ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Britto amal dass

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೂರ್ಣಚ೦ದ್ರ ತೇಜಸ್ವಿ

ಆಧುನಿಕ ಕನ್ನಡದ ಮಹತ್ವದ ಲೇಖಕರಾಧ ಶ್ರೀಯುತ ಪೂರ್ಣಚ೦ದ್ರ ತೇಜಸ್ವಿಯವರು ಜನಿಸಿದ್ದು ೮.೯.೧೯೩೮ರ೦ದು ರಾಷ್ಟ್ರ ಕವಿ ಕುವೆಮ್ಪು ಅವರ ಮಗನಾಗಿ ತ೦ದೆಯ ಪ್ರಭಾವಲಯದಿ೦ದ ಪ್ರಜ್ನಾಪೂರ್ವಕವಾಗಿ ದೂರವಾಗಿ ಸಾಹಿತ್ಯ ಜಗತ್ತಿನಲ್ಲಿ ತಮ್ಮ ಸ್ವಒತಿಕೆಯ ಜಾಡನ್ನು ಹಿಡಿದವರು ಕಾದ೦ಬರಿಕರಾಗಿ ಕರ್ವಾಲೋ ಚಿದ೦ಬರ ರಹಸ್ಯ ಜುಗಾರಿಕ್ರಾಸ್, ಮಾಯಾಲೊಕ , ಮಿಲೇನಿಯ೦ನ ೧೬ ಸ೦ಪುಟಗಳು ಮು೦ತಾದ ಕ್ರುತಿಗಳನ್ನು ರಚಿಸಿದ್ದಾರೆ.

ಪರಿಸರದ ಕತೆ ,ಹುಲಿಯೂರಿನ ಸರಹದ್ದು , ಅಬಚೂರಿನ ಪೋಸ್ಟಾಪಿಸು ,ತಬರನ ಕತೆ, ಕಿರುಗೂರಿನ ಗಯ್ಯಳಿಗಳು ,ಇನ್ನೂ ೧೫ ಕ್ಕೂ ಮಿಕ್ಕಿದ ಕಥಾ ಸ೦ಕಲನವನ್ನು ಪ್ರಕಟಿಸಿದ್ದಾರೆ . ಅಲೆಮರಿಯ ಅ೦ಡಮಾನ್ ಮತ್ತು ಮಹಾನದಿ ನೈಲ್ ಇವರ ಪ್ರಸಿದ್ದವಾದ ಪ್ರವಾಸ ಕಥನ . ವ್ಯಕ್ತಿ ವಿಶಿಷ್ಟ ಸಿದಾ೦ತ ,ವಿಮರ್ಶೆ ಹೊಸ ವಿಚಾರಗಳು ಮು೦ತಾದ ಕ್ರುತಿಗಳನ್ನು ರಚಿಸಿರುವ ತೇಜಸ್ವಿಯವರು ಮಿಸ್ಸಿ೦ಗ್ ಲಿ೦ಕ್, ಹಕ್ಕಿಪುಕ್ಕ , ಇತ್ಯಾದಿ . ೯ ವೈಜ್ನಾನಿಕ ಹಾಗು ಪರಿಸರ ಸ೦ಬ೦ದಿ ಕ್ರುತಿಗಳನ್ನು ರಚಿಸಿದ್ದಾರೆ . ಇವರು ರಚಿಸಿದ ತಬರನ ಕತೆ, ಅಬಚೂರಿನ ಪೋಸ್ಟಾಪಿಸು , ಕುಬಿ ಮತ್ತು ಇಯಾಲ ಹಾಗು ಕ್ರುಷ್ಣೇಗೌಡರ ಆನೆ- ಈ ಕ್ರಿತಿಗಳಾನ್ನು ಸಿನೆಮವಾಗಿ ಪ್ರಸಿದ್ದವಾಗಿದೆ.


ಇವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೭) . ಕೇ೦ದ್ರ ಸಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೭) ಪ೦ಪ ಪ್ರಶಸ್ತಿ (೨೦೦೧) ಹಾಗೂ ರಾಜ್ಯೊತ್ಸವ ಪ್ರಶಸ್ತಿ ಗಳನ್ನು ಪಡೆದುಕೊ೦ಡಿರುವ ತೇಜಸ್ವಿಯವರ ಪ್ರಸ್ತುತ ಪ್ರಬ೦ದ "ಕ್ಯನ್ವಾಸ್ ಕಾಟ್ ಮತ್ತು ದೆವ್ವದ ಕಾಟ"ಅವರ ಅಣ್ಣನ ನೆನಪು ಕ್ರುತಿಯಿ೦ದ ಅರಿಸಲಾಗಿದೆ . ಪ್ರಸ್ತುತ ಕ್ರುತಿಯೂ ತೇಜಸ್ವಿಯವರ ಸಒಪೂರ್ಣ ಅತ್ಮಚರಿತ್ರೆ ಅಲ್ಲ . ಆದರೂ ತೇಜಸ್ವಿಯವರ ಬಾಲ್ಯಕಾಲದ ಹಗೂ ಮೈಸೂರಿನ ಅವರ ಬದುಕಿನ ಚಿತ್ರವನ್ನು ಕಲ್ಪಿಸಿಕೊಡುತ್ತದೆ. ಈ ಲೇಖನವನ್ನು ಓದತೊಡಗುತ್ತಿದ್ದ೦ತೆಯೆ ನೋಡಾನೋಡುತ್ತಲೆ ನಮ್ಮಿ೦ದ ದೂರಹೋದ ಒ೦ದು ಕಾಲದ ಬದುಕಿನ ಶೈಲಿಯನ್ನು ಅರಿಯಲು ಸದ್ಯವಗುತ್ತದೆ .ತಿಳಿಹಾಸ್ಯ್ ದ ಮೂಲಕವಾಗಿ ಹಳೆಯ ನೆನಪನ್ನು ಕೆದಕುವ ತೆಜಸ್ವಿಯವರ ಬರಹಗಳು ಆ ಕಾರಣಕ್ಕಾಗಿಯೆ ಓದುಗರಿಗೆ ಇಶ್ಟವಾಗುತ್ತದೆ