ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:106.51.24.56/WEP 2018-19 dec

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Rasa.png
rasa
ಚಿತ್ರ:Natya shastra.jpg
natya shastra

ನಾಟ್ಯ ಶಾಸ್ತ್ರದ ೬,೭ ಮತ್ತು ೮ನೇ ಅಧ್ಯಾಯದಲ್ಲಿ ರಸ ಮತ್ತು ಭಾವಗಳ ಕಲ್ಪನೆಯನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಭಾವದ ಮೂಲಾರ್ಥ “ಭೂ ಭವತಿ” ಎಂದರೆ ಇರುವಿಕೆ. ಇದನ್ನು ಸ್ಥಿತಿ ಆಶಯ , ಇಂಗಿತ , ತಾತ್ಪರ್ಯ , ಚಿತ್ತವೃತ್ತಿ ಎಂಬುದಾಗಿಯೂ ಹೇಳಬಹುದು. ಜಗತ್ತಿನಲ್ಲೇ ಇರುವ, ಹಾಗು ನಡೆಯುತ್ತಿರುವ ಸೃ‍‍ಷ್ಠಿ, ಹುಟ್ಟು, ಬೆಳವಣಿಗೆ, ಸ್ಥಿತಿ - ಗತಿಗಳು, ವ್ಯತ್ಯಾಸ, ಮರಣ ಇವುಗಳೂ ಭಾವಗಳೆ. ಮನಸ್ಸಿನಲ್ಲಿ ಮೂಡುವ ಅಂತರ್ಗತ ಯೋಚನೆಗಳೂ ಭಾವಗಳು. ಭಾವಗಳು ಉಂಟಾಗುವುದು ಸುತ್ತಲೂ ನಡೆಯುತ್ತಲಿರುವ ಸನ್ನಿವೇಶಗಳಿಂದ ಹಾಗೂ ಅವುಗಳಿಂದ ಉಂಟಾಗುವ ಹಲವು ಅವಸ್ಥೆಗಳಿಂದ. ಆದರೆ ಕಲಾಸೃಷ್ಟಿಯಲ್ಲಿ ಕಲಾವಿದ ಅವುಗಳನ್ನು ತನ್ನ ಯೋಚನಾ ಲಹರಿಯಲ್ಲಿ, ಕಳೆಯ ರೂಪದಲ್ಲಿ ತೋರಿಸುತ್ತಾನೆ. ಅವನಿಂದ ರಚಿಸಲ್ಪಟ್ಟ ಅಥವಾ ಪ್ರಯೋಗವಾಗುವ ಪಾತ್ರಗಳನ್ನು ಅವುಗಳಿಗೆ ಸೇರಿದಂಥ ಸನ್ನಿವೇಶಗಳು ಹಾಗು ಸ್ಥಿತಿ - ಗತಿಗಳನ್ನು ಉಂಟುಮಾಡಿ, ಆ ಪಾತ್ರಗಳ ಸ್ವರೂಪ, ಚಟುವಟಿಕೆ, ಮನೋಸ್ಥಿತಿ, ಭಾವನಾಶೀಲತೆಗಳನ್ನು ಚಿತ್ರಿಸುತ್ತಾರೆ.[೧]

ಭಾವಗಳು ಭಾವನಾತ್ಮಕ ಅಥವಾ ಬೌದ್ಧಿಕ ಸಂವೇದನೆಗಳಾಗಿದ್ದು ಅದು ವ್ಯಕ್ತಿಯಲ್ಲಿ ಅಂತರ್ಗತವಾಗಿರುತ್ತದೆ,ಹಾಗು ಸೌಂದರ್ಯಾತ್ಮಕ ಉದ್ದೀಪನಕ್ಕೆ ಕಾರಣವಾಗುತ್ತದೆ. ಕಲಾ ಸೃಷ್ಟಿಯಲ್ಲಿ ಭಾವ ತಾನಾಗಿ ಬರುವುದಿಲ್ಲ. ಅದು ಆಗುವಂತೆ ಮಾಡುವ ಕಾರ್ಯ ಕಲಾವಿದನದು. ಆ ಭಾವಕ್ಕೆ ಅನುಸಾರವಾಗಿ ಕಾರಣ ಹಾಗು ಪರಿಣಾಮಗಳಿಂದ ಆ ಭಾವ ಯಾವುದೆಂದು ಗುರುತಿಸುತ್ತೇವೆ. ಭಾವಗಳಲ್ಲಿ ನಾಲ್ಕು ವಿಧ. ಸ್ಥಾಯಿಭಾವ, ವಿಭಾವ ಮತ್ತು ವ್ಯಭಿಚಾರಿ ಅಥವಾ ಸಂಚಾರಿ ಭಾವಗಳು. ಯಾವುದು ಸ್ಥಿರವಾಗಿ ನಿಂತು ಮನಸ್ಸಿಗೆ ಗೋಚರವಾಗಬಲ್ಲದೋ ಅದೇ ಸ್ಥಾಯಿ ಭಾವ. ಈ ಭಾವಕ್ಕೆ ಪೋಷಕವಾದ ವಿಷಯಕ್ಕೆ ವಿಭಾವ ಎಂದು ಹೆಸರು. ಇದು ರಸದ ಉತ್ಪತ್ತಿಗೆ ಮೂಲಕಾರಣ. ಈ ಭಾವಗಳನ್ನು ಕಲಾವಿದ ತನ್ನ ಪ್ರದರ್ಶನದಲ್ಲಿ ತೋರಿಸುವುದಕ್ಕೆ ವ್ಯಭಿಚಾರಿ ಅಥವಾ ಸಂಚಾರಿ ಭಾವ ಎಂದು ಹೆಸರು. ಉದಾಹರಣೆ : ಶೃಂಗಾರ ರಸಕ್ಕೆ ರತಿ ಸ್ಥಾಯಿ ಭಾವ, ತಂಗಾಳಿ ಅಥವಾ ಪ್ರಿಯತಮನ ಚಿತ್ರ ವಿಭಾವ ಮತ್ತು ಕುಡಿ ನೋಟ ಸಂಚಾರೀಭಾವ.

