಿಂದ ನೀರು ಹಾಯಿಸುವ ಕೆಲಸ. ಕೆಲಸಕ್ಕೆ ಸೇರಿದ 20 ತಿಂಗಳಲ್ಲೆ ಇಲಾಖೆಯ ಪರೀಕ್ಷೆಯಲ್ಲಿ ಉತ್ತಿರ್ಣರಾಗಿ ಮೊದಲ ದರ್ಜೆಯ ಇಂಜಿನಿಯರ್ ಆದರು. * ಸಿಂಧ್ ವಿಭಾಗದ ಸೆಕ್ಕೂರಿಗೆ ನದಿಯಿಂದ ಕುಡಿಯುವ ನೀರನ್ನು ಒದಗಿಸುವ ಯೋಜನೆ. * ತಪತಿ ನದಿಯಿಂದ ಸೂರತ್ ನಗರಕ್ಕೆ ನೀರೊದಗಿಸುವ ಕಾರ್ಯಯೋಜನೆ. * ಪುಣೆ ಮತ್ತು ಸುತ್ತಲಿನ ದಂಡಿನ ಕರ್ಕಿಗೆ ಮೂಸಾ ನದಿಯ ಕಾಲುವೆಯಿಂದ ನೀರು ಒದಗಿಸಲಾಗುತ್ತಿತ್ತು-"ಪೈಪ್" ಜಲಾಶಯದಲ್ಲಿ "ಸ್ವಚ್ಚಲೀ"-ಸ್ವಯಂ ಚಾಲಿತ ಕವಾಟಗಳನ್ನು ಅಳವಡಿಸಿ ಯೋಜನೆಯನ್ನು ಯಶಸ್ವಿಗೊಳಿಸಿದರು-"ಸ್ವಚ್ಚಲೀ" ತಂತ್ರಜ್ಞಾನಕ್ಕೆ ಪೆಟೆಂಟ್ ಪಡೆದುಕೊಂಡರು. * 1904ರಲ್ಲಿ ಬೊಂಬಾಯಿ ಪ್ರಾಂತ್ಯದಲ್ಲಿ ಸ್ಯಾನಿಟರಿ ವಿಭಾಗದ ಇಂಜಿನಿಯರ್ ಹುದ್ದೆಗೇರಿದರು. * 1906ರಲ್ಲಿ ಲಂಡನ್ ನ -ಏಡನ್ ನಗರದ ನೆರವಿಗೆ ಧಾವಿಸಿ ಅಲ್ಲಿನ ನೀರಿನ ಮತ್ತು ಒಳಚರಂಡಿಯ ಯೋಜನೆಗಳನ್ನು ಸಮರ್ಪಕವಾಗಿ ನೆರವೇರಿಸಿದರು. * 1907ರಲ್ಲಿ ಸ್ಯಾನಿಟರಿ ವಿಭಾಗದ ಜೊತೆಗೆ ಇನ್ನು ಎರಡು ವಿಭಾಗದ ಹೊಣೆಗಾರಿಕೆ ಸೇರಿದವು ಅವುಗಳನ್ನು ಸಮರ್ಪಕವಾಗಿ ನಿಭಾಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. * ಕೈಸರ್-ಇ-ಹಿಂದ್-ಪ್ರಶಸ್ತಿ ಪದಕ ಬ್ರಿಟೀಷ್ ಪ್ರಭುತ್ವ ನೀಡಿ ಗೌರವಿಸಿತು. * ಇವರ ಸಾಮರ್ಥ್ಯ, ಬುದ್ಧಿವಂತಿಕೆ, ಕಾಲಕ್ಷಮತೆ, ಪ್ರಾಮಾಣಿಕತೆ ಇವುಗಳನ್ನ ಗಮನಿಸಿ ಸರ್ಕಾರ 18 ಆಂಗ್ಲಅಧಿಕಾರಿಗಳ ಮೇಲೆ ಬಡ್ತಿ ನೀಡಿತು. ಆಗಿನ ಕಾಲದಲ್ಲಿ ಚೀಫ್ ಇಂಜಿನಿಯರ್ ಸ್ಥಾನ ಆಂಗ್ಲರಿಗೆ ಮೀಸಲಾಗಿತ್ತು. ನ್ಯಾಯ ಸಮ್ಮತವಾಗಿ ತಮಗೆ ಸಿಗಬೇಕಿದ್ದ ಸ್ಥಾನ ಸಿಗಲಿಲ್ಲ ಅದಕ್ಕಾಗಿ ಆ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದರು. ಅದನ್ನು ಹಿಂತೆಗೆದುಕೊಳ್ಳುವಂತೆ ಗೌರ್ವನರ್ ಮನವಿ ಮಾಡಿಕೊಂಡರೂ ವಿಶ್ವೇಶ್ವರಯ "ಭಾರತೀಯರ ಸಾಮರ್ಥ್ಯ ಕಡೆಗಣಿಸುವ ದುರಭಿಮಾನಕ್ಕೆ ತಲೆಬಾಗಲಾಗದು" ಎಂದು ತಮ್ಮ ನಿಲುವನ್ನು ಸಡಿಲಿಸದೆ 1908ನೆ ಮೇ ತಿಂಗಳಲ್ಲಿ ಬೊಂಬಾಯಿ ಸರ್ಕಾರದ ಕೆಲಸದಿಂದ ನಿವೃತ್ತಿ ಹೊಂದಿ ಲಂಡನ್ ಪ್ರವಾಸ ಕೈಗೊಂಡರು. ಅಲ್ಲಿ ಅನೇಕ ಕಾರ್ಖಾನೆಗಳಿಗೆ ಭೇಟಿ ನೀಡಿ ನಮ್ಮ ದೇಶಕ್ಕೆ ಬೇಕಾಗುವ ಎಲ್ಲ ತಂತ್ರಜ್ಞಾನ, ಮಾಹಿತಿಯನ್ನು ಪಡೆದುಕೊಂಡರು. ಲಂಡನ್ ಪ್ರವಾಸದಲ್ಲಿದ್ದಾಗ ಹೈದ್ರಾಬಾದ್ ನಿಂದ ಕರೆ ಬಂತು. ಪ್ರವಾಸ ಮುಗಿಸಿಕೊಂಡು ಹೈದ್ರಾಬಾದ್ ಪ್ರಾಂತ್ಯಕ್ಕೆ ವಿಶೇಷ ಅಧಿಕಾರಿಯಾಗಿ ನೇಮಕಗೊಂಡರು .ಆಗ ಇಯಾಸಿ ಮತ್ತು ಮೂಸಿ ನದಿಗಳಿಗೆ ಅಣೆಕಟ್ಟನ್ನು ಕಟ್ಟಿ ಹಿಮಾಯತ ಸಾಗರ ಮತ್ತು ಉಸ್ಮಾನ ಸಾಗರ ನಿರ್ಮಿಸಿ ಹೈದ್ರಾಬಾದ್ ಮತ್ತು ಸಿಕಂದ್ರಾಬಾದ್ ನಗರಗಳಿಗೆ ನೀರೊದಗಿಸಿದರು. * 1909 ನವೆಂಬರ್ ನಲ್ಲಿ ಮೈಸೂರ್ ಸಂಸ್ಥಾನದಿಂದ ಆಹ್ವಾನ ಬಂದಿತು.ಮುಖ್ಯ ಇಂಜಿನಿಯರ್ ಆಗಿ ನೇಮಕಗೊಂಡರು.ಇದೆ ಕಾಲದಲ್ಲಿ ರೈಲ್ವೆ ಮತ್ತು ಮರಾಮತ್ ಇಲಾಖೆಗಳಿಗೆ ಕಾರ್ಯದರ್ಶಿಗಳಾಗಿದ್ದರು. * 1909-1912ರ ವರೆಗೂ ಮೈಸೂರು ಪ್ರಾಂತ್ಯದಲ್ಲಿ ಅನೇಕ ಕೆರೆಕಟ್ಟೆ , ಕಾಲುವೆ, ಜಲಾಶಯದ ಯೋಜನೆಗಳನ್ನು ಅಚ್ಚುಕಟ್ಟಾಗಿ ಕಟ್ಟಿದ್ದರು .ಅವರ ಈ ಕೆಲಸಗಳಿಂದ ಸಂತೃಪ್ತರಾದ ಮಹಾರಾಜರು ಅವರನ್ನು ದಿವಾನ್ ರಾಗಿ ನೇಮಿಸಿದರು.

