ಸದಸ್ಯರ ಚರ್ಚೆಪುಟ:Ckmajor
ಸಾರಾಂಶ
[ಬದಲಾಯಿಸಿ]ನಮಸ್ತೆ, ಹೊಸ ಲೇಖನಗಳಿಗೆ ಧನ್ಯವಾದಗಳು. ಲೇಖನಗಳನ್ನು ಬದಲಿಸಿದಾಗ ಸಾರಾಂಶ ಬರೆಯುವುದನ್ನು ಮರೆಯದಿರಿ. --hpnadig ೧೧:೧೯, ೩ ನವೆಂಬರ್ ೨೦೦೪ (UTC)
ಲಾಗಿನ್
[ಬದಲಾಯಿಸಿ]ಲಾಗಿನ್ ಆಗಿ ನೀವು ಲೇಖನಗಳು ಬರೆದಲ್ಲಿ ಲೇಖನ ಬರೆದ ಗೌರವ ನಿಮಗೆ ಸಲ್ಲುತ್ತದೆ, ಇಲ್ಲವಾದಲ್ಲಿ ಯಾರೂ ಗುರುತುಹಿಡಿಯಲಾಗದ ನಿಮ್ಮ ಐಪಿಗೆ ಹೋಗುತ್ತದೆ :) ಅದಕ್ಕಾಗಿ ಹೇಳಿದೆ. --hpnadig ೧೩:೧೩, ೪ ನವೆಂಬರ್ ೨೦೦೪ (UTC)
vijnana
[ಬದಲಾಯಿಸಿ]- hi, I've set the vijnana spelling right. looks like this went unnoticed for a long time. ;) Feel free to correct spelling mistakes if you come across any. The category bar is in the Template which is accessible here. --hpnadig ೧೫:೨೬, ೮ ನವೆಂಬರ್ ೨೦೦೪ (UTC)
Maasti
[ಬದಲಾಯಿಸಿ]ಮಾನ್ಯ ಪವನಜರವರು ಕೊಟ್ಟ ಮಾಹಿತಿಯನ್ನು ಸೇರಿಸಿದೆ, ಚಂದ್ರಕಾಂತ್. ಆದರೆ ಅದನ್ನು ಹಿಂದಿದ್ದ ಲೇಖನ್ದದೊಂದಿಗೆ ಹೊಂದಿಸಿ ಸರಿ ಮಾಡಲು ಸಮಯವಾಗಲಿಲ್ಲ. ಸಮಯ ಸಿಕ್ಕಿದಲ್ಲಿ ದಯಮಾಡಿ ಅದನ್ನು ಸಂಪಾದಿಸಿ. PS:ಮುಂಚೆ ಇದ್ದ ಬರಹದಿಂದ ಏನನ್ನೂ ತೆಗೆದಿಲ್ಲ.
--hpnadig ೧೮:೪೧, ೧೬ ನವೆಂಬರ್ ೨೦೦೪ (UTC)
Welcome back!
[ಬದಲಾಯಿಸಿ]hi, welcome back :) glad to see you back contributing to kn wiki. I was wondering whether you could help out with the 1000th article. It needs a bit of help from all the active members. cheers, --ಹರಿ ಪ್ರಸಾದ್ ನಾಡಿಗ್ ೧೬:೫೨, ೨೦ July ೨೦೦೫ (UTC)
ಸುದ್ದಿ ಪುಟಕ್ಕೆ ಸೇರ್ಪಡೆ
[ಬದಲಾಯಿಸಿ]ಸುದ್ದಿ ಸೇರಿಸಲು ಸುದ್ದಿ ಕುರಿತ ಕನಿಷ್ಠಪಕ್ಷ ಒಂದು ಲೇಖನವಾದರೂ ಇರಬೇಕು. ವಿವರಗಳಿಗೆ FAQ ನೋಡಿ.
-- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೧:೦೪, ೬ September ೨೦೦೫ (UTC)
ಗುಬ್ಬಿ ವೀರಣ್ಣ
[ಬದಲಾಯಿಸಿ]ಗುಬ್ಬಿ ವೀರಣ್ಣನವರ ಬಗ್ಗೆ ಲೇಖನ ಬಹಳ ಚೆನ್ನಾಗಿ ಮೂಡಿಬಂದಿದೆ. ಅಭಿನಂದನೆಗಳು :) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೭:೦೪, ೨೨ September ೨೦೦೫ (UTC)
ಧನ್ಯವಾದಗಳು
[ಬದಲಾಯಿಸಿ]ಧನ್ಯವಾದಗಳು CKMajor ಅವರಿಗೆ... :-)
ವಿನಂತಿ
[ಬದಲಾಯಿಸಿ]ನಾಡಿಗರೆ ದಯವಿಟ್ಟು ಪ್ರಸಿದ್ಧ ಸಂಗೀತಗಾರರು ಟೆಂಪ್ಲೇಟಿನಲ್ಲಿ ಡಿ. ಕೆ. ಪಟ್ಟಮ್ಮಾಲ್ ಹೆಸರನ್ನು ಡಿ. ಕೆ. ಪಟ್ಟಮ್ಮಾಳ್ ಎಂದು ಬದಲಿಸುವಿರಾ?
ಧನ್ಯವಾದಗಳು
- ಚಂದ್ರಕಾಂತ್
--Ckmajor ೧೨:೪೯, ೧೮ October ೨೦೦೫ (UTC)
- ಖಂಡಿತವಾಗಿ. ಯಾವುದೇ ಲೇಖನದಲ್ಲಿರುವ ಟೆಂಪ್ಲೇಟಿಗೆ ತಲುಪಲು ಆಯಾ ಲೇಖನವನ್ನು ಎಡಿಟ್ ಮಾಡುವಾಗ ಕೆಳಗೆ ಸ್ಕ್ರಾಲ್ ಮಾಡಿ ನೋಡಿ. ಲೇಖನದಲ್ಲುಪಯೋಗಿಸಿದ ಟೆಂಪ್ಲೇಟುಗಳಿಗೆ ಲಿಂಕ್ ಇರುತ್ತದೆ. ನೀವು ಕೇಳಿದ ಟೆಂಪ್ಲೇಟು ಇಲ್ಲಿದೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೨:೫೭, ೧೮ October ೨೦೦೫ (UTC)
France
[ಬದಲಾಯಿಸಿ]ಪ್ರಾಂಸ್ ಲೇಖನ ಅಳಿಸಿ
[ಬದಲಾಯಿಸಿ]ನಾಡಿಗರೆ ಪ್ರಾಂಸ್ ಲೇಖನ ಫ್ರಾಂಸ್ ಎಂಬ ಶೀರ್ಷಿಕೆಯಡಿ ಇರಬೆಕಿತ್ತು. ತಪ್ಪನ್ನು ಸರಿಪಡಿಸಿರುವೆ. ಹಳೆಯ ಪ್ರಾಂಸ್ ಲೇಖನವನ್ನು ದಯವಿಟ್ಟು ಅಳಿಸುವಿರ?
- ಚಂದ್ರಕಾಂತ್
--Ckmajor ೧೨:೪೯, ೧೮ October ೨೦೦೫ (UTC)
- done :) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೪:೧೦, ೮ November ೨೦೦೫ (UTC)
- ಹರಿಪ್ರಸಾದ್, ಈ ಲೇಖನ France ಬಗ್ಗೆ ಇರಬೇಕಲ್ಲ. ಹಾಗಿದ್ದರೆ ಅದನ್ನು ಫ್ರಾನ್ಸ್ ಎಂದು ಬರೆಯುವುದು ಹೆಚ್ಚು ಸೂಕ್ತವಲ್ಲವೇ? --Ismail 12:15, ೭ April ೨೦೦೬ (UTC)
ಕೆ ಆರ್ ನಾರಾಯಣನ್ ಲೇಖನ
[ಬದಲಾಯಿಸಿ]ಕೆ ಆರ್ ನಾರಾಯಣನ್ ಲೇಖನಕ್ಕೆ ಮುಂಚಿದ್ದ ತಪ್ಪು ಹೆಸರಿನ ಲೇಖನ ಅಳಿಸಿರುವೆ. ಇನ್ನು ಮುಂದೆ ಈ ರೀತಿಯ ಬದಲಾವಣೆ ಮಾಡಬೇಕಾಗಿ ಬಂದರೆ ಲೇಖನವನ್ನು ಸರಿಯಾದ ಹೆಸರಿನ ಪುಟಕ್ಕೆ ಸ್ಥಳಾಂತರಿಸಿದರಾಯಿತು (ಮೇಲಿನ ಟ್ಯಾಬುಗಳಲ್ಲಿ 'ಸ್ಥಳಾಂತರಿಸಿ' ಎನ್ನುವ ಆಪ್ಶನ್ ನೋಡಿ). -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೦:೧೮, ೧೦ November ೨೦೦೫ (UTC)
ವಿಶೇಷ ಲೇಖನದ ಬದಲಾವಣೆ
[ಬದಲಾಯಿಸಿ]ನಮಸ್ಕಾರ ನಾಡಿಗರೆ.
