ಸಂವೇದನಾತ್ಮಕ ವರ್ತನ ಚಿಕಿತ್ಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂವೇದನಾತ್ಮಕ ವರ್ತನ ಚಿಕಿತ್ಸೆಯು ಅಸಮರ್ಪಕ ಭಾವನೆಗಳು, ವರ್ತನೆಗಳು ಮತ್ತು ಸಂವೇದನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುರಿ-ಚಾಲಿತ, ಕ್ರಮಬದ್ಧವಾದ ಪ್ರಕ್ರಿಯೆಯ ಮೂಲಕ ಬಗೆಹರಿಸಲು ಉದ್ದೇಶಿಸುವ ಒಂದು ಮಾನಸಿಕ ಚಿಕಿತ್ಸಾ ವಿಧಾನ. ಈ ಶೀರ್ಷಿಕೆಯನ್ನು ನಾನಾ ರೀತಿಯಲ್ಲಿ, ವರ್ತನ ಚಿಕಿತ್ಸೆ, ಸಂವೇದನಾತ್ಮಕ ಚಿಕಿತ್ಸೆಗಳನ್ನು ಹೆಸರಿಸಲು, ಮತ್ತು ಮೂಲ ವರ್ತನ ಹಾಗೂ ಸಂವೇದನಾತ್ಮಕ ಸಂಶೋಧನೆಯ ಸಂಯೋಗವನ್ನು ಆಧರಿಸಿದ ಚಿಕಿತ್ಸೆಯನ್ನು ನಿರ್ದೇಶಿಸಲು ಬಳಸಲಾಗುತ್ತದೆ. ಸಂವೇದನಾತ್ಮಕ ವರ್ತನ ಚಿಕಿತ್ಸೆಯು ಮನಃಸ್ಥಿತಿ, ಆತಂಕ, ವ್ಯಕ್ತಿತ್ವ, ತಿನ್ನುವಿಕೆ, ದುಶ್ಚಟ, ಹಾಗೂ ಮನೋವಿಕಾರದ ಅಸ್ವಸ್ಥತೆಗಳನ್ನು ಒಳಗೊಂಡಂತೆ, ವೈವಿಧ್ಯವುಳ್ಳ ಸಮಸ್ಯೆಗಳ ಉಪಚಾರಕ್ಕೆ ಫಲಪ್ರದವಾಗಿದೆ ಎಂಬುದಕ್ಕೆ ಪ್ರಾಯೋಗಿಕ ಪುರಾವೆಯಿದೆ.