  • ಬ್ಯಾಂಕುಗಳ ಸ್ಥಾಪನೆ -ಸ್ಟೇಟ್ ಬ್ಯಾಂಕ್ ಆಫ್ ಮೈಸೂರು * ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಲ್ಲು ಬಹಳ ಮುಖ್ಯ ಪಾತ್ರ ವಹಿಸಿದರು. * 1916 ರಲ್ಲಿ ಮೈಸೂರು ವಿಶ್ವವಿದ್ಯಾಲಯ ಸ್ವತಂತ್ರ ವಿಶ್ವವಿದ್ಯಾಲಯವಾಗಿ ಕೆಲಸ ಮಾಡಲು ಪ್ರಾರಂಭಿಸಿತು. * ಭದ್ರಾವತಿ ಕಬ್ಬಿಣ ಕಾರ್ಖಾನೆಯ ಸ್ಥಾಪನೆ * ಕನ್ನಂಬಾಡಿ ಕಟ್ಟೆಯ ಸ್ಥಾಪನೆ * ಕೋಲಾರದ ಚಿನ್ನದ ಗಣಿಗೆ ಮೊಟ್ಟ ಮೊದಲಬಾರಿಗೆ ವಿದ್ಯುತ್ ಪೂರೈಕೆ. * ಗಂಧದ ಎಣ್ಣೆ ಕಾರ್ಖಾನೆ ಮತ್ತು ಸಾಬೂನು ಕಾರ್ಖಾನೆಯ ಸ್ಥಾಪನೆ * ಬಾಳೇಹೊನ್ನೂರಿನ ಕಾಫಿ ಪ್ರಯೋಗ ಕ್ಷೇತ್ರವನ್ನು ವಿಸ್ತರಿಸಿ ಅಬಿವೃದ್ಧಿಗೊಳಿಸಿದರು. * ಹಳ್ಳಿಗಳಲ್ಲಿ ಗ್ರಾಮಸಮಿತಿಗಳನ್ನು ರಚಿಸಿದರು. * 1949ರಲ್ಲಿ ಗ್ರಾಮ ಔದ್ಯೋಗಿಕರಣದ ಯೋಜನೆ ತಯಾರಿಸಿ ಭಾರತ ಸರ್ಕಾರದ ಅನುಮೋದನೆಗೆ ಒಪ್ಪಿಸಿದರು. * 1914ರಲ್ಲಿ ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಸ್ಕೂಲನ್ನು ಸ್ಥಾಪಿಸಿದರು. ಇನ್ನೂ ಎಲ್ಲಾ ಕ್ಷೇತ್ರಗಳಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆ. ಇಷ್ಟು ಕೆಲಸಗಳನ್ನು ಮಾಡಿ 102 ವರ್ಷಗಳ ಕಾಲ ಸ್ವಚ್ಚ ಸುಂದರ ಬದುಕನ್ನು ನಡೆಸಿದ ಅದ್ವೀತಿಯ ಅಪ್ರತಿಮ ದೇಶಭಕ್ತ, ಚತುರ ಇಂಜಿನಿಯರ್, ದಕ್ಷ ಆಡಳಿತಗಾರ, ಪ್ರಾಮಾಣಿಕ ಸಹೃದಯಿ, ದಯಾಮಯಿ ಅವರ 149ನೆಯ ಹುಟ್ಟು ಹಬ್ಬದ ಸಂದರ್ಭಕ್ಕಾಗಿ ಇದೊಂದು ಪುಟ್ಟ ನುಡಿ ನಮನ.