ಸದಸ್ಯರ ಚರ್ಚೆಪುಟ:Haribhakta
ಸುಸ್ವಾಗತ!
[ಬದಲಾಯಿಸಿ]ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಪ್ರಹ್ಲಾದ ರಾವ್ ಅವರ ಬಗ್ಗೆ ಲೇಖನ ಆಗಲೆ ಈ ಪುಟದಲ್ಲಿ ಇದೆ. ನೀವು ಚರ್ಚೆಪುಟ:A.n.prahlada rao ಎಂಬಲ್ಲಿ ಸೇರಿಸಿರುವ ಮಾಹಿತಿಯನ್ನು ಈ ಲೇಖನ ಪುಟದೊಳಕ್ಕೆ ಸೇರಿಸಬೇಕೆಂದು ಕೋರಿಕೆ. ಶುಶ್ರುತ \ಮಾತು \ಕತೆ ೦೩:೨೭, ೨೩ ಡಿಸೆಂಬರ್ ೨೦೦೭ (UTC) ಅ.ನಾ.ಪ್ರಹ್ಲಾದ ರಾವ್
ಅ.ನಾ.ಪ್ರಹ್ಲಾದ ರಾವ್‌ರವರು, ಕನ್ನಡದ ಪದಬಂಧ ಲೇಖಕರಲ್ಲಿ ಪ್ರಮುಖರು. ಇವರು ಕನ್ನಡದಲ್ಲಿ ಸುಮಾರು ೨೦,೦೦೦ ಪದಬಂಧಗಳನ್ನು ರಚಿಸಿದ್ದಾರೆ. ಇವರ ಪದಬಂಧಗಳು ಕನ್ನದದ ಪ್ರಮುಖ ಪ್ರತ್ರಿಕೆಗಳು ಹಾಗು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ.
ಜೀವನ
ಜುಲೈ ೨೪,೧೯೫೩ರಂದು ಕೋಲಾರ ಜಿಲ್ಲೆಯ ಅಬ್ಬಣಿ ಗ್ರಾಮದಲ್ಲಿ ಜನಿಸಿದ ಇವರು ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನವನ್ನು ೧೯೭೫ರಲ್ಲಿ ಆರಂಭಿಸಿದರು. ೧೯೮೩ರಲ್ಲಿ ಕರ್ನಾಟಕ ಸರ್ಕಾರದ ಮಾಹಿತಿ ಇಲಾಖೆಗೆ ಸೇರಿಕೊಂಡರು.
ಸಾಧನೆ
೧೯೮೪ರಲ್ಲಿ ಪತ್ರಿಕೆಗಳಿಗೆ ಪದಬಂಧಗಳನ್ನು ರಚಿಸಲು ಆರಂಭಿಸಿದ ಇವರು, ಚಲನಚಿತ್ರ,ಕ್ರೀಡೆ,ಸಾಮಾನ್ಯ ಜ್ಞಾನ,ಪೌರಾಣಿಕ ಹಾಗು ವಿಜ್ಞಾನ ವಿಷಯಗಳಲ್ಲಿ ಪದಬಂಧಗಳನ್ನು ರಚಿಸಿದರು. ಇವರು ರಚಿಸಿದ ಪದಬಂಧಗಳು, ಕರ್ನಾಟಕದ ಪ್ರಮುಖ ಪತ್ರಿಕೆಗಳಾದ, ಪ್ರಜಾವಾಣಿ,ವಿಜಯ ಕರ್ನಾಟಕ,ಕನ್ನಡ ಪ್ರಭ,ಸಂಯುಕ್ತ ಕರ್ನಾಟಕ, ತರಂಗ, ಈ ಸಂಜೆ, ಅರಗಿಣಿ, ಪ್ರಿಯಾಂಕ, ಚಿತ್ರ, ಕಂದಾಯವಾತೆ೯ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಪುಸ್ತಕಗಳು
ಬಂಗಾರದ ಮನುಷ್ಯ (ಆತ್ಮಚರಿತ್ರೆ) - ಕನ್ನಡದ ಮೇರುನಟ ಡಾ.ರಾಜಜಕುಮಾರ್ ಅವರ ಆತ್ಮಚರಿತ್ರೆಯಾದ ಬಂಗಾರದ ಮನುಷ್ಯ ಪುಸ್ತಕವನ್ನು ಇವರು ರಚಿಸಿದ್ದಾರೆ. ಡಾ.ರಾಜ್‌ಕುಮಾರ ಅಭಿನಯದ ೨೦೮ ಚಲನಚಿತ್ರಗಳ ಸಮಗ್ರ ಮಾಹಿತಿಯನ್ನು ಹಾಗೂ ಡಾ.ರಾಜಜಕುಮಾರ್ ಅವರ ಜೀವನ ಸಾಧನೆಯನ್ನು ಈ ಪುಸ್ತಕ ಒಳಗೊಂಡಿದೆ.
ಬೆಳ್ಳಿತೆರೆ ಬೆಳಗಿದವರು ಇವರ ಎರಡನೆಯ ಪುಸ್ತಕ. ಕನ್ನಡ ಚಲನಚಿತ್ರ ರಂಗದ ವಿವಿಧ ಕ್ಷೇತ್ರಗಳಲ್ಲಿ ದುಡಿದ ೧೧೫ ಮಂದಿ ಮಹಾನುಭಾವರ ವ್ಯಕ್ತಿ ಚಿತ್ರಣವನ್ನು ಈ ಪುಸ್ತಕ ಒಳಗೊಂಡಿದೆ
[ಬದಲಾಯಿಸಿ] Sources
http://www.thehindubusinessline.com/2001/05/14/stories/101444g3.htm http://www.hindu.com/2005/07/10/stories/2005071016170100.htm http://www.hinduonnet.com/thehindu/fr/2005/12/02/bangindx.htm http://www.hinduonnet.com/thehindu/thscrip/print.pl?file=2007070650300400.htm&date=2007/07/06/&prd=fr& http://www.hinduonnet.com/thehindu/lf/2002/09/22/stories/2002092200070200.htm http://www.hindu.com/2006/04/14/stories/2006041416600500.htm