ಬಹಳ ದಿನದಿಂದ ಗಾಂಧಿ ತಾತ ವಿಶೇಷ ಲೇಖನದ ಅಂಕಣ ಆಕ್ರಮಿಸಿಕೊಂಡಿದ್ದಾರೆ. ನವೆಂಬರ್ ತಿಂಗಳು, ರಾಜ್ಯೋತ್ಸವದ ತಿಂಗಳು ಯವುದಾದರು ಸಮಂಜಸವಾದ ಲೇಖನ ಅಲ್ಲಿ ಅಂಟಿಸಿದರೆ ಹೇಗಿರುತ್ತೆ?
ಧನ್ಯವಾದಗಳು
ಚಂದ್ರಕಾಂತ್
- ಖಂಡಿತವಾಗಿ ಬದಲಾಯಿಸಬಹುದು. ಸೂಕ್ತ ಲೇಖನವನ್ನು ಹುಡುಕಿ ಸಾಧ್ಯವಾದಲ್ಲಿ ಬದಲಾಯಿಸುವುದು. ಬದಲಾಯಿಸುವುದು ಹೇಗೆ ಎಂಬುದು ನಿಮಗೆ ತಿಳಿದಿದೆಯಲ್ಲವೇ? -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 20:27, ೧೭ November ೨೦೦೫ (UTC)
Kannada on maps
[ಬದಲಾಯಿಸಿ]Hi Ck, I see you have made maps with kannada captions on it. Which software did you use to do that? You can leave the reply here en:User_talk:Vyzasatya --Vyzasatya ೧೮:೦೭, ೧೯ November ೨೦೦೫ (UTC)
ಅಳಿಸಬೇಕಾದ ಪುಟಗಳು
[ಬದಲಾಯಿಸಿ]ಯಾವುದಾದರೂ ಪುಟವನ್ನು ಅಳಿಸುವಿಕೆಗೆ ಹಾಕಬೇಕಾದಲ್ಲಿ, {{ಅಳಿಸುವಿಕೆ}} ಟೆಂಪ್ಲೇಟ್ ಉಪಯೋಗಿಸಿ. ಈ ಟೆಂಪ್ಲೇಟಿನ ಬಗ್ಗೆ ಉಳಿದವರಿಗೂ ತಿಳಿಸಿ. ಧನ್ಯವಾದಗಳು - ಹೆಚ್ ಪಿ -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 11:45, ೩೦ November ೨೦೦೫ (UTC)
- ಟೆಂಪ್ಲೇಟ್‌ಗಾಗಿ ಧನ್ಯವಾದಗಳು ನಾಡಿಗರೆ. ಹಲವಾರು ತಪ್ಪು ಶೀರ್ಷಿಕೆಗಳಿರುವ ಪುಟಗಳಿವೆ. ಸಮಯಾವಕಾಶವಿದ್ದಾಗ ತಿದ್ದುಪಡಿಗಳನ್ನು ಮಾಡಬೇಕೆಂದಿರುವೆ. ಕೆಲವೆಡೆ ಲೇಖನ ತಪ್ಪು ಶೀರ್ಷಿಕೆ ಅಡಿ ಇದ್ದರೂ ಹಲವರ ಪ್ರಯತ್ನದಿಂದ ರೂಪುಗೊಂಡಿರುತ್ತದೆ. ಉದಾ. ಕರ್ಣಾಾಟಕ. ಇಂತಹ ಸಂಧರ್ಭದಲ್ಲಿ ಸ್ಥಳಾಂತರ(redirect) ಮಾಡಿದರೆ ಅನಾವಶ್ಯಕವಾಗಿ ತಪ್ಪು ಶೀರ್ಷಿಕೆಯ ಲೇಖನ ಉಳಿದುಕೊಳ್ಳುತ್ತದೆ. ಅಳಿಸಿದರೆ ಲೇಖನ ರಚಿಸಲು ಶ್ರಮಿಸಿದವರ ಹೆಸರು ಹೋಗುತ್ತದೆ. ಸ್ವಲ್ಪ ಗೊಂದಲಮಯವಾಗಿದೆ ವಿಷಯ. ನನ್ನ ಆಭಿಪ್ರಾಯದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ತಪ್ಪು ಶೀರ್ಷಿಕೆಯ ಲೇಖನಗಳನ್ನು ಅಳಿಸಬೇಕು. ಲೇಖಕರ ಹೆಸರೂ ಉಳಿಸಿ ಶೀರ್ಷಿಕೆಯನ್ನೂ ಬದಲಿಸುವ (rename ಮಾಡುವ) ಸೌಕರ್ಯ ವಿಕಿಪೀಡಿಯದಲ್ಲಿ ಇದ್ದಂತಿಲ್ಲ. ಈ ಬಗ್ಗೆ ತಮಗೇನಾದರು ಗೊತ್ತಾ?
