ಸದಸ್ಯರ ಚರ್ಚೆಪುಟ:ಆಶ್ಲಿನ್/sandbox 2

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂತರಿಕ್ಷ ಶಟಲ್[ಬದಲಾಯಿಸಿ]

ಗಗನಯಾತ್ರಿಗಳನ್ನು ಹಾಗೂ ಅಂತರಿಕ್ಷ ಚಟುವಟಿಕೆಗಳಿಗೆ ಅಗತ್ಯವಾಗ ಸರಕು ಸರಂಜಾಮುಗಳನ್ನು ಭೂಮಿ ಸುತ್ತಲಿನ ಕಕ್ಷೆಗೆ ಕೊಂಡೊಯ್ಯುವಹಾಗೂ ಹಿಂದಿರುಗಿ ಕರೆತರುವ ಸಾಮಾರ್ಥ್ಯವುಳ್ಳ ಮರುಪಯೋಗಿ ರಾಕೆಟ್ ವಾಹನವೇ ಅಂತರಿಕ್ಷ ಶಟಲ್ ಅಥವಾ ಅಂತರಿಕ್ಷ ಲಾಲಿ. ಅಮೇರಿಕಾ ಹಾಗೂ ಹಿಂದಿನ ಸೋವಿಯತ್ ಒಕ್ಕೂಟ (ಇಂದಿನ ರಷ್ಯಾ), ಇವುಗಳು ಅಂತರಿಕ್ಷ ಶಟಲ್ ಗಳನ್ನು ಯಶಸ್ವಿಯಾಗಿ ನಿರ್ಮಿಸಿರುವ ರಾಷ್ಟ್ರಗಳಾಗಿವೆ. ಈ ಸಂಬಂಧದಲ್ಲಿ ಸ್ವಚಾಲಿತವಾದ ರಷ್ಯಾದ ಶಟಲ್ ಒಮ್ಮೆ ಮಾತ್ರ ಅಂತರಿಕ್ಷಯಾನ ಮಾಡಿ ಬಂದಿದೆ. ಅಮೇರಿಕಾ ನಿರ್ಮಿಸಿದ ಐದು ಶಟಲ್ ಗಳು ಒಟ್ಟಾರೆ ಎಂಭತ್ತಕ್ಕೂ ಹೆಚ್ಚು ಬಾರಿ ಅಂತರಿಕ್ಷಯಾನ ಮಾಡಿ ಬಂದಿವೆ.

ದುಬಾರಿಯಾದ ಅಂತರಿಕ್ಷಯಾನವನ್ನು ತಕ್ಕಮಟ್ಟಿಗೆ ಅಗ್ಗವಾಗಿ ಮಾಡುವ ಉದ್ದೇಶದಿಂದ ಅಂತರಿಕ್ಷ ಶಟಲ್ ಅನ್ನು ಅಮೇರಿಕಾದಲ್ಲಿ ಮೊದಲು ವಿನ್ಯಸಿಸಿ ಯೋಜಿಸಲಾಯಿತು. ಸಾಮಾನ್ಯವಾಗಿ ಉಪಗ್ರಹ ಉಡಾವಣಾ ರಾಕೆಟ್ ಗಳೆಲ್ಲವೂ ಒಮ್ಮೆ ಮಾತ್ರ ಬಳಕೆಗು ಅರ್ಹವಾಗಿದ್ದು ಆ ಕಾರಣದಿಂದಾಗಿ ರಾಕೆಟ್ ಉಡಾವಣೆಗಳು ದುಬಾರಿಯಾಗಿರುತ್ತವೆ. ಆದರೆ ಅಮೇರಿಕಾದ ಶಟಲ್ ಅನ್ನು ಮತ್ತೆ ಮತ್ತೆ ಬಳಕೆಗೆ ಬರುವಂತೆ ರೂಪಿಸಲಾಯಿತು. ಈ ಸಂಬಂಧದಲ್ಲಿ ಅದನ್ನು ಐವತ್ತಕ್ಕೂ ಹೆಚ್ಚು ಬಾರಿ ಯಾನಕ್ಕೆ ಬಳಸಬಹುದೆಂದು ಹೇಳಲಾಗಿದೆ. ಜೊತೆಗೆ ಅದರಲ್ಲಿ ಪ್ರಯಾಣ ಮಾಡುವುದೂ ಸಹ ಸಾಕಷ್ಟು ಸುಖಮಯವಾಗಿರುತ್ತದೆ.

