ಸದಸ್ಯರ ಚರ್ಚೆಪುಟ:Abhishekgowda D.M/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭದ್ರತಾ ಪತ್ರ ವು, ಹಣಕಾಸಿನ ಮೌಲ್ಯವನ್ನು ನಿರೂಪಿಸುವ ಒಂದು ತತ್ಸದೃಶ, ವ್ಯವಹಾರ್ಯ ಒಪ್ಪಂದವಾಗಿದೆ. ಭದ್ರತಾ ಪತ್ರಗಳನ್ನು ಈ ರೀತಿ ಸ್ಥೂಲವಾಗಿ ವಿಂಗಡಿಸಲಾಗಿದೆ: ಸಾಲ ಭದ್ರತಾ ಪತ್ರಗಳು ( ಬ್ಯಾಂಕ್‌ ನೋಟ್‌ಗಳು, ಕರಾರುಪತ್ರಗಳು ಹಾಗೂ ಡಿಬೆಂಚರ್‌ಗಳು) ಹಾಗೂ ಇಕ್ವಿಟಿ ಭದ್ರತಾ ಪತ್ರಗಳು ಇತ್ಯಾದಿ. ಉದಾಹರಣೆಗೆ ಸಾಮಾನ್ಯ ಷೇರು‌ಗಳು ಹಾಗೂ ವ್ಯುತ್ಪನ್ನ ಕರಾರುಗಳು, (ಫಾರ್ವರ್ಡ್‌ಗಳು, ಫ್ಯೂಚರ್‌ಗಳು, ಆಯ್ಕೆಗಳು ಹಾಗೂ ವಿನಿಮಯಗಳು)ಮುಂತಾದವು.

ಭದ್ರತಾ ಪತ್ರವನ್ನು ನೀಡುವ ಕಂಪೆನಿ ಅಥವಾ ಇತರ ಸಂಸ್ಥೆಯನ್ನು 'ಇಶ್ಯೂಯರ್(ವಿತರಕ)' ಎಂದು ಉಲ್ಲೇಖಿಸಲಾಗಿದೆ. ದೇಶದಲ್ಲಿನ ನಿಯಂತ್ರಣಾತ್ಮಕ ರಚನೆಯು, ಭದ್ರತಾಪತ್ರವಾಗಿ ಯಾವುದು ಅರ್ಹತೆ ಪಡೆಯುತ್ತದೆಂದು ನಿರ್ಣಯಿಸುತ್ತದೆ. ಉದಾಹರಣೆಗೆ, ಖಾಸಗಿ ಹೂಡಿಕೆ ನಿಧಿಗಳು, ಕೆಲವು ಭದ್ರತಾ ಪತ್ರಗಳ ಲಕ್ಷಣಗಳನ್ನು ಹೊಂದಿರಬಹುದು. ಆದರೆ ಅವು ವಿವಿಧ ನಿರ್ಬಂಧಗಳನ್ನು ಪೂರೈಸಿದರೂ ಕೂಡ,ಅವುಗಳು ನೋಂದಣಿಯಾಗದಿರಬಹುದು ಅಥವಾ ನಿಯಂತ್ರಣವಿಲ್ಲದೇ ಇರಬಹುದು.

ಭದ್ರತಾ ಪತ್ರಗಳನ್ನು ಪ್ರಮಾಣಪತ್ರದ ಮೂಲಕ ಅಥವಾ ಸಾಮಾನ್ಯವಾಗಿ "ಪ್ರಮಾಣಪತ್ರವಿಲ್ಲದೇ ", ಅರ್ಥಾತ್‌ ವಿದ್ಯುನ್ಮಾನ ಅಥವಾ "ಪುಸ್ತಕದಲ್ಲಿ ದಾಖಲಿಸಿಕೊಳ್ಳುವುದರ" ಸ್ವರೂಪದ ಮೂಲಕ ನಿರೂಪಿಸಬಹುದಾಗಿದೆ. ಪ್ರಮಾಣ ಪತ್ರಗಳನ್ನು ಎರಡು ರೀತಿಯಾಗಿ ವಿಂಗಡಿಸಬಹುದಾಗಿದೆ: ಮೊದಲಿಗೆ ಧಾರಕ ' ಅಂದರೆ, ಕೇವಲ ಭದ್ರತಾ ಪತ್ರವನ್ನು ಹೊಂದುವ ಮೂಲಕ, ಧಾರಕರಿಗೆ ಭದ್ರತಾ ಪತ್ರದಡಿ ಎಲ್ಲಾ ಹಕ್ಕುಗಳಿಗೂ ಅರ್ಹರಾಗುತ್ತಾರೆ; ಎರಡನೆಯದಾಗಿ, ನೋಂದಾಯಿತ ' ಅಂದರೆ, ಭದ್ರತಾ ಪತ್ರ ನೀಡುವವರು ಅಥವಾ ಮಧ್ಯಸ್ಥರು ಕಾಯ್ದಿರಿಸಿಕೊಂಡಿರುವ ಭದ್ರತಾ ಪತ್ರ ದಾಖಲೆಯಲ್ಲಿ ಧಾರಕರ ಮಾಹಿತಿ ಇದ್ದಲ್ಲಿ ಮಾತ್ರ, ಆ ಧಾರಕರಿಗೆ ಹಕ್ಕುಗಳನ್ನು ನೀಡಲಾಗುತ್ತದೆ. ಇವುಗಳಲ್ಲಿ ಸಾಂಸ್ಥಿಕ ಷೇರು‌ ಅಥವಾ ಮ್ಯೂಚುಯಲ್‌ ಫಂಡ್‌ಗಳು‌ , ನಿಗಮಗಳು, ಅಥವಾ ಸರಕಾರಿ ನಿಯೋಗಗಳು ನೀಡುವ ಬಾಂಡ್‌ಗಳು, ಷೇರು ಆಯ್ಕೆ‌ಗಳು ಅಥವಾ ಇತರೆ ಆಯ್ಕೆಗಳು, ಸೀಮಿತ ಪಾಲುದಾರಿಕೆ ಉದ್ದಿಮೆಗಳು ಹಾಗೂ ತತ್ಸದೃಶ, ವ್ಯವಹಾರ್ಯವಾದ ಇತರೆ ವಿವಿಧ ವಿಧ್ಯುಕ್ತ ಹೂಡಿಕೆಗಳನ್ನು ಒಳಗೊಂಡಿದೆ