ಮತ್ತೊಮ್ಮೆ ಧನ್ಯವಾದಗಳು
--ಚಂದ್ರಕಾಂತ್ 17:01, ೩೦ November ೨೦೦೫ (UTC)
- ಮೊದಲಿಗೆ, ಕರ್ಣಾಟಕ ತಪ್ಪು ಶೀರ್ಷಿಕೆಯಲ್ಲ! ಬೇಕೆಂತಲೇ 'ಕರ್ಣಾಟಕ'ವೆಂದು ಶೀರ್ಷಿಕೆ ಇಟ್ಟಿರೋದು. ನಮ್ಮ ರಾಜ್ಯದ ನಿಜವಾದ ಹೆಸರು ಕರ್ಣಾಟಕವೇ, ಅದು ಬಾಯಿಂದ ಬಾಯಿಗೆ ಬಂದು ಕರ್ನಾಟಕವಾಗಿದೆ ಎಂದು ಸಾಹಿತಿಗಳು ಹೇಳಿಲ್ಲವೆ?
- ಇನ್ನು ಅಳಿಸುವಿಕೆಗೆ ಸಂಬಂಧಿಸಿದಂತೆ - ಲೇಖನದ ಶೀರ್ಷಿಕೆ ತಪ್ಪಾಗಿ ಕಂಡುಬಂದಲ್ಲಿ ನೇರವಾಗಿ ಅಳಿಸುವಿಕೆಗಾಗಲೀ, 'ಸರಿಪಡಿಸಿದ ಶೀರ್ಷಿಕೆ'ಯಡಿ ಹಿಂದಿನ ಲೇಖನದ ಕಂಟೆಂಟ್ ಹಾಕಿ ಹಿಂದಿನದನ್ನು ಅಳಿಸುವಿಕೆಗೆ ಹಾಕುವುದನ್ನೂ ಕೂಡಲೇ ಮಾಡಬೇಡಿ (ಆತುರದಿಂದ ಈ ಕೆಲಸವನ್ನು ಮಾಡೋದು ಬೇಡ). ಶೀರ್ಷಿಕೆ ತಪ್ಪೆನಿಸಿದಲ್ಲಿ ಆಯಾ ಚರ್ಚೆ ಪುಟದಲ್ಲಿ ಒಂದು ಕಾಮೆಂಟು ಸೇರಿಸಿ. ಹೊಸ ಶೀರ್ಷಿಕೆ ಆ ಲೇಖನವನ್ನು ಸಂಪಾದನೆ ಮಾಡುತ್ತಿರುವ ಸಾಕಷ್ಟು ಜನರಿಗೆ ಒಪ್ಪಿಗೆಯಾದಲ್ಲಿ ಅದನ್ನ ಸ್ಥಳಾಂತರಿಸೋಣ.