ಯಾನಕ್ಕೆ ಸಜ್ಜಾಗಿ ನಿಂತ ಅಮೇರಿಕಾದ ಶಟಲ್ ತನ್ನ ಎರಡು ಪಕ್ಕಗಳಲ್ಲಿ ಕಂಬದಂತಹ ರಾಕೆಟ್ ಗಳನ್ನು ಮತ್ತು ತನ್ನ ಕೆಳಗೆ ಕೊಳವೆಯೊಂದರಂತೆ ಕಾಣುವ ಬೃಹತ್ ಇಂಧನದ ತೊಟ್ಟಿಯನ್ನು ಉಳ್ಳ ದೊಡ್ಡ ವಿಮಾನವೊಂದರಂತೆ ಕಾಣುತ್ತದೆ. ಅದರ ಚಾಲಕ ಕೋಣೆಯಲ್ಲಿ ಎಂಟು ಮಂದಿ ಗಗನಯಾತ್ರಿಗಳು ಪಯಣಿಸಬಹುದು. ಆ ಕೋಣೆಯ ಕೆಳಗೆ ವಾಸದ ಕೋಣೆಯಿರುತ್ತದೆ.ಅದರ ಹಿಂಭಾಗದಲ್ಲಿ ೧೮ಮೀ. ಉದ್ದ ಹಾಗೂ ೪.೫ಮೀ. ಅಗಲವಿರುವ ಶಟಲ್ ನ ಸರಕು ಕೋಣೆಯಿರುತ್ತದೆ. ಅದರಲ್ಲಿ ಭೂಮಿ ಸುತ್ತಲಿನ ಕಕ್ಷೆಗೆ ಉಡಾಯಿಸಬೇಕಾದ ಉಪಗ್ರಹ, ಅಂತರಿಕ್ಷ ನೌಕೆ ಇಲ್ಲವೇ ಅತ್ಯಾಧುನಿಕ ಪ್ರಯೋಗ ಶಾಲೆಗಳನ್ನು ಅಂತರಿಕ್ಷಕ್ಕೆ ಕೊಂಡೊಯ್ಯಬಹುದು.

ಹದಿನೆಂಟು ಮಹಡಿಗಳಷ್ಟು ಎತ್ತರವಿರುವ ಅಮೆರಿಕಾದ ಶಟಲ್ ಮೇಲೇರಿ ಅಂತರಿಕ್ಷಕ್ಕೆ ಧಾವಿಸುವ ಸಮಯದಲ್ಲಿ ಅದರ ಅಕ್ಕ ಪಕ್ಕದಲ್ಲಿರುವ ಕಂಬದಂತಹ ರಾಕೆಟ್ ತಮ್ಮ ಕೆಲಸ ಮುಗಿದ ನಂತರ ಕಳಚಿ ಬೀಳುತ್ತವೆ. ಪ್ಯಾರಚುಟ್ ಗಳ ನೆರವಿನೊಡನೆ ಸಮುದ್ರಕ್ಕೆ ಬಿದ್ದಅವುಗಳನ್ನು ಸಂಸ್ಕರಿಸಿ ಪುನಃ ಉಪಯೋಗಿಸಲಾಗುತ್ತದೆ.ಅನಂತರ ತನ್ನ ಹಿಂದಿರುವ ಮೂರು ದಕ್ಷ 'ಕ್ರಯೋಜನಿಕ್' ರಾಕೆಟ್ ಯಂತ್ರಗಳ ನೆರವಿನೊಡನೆಶಟಲ್ ಭೂಮಿ ಸುತ್ತಲಿನ ಕಕ್ಷೆಯತ್ತ ತೆರಳುತ್ತದೆ. ಬಳಿಕ ಇಂಧನದ ತೊಟ್ಟಿಯೂ ಬೇರ್ಪಡುತ್ತದೆ.

