ವಿಷಯಕ್ಕೆ ಹೋಗು

ಸತ್ಯದರ್ಶನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಸತ್ಯದರ್ಶನ ಕಾರ್ಯಕ್ರಮ' 'ಚಂದನವಾಹಿನಿ' [೧] Archived 2016-07-27 ವೇಬ್ಯಾಕ್ ಮೆಷಿನ್ ನಲ್ಲಿ. ಯ ಅತಿಬೇಡಿಕೆಯ ಹಾಗೂ ಜನಪ್ರಿಯ ಕಾರ್ಯಕ್ರಮಗಳಲ್ಲೊಂದು. ಇದು ಸತತವಾಗಿ ಸುಮಾರು ೬ ವರ್ಷಕ್ಕೂ ಹೆಚ್ಚು ಸಮಯದಿಂದ 'ದೂರದರ್ಶನ'ದಲ್ಲಿ ಬಿತ್ತರಗೊಳ್ಳುತ್ತಿದೆ. ಈ ಕಾರ್ಯಕ್ರಮದ ಹೆಗ್ಗಳಿಕೆಯೆಂದರೆ, 'ನಮ್ಮ ಸಂಪ್ರದಾಯ', 'ಆಚಾರ-ವ್ಯವಹಾರ', ಹಾಗೂ 'ಪೂಜೆ-ಪುನಸ್ಕಾರಗಳು', 'ವ್ರತಾಚರಣೆಗಳು', 'ಯಜ್~ಜ ಯಾಗಗಳು', ಹಾಗೂ 'ದೈನಂದಿನ ಪೂಜಾವಿಧಿಗಳ ಮಹತ್ವಗಳ ವಿಚಾರಧಾರೆಗಳನ್ನು' ಅತ್ಯಂತ ಸರಳವಾಗಿಯೂ ಮತ್ತು, 'ಆಧುನಿಕ ಯುವಜನಾಂಗ'ದವರೂ ಒಪ್ಪಿಕೊಳ್ಳುವ ರೀತಿಯಲ್ಲಿ ತಿಳಿಯಹೇಳುತ್ತಾರೆ. ಹೆಚ್ಚು ಹೆಚ್ಚು ಯುವಕ ಯುವತಿಯರೂ ಈ ಕಾರ್ಯಕ್ರಮದಲ್ಲಿ ತಮ್ಮ 'ಸಂದೇಹ'ಗಳನ್ನು ಕೇಳಿ ಅದಕ್ಕೆ ಸಮರ್ಪಕವಾದ ಉತ್ತರವನ್ನು ಪಡೆಯುತ್ತಾರೆ. ಎಲ್ಲಾ ಜಾತಿ, ಪಂಥ ಹಾಗೂ ವರ್ಗದ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಇದರ ಚಿಂತನೆಯ ವ್ಯಾಪಕತೆಗೆ ನಿದರ್ಶನವಾಗಿದೆ. ಸರಿಯಾಗಿ ಅರ್ಥಮಾಡಿಕೊಳ್ಳದೆ ಕಣ್ಣುಮುಚ್ಚಿಕೊಂಡು ಮಾಡುವ ನಮ್ಮ ಹಲವಾರು 'ವಿಧಿವಿಧಾನಗಳ ಮಹತ್ವ' ಮತ್ತು ಅವುಗಳ 'ನೈಜ ಅರ್ಥ'ವನ್ನು ಗುರುಗಳಾದ 'ಶ್ರೀ.ಪಾವಗಡ ಪ್ರಕಾಶರಾಯ'ರಿಂದ ಅರಿತಾಗ ಎಲ್ಲರಿಗೂ ಸತ್ಯದ ಅರಿವಾಗುತ್ತದೆ. ನಮ್ಮ ಧರ್ಮದಲ್ಲಿ ಶ್ರದ್ಧೆ ಮತ್ತು ಅಸ್ತೆ ಹೆಚ್ಚಾಗುತ್ತದೆ.