- ಇನ್ನು, ಸ್ಥಳಾಂತರ ಮಾಡೋದರಿಂದ ತೊಂದರೆ ಏನೂ ಇಲ್ಲ. ತಪ್ಪಾದ ಶೀರ್ಷಿಕೆಯಡಿ ಪ್ರಮುಖ ಕಂಟೆಂಟ್ ಇಲ್ಲದಿದ್ದರಾಯಿತು. ತಪ್ಪು ಶೀರ್ಷಿಕೆ ಸರಿಯಾದ ಶೀರ್ಷಿಕೆಗೆ ರಿಡೈರೆಕ್ಟ್ ಆದರೂ ತೊಂದರೆ ಇಲ್ಲ... ಕೊನೆಗೆ ಸರಿಪಡಿಸಿದ ಶೀರ್ಷಿಕೆಗೇ ಕರೆದೊಯ್ಯುತ್ತದಲ್ವೆ? ಆದ್ದರಿಂದ ಅದರ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳಬೇಡಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 12:01, ೧ December ೨೦೦೫ (UTC)
- ಧನ್ಯವಾದಗಳು
- --Ckmajor 15:31, ೧ December ೨೦೦೫ (UTC)
- ಹೌದ್ರಿ! ಏನೋ ಪ್ರಾಬ್ಲಮ್ಮಿರ್ಬೇಕು... ಈಗ ಸರಿ ಮಾಡಿದ್ದೇನೆ. ಒಮ್ಮೆ ನೋಡಿ ಹೇಳಿ -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 16:06, ೧ December ೨೦೦೫ (UTC)
ಲೇಖನ ಆಳಿಸಲು ಕೋರಿರುವೆ
[ಬದಲಾಯಿಸಿ]ನಮಸ್ಕಾರ ಪ್ರಸನ್ನ,
ತಾವು ಶುರುಮಾಡಿದ ಎರಡು ಚುಟುಕು ಲೇಖನಗಳಾದ ಮೈಖೇಲ್ ಜ್ಯಾಕ್ಸನ್ ಮತ್ತು ವೂಲ್ಫ್ ಗಾಂಗ್ ಅಮೇಡಯಸ್ ಮೊಜಾರ್ಟ್‌ಗಳು ತಪ್ಪು ಶೀರ್ಷಿಕೆಯಡಿ ಇದ್ದ ಕಾರಣ ಅಳಿಸಬೇಕೆಂದು ಕೋರಿರುವೆ. ಸರಿಯಾದ ಶೀರ್ಷಿಕೆಯ ವುಲ್ಫ್‌ಗ್ಯಾಂಗ್ ಅಮೆಡಿಯುಸ್ ಮೊಟ್ಜಾರ್ಟ್ (ಇದರ ಬಗ್ಗೆ ಜರ್ಮನ್ ಭಾಷೆಯ ಬಗ್ಗೆ ಇದ್ದ ಒಂದು ತಾಣದಿಂದ ಖಾತ್ರಿ ಪಡೆದುಕೊಂಡಿರುವೆ) ಮತ್ತು ಮೈಕಲ್ ಜ್ಯಾಕ್‌ಸನ್ ಎಂಬ ಎರಡು ಹೊಸ ಲೇಖನ ಶುರುಮಾಡಿರುವೆ. ವಿಕಿಪೀಡಿಯದ ಗುಣಮಟ್ಟ ಕಾಯ್ದುಕೊಳ್ಳಲು ಹೀಗೆ ಮಾಡಬೇಕಾಯಿತು. ತಪ್ಪಿದ್ದಲ್ಲಿ ದಯವಿಟ್ಟು ಕ್ಷಮಿಸಬೇಕು. ಸಮಯಾವಕಾಶವಿದ್ದಾಗ ಈ ರೀತಿಯ ತಿದ್ದುಪಡಿಗಳನ್ನು ಮಾಡಬೇಕೆಂದಿರುವೆ, ಕನ್ನಡ ವಿಕಿಪೀಡಿಯಕ್ಕಿ ಹೆಚ್ಚು ಹೊಸ ಲೇಖನಗಳ ಕೊಡುಗೆಯನ್ನು ನೀಡುವ ತಮ್ಮ ಸಹಕಾರ ಬೇಕಿದೆ.
ಧನ್ಯವಾದಗಳು
- ನಮಸ್ಕಾರ ಚಂದ್ರಕಾಂತ್,
- ನೀವು ಮೊಜಾರ್ಟ್ ಮತ್ತು ಮೈಖೇಲ್ ಜ್ಯಾಕ್ಸನ್ ಲೇಖನಗಳನ್ನು ಬದಲಾಯಿಸ ಬಹುದು. ನಿಮ್ಮ ಮೊಜಾರ್ಟ್ ಲೇಖನದ ಬದಲಾವಣೆಯನ್ನು ನಾನು ಸ್ವಾಗತಿಸುತ್ತೇನೆ. ಆದರೆ (Michael Jackson)ಅನ್ನು ನಿಜವಾದ ಅಂಗ್ಲ ಭಾಷಿಗರು ಮೈಖೇಲ್ ಎಂದೇ ಸಂಭೋಧಿಸುವುದನ್ನು ಕೇಳಿದ್ದೇನೆ. ನೀವು ಇನ್ನೋಬ್ಬರನ್ನು ವಿಚಾರಿಸಿ ಬೇಕಿದ್ದರೆ ಈ ಲೇಖನವನ್ನು ತೆಗೆದು ಹಾಕಬಹುದು.
