ಸದಸ್ಯರ ಚರ್ಚೆಪುಟ:ADVEENA ADY

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಮನ್ ಪರಿಣಾಮ

ಸಮರೂಪಿ ಪಾರದರ್ಶಕ ಮಾಧ್ಯಮದ ಮೂಲಕ ಬೆಳಕಿನ ಪುಂಜವೊಂದನ್ನು ಹಾಯಿಸಿದಾಗ ಪತನ ಬೆಳಕಿನ ಒಂದು ಭಾಗವು ಪಕ್ಕಗಳಿಗೆ ವಿಚಲಿತವಾಗುತ್ತದೆ ಅಥವಾ ಚದರುತ್ತದೆ ಎಂಬುದನ್ನು ಟಿಂಡಾಲ್ ಮತ್ತು ರಾಲೇ ಎಂಬ ವಿಜ್ಞಾನಿಗಳು ಆವಿಷ್ಕರಿಸಿದರು. ಚದರಿದ ಪುಂಜದ ತರಂಗ ದೂರವು ಪತನ ಬೆಳಕಿನ ತರಂಗ ದೂರದಷ್ಟೇ ಇದೆಯೆಂಬುದನ್ನು ಕಂಡು ಹಿಡಿದರು.

ವಾತಾವರಣದಲ್ಲಿರುವ ಅಣುಗಳಿಂದ ಬೆಲಕು ಚದರಿ ಆಕಾಶದ ಬಣ್ಣವು ನೀಲಿಯಾಗಿದೆ ಎಂಬ ಸಮರ್ಪಕ ವಿವರಣೆಯನ್ನು ೧೮೭೧ ರಲ್ಲಿ ಲಾರ್ಡ್ ರಾಲೇ ನೀಡಿದ್ದರು. ಯಾವುದೇ ಮಾಧ್ಯಮದಲ್ಲಿ ಚದುರಿದ ಬೆಳಕಿನ ತೀವೃತೆಯು ತರಂಗ ದೂರದ ನಾಲ್ಕನೆ ಘಾತದಷ್ಟಕ್ಕೆ ವಿಲೋಮಾನುಪಾತದಲ್ಲಿರುವುದೆಂದು ಸಾಧಿಸಿದನು.

ರಾಲೇ ಚದರಿಕೆ ಎಂದು ಕರೆಯಲ್ಪಡುವ ಈ ಚದರಿಕೆಯನ್ನು ಸಂಸಕ್ತ ಚದರಿಕೆಯೆಂದೂ ಕರೆಯುತ್ತಾರೆ. ಏಕೆಂದರೆ ತರಂಗ ದೂರದಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ.

೧೯೨೮ರಲ್ಲಿ ಸಿ.ವಿ ರಾಮನ್ನರು ದ್ರವಳಲ್ಲಿ ಬೆಳಕಿನ ಚದರಿಕೆಯನ್ನು ಅಧ್ಯಯನ ಮಾಡುತ್ತಿದ್ದರು. ಅವರ ಉದ್ದೇಶ ಆಕಾಶದ ಮತ್ತು ಸಮುದ್ರದ ನೀಲಿ ಬಣ್ಣವುಂಟಾಗುವ ನೈಸರ್ಗಿಕ ಸಂಗತಿಗಳನ್ನು ಪುನರುತ್ಪಾದಿಸುವುದಾಗಿತ್ತು.

ಏಕವರ್ಣೀಯ ಬೆಳಕನ್ನು ಬೆಂಜೀನ್, ಟಾಲೀನ್ ಮುಂತಾದ ಸಾವಯವ ದ್ರವಗಳ ಮೂಲಕ ಹಾಯಿಸಿದಾಗ ಚದರಿಕೆಯಿಂದಾಗಿ ಬೆಳಕು ಏಕವರ್ಣೀಯವಾಗಿರುವುದಿಲ್ಲವೆಂದೂ, ಚದರಿದ ಬೆಳಕಿನಲ್ಲಿ ಪತನ ಬೆಳಕಿನ ಜೊತೆಯಲ್ಲಿ ಕಡಿಮೆ ಮತ್ತು ಹೆಚ್ಚು ಆವೃತ್ತಿಯ ಬೆಳಕೂ ಸಹ ಇರುವುದಿಲ್ಲವೆಂದೂ ರಮನ್ನರು ತಮ್ಮ ಪ್ರಯೋಗದಲ್ಲಿ ಕಂಡು ಹಿಡಿದರು. ಈ ಕ್ರಿಯೆಯನು ರಾಮನ್ ಪರಿಣಾಮವೆಂದು ಕರೆಯುತ್ತಾರೆ. ೧೯೩೦ರಲ್ಲಿ ರಾಮನ್ನರಿಗೆ ನೊಬೆಲ್ ಪಾರಿತೋಷಕ ಪ್ರದಾನವಾಯಿತು. ರಾಮನ್ನರ ಆವಿಷ್ಕಾರದ ನೆನಪಿಗಾಗಿ ಫೆಬ್ರವರಿ ೨೮ನೇ ದಿನವನ್ನು ಪ್ರತಿ ವರ್ಷವೂ ನಮ್ಮ ರಾಷ್ಟ್ರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸುತ್ತೇವೆ.

ರಷ್ಯನ್ ವಿಜ್ಞಾನಿ ಸ್ಮೆಕೆಲ್ ಎಂಬಾತನು ೧೯೨೩ರಲ್ಲಿ ರಾಮನ್ ಪರಿಣಾಮವನ್ನು ಸೈದ್ದಾಂತಿಕವಾಗಿ ಊಹಿಸಿದ್ದರೂ, ಪ್ರಾಯೋಗಿಕವಾಗಿ ಮೊದಲು ಸಾಧಿಸಿದವರು ರಾಮನ್ನರು. ಆದ್ದರಿಂದ ಇದರ ಹೆಸರು ರಾಮನ್ ಪರಿಣಾಮ ಕೆಲವರು ಸ್ಮೆಕೆಲ್ ರಾಮ್ನ್ ಪರಿಣಾಮವೆಂದೂ ಕರೆಯುತ್ತಾರೆ.