ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:ಧನುಷ್ 7550/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯುಕ್ಲಿಡ್

ಯುಕ್ಲಿಡ್ ಜಗತ್ತಿನ ಪ್ರಖ್ಯಾತ ಗಣಿತಜ್ಞರಲ್ಲಿ ಯುಕ್ಲಿಡ್ ಪ್ರಮುಖ ಗಣಿತಜ್ಞ. ಇವರು ಕ್ರಿ.ಪೂ.330ರಿಂದ ಕ್ರಿ.ಪೂ.375ರ ವರೆಗೆ ಇದ್ದಿರಬಹುದು ಎಂದು ಊಹಿಸಲಾಗಿದೆ. ಇವರು ಗ್ರೀಕ್ ದೇಶದಲ್ಲಿ ಜನಿಸಿದರು. ಇವರ ಪ್ರಖ್ಯಾತ ಕೃತಿಯಾದ "ಎಲಿಮೆಂಟ್ಸ್"ಅನ್ನು ಭಾರತದಲ್ಲಿ ರಾಜ ಜಯಸಿಂಗ್ ನ ಆಸ್ಥಾನದಲ್ಲಿ ಪ್ರಖ್ಯಾತ ಖಗೋಳಜ್ಞ ಜಗನ್ನಾಥ ಪಂಡಿತರು ಸಂಸ್ಕೃತ ಭಾಷೆಗೆ ಅನುವಾದಿಸಿ "ರೇಖಾಗಣಿತಂ" ಎಂದು ಹೆಸರಿಸಿದ್ದಾರೆ. ಇದರಿಂದಾಗಿ ಯೂಕ್ಲಿಡ್ ನ ಕಾರ್ಯಗಳು ಭಾರತದೆಲ್ಲೆಡೆ ಪ್ರಖ್ಯಾತವಾದವು. 1) ಒಂದು ವಸ್ತುವಿಗೆ ಸಮನಾದ ಎರಡು ಬೇರೆ ಬೇರೆ ವಸ್ತುಗಳು ತಮ್ಮಲ್ಲಿ ಪರಸ್ಪರ ಸಮನಾಗಿರುತ್ತದೆ. If A=B, A=C then B=C 2) ಸಮಪರಿಮಾಣಗಳಿಗೆ ಸಮಪರಿಮಾಣಗಳನ್ನು ಕೂಡಿದರೆ ಅವುಗಳಿಂದ ಬರುವ ಮೊತ್ತಗಳೂ ಸಹ ಸಮಪರಿಮಾಣಗಳಾಗಿರುತ್ತವೆ. 3) ಸಮಪರಿಮಾಣಗಳನ್ನು ಸಮಪರಿಮಾಣಗಳಿಂದ ಕಳೆದರೆ ಉಳಿಯುವ ಶೇಷಗಳು ಸಮನಾಗಿರುತ್ತವೆ. 4) ಒಂದರೊಡನೊಂದು ಸರಿಹೊಂದುವ ವಿಷಯಗಳು ಪರಸ್ಪರ ಸಮನಾಗಿರುತ್ತವೆ. 5) ಅಖಂಡವು ತನ್ನ ವಿಭಾಗಕ್ಕಿಂತ ಅಧಿಕವಾಗಿರುವುದು. ಇವುಗಳು ಯೂಕ್ಲಿಡ್ ನ ಸ್ವಯಂಸಿದ್ಧಾಂತಗಳು. ಇವು ಜಗತ್ತಿನಾದ್ಯಂತ ಸುಪ್ರಸಿದ್ಧವಾಗಿವೆ

Start a discussion about ಸದಸ್ಯ:ಧನುಷ್ 7550/sandbox

Start a discussion