- ಧನ್ಯವಾದಗಳು,
- ಪ್ರಸನ್ನ
- ಇದು ಮೈಕಲ್ ಅಥವಾ ಮೈಖೇಲ್ ಎಂಬುದನ್ನು ಖಾತರಿಪಡಿಸಿಕೊಂಡು ಲೇಖನಕ್ಕೆ ತಕ್ಕಂತೆ ಬದಲಾವಣೆ ಮಾಡಿ, ಸದ್ಯಕ್ಕೆ ಮುಂಚಿನ ಸಂಪಾದನೆಯ ಡೇಟ ಎರೇಸ್ ಆಗದ ಹಾಗೆ ಹಳೆಯ ಲೇಖನವನ್ನೇ ರೆಸ್ಟೋರ್ ಮಾಡಿ ಮೈಕಲ್ ಜ್ಯಾಕ್ಸನ್ ಶೀರ್ಷಿಕೆಗೆ ರೆಡೈರೆಕ್ಟ್ ಹಾಕಿರುವೆ. ಧನ್ಯವಾದಗಳು - -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 12:11, ೧ December ೨೦೦೫ (UTC)
ಧನ್ಯವಾದಗಳು
[ಬದಲಾಯಿಸಿ]ಸಹಾಯ ಪುಟಗಳನ್ನು ಬರೆಯುತ್ತ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಬಹಳಷ್ಟು ಜನರಿಗೆ ವಿಕಿಪೀಡಿಯ ಎಡಿಟ್ ಮಾಡಲು ಬರೋದಿಲ್ಲ. ಮೊದಲಿಗೆ ಯೂನಿಕೋಡ್ ಬರುತ್ತಿಲ್ಲವೆಂದು ಸ್ವಲ್ಪ ದಿನಗಳು ಮುಂದೆ ದಬ್ಬುತ್ತಾರೆ. ಆಮೇಲೆ ವಿಕಿ ಬಳಸೋದು ಗೊತ್ತಿಲ್ಲ ಅಂತ ಇನ್ನಷ್ಟು ದಿನ ಮುಂದೆ ದಬ್ತಾರೆ. ಇವೆರಡು ಮುಂದೂಡಿಕೆಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕಾಗಿದೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 20:29, ೨೬ December ೨೦೦೫ (UTC)
- ಸಹಾಯ ಪುಟಗಳಲ್ಲಿ ಈಗಾಗಲೇ ಇರುವ ಕೆಲವು ಸಹಾಯ ಪುಟಗಳಲ್ಲಿರುವ ಮಾಹಿತಿಯನ್ನು ಸಾಧ್ಯವಾದಲ್ಲಿ ಉಪಯೋಗಿಸಿ (ನಿಮ್ಮ ಕೆಲಸ ಸ್ವಲ್ಪ ಸುಲಭವಾಗಬಹುದು). ಮತ್ತು, {{ಸುಸ್ವಾಗತ}} ಹಾಗೂ {{Anonymous_user}} ಟೆಂಪ್ಲೇಟುಗಳ ಬಗ್ಗೆ ಸೂಕ್ತ ಜಾಗದಲ್ಲಿ ಸಾಧ್ಯವಾದಲ್ಲಿ ವಿವರಿಸಿ. ಧನ್ಯವಾದಗಳು -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 20:37, ೨೬ December ೨೦೦೫ (UTC)
ಸರ್ ಎಮ್.ವಿಶ್ವೇಶ್ವರಯ್ಯ
[ಬದಲಾಯಿಸಿ]ಚಂದ್ರಕಾಂತ್ ಅವರಿಗೆ ನಮಸ್ಕಾರ. ತಮ್ಮ ಸಂದೇಶ ದೊರೆಯಿತು. ಈ ವಿಚಾರವಾಗಿ ಒಂದು ಚಿಕ್ಕ ವಿನಂತಿ: ಈಗ ಇರುವ "...ವಿಶ್ವೇಶ್ವರಾಯ" ಎಂಬ ಶೀರ್ಷಕೆ ನಿಶ್ಚಯವಾಗಿ ತಪ್ಪು, ಅಲ್ಲವೆ?? ತಮಗೆ ಬೇರೆ ಅಭಿಪ್ರಾಯ ಇದೆಯೋ? ಅಭ್ಯಂತರ ಇಲ್ಲದೆ ಹೋದರೆ, ದಯವಿಟ್ಟು ಆ ಪುಟದ ಶೀರ್ಷಕೆಯನ್ನು "ಮೋಕ್ಷಗುಂಡಮ್ ವಿಶ್ವೇಶ್ವರಯ್ಯ" ಎಂದು ಬದಲಾಯಿಸಿ. ತಮ ವಿಶ್ವಾಸಿ, 67.20.232.184 00:58, ೨ January ೨೦೦೬ (UTC)
ಸಂಪದ