ಭೂಮಿ ಸುತ್ತಲಿನ ಕಕ್ಷೆಯನ್ನು ತಲುಪಿದ ಅನಂತರ ಶಟಲ್ ಅಂತರಿಕ್ಷ ನೌಕೆಯಂತೆ ಭೂಮಿಯ ಸುತ್ತ ವಿಹರಿಸಿ ತನಗೆ ವಹಿಸಲಾದ ಕೆಲಸಗಳೆಲ್ಲವೂ ಮುಗಿದ ಅನಂತರ ವಿಮಾನದಂತೆ ಭೂಮಿಗೆ ಬಂದಿಳಿಯುತ್ತದೆ. ಇದಕ್ಕೆ ಹೋಲಿಸಿದಲ್ಲಿ ರಷ್ಯಾದ ಶಟಲ್ ಆಕಾರ ಮತ್ತು ಗಾತ್ರಗಳಲ್ಲಿ ಬಹುಮಟ್ಟಿಗೆ ಅಮೇರಿಕಾದ ಶಟಲ್ ನಂತೆ ಕಂಡರೂ ಎನರಗಿಯಾ ಎಂಬ ಬೃಹತ್ ರಾಕೆಟ್ ಒಂದರ ಬೆನ್ನೇರಿ ಭೂಕಕ್ಷೆಯನ್ನು ತಲುಪುವಂತಹುದು. ಅಮೇರಿಕಾದ ಮೊದಲ ಶಟಲ್ 'ಕೋಲಂಬಿಯಾ'ವನ್ನು ೧೯೮೧ರ ಏಪ್ರಿಲ್ ೧೨ ರಂದು ಪ್ರಥಮ ಬಾರಿಗೆ ಉಡಾಯಿಸಲಾಯಿತುರಕ್ಯಾದ ಶಟಲ್ 'ಬುರಾನ್' ಅಂತರಿಕ್ಷಕ್ಕೆ ತೆರಳಿದ್ದು ೧೯೮೮ರ ನವೆಂಬರ್ ೧೫ ರಂದು. ಈವರೆಗೂ ಅಮೇರಿಕಾದ ಶಟಲ್ಗಳು ಅನೇಕ ಕೃತಕ ಭೂಉಪಗ್ರಹಗಳನ್ನು ಹಾಗೂ ಇತರ ಗ್ರಹಗಳತ್ತ ತೆರಳುವ ಅಂತರಿಕ್ಷ ನೌಕೆಗಳನ್ನಯ ಹಾರಿಬಿಟ್ಟಿವೆ; ಕೆಟ್ಟ ಉಪಗ್ರಹಳನ್ನು ಕಕ್ಷೆಯಲ್ಲೇ ಸರಿಪಡಿಸಿವೆ ಇಲ್ಲವೇ ಭೂಮಿಗೆ ಹಿಂತಿರುಗಿ ತಂದಿವೆ; ವಿಜ್ಞಾನದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸುವ ಸಾಮಾರ್ಥ್ಯವಿದ್ದ 'ಸ್ಪೆಸ್ ಲ್ಯಾಬ್' ಎಂಬ ಅತ್ಯಾಧುನಿಕ ಪ್ರಯೋಗ ಶಾಲೆಯನ್ನು ಅನೇಕ ಬಾರಿ ಅಂತರಿಕ್ಷಕ್ಕೆ ಕೊಂಡೊಯ್ದಿವೆ. ಇಷ್ಟೆಲ್ಲಾ ಸಾಧಿಸಿದ್ದರೂ ೧೯೮೬ರ ಜನವರಿಯಲ್ಲಿ ಏಳು ಗಗನಯಾತ್ರಿಗಳುಳ್ಳ 'ಛಾಲೆಂಜರ್' ಎಂಬ ಅಂತರಿಕ್ಷ ಶಟಲ್ ಅಂತರಿಕ್ಷಕ್ಕೆ ತೆರಳುವ ನಡುವೆ ಸ್ಪೋಟಗೊಂಡಿತು.

ಛಾಲೆಂಜರ್ ದುರಂತ ಇಡೀ ಅಂತರಿಕ್ಷ ಅನ್ವೇಷಣಾ ಕ್ಷೇತ್ರವನ್ನು ತಲ್ಲಣಗೊಳಿಸಿದ ಪ್ರಮುಖ ದುರಂತ ಘಟನೆ.ಈ ಅಪಘಾತದಲ್ಲಿ ಇಬ್ಬರು ಮಹಿಳೆಯರೂ ಸೇರಿ ಏಳು ಜನ ಅಮೇರಿಕಾದ ಗಗನಯಾತ್ರಿಗಳು ಅಸು ನೀಗಿದರು. ಈ ದುರ್ಘಟನೆಯಿಂದಾಗಿ ಎರಡುವರು ವರ್ಷಗಳ ಕಾಲ ಅಮೇರಿಕಾ ತನ್ನ ಮಾನವಸಹಿತ ಅಂತರಿಕ್ಷ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿತು.

