ಸದಸ್ಯರ ಚರ್ಚೆಪುಟ:Jeevan kasaragod/sandbox
ಮಳೆಗಾಲ
ಇತ್ತೀಚಿಗೆ ಮಳೆಗಾಲದಲ್ಲಿಯೇ ಪ್ರವಾಸಿಗರು ಮಲೆನಾಡಿಗೂ ಬರುತ್ತಿದ್ದಾರೆ. ಅವರಿಗೆ ಮಳೆಯ ಅಬ್ಬರದೊಂದಿಗೆ ತಾವೂ ಭಾಗವಹಿಸಲು ತುಂಬಾ ಆಸಕ್ತಿಯಿರುತ್ತದೆ.
ಪಶ್ಚಿಮ ದೇಶಗಳಲ್ಲಿ ವರ್ಷವನ್ನು ಸ್ಪ್ರಿಂಗ್, ಸಮ್ಮರ್, ಆಟಮ್, ವಿಂಟರ್, ಎಂದು ನಾಲ್ಕು ವಿಭಾಗ ಮಾಡಿದ್ದಾರೆ. ಆದರೆ ಭಾರತದಲ್ಲಿ ಹವಾಮಾನಕ್ಕೆ ಅನುಗುಣವಾಗಿ ಮೂರೇ ಕಾಲವನ್ನು ಹೇಳುವುದು ರೂಢಿ. ಅವು - ಬೇಸಿಗೆ ಕಾಲ, ಮಳೆಗಾಲ, ಛಳಿಗಾಲ ; ಮಳೆಗಾಲವು ಯಾವಾಗಲೂ ಬಂದರೆ ಸುಸ್ವಾಗತ ಕಾಲ. ಏಕೆಂದರೆ ಅದರಿಂದ ಬೆಳೆ- ಸಂಮೃದ್ಧಿಗೆ ಕಾರಣ. ಆದರೆ ಪ್ರಾಚೀನರು ಬಾರತ ಕಾಲಗಣನೆಯಲ್ಲಿ, ವಸಂತ, ಗ್ರೀಷ್ಮ, ವರ್ಷ, ಶರ, ಹೇಮಂತ, ಶಿಶಿರ ಎಂದು ಆರು ಋತು ಅಥವಾ ಕಾಲವನ್ನು ವಿಭಾಗಿಸಿದ್ದಾರೆ. ಆದರೆ ಈಗ ಅದನ್ನು ರೂಢಿಯಲ್ಲಿ ಬಳಸುವುದು ಬಿಟ್ಟುಹೋಗಿದೆ.
ಹಿಂಗಾರು ಮಳೆ
ಭಾರತಕ್ಕೆ ಮುಂಗಾರು ಮಳೆ ಎಂದರೆ ನೈರುತ್ಯ ದಿಕ್ಕಿನಿಂದ ಬರುವ ಮಳೆ. ನೈರುತ್ಯ ವಾಣಿಜ್ಯ ಮಾರುತಗಳು (ಪಶ್ಚಿಮ ದಕ್ಷಿಣದ ಮಧ್ಯದ ದಿಕ್ಕು) ಜೂನ್ ತಿಂಗಳಿನಿಂದ ಆರಂಭವಾಗಿ ಅಕ್ಟೋಬರ್ ೧೫ರ ವರೆಗೆ ಇರುತ್ತದೆ. ಇದು ಭಾರತದ ಪಶ್ಚಿಮದ ದಿಕ್ಕಿನಿಂದ ಅರಬ್ಬಿ ಸಮುದ್ರದಲ್ಲಿ ಆರಂಭವಾಗಿ ಭಾರತದ ಪಶ್ಚಿಮದ ತೀರಗಳಿಗೆ ಹೇಚ್ಚಾಗಿಯೂ ಉಳಿದ ಭಾಗಗಳಿಗೆ ಸಾಧಾರಣವಾಗಿಯೂ ಮಳೆ ತರುವುದು. (ಮುಂಗಾರು=ತೆಂಕಣ(ದಕ್ಷಿಣ) ಮತ್ತು ಪಡುವಣ(ಪಶ್ಚಿಮ) ದಿಕ್ಕುಗಳ ನಡುವಿನ ದಿಕ್ಕು southwest mosoon)
ಹಿಂಗಾರು ಮಳೆ ಅಥವಾ ಈಶಾನ್ಯ ಮಾರುತಗಳಿಂದ (ಉತ್ತರ ಮತ್ತು ಪೂರ್ವದ ಮಧ್ಯದ ದಿಕ್ಕು) ಬರುವ ಮಳೆ ಉತ್ತರ ದಿಕ್ಕಿನಿಂದ ಮಾರುತಗಳು (ಗಾಳ) ಆರಂಭವಾಗಿ ವಾಯು ಭಾರ ಕುಸಿತ ವಿರುವ ಬಂಗಾಳ ಕೊಲ್ಲಿ ಪ್ರವೇಶಮಾಡಿ ಬಾರತದ ಪೂರ್ವ ತೀರದ ರಾಜ್ಯಗಳಿಗೆ ಮಳೆ ತರುವುದು. ಮಧ್ಯ ಭಾಗಕ್ಕೆ ಸಾಧಾರಣ ಮಳೆ ತರುವುದು.