[ಬದಲಾಯಿಸಿ]ಚಂದ್ರಕಾಂತ್, ನಿಮ್ಮ ಬ್ಲಾಗಿನಲ್ಲಿ ಸಂಪದಕ್ಕೂ ಒಂದು ಲಿಂಕ್ ಹಾಕಲು ಸಾಧ್ಯವೆ? :)
ಹಾಗೆಯೇ ಪ್ಲಾನೆಟ್ ಕನ್ನಡದಲ್ಲಿ ನಿಮ್ಮ ಬ್ಲಾಗನ್ನು ಸೇರಿಸಲು ಅನುಮತಿ ಉಂಟೆ, ತಿಳಿಸಬೇಕು. ಧನ್ಯವಾದಗಳು -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 08:47, ೨ January ೨೦೦೬ (UTC)
ಮತ್ತೊಂದು ವಿಷಯ... ನಿಮ್ಮ ಸದಸ್ಯ ಪುಟದಲ್ಲಿರುವ ನಿಮ್ಮ ಬ್ಲಾಗಿನ ಲಿಂಕು ಕೆಲಸ ಮಾಡುತ್ತಿಲ್ಲ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 10:25, ೨ January ೨೦೦೬ (UTC)
- ಪ್ಲಾನೆಟ್ ಕನ್ನಡದಲ್ಲಿ ನಿಮ್ಮ ಬ್ಲಾಗು ಸೇರಿಸಿಯಾಯ್ತು. ಆದರೆ ನಾನು ಕಳುಹಿಸಿದ ಇ-ಮೇಯ್ಲ್ ನಿಮಗೆ ಬಂದು ತಲುಪಿತೆ? ಇಲ್ಲವಾದಲ್ಲಿ ನೀವು ಸಾಮಾನ್ಯವಾಗಿ ಚೆಕ್ ಮಾಡುವ ಇ-ಮೇಯ್ಲ್ ವಿಳಾಸದಿಂದ ನನಗೊಂದು ಬ್ಲಾಂಕ್ ಮೇಯ್ಲ್ ಕಳುಹಿಸಿ. hpnadig AT gmail DOT com. ಒಂದಷ್ಟು ಮಾಹಿತಿ ಬೇಕಿತ್ತು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 20:07, ೫ January ೨೦೦೬ (UTC)
- ping. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 07:47, ೬ January ೨೦೦೬ (UTC)
- ಪ್ಲಾನೆಟ್ ಕನ್ನಡದಲ್ಲಿ ನಿಮ್ಮ ಬ್ಲಾಗು ಸೇರಿಸಿಯಾಯ್ತು. ಆದರೆ ನಾನು ಕಳುಹಿಸಿದ ಇ-ಮೇಯ್ಲ್ ನಿಮಗೆ ಬಂದು ತಲುಪಿತೆ? ಇಲ್ಲವಾದಲ್ಲಿ ನೀವು ಸಾಮಾನ್ಯವಾಗಿ ಚೆಕ್ ಮಾಡುವ ಇ-ಮೇಯ್ಲ್ ವಿಳಾಸದಿಂದ ನನಗೊಂದು ಬ್ಲಾಂಕ್ ಮೇಯ್ಲ್ ಕಳುಹಿಸಿ. hpnadig AT gmail DOT com. ಒಂದಷ್ಟು ಮಾಹಿತಿ ಬೇಕಿತ್ತು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 20:07, ೫ January ೨೦೦೬ (UTC)
ವಿಕಿಪೀಡಿಯ ಸಮ್ಮೇಳನ
[ಬದಲಾಯಿಸಿ]ಪೂರ್ಣ ಬರೆಯಬೇಕು, ಒಮ್ಮೆ ನೋಡಿ... ಸಾಧ್ಯವಾದಲ್ಲಿ improve ಮಾಡಿ -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 19:38, ೨೬ January ೨೦೦೬ (UTC)
ಹೊಂದಾಣಿಕೆ ಸಮಸ್ಯೆ
[ಬದಲಾಯಿಸಿ]ನಾಡಿಗರೆ
