ಸದಸ್ಯರ ಚರ್ಚೆಪುಟ:Harshitha K 98

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಹರ್ಷಿತಾ. ನನ್ನ ತಂದೆಯ ಹೆಸರು ಎಸ್.ಕುಮಾರ್ . ತಾಯಿಯ ಹೆಸರು ಶಾರದಾ.ಡಿ. ಮೇ 29, 1998ರಂದು ಪುತ್ತೂರಿನಲ್ಲಿ ಜನಿಸಿದೆ. ನನ್ನ ತಂದೆ ಮಂಗಳೂರಿನ ಕೆ.ಎಂ.ಸಿ ಹಾಸ್ಟೆಲಿನ ವ್ಯವಸ್ಥಾಪಕರಾಗಿದ್ದಾರೆ. ತಾಯಿ ಗೃಹಿಣಿ. ನನ್ನ ಹಳ್ಳಿಯು ಸ್ವಚ್ಛ ವಾತಾವರಣದಿಂದ ತುಂಬಿದೆ ಮತ್ತು ನನ್ನ ಹಳ್ಳಿಯಲ್ಲಿ ಸಂತೋಷವಿದೆ. ನಮ್ಮ ಹಳ್ಳಿಯು ಸುಂದರ ವಾತಾವರಣದಿಂದ ಕೂಡಿದೆ. ನಾನು ಪುತ್ತೂರಿನಲ್ಲಿ ನಾಲ್ಕು ವರ್ಷಗಳನ್ನು ಕಳೆದು ನಂತರ ನಾನು ಮಂಗಳೂರಿಗೆ ಬಂದು ನನ್ನ ತಂದೆ ತಾಯಿ ಗೋರಿಗುಡ್ಡೆಯಲ್ಲಿರುವ ಸನ್ಶಾಯಿನ್ ನರ್ಸರಿಗೆ ಸೇರಿಸಿದರು. ನಾನು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದು ಸಂತ ಜೆರೋಸಾ ಶಾಲೆಯಲ್ಲಿ. ನನ್ನ ಶಾಲಾ ದಿನಗಳಲ್ಲಿ ಸಮಾಜ ವಿಜ್ಞಾನ ನನ್ನ ನೆಚ್ಚಿನ ವಿಷಯವಾಗಿತ್ತು. ಸಹೋದರಿ ಲತಾ ಅವರು ಸಮಾಜ ವಿಜ್ಞಾನದ ಶಿಕ್ಷಕಿಯಾಗಿದ್ದರು. ಹೀಗೆ ಅನೇಕ ಶಿಕ್ಷಕಿಯರ ಮಾರ್ಗದರ್ಶನದಿಂದ ನಾನು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದೆ.

ನನ್ನ ನೆಚ್ಚಿನ ಹವ್ಯಾಸಗಳು - ಅನೇಕ ಪುಸ್ತಕಗಳನ್ನು ಓದುವುದು ,ದೂರದರ್ಶನವನ್ನು ನೋಡುವುದು , ನೃತ್ಯ ಮಾಡುವುದು , ರೇಖಾಚಿತ್ರ ಬಿಡಿಸುವುದು, ಅಂಚೆಚೀಟಿ ಸಂಗ್ರಹಿಸುವುದು ಇತ್ಯಾದಿ. 

ನಾನು ಸಂತ ಆಗ್ನೇಸ್ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದೆ. ಕೇವಲ ನಮ್ಮ ಕಾಲೇಜಿನ ನುರಿತ ಪ್ರಾಧ್ಯಾಪಕರ ಬೋಧನೆಯಿಂದ ನಾನು ದ್ವಿತೀಯ ಪಿಯುಸಿಯ ಪರೀಕ್ಷೆಯಲ್ಲಿಯೂ ಸಹ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದು ಸಂತಸದ ವಿಷಯ.

  1. ನಿಮ್ಮ ಪರಿಚಯ ಚರ್ಚೆ ಪುಟದಲ್ಲ.--Lokesha kunchadka (ಚರ್ಚೆ) ೦೭:೨೩, ೬ ಸೆಪ್ಟೆಂಬರ್ ೨೦೧೬ (UTC)