ಒಂದು ಕಾವ್ಯವನ್ನು ಓದಿದಾಗ ಅಥವಾ ಕಳೆಯ ಪ್ರದರ್ಶನ ನೋಡಿದಾಗ, ಓದುಗರಿಗೂ ಪ್ರೇಕ್ಷಕರಿಗೂ ಅವರ ಅನುಭವಕ್ಕೆ ಬರುವ ಆಹ್ಲಾದ ವಿಶೇಷವನ್ನು ಸೂಚಿಸಲು ಕಾವ್ಯ ಅಥವಾ ಕಲಾಚಿಂತಕರು ಬಳಸುವ ವಿಶಿಷ್ಟವಾದ ಪಾರಿಭಾಷಿಕ ಶಬ್ದವೇ ರಸ. ಪ್ರಕೃತಿ ರಸಗಳು ನಾಲ್ಕು ಇವೆ. ಅವು - ಶೃಂಗಾರ, ವೀರ, ರೌದ್ರ ಮತ್ತು ಬೀಭತ್ಸ. ಇವುಗಳಲ್ಲಿ ಹಾಸ್ಯವು ಶೃಂಗಾರದಿಂದಲೂ, ಅದ್ಭುತವು ವೀರದಿಂದ, ಕರುಣವು ರೌದ್ರದಿಂದ ಹಾಗೂ ಭಯಾನಕವು ಬೀಭತ್ಸದಿಂದ ಜನಿಸುತ್ತದೆ. ಅಭಿನಯದರ್ಪಣದಲ್ಲಿ ನಂದಿಕೇಶ್ವರನು ಶಾಂತ ರಸವನ್ನು ಸೇರಿಸಿದಕಾರಣ ಒಟ್ಟು ಒಂಬತ್ತು ರಸಗಳಿವೆ. ಅವುಗಳನ್ನು ನವರಸಗಳೆಂದು ಕರೆಯಲಾಗುವುದು. ಶೃಂಗಾರ ರಸ ಪ್ರಣಯ ಸಂಬಂಧದ ಭಾವನೆಯಿಂದ ಹುಟ್ಟಿದೆ. ಶೃಂಗಾರವೆಂದರೆ ಕಾಮೋದ್ರೇಕವೆಂಬ ಅರ್ಥವಿದೆ. ಆಕರ್ಷಿಸುವಂತಹ ಬಾಹ್ಯ ಸ್ವರೂಪಗಳ ದರ್ಶನದಿಂದ ಉಂಟಾಗುವುದು ಶೃಂಗಾರ. ವಿಕೃತ ವೇಷ, ವಿಕೃತ ಅಲಂಕಾರ, ಅದರಂತೆಯೇ ವಿಕೃತ ನಡೆ - ನುಡಿಗಳಿಂದ, ವಿಕೃತವಾದ ಹಾವಭಾವಗಳಿಂದ ನಗುವುದು ಹಾಸ್ಯ. ವ್ಯಥೆ, ಕೆಟ್ಟ ಸಂಗತಿಗಳ ಕಾರಣದ ದುಃಖ, ಇಷ್ಟನಾಶ, ಅನಿಷ್ಟ ಪ್ರಾಪ್ತಿಗಳಲ್ಲಿ ಉಂಟಾಗುವ “ಶೋಕ” ಸ್ಥಾಯಿಭಾವದಿಂದಾದ ಕರುಣಾ ರಸ. ಪ್ರತಾಪ, ವಿನಯ, ದೃಢ ನಿಶ್ಚಯ, ಸತ್ವ, ಮೋಹ, ನ್ಯಾಯ, ವಿಸ್ಮಯ, ಶೌರ್ಯ ಇಂಥವುಗಳಿಂದ ಪುಷ್ಟಿಹೊಂದಿ “ಉತ್ಸಾಹ”ವನ್ನು ಸ್ಥಾಯಿಯಾಗಿ ಪಡೆದ ವೀರ ರಸ. ಅತಿ ಲೌಕಿಕ ದೃಶ್ಯಗಳಿಂದ ಉಂಟಾಗುವ ಅದ್ಭುತ ರಸ. ಭಯವೆಂಬ ಸ್ಥಾಯಿಭಾವದಿಂದ ಭಯಾನಕರಸ ಹುಟ್ಟುವುದು. ಮತ್ಸರ ಅಥವಾ ಶತ್ರುಗಳಿಂದ ಒದಗುವ “ಕ್ರೋಧ”ವೇ ಸ್ಥಾಯಿಭಾವವಾಗಿ ಮುಂದೆ ಅದು ರೌದ್ರರಸಕ್ಕೆ ಒದಗುತ್ತದೆ. ಹುಳು, ಕೊಳೆತ ವಾಸನೆ, ವಮನ ಇತ್ಯಾದಿಗಳ ಕಾರಣವಾದ ‘ಜಿಗುಪ್ಸೆ” ಸ್ಥಾಯಿಭಾವವಾಗಿ ಬೀಭತ್ಸ ರಸ ಉಂಟಾದುವುದು. ಉತ್ಕಷ್ಠವಾದ ವ್ಯಕ್ತಿಗಳಲ್ಲಿರುವ ಆತ್ಮಭಾವವೇ ಶಮವಾಗಿ, ಅದು ಶಾಂತರಸವನ್ನು ಹುಟ್ಟಿಸುತ್ತದೆ.[೨]