'ಛಾಲೆಂಜರ್' ಅಮೇರಿಕಾದ ಎರಡನೇಯ ಅಂತರಿಕ್ಷದ ಶಟಲ್. ಅದರ ಜೊತೆಗೆ ಕೊಲಂಬಿಯಾ, ಡಿಸ್ಕವರಿ ಮತ್ತು ಅಟ್ಲಾಂಟಿಸ್ ಎಂಬ ಮೂರು ಶಟಲ್ ವಾಹನಗಳೂ ೧೯೮೬ ರ ಹೊತ್ತಿಗೆ ಆ ದೇಶದಲ್ಲಿದ್ದವು.. 'ಛಾಲೆಂಜರ್ ದುರಂತ'ಅಂತರಿಕ್ಷ ಶಟಲ್ ಕಾರ್ಯಕ್ರಮದಲ್ಲಿ ಇಪ್ಪತ್ತೈದನೇಯ ಯಾನ.

ವಿಮಾನವೊಂದರಂತೆ ಕಾಣುತ್ತಿದ್ದ ಛಾಲೆಂಜರ್ ನ ಹಿಂದಿದ್ದ ಮೂರು ದ್ರವ ರಾಕೆಟ್ ಯಂತ್ರಗಳ ಹಾಗೂ ಅಕ್ಕ ಪಕ್ಕದಲ್ಲಿದ್ದ ಕಂಬದಂತಹ ಎರಡು ಘನ ರಾಕೆಟ್ ಯಂತ್ರಗಳ ನೆರವಿನೊಡನೆಛಅಲೆಂಜರ್ ಯಾನ ಪ್ರಾರಂಭವಾಯಿತು. ಯಾನದ ಮೊದಲ ೭೨ ಸೆಕೆಂಡ್ ಗಳುಎಲ್ಲವೂ ಸರಿಯಾಗಿದ್ದಂತೆ ಕಂಡರೂ ೭೩ನೇ ಸೆಕೆಂದ್ ನಲ್ಲಿ ೧೪ ಕಿಲೋ ಮೀಟರ್ ಎತ್ತರದಲ್ಲಿದ್ದಾಗ ಆ ರಾಕೆಟ್ ವಾಹನ ಆಸ್ಪೋಟಿಸಿತು. ಈ ಸಂಬಂಧದಲ್ಲಿ ನೇಮಿಸಲಾದ ತನಿಖಾ ಆಯೋಗ ನೀಡಿದ ವರದಿ ಪ್ರಕಾರ ಛಾಲೆಂಜರ್ ನ ಅಕ್ಕಪಕ್ಕದಲ್ಲಿ ಘನ ಇಂಧನ ರಾಕೆಟ್ ಗಳ ಪೈಕಿ ಒಂದು ಆ ಅಪಗಾತಕ್ಕೆ ಕಾರಣ . ಆ ರಾಕೆಟ್ ನಲ್ಲಿ ಜೋಡಿಸಲ್ಪಟ್ಟ ಎರಡು ಭಾಗಗಳ ನಡುವೆ ಉಂಟಾದ ರಂಧ್ರದಿಂದ ಹೊರಬಿದ್ದ ಬಿಸಿ ಅನಿಲಗಳು ಯಾನದ ನಡುವೆ ಛಾಲೆಂಜರ್ ನ ಬೃಹತ್ ಇಂಧನ ತೊಟ್ಟಿಯ ಆಸ್ಪೋಟನೆಗೆ ಕಾರಣವಾದವು.

೧೯೮೮ರಿಂದ ಭೂಮಿ ಸುತ್ತಲಿನ ಕಕ್ಷೆಯಲ್ಲೇ ನಿರ್ಮಿಸಲಾಗುವ 'ಆಲ್ಫಾ' ಎಂಬ ಅಂತರಿಕ್ಷ ನಿಲ್ದಾಣವನ್ನು ಬಹುಮಟ್ಟಿಗೆ ಅಂತರಿಕ್ಷ ಶಟಲ್ ಗಳ ನೆರವಿನಿಂದಲೇ ನಿರ್ಮಿಸಲಾದವು.