ಭಾರತ ಭೂಮಿಗೆ ಮುಂಗಾರು ಪ್ರಧಾನ ಮಳೆ ಆಗಿದೆ. ಈ ಬಾರಿ (೨೦೧೩) ಅಕ್ಟೋಬರ್ ಮೂರನೇ ವಾರ ಆರಂಭವಾಗುವುದಕ್ಕೂ ಸ್ವಲ್ಪ ಮುಂಚೆಯೇ ಹಿಂಗಾರು ಮಳೆ ಆರಂಭವಾಗಿದೆ. ಇದು ಪೂರ್ವ ಕರಾವಳಿಯ ರಾಜ್ಯಗಳ ಭಾಗ್ಯವಿಧಾತ. :( ಬಡಗಣ(ಉತ್ತರ) ಮತ್ತು ಮೂಡಣ (ಪೂರ್ವ) ದಿಕ್ಕುಗಳ ನಡುವಿನ ದಿಕ್ಕು :
ಮುಂಗಾರು ಮಳೆ
ಭಾರತಕ್ಕೆ ಮುಂಗಾರುಮಳೆ ಅತ್ಯಂತ ಪ್ರಮುಖವಾದುದು. ಭಾರತದ ಬಹಳಷ್ಟು ಬೆಳೆ, ನೀರಾವರಿ ವ್ಯವಸ್ಥೆ, ಕುಡಿಯುವರಿನ ಪೂರೈಕೆಗೆ ಅರಬ್ಬಿ ಸಂಮುದ್ರದಿಂದ ಹುಟ್ಟಿ ಬರುವ ನೈರುತ್ಯ ವಾಣಿಜ್ಯ ಮಾರುತಗಳು ತರುವ ಮುಂಗಾರು ಮಳೆ ಭಾರತದ ಜೀವ ಜಲಸಂಪನ್ಮೂಲ; ಜೀವನಾ ಧಾರ. ಅದು ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಆರಂಭವಾಗುತ್ತದೆ. ಹವಾಮಾನ ಇಲಾಖೆಯ ವರದಿಯಂತೆ ಈಚೆಗಿನ ೧೦ ವರ್ಷಗಳಲ್ಲಿ ಮುಂಗಾರಮಳೆ ಆರಂಭವಾಗಿ ಕೇರಳಕ್ಕೆ ಪ್ರವೇಶಸಿದ ದಿನಗಳು-(ಪ್ರಜಾವಾಣಿ ೭-೬-೨೦೧೪):
06-6-2014 01-6-2013 03-6-2012 29-5-2011 31-5-2010 23-5-2009 28-5-2008 26-5-2007 28-5-2006 07-6-2005
೨೦೧೪(2014) ರಲ್ಲಿ ಜೂನ್ ೫ (5)ನೇ ತಾರೀಖು ಮುನ್ಸೂಚನೆ ನೀಡಿ 06-6-2014ಮಳೆಗಾಲ ಕೇರಳದಲ್ಲಿ ಆರಂಭವಾಗುವುದೆಂದು ಭಾರತದ ಹವಾಮಾನ ಇಲಾಖೆ ಹೇಳಿದೆ
Start a discussion about ಸದಸ್ಯ:Jeevan kasaragod/sandbox
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಸದಸ್ಯ:Jeevan kasaragod/sandbox.