ಕನ್ನಡ ವಿಕಿಪೀಡಿಯದ ಎಲ್ಲಾ ಸಾಲುಗಳು IEಯಲ್ಲಿ ಮಾತ್ರ ಮಧ್ಯಕ್ಕೆ ಹೊಂದಿದೆ. ಆದರೆ ಆಪೆರಾ ಜಾಲದರ್ಶಕದಲ್ಲಿ (ಬ್ರೌಸರ್) ಸರಿಯಾಗಿ ಕಾಣಿಸುತ್ತಿದೆ. ಬೇರೆ ಕನ್ನಡ ಯುನಿಕೋಡ್ ತಾಣಗಳು(ಸಂಪದ, ವಿಶ್ವ ಕನ್ನಡ ಇತ್ಯಾದಿ) IEಯಲ್ಲಿ ಸರಿಯಾಗಿ ಕಾಣುತ್ತಿದೆ. ನಿಮಿಗೇನಾದರು ಇದರ ಬಗ್ಗೆ ಗೊತ್ತೆ?
--ಚಂದ್ರಕಾಂತ್ 10:13, ೨೪ January ೨೦೦೬ (UTC)
- ಸರಿಪಡಿಸಲಾಗಿದೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 13:41, ೨೭ January ೨೦೦೬ (UTC)
Could you please write a stub http://kn.wikipedia.org/wiki/Kur%C3%B3w - just a few sentences based on http://en.wikipedia.org/wiki/Kur%C3%B3w ? Only 2 -5 sentences enough. Please. Pietras1988 21:07, ೩೦ January ೨೦೦೬ (UTC)
Article request
[ಬದಲಾಯಿಸಿ]Greetings Ckmajor!, Could you please kindly help me write a stub for this article? - It is based on the English article just several lines would be sufficient enough. Please. It does not matter if you are not a Christian. Your help would be gratefully appreciated (I do not know what the correct title for Kannada should be). -- David, 10 March 2006
ಪತ್ತೇನೆ ಇಲ್ವಲ್ಲ!
[ಬದಲಾಯಿಸಿ]ಏನ್ ಸ್ವಾಮಿ, ಮೂವಿಗಳ ಮಧ್ಯೆ ಸಮಯವಾಗಿಲ್ಲವೋ? ಒಂದಷ್ಟು ವಿಕಿಯ ಕೆಲಸಗಳಲ್ಲಿ ಕೈ ಸೇರಿಸೋದಲ್ವೆ? :P
- )
-- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೧:೨೧, ೯ July ೨೦೦೬ (UTC)
- ಎಲ್ಲಿ ಮೂವಿಗಳು ಸ್ವಾಮಿ? ಆಫಿಸ್‌ನಲ್ಲಿ ಚಡ್ಡಿ ಹರಿಯುವಷ್ಟು ಕೆಲಸ. ಏನೂ ಬರೆದಿಲ್ಲವಲ್ಲಾ ಅಂಥ ಗಿಲ್ಟಿ ಫೀಲಿಂಗ್ ಕೂಡ ಕಾಡ್ತಾ ಇದೆ. ಸಧ್ಯದಲ್ಲಿಯೆ ಬಿಡುವು ಮಾಡಿಕೊಂಡು ವಾಪಸ್ ಬರ್ತಿನಿ.
--ಚಂದ್ರಕಾಂತ್ ೧೨:೦೬, ೧೦ July ೨೦೦೬ (UTC)
- ಹೆ ಹೆ. ;) ನಿಮ್ಮ ಮೂವಿ ಲಿಸ್ಟ್ ಚೆಂದ ಅದ್ರಿ. ನೀವು ಬಿಡುವು ಮಾಡಿಕೊಂಡು ವಾಪಸ್ ಬನ್ನಿ, ಆಗ ಮಾತಾಡಣ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೨:೨೫, ೧೧ July ೨೦೦೬ (UTC)